
ಆರೋನ್ ಮಿರಜಕರ್ ಆಂಗ್ಲ ಮಾಧ್ಯಮ ಶಾಲೆಯಲ್ಲಿ “ಒಂದು ಭೂಮಿ, ಒಂದು ಆರೋಗ್ಯಕ್ಕಾಗಿ ಯೋಗ” ಎನ್ನುವ ಶೀರ್ಷಿಕೆಯ ಯೋಗ ದಿನಾಚರಣೆ.
ಗಂಗಾವತಿ: ಜೂನ್-೨೧ ಶನಿವಾರದಂದು ಬೆಳಿಗ್ಗೆ ೬.೩೦ಕ್ಕೆ “ಆರೋನ್ ಮಿರಜಕರ್ ಆಂಗ್ಲ ಮಾಧ್ಯಮ ಶಾಲೆ”, ಹಾಗೂ “ನಿವೇದಿತಾ ಶಾಲೆ”ಯ ಸಹಯೋಗದಲ್ಲಿ “ಒಂದು ಭೂಮಿ, ಒಂದು ಆರೋಗ್ಯಕ್ಕಾಗಿ ಯೋಗ” ಎನ್ನುವ ಶೀರ್ಷಿಕೆಯಡಿ ‘೧೧ನೇ ಅಂತರಾಷ್ಟ್ರೀಯ ಯೋಗ’ ದಿನವನ್ನು ಆಯೋಜಿಸಲಾಗಿತ್ತು. ಯೋಗ ಶಿಬಿರದಲ್ಲಿ ಗಂಗಾವತಿಯ ಸ್ನೇಹ ಬಳಗ ಯೋಗ ಸಂಸ್ಥೆಯ ಯೋಗ ತರಬೇತುದಾರರಾದ ಪರಸಪ್ಪ ಕುರುಗೋಡ ಹಾಗೂ ಆನಂದ ಪಟ್ಟಣಶೆಟ್ಟಿಯವರು ಯೋಗ ತರಬೇತಿಯನ್ನು ನೀಡಿ ಹಾಗೂ ಯೋಗ ಶಿಕ್ಷಣದ ಮಹತ್ವದ ಬಗ್ಗೆ ವಿದ್ಯಾರ್ಥಿಗಳಿಗೆ ಮನವರಿಕೆ ಮಾಡಿಕೊಟ್ಟರು. ಶಿಬಿರದಲ್ಲಿ ಸಂಸ್ಥೆಯ ಕಾರ್ಯದರ್ಶಿಯಾದ ರುಬೀನ್…