
ಭಾವನೆಗಳ ಜಗತ್ತಿನಲ್ಲಿ ಹೃದಯದ ಕವಿತೆ ಗೊರೂರು ಅನಂತರಾಜು, ಹಾಸನ.
ನಾನು ಸಾಹಿತ್ಯ ಕ್ಷೇತ್ರಕ್ಕೆ ಬಂದು ಬರೆಯಲು ಪ್ರಾರಂಭಿಸಿದ್ದು ೨೦೨೦ರ ಕರೋನ ಸಮಯದಲ್ಲಿ. ಊರು ಹೋಗು ಕಾಡು ಬಾ ಎನ್ನುವ ವಯಸ್ಸಿನಲ್ಲಿ. ನನ್ನ ಹವ್ಯಾಸ ಬಟ್ಟೆ ಹೊಲಿಯುವುದು, ಕರಕುಶಲ ಕಲೆ, ಕೃತಕ ಆಭರಣಗಳ ತಯಾರಿಕೆ ಕ್ರೋಶಾವರ್ಕ್, ನಿಬ್ ಪೈಂಟಿಂಗ್, ಪರ್ಸ್ ವ್ಯಾನಿಟಿ ಬ್ಯಾಗ್ ತಯಾರಿಕೆ, ಸೀರೆ ಕುಚ್ಚು ಹಾಕುವುದು ಕಸೂತಿ ಇವುಗಳನ್ನು ಮನೆಯಲ್ಲಿಯೇ ಕಲಿಸಿ ತರಬೇತಿ ಕೊಡುತ್ತಿದ್ದೆ. ಕೊರೋನ ಮಾರಿಯಿಂದ ಸಂಪರ್ಕವಿಲ್ಲದೆ ಕೆಲಸಗಳಿಗೆ ಅಡೆತಡೆಯಾಗಿ ದುಡಿಮೆ ಇಲ್ಲದೆ ಮನೆಯಲ್ಲಿ ಕೂರುವಂತಾಗಿ ಸಾಲದಿದ್ದಕ್ಕೆ ಕರೋನ ಬರುವ ಒಂದು ತಿಂಗಳ ಮುಂಚೆ…