ಜಿಲ್ಲಾ ಮಟ್ಟದ ಚೆಸ್ ಹಾಗೂ ಶೆಟಲ್ ಬ್ಯಾಡ್ಮಿಂಟನ್ ಸ್ಪರ್ಧೆಯಲ್ಲಿ ಮಹಾನ್ ಕಿಡ್ಸ್ ಶಾಲೆಯ ವಿದ್ಯಾರ್ಥಿಗಳು ರಾಜ್ಯ ಮಟ್ಟಕ್ಕೆ ಆಯ್ಕೆ.

ಜಿಲ್ಲಾ ಮಟ್ಟದ ಚೆಸ್ ಹಾಗೂ ಶೆಟಲ್ ಬ್ಯಾಡ್ಮಿಂಟನ್ ಸ್ಪರ್ಧೆಯಲ್ಲಿ ಮಹಾನ್ ಕಿಡ್ಸ್ ಶಾಲೆಯ ವಿದ್ಯಾರ್ಥಿಗಳು ರಾಜ್ಯ ಮಟ್ಟಕ್ಕೆ ಆಯ್ಕೆ.

ಗಂಗಾವತಿ: ಸೆಪ್ಟೆಂಬರ್-೦೧ ರಂದು ಜಿಲ್ಲಾ ಕ್ರೀಡಾಂಗಣ ಕೊಪ್ಪಳ, ಸಾರ್ವಜನಿಕ ಶಿಕ್ಷಣ ಇಲಾಖೆ ಸಂಯುಕ್ತಾಶ್ರಯದಲ್ಲಿ ಜಿಲ್ಲಾಮಟ್ಟದ ಚೆಸ್ ಸ್ಪರ್ಧೆ, ಶೆಟಲ್ ಬ್ಯಾಡ್ಮಿಂಟನ್, ಬಾಲ್ ಬ್ಯಾಡ್ಮಿಂಟನ್ ಪಂದ್ಯಾವಳಿ ಹಮ್ಮಿಕೊಳ್ಳಲಾಗಿತ್ತು.

ಈ ಸ್ಪರ್ಧೆಯಲ್ಲಿ ಗಂಗಾವತಿಯ ಮಹಾನ್ ಕಿಡ್ಸ್ ಶಾಲೆಯ ವಿದ್ಯಾರ್ಥಿಗಳು ಅತ್ಯುತ್ತಮ ಸಾಧನೆ ಮಾಡಿದ್ದು, ಪ್ರಾಥಮಿಕ ವಿಭಾಗದ ಚೆಸ್ ಸ್ಪರ್ಧೆಯಲ್ಲಿ ಸಮೀಕ್ಷಾ, ಶಿವರಾಜ್ ಮತ್ತು ಬಾಲಕಿಯರ ಪ್ರೌಢ ವಿಭಾಗದಲ್ಲಿ ಸೃಜನಾ ಪ್ರಥಮ ಸ್ಥಾನ ಪಡೆದು, ಮುಂದೆ ನಡೆಯುವ ರಾಜ್ಯ ಮಟ್ಟಕ್ಕೆ ಆಯ್ಕೆಯಾಗಿದ್ದಾರೆ.

ಅದೇರೀತಿ ನಿವೇದ, ರಾಮ್ ಸೂರ್ಯ, ವೈಭವ್, ಶಿವಕುಮಾರ್, ಧನುಷ್ ಬಾಲಕರ ಪ್ರಾಥಮಿಕ ವಿಭಾಗದ ಶೆಟಲ್ ಬ್ಯಾಡ್ಮಿಂಟನ್‌ನಲ್ಲಿ ಪ್ರಥಮ ಸ್ಥಾನ ಪಡೆದು ಮುಂದೆ ನಡೆಯುವ ವಿಭಾಗ ಮಟ್ಟಕ್ಕೆ ಆಯ್ಕೆಯಾಗಿದ್ದಾರೆ.

ಮಹಾನ್ ಕಿಡ್ಸ್ ಶಾಲೆಯ ಅಧ್ಯಕ್ಷರಾದ ನೇತ್ರಾಜ್ ಗುರುವಿನ ಮಠ ವಿದ್ಯಾರ್ಥಿಗಳಿಗೆ ಅಭಿನಂದನೆಗಳನ್ನು ಸಲ್ಲಿಸಿದರು.

Leave a Reply