SANMATHI PATTAR

ವೈಜೆಆರ್ ಕಾಲೇಜಿ ವಿಜೃಂಭಣೆಯಿಂದ ನಡೆದ ಗಣಪನ ವಿಸರ್ಜನೆ ಮೆರವಣಿಗೆ

ವೈಜೆಆರ್ ಕಾಲೇಜಿ ವಿಜೃಂಭಣೆಯಿಂದ ನಡೆದ ಗಣಪನ ವಿಸರ್ಜನೆ ಮೆರವಣಿಗೆ

ಗಂಗಾವತಿ : ವಿದ್ಯಾನಗರ ವೈಜೆಆರ್ ಪಿಯು ಕಾಲೇಜ್ ನಲ್ಲಿ ಗಣೇಶ ಚತುರ್ಥಿಯನ್ನು ಸಂಭ್ರಮದಿಂದ ಆಚರಿಸಲಾಯಿತು. ಮಣ್ಣಿನ ಗಣೇಶ ಮೂರ್ತಿಯನ್ನು ಅದ್ಧೂರಿಯಾಗಿ ಸ್ವಾಗತಿಸಿ ಐದು ದಿನ ಕಾಲೇಜಿನಲ್ಲಿ ಪ್ರತಿಷ್ಠಾಪಿಸಿ ಗಣೇಶನಿಗೆ ವಿಶೇಷ ಪೂಜೆ ಪುನಸ್ಕಾರಗಳು ನಡೆದವು. ರವಿವಾರ ವಿಸರ್ಜನ ವೇಳೆ ಯುವಕರು ಯುವತಿಯರು ಕುಣಿದು ಕುಪ್ಪಳಿಸಿ ಸಂಭ್ರಮಿಸಿದರು.ಗಣೇಶನ ಮೆರವಣಿಗೆಯು ವಿಜೃಂಭಣೆಯಿಂದ ನಡೆಯಿತು. ವಿದ್ಯಾರ್ಥಿ ವಿದ್ಯಾರ್ಥಿನಿಯರು ಪಟಾಕಿ ಸಿಡಿಸಿ, ಸಿಹಿ ಹಂಚಿ ಸಂತೋಷಪಟ್ಟರು. ಈ ವೇಳೆ ಅಧ್ಯಕ್ಷ ಕಲ್ಯಾಣಂ ಜಾನಕಿರಾಮ್ ಮಾತನಾಡಿ ಜಿಲ್ಲೆ ಮತ್ತು ರಾಜ್ಯದ ಜನತೆಗೆ ಹಾಗೂ ವಿದ್ಯಾರ್ಥಿಗಳಿಗೆ…

Read More
ಬೆಂಗಳೂರಿನ ಕುಂಭಮೇಳ ಸಾಂಸ್ಕೃತಿಕ ಅಕಾಡೆಮಿ ಇವರಿಂದ ಡಾ|| ಶಿವಕುಮಾರ ಮಾಲಿಪಾಟೀಲ್ ಅವರಿಗೆ ಪುಣ್ಯಕೋಟಿ ಪ್ರಶಸ್ತಿ ಪ್ರದಾನ.

ಬೆಂಗಳೂರಿನ ಕುಂಭಮೇಳ ಸಾಂಸ್ಕೃತಿಕ ಅಕಾಡೆಮಿ ಇವರಿಂದ ಡಾ|| ಶಿವಕುಮಾರ ಮಾಲಿಪಾಟೀಲ್ ಅವರಿಗೆ ಪುಣ್ಯಕೋಟಿ ಪ್ರಶಸ್ತಿ ಪ್ರದಾನ.

ಗಂಗಾವತಿ: ಬೆಂಗಳೂರಿನ ಕುಂಭಮೇಳ ಸಾಂಸ್ಕೃತಿಕ ಅಕಾಡೆಮಿ ಇವರಿಂದ ಗಂಗಾವತಿ ಲಯನ್ಸ್ ಕ್ಲಬ್ ಅಧ್ಯಕ್ಷರಾದ ಡಾ|| ಶಿವಕುಮಾರ ಮಾಲಿಪಾಟೀಲ್ ಅವರಿಗೆ ಆಗಸ್ಟ್-೨೮ ಗುರುವಾರ ಲಯನ್ಸ್ ಕ್ಲಬ್‌ನಲ್ಲಿ ಪುಣ್ಯಕೋಟಿ ಪ್ರಶಸ್ತಿ ಪ್ರದಾನ ಮಾಡಲಾಗಿದೆ ಎಂದು ಅಕಾಡೆಮಿಯ ಸಂಸ್ಥಾಪಕ ಅಧ್ಯಕ್ಷರಾದ ಶೇಖರ್ ತೆಗ್ಗಿ ಅವರು ತಿಳಿಸಿದರು. ಪ್ರಶಸ್ತಿ ಪ್ರದಾನ ಮಾಡಿ ಮಾತನಾಡಿದ ಅವರು ಡಾ|| ಶಿವಕುಮಾರ ಮಾಲಿಪಾಟೀಲ್ ಅವರು ವೃತ್ತಿಯಲ್ಲಿ ಒಬ್ಬ ವೈದ್ಯರಾಗಿ ಸಾಹಿತಿಗಳಾಗಿ, ಸಮಾಜ ಸೇವಕರಾಗಿ ಸಾಕಷ್ಟು ಸೇವೆಗಳನ್ನು ಸಲ್ಲಿಸುತ್ತಾ ಜನಾನುರಾಗಿಯಾಗಿದ್ದಾರೆ. ಇವರಿಗೆ ಸನ್ಮಾನಿಸಿ ಅಭಿನಂದಿಸುವುದು ನಮ್ಮ ಅಕಾಡೆಮಿಯ ಹೆಬ್ಬಯಕೆಯಾಗಿತ್ತು….

Read More
ಆಗಸ್ಟ್-೨೪ ರವಿವಾರ ಉದ್ಘಾಟನೆಗೊಂಡ ಶ್ರೀ ರೇಣುಕಾ ಹುಲಿಗೆಂಬಾ ದೇವಿ ಸಮುದಾಯ ಭವನ.

ಆಗಸ್ಟ್-೨೪ ರವಿವಾರ ಉದ್ಘಾಟನೆಗೊಂಡ ಶ್ರೀ ರೇಣುಕಾ ಹುಲಿಗೆಂಬಾ ದೇವಿ ಸಮುದಾಯ ಭವನ.

ಗಂಗಾವತಿ: ಸಮಾಜಗಳ ಅಭಿವೃದ್ಧಿಗೆ ಒಗ್ಗಟ್ಟು ಅವಶ್ಯವಾಗಿದೆ. ಒಗ್ಗಟ್ಟಿನಿಂದ ಸಮಾಜವು ಶೈಕ್ಷಣಿಕವಾಗಿ, ಧಾರ್ಮಿಕವಾಗಿ, ಸಾಮಾಜಿಕವಾಗಿ ಅಭಿವೃದ್ಧಿ ಸಾಧ್ಯ ಎಂದು ಮಾಜಿ ಶಾಸಕ ಪರಣ್ಣ ಮುನವಳ್ಳಿ ಹೇಳಿದರು. ಅವರು ರವಿವಾರ ನಗರದ ಮಾರುತೇಶ್ವರನಗರ ಉಪ್ಪಿನಮಾಳಿ ಕ್ಯಾಂಪಿನಲ್ಲಿರುವ ಶ್ರೀರೇಣುಕಾ ಹುಲಿಗೆಂಬಾ ದೇವಿ ಸಮುದಾಯ ಭವನವನ್ನು ಉದ್ಘಾಟಿಸಿ ಮಾತನಾಡಿದರು. ಈ ಹಿಂದೆ ಶಾಸಕರಾಗಿದ್ದ ಸಮಯದಲ್ಲಿ ಸರ್ವ ವರ್ಗಗಳ ಅಭಿವೃದ್ಧಿಗೆ ಪ್ರಾಮಾಣಿಕ ಪ್ರಯತ್ನ ಮಾಡಲಾಗಿದ್ದು, ಸದರಿ ಸಮುದಾಯ ಭವನಕ್ಕೆ ಮೂರು ಲಕ್ಷ ಅನುದಾನವನ್ನು ನೀಡಲಾಗಿದೆ ಎಂದು ಸ್ಮರಿಸಿದರು. ಅಲ್ಲದೆ ಎಲ್ಲರೂ ಮಕ್ಕಳಿಗೆ ಉತ್ತಮ ಶಿಕ್ಷಣ…

Read More
೬ನೇ ರಾಜ್ಯ ಮಟ್ಟದ ಯೋಗಾಸನ ಸ್ಪರ್ಧೆಯಲ್ಲಿ ಕೊಪ್ಪಳ ಜಿಲ್ಲಾ ಯೋಗಾಪಟುಗಳ ಸಾಧನೆ

೬ನೇ ರಾಜ್ಯ ಮಟ್ಟದ ಯೋಗಾಸನ ಸ್ಪರ್ಧೆಯಲ್ಲಿ ಕೊಪ್ಪಳ ಜಿಲ್ಲಾ ಯೋಗಾಪಟುಗಳ ಸಾಧನೆ

ಗಂಗಾವತಿ: ಯೋಗಾಸನ ಭಾರತ್ ಸಂಯೋಜಿತವಾಗಿರುವ ಕರ್ನಾಟಕ ಯೋಗಾಸನ ಕ್ರೀಡಾ ಸಂಸ್ಥೆಯು ೬ನೇ ಕರ್ನಾಟಕ ರಾಜ್ಯ ಮಟ್ಟದ ಯೋಗಾಸನ ಚಾಂಪಿಯನ್‌ಶಿಪ್‌ನ್ನು ಚಿತ್ರದುರ್ಗದ ಶ್ರೀ ಮುರುಘರಾಜೇಂದ್ರ ಮಠದಲ್ಲಿ ಆಯೋಜಿಸಿತ್ತು. ಸ್ಪರ್ಧೆಯನ್ನು ಆಗಸ್ಟ್-೨೨, ೨೩, ೨೪ ಮೂರು ದಿನಗಳ ಕಾಲ ಆಯೋಜಿಸಲಾಗಿತ್ತು. ತಂಡದ ಕೋಚ್ ಆಗಿ ರೇಷ್ಮ ವಡ್ಡಟ್ಟಿ, ವ್ಯವಸ್ಥಾಪಕರಾಗಿ ಮಹಾಂತೇಶ್‌ರವರು ಭಾಗವಹಿಸಿದ್ದರು. ಈ ಕ್ರೀಡಾಕೂಟದಲ್ಲಿ ಕೊಪ್ಪಳ ಜಿಲ್ಲಾ ಯೋಗಾಸನ ಕ್ರೀಡಾ ಸಂಸ್ಥೆಯ ೨೧ ವಿದ್ಯಾರ್ಥಿಗಳು ಭಾಗವಹಿಸಿದ್ದರು. ಗಂಗಾವತಿಯ ನಿತಿನ್, ನಿಹಾರಿಕಾ, ಎನ್.ಚೇತನ್, ಕೃಷ್ಣ ರೆಡ್ಡಿ, ಅಮೃತ, ಭೀಮೇಶ, ಶರಣಮ್ಮ, ಭಾರ್ಗವಿ,…

Read More
ಕೊಪ್ಪಳ ಜಿಲ್ಲಾ ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರ ಸಂಘ ನೋಂದಣಿ

ಕೊಪ್ಪಳ ಜಿಲ್ಲಾ ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರ ಸಂಘ ನೋಂದಣಿ

ಗಂಗಾವತಿ: ಹಿರಿಯ ಕಾರ್ಮಿಕ ಹೋರಾಟಗಾರ ಭಾರಧ್ವಾಜ್ ನೇತೃತ್ವದಲ್ಲಿ ಕೊಪ್ಪಳ ಜಿಲ್ಲಾ ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರ ಸಂಘ ಸ್ಥಾಪನೆಗೊಂಡಿತು. ಕಲಬುರ್ಗಿ ಪ್ರಾದೇಶಿಕ ಕಛೇರಿಯ ಸಹಾಯಕ ಕಾರ್ಮಿಕ ಆಯುಕ್ತರ ಕಛೇರಿಯಿಂದ ನೋಂದಣಿಯಾಗಿ ಅಸ್ತಿತ್ವಕ್ಕೆ ಬಂದಿದೆ ಎಂದು ಸಂಘದ ಅಧ್ಯಕ್ಷರಾದ ಇಬ್ರಾಹಿಂ ಮೇಸ್ತ್ರೀ ತಿಳಿಸಿದರು. ಸಂಘದ ನೋಂದಣಿ ಸಂಖ್ಯೆ: ಐಅಏಂಐ/ಖಿU/P-೬೧೦೦೨೦೭೨/೨೦೨೫-೨೬ ಆಗಿದೆ. ಇದು ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರ ಶ್ರೇಯೋಭಿವೃದ್ಧಿಗಾಗಿ ಸ್ಥಾಪನೆಗೊಂಡಿದೆ. ಕಟ್ಟಡ ಕಾರ್ಮಿಕರಿಗೆ ಸರ್ಕಾರದಿಂದ ಸಿಗಬಹುದಾದ ಸೌಲಭ್ಯಗಳನ್ನು ಒದಗಿಸಲು ಪ್ರಾಮಾಣಿಕವಾಗಿ ಶ್ರಮಿಸಲಿದೆ. ಈ ಸಂಘದ ಉದ್ಘಾಟನಾ…

Read More
ವಿಜಯಕುಮಾರ ಗದ್ದಿ ಅವರ ಮನೆಯಲ್ಲಿ ಯಶಸ್ವಿಯಾಗಿ ಜರುಗಿದ ಆಗಸ್ಟ್-೨೨, ೨೦೨೫ ರ ವಚನ ಶ್ರಾವಣ

ವಿಜಯಕುಮಾರ ಗದ್ದಿ ಅವರ ಮನೆಯಲ್ಲಿ ಯಶಸ್ವಿಯಾಗಿ ಜರುಗಿದ ಆಗಸ್ಟ್-೨೨, ೨೦೨೫ ರ ವಚನ ಶ್ರಾವಣ

ಶ್ರಾವಣ ಮಾಸದ ಅಂಗವಾಗಿ ಗಂಗಾವತಿ ನಗರದಲ್ಲಿ ಒಂದು ತಿಂಗಳ ಪರ್ಯಂತ ನಡೆಯುತ್ತಿರುವ ವಚನ ಶ್ರಾವಣ ಕಾರ್ಯಕ್ರಮ. ಮೂವತ್ತನೇ ದಿನವಾದ ಆಗಸ್ಟ್-೨೨ ಶುಕ್ರವಾರ ಸ್ನೇಹ ಗ್ರಾಮೀಣಾಭಿವೃದ್ಧಿ ಸಂಸ್ಥೆಯ ಅಧ್ಯಕ್ಷರಾದ ವಿಜಯಕುಮಾರ ಗದ್ದಿಯವರ ಮನೆಯಲ್ಲಿ ಜರುಗಿತು. ಈ ಕಾರ್ಯಕ್ರಮದ ಗೌರವ ಉಪಸ್ಥಿತಿ ವಹಿಸಿದ್ದ ವಿಜಯಕುಮಾರ ಗದ್ದಿ ಮಾತನಾಡಿ, ಈ ವಚನ ಶ್ರಾವಣ ಕಾರ್ಯಕ್ರಮವು ಮನೆ ಮನೆಗಳಿಂದ ಮನ ಮನಗಳಿಗೆ ವಚನ ಸಂದೇಶ ಹರಡುವುದಾಗಿದೆ ಎಂದರು. ಕಾರ್ಯಕ್ರಮದಲ್ಲಿ ಉಪನ್ಯಾಸವನ್ನು ಡಾ|| ರಾಜಶೇಖರ ನಾರಿನಾಳ ನೀಡಿದರು. ಕಾರ್ಯಕ್ರಮದಲ್ಲಿ ಶ್ರೀಶೈಲ ಪಟ್ಟಣಶೆಟ್ಟಿ, ಕೆ.ಬಸವರಾಜ್, ಎ.ಕೆ….

Read More
ಕರ್ನಾಟಕ ಮಾಧ್ಯಮ ಪತ್ರಕರ್ತರ ಸಂಘದ ನೂತನ ಅಧ್ಯಕ್ಷರಾಗಿ  ರಾಮಕೃಷ್ಣ ಸಿ.ಡಿ ನೇಮಕ.

ಕರ್ನಾಟಕ ಮಾಧ್ಯಮ ಪತ್ರಕರ್ತರ ಸಂಘದ ನೂತನ ಅಧ್ಯಕ್ಷರಾಗಿ ರಾಮಕೃಷ್ಣ ಸಿ.ಡಿ ನೇಮಕ.

ಕರ್ನಾಟಕ ಮಾಧ್ಯಮ ಪತ್ರಕರ್ತರ ಸಂಘದ ಗಂಗಾವತಿ ತಾಲೂಕು ಘಟಕ ಪದಾಧಿಕಾರಿಗಳ ನೇಮಕಾತಿಯು ಸಂಘದ ರಾಜ್ಯ ಕಾರ್ಯಕಾರಿಣಿ ಸದಸ್ಯರಾದ ಹೆಚ್. ಮಲ್ಲಿಕಾರ್ಜುನ ಅವರ ನೇತೃತ್ವದಲ್ಲಿ ಆಗಸ್ಟ್-೨೩ ಶನಿವಾರ ನಗರದ ಕೋರ್ಟ್ ಮುಂಭಾಗದ ಶ್ರೀ ಸಾಯಿ ಹೋಟಲ್ ಸಭಾಂಗಣದಲ್ಲಿ ನಡೆಯಿತು. ಗಂಗಾವತಿ ತಾಲೂಕ ಘಟಕದ ನೂತನ ಅಧ್ಯಕ್ಷರನ್ನಾಗಿ ರಾಮಕೃಷ್ಣ ಸಿ.ಡಿ ಆಯ್ಕೆಯಾದರು. ಪ್ರಧಾನ ಕಾರ್ಯದರ್ಶಿಯಾಗಿ ಚನ್ನಬಸವ ಮಾನ್ವಿ ಹಾಗೂ ಖಜಾಂಜಿಯಾಗಿ ದೇವದಾನಂ ಅವರು ಆಯ್ಕೆಯಾದರು ಎಂದು ಜಿಲ್ಲಾ ಅಧ್ಯಕ್ಷರಾದ ರಮೇಶ ಕೋಟಿ ಅವರು ತಿಳಿಸಿದರು. ಪದಾಧಿಕಾರಿಗಳ ಆಯ್ಕೆಯ ಪೂರ್ವದಲ್ಲಿ ನೇತೃತ್ವವಹಿಸಿದ್ದ…

Read More
ದಿನಾಂಕ್ 25 ರಂದು ಜ್ಞಾನ ವಿನಾಯಕ ದೇವಸ್ಥಾನದಲ್ಲಿ ವಿಶೇಷ ಪೂಜಾ ಕಾರ್ಯಕ್ರಮ ಹಾಗೂ ಅನ್ನ ಸಂತರ್ಪಣೆ…. ಶರಣಬಸಪ್ಪ

ದಿನಾಂಕ್ 25 ರಂದು ಜ್ಞಾನ ವಿನಾಯಕ ದೇವಸ್ಥಾನದಲ್ಲಿ ವಿಶೇಷ ಪೂಜಾ ಕಾರ್ಯಕ್ರಮ ಹಾಗೂ ಅನ್ನ ಸಂತರ್ಪಣೆ…. ಶರಣಬಸಪ್ಪ

ಗಂಗಾವತಿ ನಗರದ ಸರ್ಕಾರಿ ಪದವಿಪೂರ್ವ ಕಾಲೇಜಿನ ಆವರಣದಲ್ಲಿರುವ ಜ್ಞಾನ ವಿನಾಯಕ ದೇವಸ್ಥಾನದ ನಾಲ್ಕನೆಯ ವರ್ಷದ ವಾರ್ಷಿಕೋತ್ಸವ ನಡೆಯಲಿದೆ. ದಿನಾಂಕ 25 ರಂದು ಸೋಮವಾರ ವಿಶೇಷ ಧಾರ್ಮಿಕ ಪೂಜಾ ಕಾರ್ಯಕ್ರಮಗಳನ್ನು ಆಯೋಜಿಸಲಾಗಿದೆ. ಎಂದು ಸಮಿತಿಯ ಅಧ್ಯಕ್ಷ ಚನ್ನಬಸಪ್ಪ ಸೇರಿದಂತೆ ಅಲ್ಲಿನ ವಾಹನ ಚಾಲಕರ ಮತ್ತು ಮಾಲೀಕರ ಸದಸ್ಯರುಗಳು ಹೇಳಿದರು. ಪ್ರತಿ ವರ್ಷದಂತೆ ಈ ವರ್ಷವೂ ಸಹ ಭಾದ್ರಪದ ಮಾಸದ ಸೋಮವಾರ ದಿನದಂದು ಜ್ಞಾನ ವಿನಾಯಕ ದೇವಸ್ಥಾನದಲ್ಲಿ ಹಲವಾರು ಪೂಜಾ ಕಾರ್ಯಕ್ರಮಗಳನ್ನು ನಡೆಯಲಿವೆ. ಶ್ರೀ ವಿನಾಯಕನಿಗೆ ಜಲಾಭಿಷೇಕ, ಪಂಚಾಮೃತ ಅಭಿಷೇಕ,…

Read More
ಸೋಮವಾರದಂದು ಶ್ರೀ ಕನ್ನಿಕಾ ಪರಮೇಶ್ವರಿ ದೇವಸ್ಥಾನದ ಭೂಮಿ ಪೂಜೆ – ರೂಪಾರಾಣಿ ಲಕ್ಷ್ಮಣ ರೈಚೂರ್

ಸೋಮವಾರದಂದು ಶ್ರೀ ಕನ್ನಿಕಾ ಪರಮೇಶ್ವರಿ ದೇವಸ್ಥಾನದ ಭೂಮಿ ಪೂಜೆ – ರೂಪಾರಾಣಿ ಲಕ್ಷ್ಮಣ ರೈಚೂರ್

ಗಂಗಾವತಿ ನಗರದ ಆರ್ಯವೈಶ್ಯ ಸಮಾಜದ ಜಯನಗರದ ಮಾಂತಗುಂಡ ಶಾಲೆ ಹತ್ತಿರ ಇರುವ ಶ್ರೀ ಕನ್ನಿಕಾ ಪರಮೇಶ್ವರಿ ದೇವಸ್ಥಾನ ನಿರ್ಮಾಣದ ಭೂಮಿ ಪೂಜೆ ಅಡಿಗಲು ಸಮಾರಂಭ. ಇದೇ ದಿನಾಂಕ 25 ಸೋಮವಾರ ದಿನದಂದು ಜರುಗಲಿದೆ ಎಂದು ಆರ್ಯವೈಶ್ಯ ಸಮಾಜದ ಅಧ್ಯಕ್ಷ ರೂಪ ರಾಣಿ ರೈಚೂರ್ ಹೇಳಿದರು. ಅವರು ಶನಿವಾರದಂದು ವಾಸವಿ ಕಾರ್ಯಾಲಯದಲ್ಲಿ ಮಾಧ್ಯಮದೊಂದಿಗೆ ಮಾತನಾಡಿ, ಅಂದು ಬೆಳಿಗ್ಗೆ ಗಂಗೆ ಪೂಜೆ. ಪೂರ್ಣ ಕುಂಭದೊಂದಿಗೆ ಶ್ರೀ ನಗರೇಶ್ವರ ದೇವಸ್ಥಾನದಿಂದ ಸಕಲ ವಾದ್ಯ ವೈಭವದೊಂದಿಗೆ ದೇವಸ್ಥಾನ ನಿರ್ಮಾಣದ ಸ್ಥಳಕ್ಕೆ ಹೋಗಲಾಗುತ್ತಿದ್ದು. ಭೂಮಿ…

Read More
ಆರೋನ್ ಮೀರಜ್‌ಕರ್ ಆಂಗ್ಲ ಮಾಧ್ಯಮ ಪ್ರೌಢಶಾಲೆ ಹಾಗೂ ನಿವೇದಿತಾ ಹಿ.ಪ್ರಾ ಶಾಲೆಯಲ್ಲಿ ಶ್ರೀಕೃಷ್ಣ ಜನ್ಮಾಷ್ಠಮಿ ಆಚರಣೆ.

ಆರೋನ್ ಮೀರಜ್‌ಕರ್ ಆಂಗ್ಲ ಮಾಧ್ಯಮ ಪ್ರೌಢಶಾಲೆ ಹಾಗೂ ನಿವೇದಿತಾ ಹಿ.ಪ್ರಾ ಶಾಲೆಯಲ್ಲಿ ಶ್ರೀಕೃಷ್ಣ ಜನ್ಮಾಷ್ಠಮಿ ಆಚರಣೆ.

ಗಂಗಾವತಿ: ಆಗಸ್ಟ್-೨೨ ಶುಕ್ರವಾರದಂದು ನಗರದ ಆರೋನ್ ಮಿರಜ್‌ಕರ್ ಆಂಗ್ಲ ಮಾಧ್ಯಮ ಪ್ರೌಢ ಶಾಲೆ ಮತ್ತು ನಿವೇದಿತಾ ಹಿರಿಯ ಪ್ರಾಥಮಿಕ ಶಾಲೆಯಲ್ಲಿ “ಶ್ರೀ ಕೃಷ್ಣ ಜನ್ಮಾಷ್ಠಮಿ”ಯನ್ನು ಅರ್ಥಪೂರ್ಣವಾಗಿ ಆಚರಿಸಲಾಯಿತು. ಕಾರ್ಯಕ್ರಮದ ಉದ್ಘಾಟನೆಯನ್ನು ಸಂಸ್ಥೆಯ ಖಜಾಂಚಿಗಳಾದ ಶ್ರೀಮತಿ ಸುನೀತಾ ಮಿರಜ್‌ಕರ್ ನೆರವೇರಿಸಿದರು. ಈ ಕಾರ್ಯಕ್ರಮದಲ್ಲಿ ವಿದ್ಯಾರ್ಥಿಗಳ ಪಾಲಕರಿಗಾಗಿ ಆಟೋಟ ಸ್ಪರ್ಧೆಗಳನ್ನು ಏರ್ಪಡಿಸಲಾಗಿತ್ತು. ಆಟೋಟ ಸ್ಪರ್ಧೆಯಲ್ಲಿ ಭಾಗವಹಿಸಿ ವಿಜೇತರಾದ ಪಾಲಕರಿಗೆ ಸಂಸ್ಥೆಯ ವತಿಯಿಂದ ಬಹುಮಾನಗಳನ್ನು ವಿತರಿಸಲಾಯಿತು. ಈ ಕಾರ್ಯಕ್ರಮದಲ್ಲಿ ಪುಟಾಣಿ ವಿದ್ಯಾರ್ಥಿಗಳು ಕೃಷ್ಣ ಹಾಗೂ ರಾಧೆಯರ ವೇಷಭೂಷಣಗಳನ್ನು ತೊಟ್ಟು ಕಾರ್ಯಕ್ರಮಕ್ಕೆ ಮೆರಗನ್ನು…

Read More