ಗಂಗಾವತಿಯಲ್ಲಿ ಜುಲೈ-೨೪ರಿಂದ ಆರಂಭವಾಗಲಿದೆ ವಚನ ಶ್ರಾವಣ – ೨೦೨೫

ಗಂಗಾವತಿಯಲ್ಲಿ ಜುಲೈ-೨೪ರಿಂದ ಆರಂಭವಾಗಲಿದೆ ವಚನ ಶ್ರಾವಣ – ೨೦೨೫

ಒಂದು ತಿಂಗಳ ಕಾಲ ಆಯ್ದ ಮೂವತ್ತು ಮನೆಗಳಲ್ಲಿ ದಿನನಿತ್ಯ ವಚನ ನಿರ್ವಚನ ಕಾರ್ಯಕ್ರಮ ನಡೆಯಲಿದೆ ಎಂಬುದಾಗಿ ಪ್ರಕಟಿಸಲಾಗಿದೆ.

ಈ ಕಾರ್ಯಕ್ರಮದ ಮೊದಲ ದಿನ ಕುವೆಂಪು ಬಡಾವಣೆಯ ವಕೀಲ ನಾಗರಾಜ್ ಗುತ್ತೇದಾರ ಅವರ ಮನೆಯಲ್ಲಿ ವಚನ ನಿರ್ವಚನ ಆರಂಭವಾಗಲಿದೆ.

ಕಾರಟಗಿಯ ಶ್ರೀಮತಿ ಲೀಲಾ ಮಲ್ಲಿಕಾರ್ಜುನ ಅವರು “ಇಳೆ ನಿಂಬು ಮಾವು ಮಾದಲಕ್ಕೆ ಹುಳಿ ನೀರನೆರೆದವದಾರಯ್ಯಾ” ಎನ್ನುವ ಅಕ್ಕಮಹಾದೇವಿಯ ವಚನದ ಕುರಿತು ಭಾಷಣ ಮಾಡುವರು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಶರಣ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾದ ಜೆ. ನಾಗರಾಜ ವಹಿಸಲಿದ್ದು, ಹಲವರು ಮುಖ್ಯ ಅತಿಥಿಗಳಾಗಿ ಭಾಗವಹಿಸಲಿದ್ದಾರೆ.

ಕಂಪ್ಲಿಯ ಅಕ್ಕಿಗಿರಣಿ ಮಾಲೀಕರ ಸಂಘದ ಅಧ್ಯಕ್ಷರಾದ ಕೆ.ಎಂ. ಹೇಮಯ್ಯಸ್ವಾಮಿ, ಕೆ. ಬಸವರಾಜ, ವೀರೇಶರಡ್ಡಿ, ಎಚ್. ಶರಣಪ್ಪ ಮುಂತಾದವರು ಉಪಸ್ಥಿತರಿರುವರು.

ಸ್ಥಳೀಯ ಸಂಪನ್ಮೂಲ ವ್ಯಕ್ತಿಗಳ ಜೊತೆಗೆ ಕಂಪ್ಲಿ, ಎಮ್ಮಿಗನೂರು, ಶ್ರೀರಾಮನಗರ, ಸಿಂಧನೂರು, ಕೊಪ್ಪಳ ಮತ್ತು ಹೊಸಪೇಟೆಗಳಿಂದ ಶರಣರು ಪಾಲ್ಗೊಳ್ಳಲಿದ್ದಾರೆ.

ಈ ಸಂದರ್ಭದಲ್ಲಿ ವಚನ ನಿರ್ವಚನ ನಡೆಸುವ ಹಲವಾರು ಶರಣರು ಪಾಲ್ಗೊಳ್ಳಲಿದ್ದು, ಆಸಕ್ತರು ಭಾಗವಹಿಸಿ ಸದುಪಯೋಗ ಪಡೆಯುವಂತೆ ಕೋರಲಾಗಿದೆ.

ಈ ಬಗ್ಗೆ ಶರಣ ಸಾಹಿತ್ಯ ಪರಿಷತ್ತಿನ ಕಾರ್ಯದರ್ಶಿ ಶ್ರೀಶೈಲ ಪಟ್ಟಣಶೆಟ್ಟಿ ಅವರು ಪತ್ರಿಕಾ ಪ್ರಕಟಣೆಯಲ್ಲಿ ವಿವರಿಸಿದ್ದಾರೆ.

ಮಾಹಿತಿಗಾಗಿ
ಕೆ. ಬಸವರಾಜ
ಅಧ್ಯಕ್ಷರು, ಬಸವಕೇಂದ್ರ ಗಂಗಾವತಿ.
ಮೊ.ನಂ: ೯೦೩೫೪೭೪೬೭೦

Leave a Reply