ಮಹಾನ್ ಕಿಡ್ಸ್ ಶಾಲೆಯಲ್ಲಿ ಇಂಜಿನಿಯರ್ ದಿನಾಚರಣೆ.

ಮಹಾನ್ ಕಿಡ್ಸ್ ಶಾಲೆಯಲ್ಲಿ ಇಂಜಿನಿಯರ್ ದಿನಾಚರಣೆ.

ವಿದ್ಯಾರ್ಥಿಗಳಲ್ಲಿ ವೈಜ್ಞಾನಿಕ ಮನೋಭಾವನೆ ಬೆಳೆಸುವುದೇ ದಿನಾಚರಣೆಯ ಮೂಲ ಉದ್ದೇಶ… ನೇತ್ರಾಜ ಗುರುವಿನ ಮಠ.

ಗಂಗಾವತಿ: ಭಾರತ ರತ್ನ ಸಿವಿಲ್ ಇಂಜಿನಿಯರ್ ಸರ್ ಎಂ ವಿಶ್ವೇಶ್ವರಯ್ಯನವರ ಜನ್ಮ ದಿನಾಚರಣೆಯನ್ನು ದೇಶಾದ್ಯಂತ ಸಪ್ಟೆಂಬರ್ 15ರಂದು ಆಚರಿಸಲಾಗುತ್ತಿದೆ.

ಇದರ ಮೂಲ ಉದ್ದೇಶ ವಿದ್ಯಾರ್ಥಿಗಳಲ್ಲಿ ವೈಜ್ಞಾನಿಕ ಮನೋಭಾವನೆ ಹಾಗೂ ಸಂಶೋಧನೆ ಬೆಳೆಸುವುದು ಎಂದು ಮಹಾನ್ ಕಿಡ್ಸ್ ಆಂಗ್ಲ ಮಾಧ್ಯಮ ಶಾಲೆಯ ಅಧ್ಯಕ್ಷ ನೇತ್ರಾಜ ಗುರುವಿನ ಮಠ ಹೇಳಿದರು.

ಅವರು ಶಾಲೆಯಲ್ಲಿ ಇಂಜಿನಿಯರ್ಸ್ ಡೇ ಆಚರಣೆ ಪ್ರಯುಕ್ತ ಸರ್ ಎಂ ವಿಶ್ವೇಶ್ವರಯ್ಯ ರವರ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿ ಚಾಲನೆ ನೀಡಿ ಮಾತನಾಡುತ್ತಾ ಭಾರತವು ವೈಜ್ಞಾನಿಕ ಕ್ಷೇತ್ರದಲ್ಲಿ ದಿಟ್ಟ ಹೆಜ್ಜೆ ಇಡುವುದರ ಮೂಲಕ ಸಾಧನೆಯ ಹಾದಿಯಲ್ಲಿದೆ ಎಂಬುದಕ್ಕೆ ಇತ್ತೀಚಿನ ಉಡಾವಣೆಗಳು ಸಾಕ್ಷಿಯಾಗಿದೆ.

ಭೂಗೋಳ, ಖಗೋಳ, ಸೂರ್ಯ-ಚಂದ್ರ, ಹಗಲು-ರಾತ್ರಿ, ಗ್ರಹಣ ಮತ್ತಿತರ ವಿಷಯಗಳನ್ನು ಶಾಲಾ ವಿದ್ಯಾರ್ಥಿಗಳಿಗೆ ತಿಳಿ ಹೇಳುವ ಕಾರ್ಯ ನಡೆಸಲಾಗುತ್ತದೆ ಎಂದು ಹೇಳಿದರು.

ಶಾಲಾ ಮುಖ್ಯೋಪಾಧ್ಯಾಯಿನಿ ಸವಿತಾ ನೇತ್ರಾಜ ಗುರುವಿನ ಮಠ ಸಮಾರಂಭವನ್ನು ಉದ್ದೇಶಿಸಿ ಮಾತನಾಡಿ ಗೊತ್ತಿದ್ದ ವಿಷಯದಿಂದ ಗೊತ್ತಿಲ್ಲದ ವಿಷಯಗಳ ಕಡೆಗೆ ಸಾಗುವುದೇ ದಿನಾಚರಣೆಯ ಮೂಲ ಉದ್ದೇಶ ಎಂದು ಹೇಳಿದರು.

ವಿದ್ಯಾರ್ಥಿಗಳಲ್ಲಿ ಆತ್ಮವಿಶ್ವಾಸವನ್ನು ಹೆಚ್ಚಿಸುವುದರ ಮೂಲಕ ವಿಶ್ವದ ವಿಸ್ಮಯಗಳನ್ನು ಗುರುಗಳ ಮಾರ್ಗದರ್ಶನದಲ್ಲಿ ಕಳಿಸಲಾಗುತ್ತದೆ ಎಂದು ತಿಳಿಸಿದರು.

ಈ ಸಂದರ್ಭದಲ್ಲಿ ವಿದ್ಯಾರ್ಥಿಗಳು ವೈಜ್ಞಾನಿಕ ಮಾದರಿಯ ವಸ್ತು ಪ್ರದರ್ಶನವನ್ನು ಪ್ರದರ್ಶಿಸಿದರು.. ಶಾಲಾ ಶಿಕ್ಷಕರಾದ ಚಂಪಾರಾಣಿ ಕು ಮುದಿನಿ ಸಹನಾ, ಪೂರ್ಣಿಮಾ, ಗೌಶಿಯ ಶಿಕ್ಷಕರು ಸೇರಿದಂತೆ ಪಾಲಕರುಗಳಾದ ಸುನಿಲ್ ವೈದ್ಯ, ವೆಂಕಟೇಶ, ಲತಾ, ಅಪಾರ ಪಾಲಕರು ಪಾಲ್ಗೊಂಡಿದ್ದರು.

Leave a Reply