ಗಂಗಾವತಿ: ಕೊಪ್ಪಳ ವಿಶ್ವವಿದ್ಯಾಲಯ ಕೊಪ್ಪಳ ಅಡಿಯಲ್ಲಿ ಬಿ.ಎಡ್ ನ ಎರಡನೇ ಸೆಮಿಸ್ಟರ್ ಫಲಿತಾಂಶ ಕೇವಲ ಮೌಲ್ಯಮಾಪನಗೊಂಡ ೩ ದಿನಗಳಲ್ಲಿ ಪ್ರಕಟಗೊಂಡಿದ್ದು, ಗಂಗಾವತಿ ನಗರದ ಟಿ.ಎಂ.ಎ.ಇ ಸಂಸ್ಥೆಯ ಶಿಕ್ಷಣ ಮಹಾವಿದ್ಯಾಲಯದ ಫಲಿತಾಂಶ ೧೦೦% ಆಗಿದ್ದು ಸಂತೋಷದಾಯಕ. ವಿದ್ಯಾಲಯದ ಕುಮಾರ ಶರಣಗೌಡ (೫೪೪/೬೦೦), ಕುಮಾರಿ ಮುತ್ತಮ್ಮ (೫೪೩/೬೦೦), ಕುಮಾರಿ ರತ್ನಮ್ಮ (೫೪೩/೬೦೦) ಮತ್ತು ಕುಮಾರಿ ಮುಸ್ಕಾನ್ (೫೪೩/೬೦೦) ಪ್ರಥಮ ಹಾಗೂ ದ್ವಿತೀಯ ಸ್ಥಾನಗಳನ್ನು ೩ ವಿದ್ಯಾರ್ಥಿಗಳು ಪಡೆದುಕೊಂಡಿದ್ದು ಮಹಾವಿದ್ಯಾಲಯಕ್ಕೆ ಹೆಮ್ಮೆ ತಂದಿರುತ್ತಾರೆ. ಪ್ರಯುಕ್ತ ಸಂಸ್ಥೆಯ ಅಧ್ಯಕ್ಷರಾದ ಶ್ರೀ ಷ.ಬ್ರ ವರಸದ್ಯೋಜಾತ ಮಹಾಸ್ವಾಮಿಗಳು, ಕಾರ್ಯದರ್ಶಿಗಳಾದ ಡಾ. ಟಿ.ಎಂ ಚಂದ್ರಶೇಖರಯ್ಯನವರು, ಸರ್ವ ಸದಸ್ಯರು, ಪ್ರಿನ್ಸಿಪಾಲ ಮತ್ತು ಸಿಬ್ಬಂದಿ ವರ್ಗದವರು ಶುಭ ಹಾರೈಸಿದ್ದಾರೆ.