ಆಗಸ್ಟ್-೨೧ ರಂದು ಗಂಗಾವತಿಯಲ್ಲಿ ನಗರ ಸಂಕೀರ್ತನಾ ಯಾತ್ರೆ: ಸದಾನಂದ ಶೇಟ್

ಆಗಸ್ಟ್-೨೧ ರಂದು ಗಂಗಾವತಿಯಲ್ಲಿ ನಗರ ಸಂಕೀರ್ತನಾ ಯಾತ್ರೆ: ಸದಾನಂದ ಶೇಟ್

ಗಂಗಾವತಿ: ಶ್ರಾವಣ ಮಾಸದ ನಿಮಿತ್ಯ ಆಗಸ್ಟ್-೨೧ ಗುರುವಾರದಂದು ನಗರ ಸಂಕೀರ್ತನಾ ಸಮಿತಿ (ಸರ್ವ ಸಮಾಜ) ವತಿಯಿಂದ ಗಂಗಾವತಿ ನಗರದಲ್ಲಿ ಭಜನೆ ಮೂಲಕ ಸಂಕೀರ್ತನಾ ಯಾತ್ರೆ ಬೆಳಿಗ್ಗೆ ೫ ಗಂಟೆಯಿಂದ ಗ್ರಾಮದೇವತೆ ದುರ್ಗಮ್ಮ ದೇವಸ್ಥಾನ (ಚನ್ನಬಸವವಸ್ವಾಮಿ ತಾತನ ಮಠ) ದಿಂದ ಪ್ರಾರಂಭಗೊಂಡು ಗಾಂಧಿವೃತ್ತ, ಬಸವಣ್ಣ ಸರ್ಕಲ್, ಪಂಪಾನಗರ ಸರ್ಕಲ್ ಮೂಲಕ ಯಾಜ್ಞವಲ್ಕ್ಯ ಮಂದಿರದವರೆಗೆ ನಡೆಯಲಿದೆ ಎಂದು ಸಮಿತಿಯ ಅಧ್ಯಕ್ಷರಾದ ಸದಾನಂದ ಶೇಟ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಈ ಸಂಕೀರ್ತನಾ ಯಾತ್ರೆಯನ್ನು ಶ್ರಾವಣ ಮಾಸದ ನಿಮಿತ್ಯ ಮಾಡಲಾಗುತ್ತಿದ್ದು, ಸಂಕೀರ್ತನ ಯಾತ್ರೆಯ ದಾರಿಯುದ್ದಕ್ಕೂ ಭಜನೆ, ಧಾರ್ಮಿಕ ಭಕ್ತಿ ಗೀತೆಗಳು, ನೃತ್ಯ, ಕೋಲಾಟ ಹಾಗೂ ವಿವಿಧ ವೇಷ ಭೂಷಣಗಳ ಮೂಲಕ ನಡೆಸಲಾಗುವುದು. ಯಾಜ್ಞವಲ್ಕ್ಯ ಮಂದಿರದಲ್ಲಿ ನಡೆಯುವ ಧಾರ್ಮಿಕ ಸಭೆಯಲ್ಲಿ ಶ್ರೀ ನಾರಾಯಣಗುರು ವಿಚಾರ ವೇದಿಕೆ (ರಿ) ಬೆಂಗಳೂರು ಕಾರ್ಯಾಧ್ಯಕ್ಷರಾದ ನಾಗರಾಜ ಎಸ್ ಗುತ್ತೇದಾರ ವಕೀಲರು ಈ ಧಾರ್ಮಿಕ ಸಭೆಯನ್ನು ಉದ್ದೇಶಿಸಿ ಮಾತನಾಡಲಿದ್ದಾರೆ.

ಸಭೆಯ ನಂತರ ಪ್ರಸಾದದೊಂದಿಗೆ ಕಾರ್ಯಕ್ರಮ ಸಂಪನ್ನಗೊಳ್ಳಲಿದೆ.

ಈ ಸಂಕೀರ್ತನಾ ಕಾರ್ಯಕ್ರಮಕ್ಕೆ ಎಲ್ಲರೂ ಒಂದೇ ಮನಸ್ಸಿನಿಂದ ಬಂದು ಭಾಗವಹಿಸಿ ಕಾರ್ಯಕ್ರಮವನ್ನು ಯಶಸ್ವಿಗೊಳಿಸಿಕೊಡಬೇಕೆಂದು ಸರ್ವ ಸಮಾಜದವರಲ್ಲಿ ಕೋರಿದ್ದಾರೆ.

ಮಾಹಿತಿಗಾಗಿ:
ಸದಾನಂದ ಶೇಟ್
ಅಧ್ಯಕ್ಷರು, ನಗರ ಸಂಕೀರ್ತನಾ ಯಾತ್ರೆ
ಮೊ.ನಂ: ೯೩೮೦೪೨೫೨೮೧

Leave a Reply