
೧೩ನೇ ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನದ ವೇದಿಕೆಗೆ ಶ್ರೀರಂಗದೇವರಾಯಲು ವೇದಿಕೆ ಎಂದು ಕರೆದಿರುವುದು ಸ್ವಾಗತಾರ್ಹ: ಶ್ರೀಮತಿ ಲಲಿತಾರಾಣಿ
ಗಂಗಾವತಿ: ಗಂಗಾವತಿಯಲ್ಲಿ ನಡೆದ ಜಿಲ್ಲಾ ಸಾಹಿತ್ಯ ಸಮ್ಮೇಳನದ ವೇದಿಕೆಗೆ ದಿವಂಗತ ರಾಜಾ ಶ್ರೀರಂಗದೇವರಾಯಲು ರವರ ಹೆಸರನ್ನು ಇಟ್ಟಿದ್ದಕ್ಕಾಗಿ ಸಮ್ಮೇಳನದ ಸರ್ವಾಧ್ಯಕ್ಷರಾದ ಲಿಂಗಾರೆಡ್ಡಿ ಆಲೂರು ಮತ್ತು ಗಂಗಾವತಿಯ ಜನಪ್ರಿಯ ಶಾಸಕರಾದ ಜನಾರ್ಧನ್‌ರೆಡ್ಡಿ ಅವರಿಗೆ ಸಂಗಾಪುರ ಗ್ರಾಮದ ಶ್ರೀರಂಗದೇವರಾಯ ಕಾಲೋನಿಯ ನಾಗರಿಕರು, ರೈತರು ಹಾಗೂ ಶ್ರೀರಂಗದೇವರಾಯಲುರವರ ಅಭಿಮಾನಿಗಳು ಗೌರವಪೂರ್ವಕವಾಗಿ ಸನ್ಮಾನಿಸಿದರು. ಈ ಸಂದರ್ಭದಲ್ಲಿ ಮಾತನಾಡಿದ ರಾಜವಂಶಸ್ಥೆ ಶ್ರೀಮತಿ ಲಲಿತಾರಾಣಿಯವರು ಈ ಜಿಲ್ಲಾ ಸಾಹಿತ್ಯ ಸಮ್ಮೇಳನದ ವೇದಿಕೆಗೆ ದಿವಂಗತ ಶ್ರೀರಂಗದೇವರಾಯಲು ಅವರ ಹೆಸರನ್ನು ಇಟ್ಟಿರುವುದಕ್ಕೆ ಹರ್ಷ ವ್ಯಕ್ತಪಡಿಸಿ, ಅಜಾತಶತೃ ದಿವಂಗತ ಶ್ರೀರಂಗದೇವರಾಯಲುರವರು…