ಪಿ.ನವೀನ್ ಕುಮಾರ್ ಬಳ್ಳಾರಿಯವರು ಗಂಗಾವತಿ ತಾಲೂಕಿನ ಐತಿಹಾಸಿಕ ಪ್ರಸಿದ್ಧ ಪಂಪಾಸರೋವರದಲ್ಲಿ ಸೇವೆ ಸಲ್ಲಿಸುತ್ತಿದ್ದರು.
ಅವರು ತಮ್ಮ ೩೨ನೇ ಜನ್ಮದಿನವನ್ನು ಗಂಗಾವತಿಯ ಲಯನ್ಸ್ ಚಾರಿಟೇಬಲ್ ಟ್ರಸ್ಟ್ನ ಬುದ್ಧಿಮಾಂದ್ಯ ಮಕ್ಕಳ ಶಾಲೆಯಲ್ಲಿಅನ್ನ ಸಂತರ್ಪಣೆ ಮಾಡಿ ಆಚರಿಸಿಕೊಂಡರು.
ಕೇಕ್ ಕತ್ತರಿಸುವುದರ ಮೂಲಕ ಹಾಗೂ ಪಂಪಾ ಸರೋವರದಲ್ಲಿರುವ ಎಲ್ಲಾ ಆಟೋ ಚಾಲಕರಿಗೆ ಮತ್ತು ಭಕ್ತಾದಿಗಳಿಗೆ ಅನ್ನ ಸಂತರ್ಪಣೆ ವ್ಯವಸ್ಥೆ ಮಾಡುವ ಮೂಲಕ ಸರಳತೆಯಿಂದ ಆಚರಿಸಿಕೊಂಡರು.
ಅನ್ನಸಂತರ್ಪಣೆ ಮಾಡಿ ಮಾತನಾಡಿದ ಅವರು ಬುದ್ಧಿಮಾಂದ್ಯ ಶಾಲೆಯಲ್ಲಿ ೩೨ನೇ ವರ್ಷದ ಜನ್ಮದಿನವನ್ನು ಆಚರಿಸಿಕೊಂಡಿದ್ದು ತುಂಬಾ ಸಂತೋಷವಾಗಿದೆ.
ಪಂಪಾ ಸರೋವರದ ಶ್ರೀ ವಿಜಯಲಕ್ಷ್ಮಿ ಅಮ್ಮನವರ ಆಶೀರ್ವಾದದಿಂದ ಕಿಷ್ಕಿಂದಾ ಭಾಗದಲ್ಲಿ ಹಲವಾರು ಸಾಮಾಜಿಕ ಚಟುವಟಿಕೆಗಳನ್ನು ಗೆಳೆಯರ ಬಳಗದ ಸಹಯೋಗದೊಂದಿಗೆ ಹಮ್ಮಿಕೊಳ್ಳಲು ನಿರ್ದರಿಸಿತು.
ಮುಂದಿನ ದಿನಗಳಲ್ಲಿ ಕಾರ್ಯಯೋಜನೆಗಳ ಬಗ್ಗೆ ತಿಳಿಸಲಾಗುವುದು ಎಂದು ಹೇಳಿದರು.
ಗೆಳೆಯರ ಬಳಗದ ಪ್ರಮುಖರಾದ ಹನುಮನಹಳ್ಳಿ ಬಾಲು, ರಾಘು ಪಂಪಾಸರೋವರ, ಜವಳಿ ಮಂಜುನಾಥ್, ಚಂದ್ರು, ವೀರೇಶ ಆನೆಗುಂದಿ ಹಾಗೂ ಬಸವನಗೌಡ ಹಿರೇಬೆಣಕಲ್ ಸೇರಿದಂತೆ ನೂರಾರು ಸಂಖ್ಯೆಯ ಗೆಳೆಯರ ಬಳಗದ ಸದಸ್ಯರು ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.