
ಶಂಕರ ಮಠದಲ್ಲಿ ಗುರು ಪೂರ್ಣಿಮಾ ಆಚರಣೆ ಭಾರತೀಯ ಸನಾತನ ಗುರು ಪರಂಪರೆ ವಿಶ್ವಕ್ಕೆ ಮಾದರಿಯಾಗಿದೆ: ರಾಘವೇಂದ್ರ ಅಳವಂಡಿಕರ್
ಗಂಗಾವತಿ: ಭಾರತದ ಸನಾತನ ಗುರು ಪರಂಪರೆ ಪ್ರಸ್ತುತ ದಿನಗಳಲ್ಲಿ ವಿಶ್ವಕ್ಕೆ ಮಾದರಿಯಾಗಿದೆ ಎಂದು ಶಂಕರ ಮಠದ ಹಿರಿಯ ಸದಸ್ಯ ರಾಘವೇಂದ್ರ ಅಳವಂಡಿಕರ್ ಹೇಳಿದರು. ಅವರು ಗುರುವಾರದಂದು ನಗರದ ಶಂಕರ ಮಠದಲ್ಲಿ ಗುರು ಪೂರ್ಣಿಮಾ ಆಚರಣೆಯ ಧರ್ಮ ಸಭೆಯನ್ನು ಉದ್ದೇಶಿಸಿ ಮಾತನಾಡಿದರು. ಮಹಾಭಾರತವನ್ನು ರಚಿಸಿದ ವೇದವ್ಯಾಸರು ಜನಿಸಿದ ಆಷಾಢ ಮಾಸದ ಹುಣ್ಣಿಮೆಯ ದಿನವನ್ನು ಗುರು ಪೂರ್ಣಿಮಾ ಎಂದು ಆಚರಿಸಲಾಗುತ್ತದೆ. ಇದರ ಅರ್ಥ ಗುರುವಿನ ಪೂಜಾ ದಿನವಾಗಿದ್ದು, ಪ್ರಥಮವಾಗಿ ಮಾತೃದೇವೋಭವ, ಪಿತೃದೇವೋಭವ ಹಾಗೂ ಆಚಾರ್ಯ ದೇವೋಭವವೆಂದು ಕರೆಯಲಾಗುತ್ತದೆ ಎಂದು ಮಾರ್ಮಿಕವಾಗಿ…