ಗಂಗಾವತಿ: ನಗರದ ಬಾಲಕರ ಪದವಿ ಪೂರ್ವ ಕಾಲೇಜಿನ ಎನ್.ಎಸ್.ಎಸ್ ಘಟಕದ ವಾರ್ಷಿಕ ವಿಶೇಷ ಶಿಬಿರದ ಉದ್ಘಾಟನೆಯು ಸೆಪ್ಟೆಂಬರ್-೨೦ ರಂದು ತಾಲೂಕಿನ ಅರಳಹಳ್ಳಿ ಗ್ರಾಮದ ಅಲ್ಪಸಂಖ್ಯಾತ ಬಾಲಕಿಯರ ಪದವಿ ಪೂರ್ವ ಕಾಲೇಜು ಆವರಣದಲ್ಲಿ ನೆರವೇರಿತು. ಶಿಬಿರವನ್ನು ಅರಳಹಳ್ಳಿ ಗ್ರಾಮದ ಪೂಜ್ಯ ವೇ.ಮೂ ಗವಿಸಿದ್ದಯ್ಯ ಸ್ವಾಮಿಗಳು ನೆರವೇರಿಸಿದರು.
ಸಮಾರಂಭದ ಅಧ್ಯಕ್ಷತೆಯನ್ನು ಕಾಲೇಜಿನ ಪ್ರಾಚಾರ್ಯರಾದ ಬಸಪ್ಪ ನಾಗೋಲಿ ಅವರು ವಹಿಸಿಕೊಂಡಿದ್ದರು. ಗ್ರಾ.ಪಂ ಮಾಜಿ ಉಪಾಧ್ಯಕ್ಷರಾದ ವೀರಭದ್ರಯ್ಯ, ಎಸ್.ಡಿ.ಎಂ.ಸಿ ಅಧ್ಯಕ್ಷರಾದ ದಾನನಗೌಡ, ಮಲ್ಲಿಕಾರ್ಜುನ, ಅಂಗನವಾಡಿ ಕಾರ್ಯಕರ್ತೆಯಾದ ಶ್ರೀಮತಿ ನಿರ್ಮಲ ಹಾಗೂ ಆಶಾ ಕಾರ್ಯಕರ್ತೆಯಾದ ಶಿವಗಂಗಮ್ಮ ಉಪಸ್ಥಿತರಿದ್ದರು. ಸಂಸ್ಥೆಯ ಹಿರಿಯ ಉಪನ್ಯಾಸಕರಾದ ಡಾ. ಲಿಂಗಣ್ಣ ಜಂಗಮರಹಳ್ಳಿ, ಗ್ರಂಥಪಾಲಕರಾದ ರಮೇಶ ಗಬ್ಬೂರು, ಎನ್.ಎಸ್.ಎಸ್ ಕಾರ್ಯಕ್ರಮ ಅಧಿಕಾರಿಗಳಾದ ರುದ್ರೇಶ್ ತಬಾಲಿ, ಇತಿಹಾಸ ಉಪನ್ಯಾಸಕರಾದ ಈಶ್ವರಪ್ಪ ಸಿ., ಉಪನ್ಯಾಸಕರಾದ ಮಹೇಶ್ ಹಿರೇಮಠ್, ನಿರುಪಾದಿ, ಶ್ರೀಕಾಂತ್ ಉಪಸ್ಥಿತರಿದ್ದರು.
ಅರಳಹಳ್ಳಿ ಬೃಹನ್ಮಠದ ವೇ.ಮೂ ಗವಿಸಿದ್ದಯ್ಯ ಸ್ವಾಮಿಗಳು ಶಿಬಿರವನ್ನು ಉದ್ಘಾಟಿಸಿ ಮಾತನಾಡುತ್ತಾ ಪ್ರತಿಯೊಬ್ಬರ ಜೀವನದಲ್ಲಿ ಶಿಕ್ಷಣ ಮತ್ತು ಸಂಸ್ಕಾರಗಳು ಬಹಳ ಮುಖ್ಯ. ಶಿಕ್ಷಣ ಒಂದೇ ಜೀವನವನ್ನು ಪರಿಪೂರ್ಣ ಮಾಡುವುದಿಲ್ಲ. ಅದಕ್ಕೆ ಉತ್ತಮವಾದ ಸಂಸ್ಕಾರದ ಅವಶ್ಯಕತೆ ಇದೆ. ಉತ್ತಮ ಸಂಸ್ಕಾರವನ್ನು ನಮ್ಮಲ್ಲಿ ತರುವ ಕೆಲಸ ಈ ಶಿಬಿರ ಮಾಡುತ್ತದೆ ಎಂದರು. ೭ ದಿನಗಳ ಕಾಲ ನಡೆಯುವ ಈ ಶಿಬಿರದಲ್ಲಿ ದೇಶ, ಸಮಾಜ ಮತ್ತು ವ್ಯಕ್ತಿ ವಿಕಸನಕ್ಕೆ ಸಂಬAಧಪಟ್ಟ ಅನೇಕ ವಿಷಯಗಳ ಕುರಿತು ಉಪನ್ಯಾಸಗಳನ್ನು ಹಮ್ಮಿಕೊಂಡಿದ್ದೀರಿ. ಉಪನ್ಯಾಸಕರ ವಿಷಯಗಳನ್ನು ಮನಸುಕೊಟ್ಟು ಆಲಿಸಿ ತಾವು ಈ ದೇಶದ ಉತ್ತಮ ಪ್ರಜೆಗಳಾಗಿ ಪರಿವರ್ತನೆಯಾಗಬೇಕು. ಕಾಯಕದಲ್ಲಿ ಯಾವುದೇ ಮೇಲು-ಕೀಳು ಇರುವುದಿಲ್ಲ. ವಿದ್ಯಾವಂತರಾದವರು ಕೃಷಿ ಕೆಲಸ ಮಾಡಬಾರದು ಎನ್ನುವ ಭಾವನೆ ಅನೇಕರಲ್ಲಿದೆ ಇದು ತಪ್ಪು. ಕೋಟಿ ವಿದ್ಯೆಗಳಲ್ಲಿ ಮೇಟಿ ವಿದ್ಯೆಯೇ ಮೇಲು ಎಂಬ ನಾಣ್ನುಡಿಯಂತೆ ಕೃಷಿ ಈ ಜಗತ್ತಿಗೆ ಅನ್ನ ನೀಡುವಂತಹ ಶ್ರೇಷ್ಠ ಕಾಯಕವಾಗಿದೆ. ಇದರ ಬಗ್ಗೆ ನಿರ್ಲಕ್ಷö್ಯ ಮಾಡದೇ ವೈಜ್ಞಾನಿಕ ಬೇಸಾಯ ಕೈಗೊಂಡು ದೇಶ ನಿರ್ಮಾಣದಲ್ಲಿ ತೊಡಗಲು ಕರೆ ನೀಡಿದರು. ಶಿಬಿರದ ಉದ್ದೇಶ ಮತ್ತು ಗುರಿಗಳ ಕುರಿತು ಹಾಗೂ ಶಿಬಿರದಲ್ಲಿ ವಿದ್ಯಾರ್ಥಿಗಳ ಭಾಗವಹಿಸುವಿಕೆ ಕುರಿತು ಹಿರಿಯ ಉಪನ್ಯಾಸಕರಾದ ಡಾ. ಲಿಂಗಣ್ಣ ಜಂಗಮರಹಳ್ಳಿ ಅವರು ಮಾತನಾಡಿದರು.
ಕಾರ್ಯಕ್ರಮ ಅಧಿಕಾರಿ ರುದ್ರೇಶ್ ತಬಾಲಿಯವರು ಎನ್.ಎಸ್.ಎಸ್. ಪ್ರತಿಜ್ಞಾವಿಧಿ ಬೋಧಿಸಿದರು. ಎನ್.ಎಸ್.ಎಸ್. ವಿದ್ಯಾರ್ಥಿನಿ ಕುಮಾರಿ ಬಾಳಮ್ಮ ಕಾರ್ಯಕ್ರಮ ನಿರೂಪಣೆ ಮಾಡಿದರು. ಶಿಬಿರವು ಸೆಪ್ಟೆಂಬರ್-೨೦ ರಿಂದ ೨೬ರವರೆಗೆ ಏಳು ದಿನಗಳ ಕಾಲ ನಿರಂತರವಾಗಿ ನಡೆಯಲಿದ್ದು, ವಿವಿಧ ಚಟುವಟಿಕೆಗಳನ್ನು ಹಮ್ಮಿಕೊಳ್ಳಲಾಗಿದೆ. ಶಿಬಿರದಲ್ಲಿ ೩೦ ವಿದ್ಯಾರ್ಥಿನಿಯರು ೨೦ ವಿದ್ಯಾರ್ಥಿಗಳು ಸೇರಿ ಒಟ್ಟು ೫೦ ಜನ ಸ್ವಯಂ ಸೇವಕರು ಭಾಗವಹಿಸಿದ್ದರು.