ದಕ್ಷಿಣ ಭಾರತದ ಗ್ರಾಹಕ ಹಕ್ಕುಗಳ ಸಮನ್ವಯ ಸಮಿತಿ (ಸಿ.ಸಿ.ಸಿ) ಯ ಕರ್ನಾಟಕ ರಾಜ್ಯ ಅಧ್ಯಕ್ಷರಾಗಿ ಧನರಾಜ.ಈ ಆಯ್ಕೆ.

ಗಂಗಾವತಿ: ಕಂಜ್ಯೂಮರ್ ಕಾನ್‌ಫೆಡರೇಷನ್ ಆಫ್ ಇಂಡಿಯಾ (ಸಿ.ಸಿ.ಐ) ದ ಅಂಗಸಂಸ್ಥೆಯಾದ ಗ್ರಾಹಕರ ಸಮನ್ವಯ ಸಮಿತಿ (ಸಿ.ಸಿ.ಸಿ), ದಕ್ಷಿಣ ಭಾರತದಲ್ಲಿ ಕಾರ್ಯನಿರ್ವಹಿಸುತ್ತದೆ.
ಇದು ಕರ್ನಾಟಕ, ತಮಿಳುನಾಡು, ಕೇರಳ, ಆಂಧ್ರಪ್ರದೇಶ, ತೆಲಂಗಾಣ, ಪುದುಚೇರಿ ಹಾಗೂ ಗೋವಾ ರಾಜ್ಯಗಳ ೫೬ ಗ್ರಾಹಕರ ಸಮಿತಿಗಳನ್ನು ಒಳಗೊಂಡಿದೆ.
ಈ  ಸಮಿತಿಯ ಕರ್ನಾಟಕ ರಾಜ್ಯ ಘಟಕದ ಚೇರ್ಮನ್ ಆಗಿ ಶಿಕ್ಷಣ ತಜ್ಞ, ಸಾಮಾಜಿಕ ಹೋರಾಟಗಾರ ೩೭೧(ಜೆ) ಸಮಿತಿಯ ಸಂಚಾಲಕ ಧನರಾಜ್ ಈ ರವರು ನಾಮನಿರ್ದೇಶನ ಗೊಂಡಿದ್ದಾರೆ.
ಈ ತೀರ್ಮಾನವನ್ನು ಜುಲೈ -೩೦ ರಂದು ಆಂಧ್ರಪ್ರದೇಶದ ವಿಜಯವಾಡದಲ್ಲಿ ನಡೆದ ಕಾರ್ಯಕಾರಿ ಮಂಡಳಿ ಸಭೆಯಲ್ಲಿ ತೆಗೆದುಕೊಳ್ಳಲಾಯಿತು.
ಸಭೆಯನ್ನು ಸಿ.ಸಿ.ಐ ಅಧ್ಯಕ್ಷರಾದ ಡಾ. ಅನಂತ ಶರ್ಮಾರವರ ನೇತೃತ್ವದಲ್ಲಿ ನಡೆಸಲಾಯಿತು ಹಾಗೂ ಸಿ.ಸಿ.ಸಿ ಯ ಚೇರ್ಮನ್ ಎಸ್. ಚಕ್ರಪಾಣಿಯವರು ಘೋಷಣೆ ಮಾಡಿದ್ದಾರೆ.
ರಾಜ್ಯ ಘಟಕದ ಕಾರ್ಯಕಾರಿ ಮಂಡಳಿಯ ರಚನೆ ಹಾಗೂ ಜಿಲ್ಲಾ ಘಟಕಗಳ ಅಧ್ಯಕ್ಷರ ನೇಮಕದ ಹೊಣೆಯನ್ನು ನೂತನ ಚೇರ್ಮನ್‌ರಾದ ಧನರಾಜ್ ಈ ರವರಿಗೆ ವಹಿಸಲಾಯಿತು.
ಸಿ.ಸಿ.ಸಿ ರಾಷ್ಟ್ರಮಟ್ಟದ ಸಂಸ್ಥೆಯಾಗಿದ್ದು, ಗ್ರಾಹಕರ ಹಕ್ಕುಗಳ ಜಾಗೃತಿ ಮತ್ತು ರಕ್ಷಣೆ, ಆಹಾರ ಕಲಬೆರಕೆ, ದಾರಿತಪ್ಪಿಸುವ ಜಾಹೀರಾತುಗಳ ಕುರಿತ ಜಾಗೃತಿ, ಕಾನೂನು ಹೋರಾಟ ನೆರವು, ಆರೋಗ್ಯ ಹಾಗೂ ಪರಿಸರ ಸಂರಕ್ಷಣೆ ಕುರಿತ ಜಾಗೃತಿಯಂತಹ ಕಾನೂನಾತ್ಮಕ ಹೋರಾಟ ಹಾಗೂ ನೆರವು ಒದಗಿಸುತ್ತಿದೆ.
ಇದರಡಿಯಲ್ಲಿ ೫೬ ಪ್ರಮುಖ ಗ್ರಾಹಕ ಸಮಿತಿಗಳು ಕಾರ್ಯನಿರ್ವಹಿಸುತ್ತಿವೆ. “ಸಂಕೀರ್ಣವಾದ ಇಂದಿನ ಕಾರ್ಪೋರೇಟ್ ಯುಗದಲ್ಲಿ ಗ್ರಾಹಕರು ಎದುರಿಸುತ್ತಿರುವ ವಂಚನೆಗಳು ಇನ್ನೂ ಸಂಕೀರ್ಣವಾಗಿದ್ದು, ಇಷ್ಟೊಂದು ಅಗಾಧವಾದ ಕ್ಷೇತ್ರದ ನಿರ್ವಹಣೆಗೆ ನಾನು ಯೋಗ್ಯನೆಂದು ಭಾವಿಸಿ, ನನಗೆ ಈ ಜವಾಬ್ದಾರಿಯನ್ನು ನೀಡಿದ ಪ್ರತಿಯೊಬ್ಬರಿಗೂ ಧನ್ಯವಾದಗಳು.
ಈ ಹೊಣೆಗಾರಿಕೆಗೆ ಪೂರ್ಣನ್ಯಾಯ ಒದಗಿಸುವ ದೃಢನಂಬಿಕೆಯಿದ್ದು, ಈಗಾಗಲೇ ೨೭೦೦ ಜನ ನ್ಯಾಯ ಹಾಗೂ ಆರೋಗ್ಯ ಕ್ಷೇತ್ರದ ತಜ್ಞ ಸದಸ್ಯರನ್ನು ಒಳಗೊಂಡ ಸಿ.ಸಿ.ಸಿ ಯ ಸಹಕಾರ ಈ ನಿಟ್ಟಿನಲ್ಲಿ ಪಡೆಯುವೆ” ಎಂದು ರಾಜ್ಯಾಧ್ಯಕ್ಷ ಧನರಾಜ್ ಈ. ಈ ಮೂಲಕ ತಿಳಿಸಿದರು.

Leave a Reply