ಕವಿಗಳು ಸ್ವರಚಿತ ಕವನ ರಚಿಸುವಾಗ ಪರಿಣಾಮಕಾರಿಯಾಗಿರ ಬೇಕೆಂದು ಪತ್ರಕರ್ತ ರಾಮಮೂರ್ತಿ ನವಲಿ ಹೇಳಿದರು.
ರೋಟರಿ ಕ್ಲಬ್, ಕಾವ್ಯ ಲೋಕ ಸಂಘಟನೆ ಮತ್ತು ವಿಶ್ವ ರತ್ನ ಗ್ರಾಮೀಣಾಭಿವೃದ್ದಿ ಸಂಸ್ಥೆ ಹೊಸಳ್ಳಿ ಇವರ ಸಂಯುಕ್ತಾಶ್ರಯದಲ್ಲಿ ಜರುಗಿದ ಸ್ವಾತಂತ್ರ್ಯ ಸಂಭ್ರಮ 109ನೇ ಕವಿಗೋಷ್ಠಿಯನ್ನು ಉದ್ಘಾಟಿಸಿ ಮಾತನಾಡಿದರು.
ಸ್ವವರಚಿತವಾಗಿರುವ ಕವನಗಳು ಸಾಮಾಜಿಕ, ರಾಜಕೀಯ, ಸಾಹಿತ್ಯಕವಾಗಿರುವ ವಿಷಯಗಳು ಪರಿಣಾಮಕಾರಿಯಾಗಿರಬೇಕೆಂದು ತಿಳಿಸಿದ ಅವರು ಕವನಗಳನ್ನು ವಾಚಿಸಿದರೆ ಅದು ಪರಿಣಾಮಕಾರಿಯಾಗಿ ವಿವಿಧ ಕ್ಷೇತ್ರಗಳಿಗೆ ತಲುಪುವುದರ ಮೂಲಕ ಸ್ಪಂದನೆ ಸಿಗಬೇಕೆಂದರು.
ಇತ್ತೀಚಿನ ದಿನಗಳಲ್ಲಿ ಕವಿಗಳು ಕೇವಲ ಪ್ರಚಾರಕ್ಕಾಗಿ ಮೊಬೈಲ್, ಫೇಸ್ ಬುಕ್ ಗಳಲ್ಲಿ ಪೋಸ್ಟ್ ಮಾಡಿ ತೃಪ್ತಿ ಪಡುತ್ತಿರುವದನ್ನು ನಾವು ಕಾಣುತ್ತೇವೆ.
ಕವಿಗಳು ಅರ್ಥಗರ್ಭಿತ ವಿಷಯಗಳನ್ಳು ಅಳವಡಿಸಿಕೊಂಡಾಗ ಕವನಗಳಿಗೆ ಮೌಲ್ಯ ಬರುತ್ತದೆ ಎಂದರು.
ಕವಿಗಳು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಬೇಕೆಂದು ತಿಳಿಸಿದ ಅವರು ಬರುವ ದಿನಗಳಲ್ಲಿ ಜಿಲ್ಲಾ ಮತ್ತು ರಾಜ್ಯ ಮಟ್ಟದ ಕವಿಗೋಷ್ಠಿ ಆಯೋಜಿಸಲಿ ಇದಕ್ಕೆ ಎಲ್ಲರು ಸಹಕಾರ ನೀಡುವುದಾಗಿ ಹೇಳಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಸಾಹಿತಿ ವಿಜಯ ವೈದ್ಯ ಮಾತನಾಡಿ ಕವಿಗಳು ಸಮಾಜ ತಿದ್ದುವ ಹಾಗೆ ಕವನಗಳಲ್ಲಿ ವಿಷಯ ಸಂಗ್ರಹವಾಗಬೇಕಾಗಿದೆ.
ಕವಿಗೋಷ್ಟಿ ಎಂದರೆ ಬಹಳಷ್ಟು ಕವಿಗಳು ಭಾಗವಹಿಸುವಂತ ಆಸಕ್ತಿ ಇರಬೇಕೆಂದು ತಿಳಿಸಿದ ಅವರು ಸ್ವರಚಿತ ಕವನಗಳಲ್ಲಿ ಕ್ರೀಯಾಶೀಲತೆ ಇರಬೇಕೆಂದರು.
ಕಾವ್ಯ ಲೋಕ ಸಂಘಟನೆ ಹಲವಾರು ಕಾರ್ಯಕ್ರಮಗಳನ್ನು ಆಯೋಜಿಸುವದರ ಮೂಲಕ ಎಲೆಮರೆಕಾಯಿಯಂತೆ ಇರುವ ಪ್ರತಿಭೆಗಳನ್ನು ಗುರಿತಿಸುವ ಕಾರ್ಯ ಮಾಡುತ್ತಿರುವದು ಪ್ರಶಂಸನೀಯವಾಗಿದೆ ಎಂದರು.
ಸಿಜೆಕೆ ಪ್ರಶಸ್ತಿ ಪುರಸ್ಕ್ರತ ಸನ್ಮಾನಿತರಾದ ನಾಗರಾಜ್ ಇಂಗಳಗಿ ಮಾತನಾಡಿ ಕಾವ್ಯ ಲೋಕ ಸಂಘಟನೆ ಪರುಶರಾಮಪ್ರೀಯ ಅವರು ಕಳೆದ 30 ವರ್ಷಗಳಿಂದ ವಿವಿಧ ಕಾರ್ಯಕ್ರಮಗಳನ್ನು ಆಯೋಜಿಸುವದರ ಮೂಲಕ ಪ್ರತಿಭಗೆಳನ್ನು ಗುರಿತಿಸುವ ಕಾರ್ಯ ಮಾಡುತ್ತಿದ್ದಾರೆ ಎಂದರು.
ಈ ಸಂಘಟನೆಗೆ ಸಂಪೂರ್ಣ ಸಹಕಾರ ನೀಡುವದಾಗಿ ಹೇಳಿದರು. ಕನ್ನಡ ಸೇನೆಯ ಜಿಲ್ಲಾಧ್ಯಕ್ಷ ಚೆನ್ನಬಸವ ಜೇಕಿನ್ ಮಾತನಾಡಿ 110 ನೇ ಕವಿಗೋಷ್ಟಿಗೆ 110 ಕವಿಗಳು ಭಾಗವಹಿಸುವ ರೀತಿ ಆಯೋಜನೆ ಮಾಡ ಬೇಕು ಇದಕ್ಕೆ ಸಂಪೂರ್ಣ ಸಹಕಾರ ನೀಡುವದಾಗಿ ಹೇಳಿದರು.
ರೋಟರಿ ಅಸಿಸ್ಟೆಂಟ್ ಮಾಜಿ ಗವರ್ನರ್ ಟಿ.ಆಂಜನೇಯ ಅವರು ರೋಟರಿ ಸಂಸ್ಥೆಯ ಪ್ರಗತಿ ಮತ್ತು ಸೇವಾ ಕಾರ್ಯ ಕುರಿತು ವಿವರಿಸಿದರು.
ವೇದಿಕೆ ಮೇಲೆ ತಾಲೂಕ ಪಂಚಾಯಿತಿ ಮಾಜಿ ಅಧ್ಯಕ್ಷೆ ರಾಜೇಶ್ವರಿ ಸುರೇಶ, ಡಾ.ಶಿವಕುಮಾರ, ನ್ಯಾಯವಾದಿ ನಿಂಗಪ್ಪ ಸುದ್ದಿ, ಮಂಜುನಾಥ ಹೊಸಕೇರಾ, ಪುಂಡಪ್ಪಗೌಡ, ರೋಟರಿ ಸಂಸ್ಥೆಯ ಕಾರ್ಯದರ್ಶಿ ಕೆ.ಬಸವರಾಜ್, ಕಾವ್ಯ ಲೋಕ ಸಂಘಟನೆ ಅಧ್ಯಕ್ಷ ಎಂ. ಪರುಶರಾಮಪ್ರೀಯ, ವಿಶ್ವರತ್ನ ಗ್ರಾಮೀಣಾಭಿವೃದ್ದಿ ಸಂಸ್ಥೆಯ ಅಧ್ಯಕ್ಷ ರಗಡಪ್ಪ ಹೊಸಳ್ಳಿ ಉಪಸ್ಥಿತರಿದ್ದರು.
ಶಿಕ್ಷಕಿ ನಾಗರತ್ನ ಪ್ರಾರ್ಥಿಸಿದರು, ಜಡಿಯಪ್ಪ ನಿರೂಪಿಸಿದರು. ಇದೇ ಸಂದರ್ಭದಲ್ಲಿ ಕವನ ವಾಚನ ಮಾಡಿದ 20 ಕ್ಕೂ ಹೆಚ್ಚು ಕವಿಗಳಿಗೆ ಪ್ರಶಸ್ತಿ ನೀಡಿ ಗೌರವಿಸಲಾಯಿತು.
ಫೋಟುಃ-17 ಜಿಎನ್ ಜಿ1ಃ- ಗಂಗಾವತಿ ಸಾಹಿತ್ಯ ಭವನದಲ್ಲಿ ಜರುಗಿದ 109 ನೇ ಕವಿಗೋಷ್ಟಿಯನ್ನು ಪತ್ರಕರ್ತ ರಾಮಮೂರ್ತಿ ನವಲಿ ಉದ್ಘಾಟಿಸಿದರು.