ಗಂಗಾವತಿ: ಯೋಗಾಸನ ಭಾರತ್ ಸಂಯೋಜಿತವಾಗಿರುವ ಕರ್ನಾಟಕ ಯೋಗಾಸನ ಕ್ರೀಡಾ ಸಂಸ್ಥೆಯು ೬ನೇ ಕರ್ನಾಟಕ ರಾಜ್ಯ ಮಟ್ಟದ ಯೋಗಾಸನ ಚಾಂಪಿಯನ್‌ಶಿಪ್‌ನ್ನು ಚಿತ್ರದುರ್ಗದ ಶ್ರೀ ಮುರುಘರಾಜೇಂದ್ರ ಮಠದಲ್ಲಿ ಆಯೋಜಿಸಿತ್ತು.
ಸ್ಪರ್ಧೆಯನ್ನು ಆಗಸ್ಟ್-೨೨, ೨೩, ೨೪ ಮೂರು ದಿನಗಳ ಕಾಲ ಆಯೋಜಿಸಲಾಗಿತ್ತು.
ತಂಡದ ಕೋಚ್ ಆಗಿ ರೇಷ್ಮ ವಡ್ಡಟ್ಟಿ, ವ್ಯವಸ್ಥಾಪಕರಾಗಿ ಮಹಾಂತೇಶ್‌ರವರು ಭಾಗವಹಿಸಿದ್ದರು.
ಈ ಕ್ರೀಡಾಕೂಟದಲ್ಲಿ ಕೊಪ್ಪಳ ಜಿಲ್ಲಾ ಯೋಗಾಸನ ಕ್ರೀಡಾ ಸಂಸ್ಥೆಯ ೨೧ ವಿದ್ಯಾರ್ಥಿಗಳು ಭಾಗವಹಿಸಿದ್ದರು.
ಗಂಗಾವತಿಯ ನಿತಿನ್, ನಿಹಾರಿಕಾ, ಎನ್.ಚೇತನ್, ಕೃಷ್ಣ ರೆಡ್ಡಿ, ಅಮೃತ, ಭೀಮೇಶ, ಶರಣಮ್ಮ, ಭಾರ್ಗವಿ, ನಿತಿಕಾ ಬಿ. ಮತ್ತು ತನ್ಮಯ ಪಾಟೀಲ್, ಮಧುಸೂದನ್ ಕೊಪ್ಪಳ ಅವರು ಹಲವಾರು ಪದಕಗಳನ್ನು ಪಡೆದರು.
೧೦ ವರ್ಷದ ಕೆಳಗಿನ ಬ್ಯಾಕ್ ಬೆಂಡಿಂಗ್ ಸ್ಪರ್ಧೆಯಲ್ಲಿ ನಿತಿನ್ ಚಿನ್ನದ ಪದಕವನ್ನು ಪಡೆದನು.
ಜೂನಿಯರ್ ಬಾಲಕಿಯರ ೧೪-೧೮ ಲೆಗ್ ಬ್ಯಾಲೆನ್ಸ್ ಮತ್ತು ಟ್ವಿಸ್ಟಿಂಗ್ಕಾಂ ಟೆಟೇಶನ್‌ನಲ್ಲಿ ಬೆಳ್ಳಿ ಪದಕವನ್ನು ತನ್ಮಯ್ ಪಾಟೀಲ್ ಪಡೆದಳ
೪೫ ರಿಂದ ೫೫ ಸುಪೈನ್ ಕಾಂಪಿಟೇಶನ್‌ನಲ್ಲಿ ಕಂಚಿನ ಪದಕವನ್ನು ಭೀಮೇಶ್ ಪಡೆದನು.
ಈ ಸ್ಪರ್ಧೆಗೆ ಕೊಪ್ಪಳ ಜಿಲ್ಲೆಯಿಂದ ನ್ಯಾಯ ನಿರ್ಣಾಯಕರಾಗಿ ಎನ್. ಬಾನುಪ್ರಸಾದ್ ಮತ್ತು ಜಯಶ್ರೀ ಆಯ್ಕೆಯಾಗಿದ್ದರು.
ಕೊಪ್ಪಳ ಜಿಲ್ಲಾ ಯೋಗಾಸನ ಕ್ರೀಡಾ ಸಂಸ್ಥೆ ಗೌರವಾಧ್ಯಕ್ಷ ಶಾಮಮೂರ್ತಿ ಐಲಿ, ಸಂಸ್ಥೆಯ ಅಧ್ಯಕ್ಷರಾದ ಅಬ್ದುಲ್ ರಜಾಕ್, ಕಾರ್ಯದರ್ಶಿ ಎನ್. ಭಾನುಪ್ರಸಾದ್, ಖಜಾಂಚಿ ಡಾ. ಕೆ. ಭಾನು ಪ್ರಕಾಶ್ ವಿಜೇತರಿಗೆ ಹಾಗೂ ಆಟಗಾರರಿಗೆ ಅಭಿನಂದನೆ ಸಲ್ಲಿಸಿದರು.