ಚರ್ಚ್ ನ ಸಭಾಪಾಲಕರಾಗಿ ಸುದೀರ್ಘ ೧೧ ವರ್ಷ ಸೇವೆ ಸಲ್ಲಿಸಿದ ರೇ. ಎಡ್ವಿನ್ ಬಾಬು ಜುಲೈ-೨೦ ರಂದು ನಿವೃತ್ತಿ

ಚರ್ಚ್ ನ ಸಭಾಪಾಲಕರಾಗಿ ಸುದೀರ್ಘ ೧೧ ವರ್ಷ ಸೇವೆ ಸಲ್ಲಿಸಿದ ರೇ. ಎಡ್ವಿನ್ ಬಾಬು ಜುಲೈ-೨೦ ರಂದು ನಿವೃತ್ತಿ

ಗಂಗಾವತಿ: ತಾಲೂಕಿನ ಗಾಳೆಮ್ಮಗುಡಿ ಕ್ಯಾಂಪ್‌ನ ಬೇತ್ಸಥಾ ಮೆಥೋಡಿಸ್ಟ್ ಚರ್ಚ್‌ನ ಸಭಾ ಪಾಲಕರಾದ ರೇ. ಎಡ್ವಿನ್ ಬಾಬು ಅವರು ಸುಮಾರು ಹನ್ನೊಂದು ವರ್ಷಗಳ ಕಾಲ ಸೇವೆ ಸಲ್ಲಿಸಿ, ಜುಲೈ-೨೦ ಭಾನುವಾರ ತಮ್ಮ ಸ್ಥಾನದಿಂದ ನಿವೃತ್ತಿ ಹೊಂದಿದರು.

ಅವರು ಕ್ರಿಸ್ತನ ಮಾರ್ಗಗಳನ್ನು ಬೋಧನೆ ಮಾಡುತ್ತಾ, ಆತನ ದೇವೋಕ್ತಿಗಳನ್ನು ಜನರಿಗೆ ತಿಳಿಸಿ ಯೇಸುವಿನ ಸಂದೇಶಗಳನ್ನು ಭಕ್ತಿಯಿಂದ ಪ್ರಚಾರ ಮಾಡಿದರು.

“ನಿನ್ನಂತೆಯೇ ನಿನ್ನ ನೆರೆಹೊರೆಯವರನ್ನು ಪ್ರೀತಿಸು” ಎಂಬ ಕ್ರಿಸ್ತನ ಉಪದೇಶಗಳನ್ನು ಭೋದನೆ ಮಾಡುತ್ತಾ, ಪ್ರೀತಿಯ ಜೀವನ ನಡೆಸುವಂತೆ ಉತ್ಸಾಹ ನೀಡಿದ್ದಾರೆ.

“ನೀನು ನಿನ್ನ ಸಹೋದರರ ನಿಮಿತ್ತ ಪ್ರಾಣವನ್ನೇ ಪಣಕ್ಕಿಟ್ಟು ಪಾಪದಿಂದ ರಕ್ಷಿಸು” ಎಂಬ ಸಂದೇಶವನ್ನು ಹೃದಯಂಗಮವಾಗಿ ತಿಳಿಸುತ್ತಿದ್ದರು.

ಅವರು ಮಾನವ ಜೀವನ ಶಾಶ್ವತವಲ್ಲ, ನಾವು ಪರಲೋಕದಿಂದ ಬಂದವರಾಗಿ ಮರಳಿ ಅಲ್ಲಿಗೆ ಹೋಗಬೇಕೆಂಬ ಭಾವನೆಗಾಗಿ ಬೋಧನೆ ಮಾಡುತ್ತಿದ್ದರು.

ಅವರ ನಿರಂತರ ಧಾರ್ಮಿಕ ಸೇವೆಯನ್ನು ಗೌರವಿಸಿ, ಚರ್ಚ್ ವತಿಯಿಂದ ಸನ್ಮಾನ ಕಾರ್ಯಕ್ರಮವನ್ನು ಆಯೋಜಿಸಿ ಚಿಕ್ಕ ಅಳಿಲುಸೇವೆ ನಡೆಸಲಾಯಿತು.

ಈ ಸಂದರ್ಭದಲ್ಲಿ ಸಭೆಯ ಕಾರ್ಯದರ್ಶಿ ರಾಜೇಶಕುಮಾರ್, ಉಗ್ರಾಣಿಕರಾದ ಬಂಡಿ ಇಂಜಪ್ಪ, ಸುದರ್ಶನ್, ಜೇಮ್ಸ್, ಆನಂದ್ ಮತ್ತಿತರರು ಉಪಸ್ಥಿತರಿದ್ದರು.

ಹಾಗೂ ಊರಿನ ಹಿರಿಯರು ಸಣ್ಣ ತಾಯಪ್ಪ, ಸಣ್ಣ ಭೀಮಣ್ಣ, ಎಂ. ನರಸಿಂಹಲು, ಬುಜ್ಜಪ್ಪ, ಯುವಕ-ಯುವತಿಯರು, ಮಹಿಳೆಯರು ಭಾಗವಹಿಸಿದ್ದರು.

Leave a Reply