ಲಯನ್ಸ್ ಕ್ಲಬ್ ಹಾಗೂ ಲಯನ್ಸ್ ಚಾರಿಟೇಬಲ್ ಟ್ರಸ್ಟ್ ಅಡಿಯಲ್ಲಿ ಲಯನ್ಸ್ ಶಿಕ್ಷಣ ಸಂಸ್ಥೆಗಳಲ್ಲಿ ಶ್ರೀ ಕೃಷ್ಣ ಜನ್ಮಾಷ್ಟಮಿ ನಿಮಿತ್ಯ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳು

ಲಯನ್ಸ್ ಕ್ಲಬ್ ಹಾಗೂ ಲಯನ್ಸ್ ಚಾರಿಟೇಬಲ್ ಟ್ರಸ್ಟ್ ಅಡಿಯಲ್ಲಿ ಲಯನ್ಸ್ ಶಿಕ್ಷಣ ಸಂಸ್ಥೆಗಳಲ್ಲಿ ಶ್ರೀ ಕೃಷ್ಣ ಜನ್ಮಾಷ್ಟಮಿ ನಿಮಿತ್ಯ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳು

ಗಂಗಾವತಿ: ನಗರದ ಪ್ರತಿಷ್ಠಿತ ಶಿಕ್ಷಣ ಸಂಸ್ಥೆಗಳಲ್ಲಿ ಒಂದಾದ ಲಯನ್ಸ್ ಕ್ಲಬ್ ಹಾಗೂ ಲಯನ್ಸ್ ಚಾರಿಟೇಬಲ್ ಟ್ರಸ್ಟ್ ಹಾಗೂ ಲಯನ್ಸ್ ಶಿಕ್ಷಣ ಸಂಸ್ಥೆಗಳ ಪೂರ್ವ ಪ್ರಾರ್ಥಮಿಕ ವಿದ್ಯಾರ್ಥಿಗಳಿಗಾಗಿ ಶ್ರೀ ಕೃಷ್ಣ ಜನ್ಮಾಷ್ಟಮಿ ನಿಮಿತ್ಯ ಬುಧವಾರ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿತ್ತು.

ಈ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಗಂಗಾವತಿ ಲಯನ್ಸ್ ಕ್ಲಬ್ ಅಧ್ಯಕ್ಷರಾದ ಡಾ|| ಶಿವಕುಮಾರ್ ಮಾಲಿಪಾಟೀಲ್ ವಹಿಸಿದ್ದರು.

ಮುಖ್ಯ ಗುರುಗಳಾದ ಜಗನ್ನಾಥದಾಸ್, ಪ್ರಾಥಮಿಕ ಶಾಲೆಯ ಮುಖ್ಯಗುರುಗಳಾದ ಗುರುಪಾದಯ್ಯ, ಲಯನ್ ಕಾಶಿ ವಿಶ್ವನಾಥ ಸಿರಿಗೇರಿ, ಲಯನ್ ರಾಮನಾಥ ಭಂಢಾರ್ಕರ್, ಲಯನ್ ಆಜಾದ್, ಲಯನ್ಸ್ ಕ್ಲಬ್ ಖಜಾಂಚಿ ಶಿವಪ್ಪ ಗಾಳಿ, ಲಯನ್ಸ ಶಾಲೆಯ ಆಡಳಿತಾಧಿಕಾರಿ ಚಂದ್ರೇಗೌಡ, ಜಂಬಣ್ಣ ಐಲಿ ಇತರರು ಶ್ರೀ ಕೃಷ್ಣನ ಭಾವಚಿತ್ರಕ್ಕೆ ಪೂಜಿ ಸಲ್ಲಿಸಿ ಚಾಲನೆ ನೀಡಿದರು.

ಈ ಸಂದರ್ಭದಲ್ಲಿ. ಮಾತನಾಡಿದ ಗಣ್ಯರು ಪ್ರತಿ ವರ್ಷದಂತೆ ಈ ವರ್ಷವೂ ಸಹ ಶ್ರೀ ಕೃಷ್ಣ ಜನ್ಮಾಷ್ಟಮಿ ಆಚರಣೆಯನ್ನು ಅತ್ಯಂತ ಅರ್ಥಪೂರ್ಣವಾಗಿ ಆಚರಿಸಲಾಗಿದೆ.

ಧರ್ಮ ನಿಷ್ಠೆಯನ್ನು ಹೊಂದಿದ್ದ ಶ್ರೀಕೃಷ್ಣ ಆತನ ಬಾಲ ಲೀಲೆಗಳು, ಮಹಾಕಾವ್ಯಗಳಲ್ಲಿ ಒಂದಾದ ಮಹಾಭಾರತದಲ್ಲಿ ಧರ್ಮ ರಕ್ಷಕನಾಗಿ ಪಾಂಡವರ ಗೆಲುವಿಗಾಗಿ ನಿಲ್ಲುವುದರ ಜೊತೆಗೆ ದುಷ್ಟರ ಸಂಹಾರ ಹಾಗೂ ಶ್ರೀಕೃಷ್ಣನ ತತ್ವ ಸಿದ್ಧಾಂತಗಳು ಸರ್ವ ಕಾಲಕ್ಕೂ ಅನ್ವಯವಾಗುತ್ತದೆ ಎಂದು ಹೇಳಿದರು.

ಇದೇ ಸಂದರ್ಭದಲ್ಲಿ ಶ್ರೀ ಕೃಷ್ಣ, ರಾಧಾ ಅವರ ವೇಷಧಾರಿ ಸ್ಪರ್ಧೆ ನೃತ್ಯ, ಮತ್ತಿತರ ಸಾಂಸ್ಕೃತಿಕ ಕಾರ್ಯಕ್ರಮಗಳು ವಿಶೇಷ ಗಮನ ಸೆಳೆದವು.

ಸ್ಪರ್ಧೆಯ ನಿರ್ಣಯಕರಾಗಿ ಶಕುಂತಲಾ ಕುಲಕರ್ಣಿ, ಉಲ್ಲಾಸ್, ಪ್ರತಿಮಾ ಸೇರಿದಂತೆ ಶಿಕ್ಷಕರು ಪಾಲಕರು ಅಪಾರ ಸಂಖ್ಯೆಯಲ್ಲಿ ಪಾಲ್ಗೊಂಡಿದ್ದರು.

ನಂತರ ವಿವಿಧ ವೇಷಗಳಲ್ಲಿ ಸಾಂಸ್ಕೃತಿಕ ಕಾರ್ಯಕ್ರಮ ನೀಡಿದ ಮಕ್ಕಳಿಗೆ ಬಹುಮಾನ ವಿತರಿಸಲಾಯಿತು.

ವಿಶೇಷವಾಗಿ ಅಹಮದ್ ಅಲಿ ಹಾಗೂ ಖಲಿದಾ ದಂಪತಿಗಳ ಮಗನಾದ ಆದಿಲ್ ಖಾನ್ ಎಂಬ ೨ನೇ ತರಗತಿಯ ವಿದ್ಯಾರ್ಥಿ ಕೃಷ್ಣನ ವೇಷ ಧರಿಸಿ ಸಾಮರಸ್ಯ ಮೆರೆದನು.

ಮಾಹಿತಿಗಾಗಿ:
ಡಾ|| ಶಿವಕುಮಾರ ಮಾಲಿಪಾಟೀಲ್
ಅಧ್ಯಕ್ಷರು, ಲಯನ್ಸ್ ಕ್ಲಬ್ ಗಂಗಾವತಿ
ಮೊ.ನಂ: ೯೪೪೮೩೦೨೭೭೫

Leave a Reply