ಬಸವ ನೀಲಾಂಬಿಕೆ ಮಹಿಳಾ ಸಂಘದವತಿಯಿಂದ ಮಾರ್ಚ್-೨೦ ರಂದು ಹಿರೆಜಂತಕಲ್‌ನಲ್ಲಿ ಅಂತರಾಷ್ಟ್ರೀಯ ಮಹಿಳಾ ದಿನ ಆಚರಣೆ

ಬಸವ ನೀಲಾಂಬಿಕೆ ಮಹಿಳಾ ಸಂಘದವತಿಯಿಂದ ಮಾರ್ಚ್-೨೦ ರಂದು ಹಿರೆಜಂತಕಲ್‌ನಲ್ಲಿ ಅಂತರಾಷ್ಟ್ರೀಯ ಮಹಿಳಾ ದಿನ ಆಚರಣೆ

ಗಂಗಾವತಿ: ನಗರದ ಹಿರೇಜಂತಕಲ್‌ನ ಬಸವೇಶ್ವರ ಕಲ್ಯಾಣ ಮಂಟಪದಲ್ಲಿ ಮಾರ್ಚ್-೨೦ ಗುರುವಾರದಂದು ಬಸವ ನೀಲಾಂಬಿಕೆ ಮಹಿಳಾ ಸಂಘದಿಂದ ಅಂತರಾಷ್ಟ್ರೀಯ ಮಹಿಳಾ ದಿನಾಚರಣೆಯ ಕಾರ್ಯಕ್ರಮವನ್ನು ನಡೆಸಲಾಯಿತು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಸಂಘದ ಅಧ್ಯಕ್ಷರಾದ ರತ್ನಮ್ಮ ಆರೇಗಾರು ವಹಿಸಿದ್ದರು. ಈ ಕಾರ್ಯಕ್ರಮದಲ್ಲಿ ವಿಶೇಷವಾಗಿ ವಿವಿಧ ಕ್ಷೇತ್ರಗಳಲ್ಲಿ ಸಾಧನೆಗೈದ ಮಹಿಳೆಯರಾದ ಡಾ. ಮುಮ್ತಾಜ್ ಬೇಗಂ, ವಿಜಯಲಕ್ಷ್ಮಿ, ಅರ್ಚನಾ ರಾಘವೇಂದ್ರ ಶಿರಿಗೇರಿ, ಲಲಿತಮ್ಮ ತಿಪ್ಪೇರುದ್ರಸ್ವಾಮಿ, ಗೌರಮ್ಮ ಕುಂಬಾರ, ಮಂಜುಳಾ ಹೊಸಪೇಟೆ, ಸಿಂಧು, ಶೋಭಾ ರವರಿಗೆ ಆತ್ಮೀಯವಾಗಿ ಸನ್ಮಾನಿಸಿ ಗೌರವಿಸಲಾಯಿತು. ಈ ಸಂದರ್ಭದಲ್ಲಿ ಸಂಘದ ಗೌರವಾಧ್ಯಕ್ಷರಾದ ಗೌರಮ್ಮ…

Read More
ವಡ್ಡರಹಟ್ಟಿಯ ಮುದುಕಪ್ಪ ಗಡ್ಡಿ ಸಹೋದರರಿಂದ ಚಿಕ್ಕಬೆಣಕಲ್‌ನ ಶ್ರೀ ಬೆಟ್ಟದ ಲಿಂಗೇಶ್ವರ ದೇವರಿಗೆ ಒಂದು ಕೆ.ಜಿ ಬೆಳ್ಳಿ ಪೇಟ ಸಮರ್ಪಣೆ.

ವಡ್ಡರಹಟ್ಟಿಯ ಮುದುಕಪ್ಪ ಗಡ್ಡಿ ಸಹೋದರರಿಂದ ಚಿಕ್ಕಬೆಣಕಲ್‌ನ ಶ್ರೀ ಬೆಟ್ಟದ ಲಿಂಗೇಶ್ವರ ದೇವರಿಗೆ ಒಂದು ಕೆ.ಜಿ ಬೆಳ್ಳಿ ಪೇಟ ಸಮರ್ಪಣೆ.

ಗಂಗಾವತಿ: ತಾಲೂಕಿನ ವಡ್ಡರಹಟ್ಟಿ ಗ್ರಾಮದ ಹಿರಿಯರಾದ ಮುದುಕಪ್ಪ ಗಡ್ಡಿ ಸಹೋದರರು ಮತ್ತು ಕುಟುಂಬದ ಸದಸ್ಯರು ತಾಲೂಕಿನ ಚಿಕ್ಕಬೆಣಕಲ್ ಗ್ರಾಮದ ಆರಾಧ್ಯ ದೈವ ಶ್ರೀ ಬೆಟ್ಟದ ಲಿಂಗೇಶ್ವರ ದೇವರಿಗೆ ಒಂದು ಲಕ್ಷಕ್ಕೂ ಅಧಿಕ ಮೌಲ್ಯದ ಒಂದು ಕೆಜಿ ಬೆಳ್ಳಿಯ ಪೇಟವನ್ನು ಭಕ್ತಿ ಪೂರ್ವಕವಾಗಿ ಸಮರ್ಪಿಸಿದರು. ಅವರ ಕುಟುಂಬವು ವಂಶಪಾರಂಪರ್ಯವಾಗಿ ಶ್ರೀ ಬೆಟ್ಟದಲಿಂಗೇಶ್ವರ ದೇವರಿಗೆ ಜಾತ್ರೆಯ ಸಮಯದಲ್ಲಿ ಪಾದಯಾತ್ರೆ ಮಾಡುತ್ತಾ ಬಂದಿದ್ದು, ಅದರಂತೆ ಈ ವರ್ಷದ ಮಾರ್ಚ್-೨೨ ರಂದು ನಡೆಯುವ ಶ್ರೀ ಬೆಟ್ಟದ ಲಿಂಗೇಶ್ವರ ಜಾತ್ರಾಮಹೋತ್ಸವ ಅಂಗವಾಗಿ ಪಾದಯಾತ್ರೆ ಮೂಲಕ…

Read More
ಸಂಚಲನ ಮೂಡಿಸಿದ ನ್ಯಾಯಾಧೀಶರ ಪಾದಯಾತ್ರೆ

ಸಂಚಲನ ಮೂಡಿಸಿದ ನ್ಯಾಯಾಧೀಶರ ಪಾದಯಾತ್ರೆ

ಗಂಗಾವತಿ: ಪ್ಲಾಸ್ಟಿಕ್ ಮುಕ್ತ ಅಭಿಯಾನದ ಅಂಗವಾಗಿ ನಡೆದ ನ್ಯಾಯಾಧೀಶರ ನೇತೃತ್ವದ ಪಾದಯಾತ್ರೆ ಗಂಗಾವತಿ ನಗರದಲ್ಲಿ ಸಂಚಲನ ಮೂಡಿಸಿದೆ. ತಾಲೂಕು ಕಾನೂನು ನೆರವು ಸಮಿತಿ, ಗಂಗಾವತಿ ವಕೀಲರ ಸಂಘ, ನಗರಸಭೆ ಗಂಗಾವತಿ ಹಾಗೂ ಗಂಗಾವತಿ ಚಾರಣ ಬಳಗ, ಪರಿಸರ ಸೇವಾ ಟ್ರಸ್ಟ್, ಗ್ರಾಮೀಣ ರೇಡಿಯೋ ಭಾರತಿ ಇವರುಗಳು ಮುಂದಾಳತ್ವದಲ್ಲಿ ಪಾದಯಾತ್ರೆಯು ಶ್ರೀಕೃಷ್ಣದೇವರಾಯ ವೃತ್ತದಿಂದ ಚಾಲನೆಗೊಂಡು ಅಂಬೇಡ್ಕರ್ ವೃತ್ತ, ಬಸವಣ್ಣ ವೃತ್ತದ ಮೂಲಕ ಗಾಂಧಿವೃತ್ತ ತಲುಪಿತು. ಅಲ್ಲಿ ಸ್ವಚ್ಛತೆಯ ಮೂಲಮಂತ್ರ ಸಾರಿದ ಮಹಾತ್ಮಗಾಂಧಿಜಿಯವರ ಪುತ್ಥಳಿಗೆ ನ್ಯಾಯಾಧೀಶರು ಮಾಲಾರ್ಪಣೆ ಮಾಡಿ ಅಲ್ಲಿ…

Read More
ಪರಶುರಾಮರವರ ಕರೋಕೆಯಲ್ಲಿ ಪುನೀತ್‌ ರಾಜಕುಮಾರ್‌ ಜನ್ಮದಿನಾಚರಣೆ

ಪರಶುರಾಮರವರ ಕರೋಕೆಯಲ್ಲಿ ಪುನೀತ್‌ ರಾಜಕುಮಾರ್‌ ಜನ್ಮದಿನಾಚರಣೆ

ಗಂಗಾವತಿ: ಕನ್ನಡ ನಾಡಿನ ರಾಜಕುಮಾರ, ಡಾ. ಪುನೀತ್‌ ರಾಜಕುಮಾರ ರವರು ಒಬ್ಬ ನಟನಾಗಿ ಮಾತ್ರವಲ್ಲದೇ ಸಾಮಾಜಿಕ ಸೇವೆಯಲ್ಲಿ ಅಪ್ರತಿಮ ಸೇವೆ ಸಲ್ಲಿಸಿ ಮಾದರಿಯಾಗಿದ್ದಾರೆ. ಯುವಪೀಳಿಗೆ ಯುವಕರು ಅವರನ್ನು ಮಾರ್ಗದರ್ಶನವಾಗಿಟ್ಟುಕೊಂಡು ಸಮಾಜ ಸೇವೆಯಲ್ಲಿ ತೊಡಗಲಿ ಎಂದು ಹವ್ಯಾಸಿ ಹಾಡುಗಾರರಾದ ಪರಶುರಾಮ ದೇವರಮನೆ ಹೇಳಿದರು. ಅವರು ಪರಶುರಾಮ ಕರೋಕೆ ಸ್ಟುಡಿಯೋದಲ್ಲಿ ಸಂಗೀತ ಸ್ವರಾಂಜಲಿ ಕರೋಕೆ ಕಲಾ ತಂಡದ ವತಿಯಿಂದ ಏರ್ಪಡಿಸಿದ್ದ ಪುನೀತ್ ರಾಜಕುಮಾರ ಅವರ 50ನೇ ಹುಟ್ಟು ಹಬ್ಬದಲ್ಲಿ ಕೇಕ್ ಕತ್ತರಿಸಿ ಸಂಭ್ರಮಿಸುವ ಕಾರ್ಯಕ್ರಮದಲ್ಲಿ ತಿಳಿಸಿದರು. ಅವರು ಕಿಷ್ಕಿಂದಾ ಅಂಜನಾದ್ರಿಯ…

Read More
ವಿದ್ಯಾರ್ಥಿಗಳೊಂದಿಗೆ ಹುಟ್ಟುಹಬ್ಬ ಆಚರಿಸಿಕೊಂಡ ಸಿದ್ದರಾಮಸ್ವಾಮಿ

ವಿದ್ಯಾರ್ಥಿಗಳೊಂದಿಗೆ ಹುಟ್ಟುಹಬ್ಬ ಆಚರಿಸಿಕೊಂಡ ಸಿದ್ದರಾಮಸ್ವಾಮಿ

ಗಂಗಾವತಿ: ತಾಲೂಕಿನ ಎಂ.ಎಸ್.ಎಂ.ಎಸ್ ಮಹಾವಿದ್ಯಾಲಯದಲ್ಲಿ ಶಿಕ್ಷಣಪ್ರೇಮಿ, ಹಿರಿಯ ರಾಜಕಾರಣಿ ಹೆಚ್.ಎಂ. ಸಿದ್ದರಾಮಸ್ವಾಮಿ ತಮ್ಮ ೭೦ನೇ ವರ್ಷದ ಹುಟ್ಟು ಹಬ್ಬವನ್ನು ತಮ್ಮದೇ ಪ್ರೌಢಶಾಲೆ ಮತ್ತು ಕಾನೂನು ಪದವಿ ಕಾಲೇಜು, ಡಿಗ್ರಿ ಕಾಲೇಜು ವಿದ್ಯಾರ್ಥಿಗಳೊಂದಿಗೆ ಸರಳವಾಗಿ ಮತ್ತು ಸಂಭ್ರಮದೊಂದಿಗೆ ಆಚರಿಸಿಕೊಂಡರು. ಸಂಸ್ಥೆಯಲ್ಲಿ ಕೆಲಸ ನಿರ್ವಹಿಸುವ ಎಲ್ಲಾ ಶಿಕ್ಷಕ, ಶಿಕ್ಷಕಿಯರು, ಉಪನ್ಯಾಸಕರು, ಪ್ರಾಂಶುಪಾಲರು, ವಿದ್ಯಾರ್ಥಿ, ವಿದ್ಯಾರ್ಥಿನಿಯರು ಸಿದ್ದರಾಮಸ್ವಾಮಿಯವರ ಬಗ್ಗೆ ಸರಳವಾಗಿ ಮತ್ತು ಅರ್ಥಗರ್ಭಿತವಾಗಿ ಅವರು ನಡೆದುಕೊಳ್ಳುವ ರೀತಿ-ನೀತಿಗಳ ಬಗ್ಗೆ ಕೊಂಡಾಡಿದರು. ಸಿದ್ದರಾಮ ಸ್ವಾಮಿಯವರು ಈ ಮಟ್ಟಕ್ಕೆ ಬೆಳೆಯಬೇಕೆಂದರೆ ಹಲವಾರು ಕಷ್ಟ ಕಾರ್ಪಣ್ಯಗಳನ್ನು…

Read More
ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘ ನೀಡುವ ವಿಶೇಷ ಪ್ರಶಸ್ತಿಗೆ ಭಾಜನರಾದ ಹಿರಿಯ ಪತ್ರಕರ್ತ ವೀರಾಪುರ ಕೃಷ್ಣ ಅವರಿಗೆ ಕನ್ನಡಪರ ಹಾಗೂ ವಿವಿಧ ಸಂಘಟನೆಗಳಿಂದ ಸನ್ಮಾನ

ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘ ನೀಡುವ ವಿಶೇಷ ಪ್ರಶಸ್ತಿಗೆ ಭಾಜನರಾದ ಹಿರಿಯ ಪತ್ರಕರ್ತ ವೀರಾಪುರ ಕೃಷ್ಣ ಅವರಿಗೆ ಕನ್ನಡಪರ ಹಾಗೂ ವಿವಿಧ ಸಂಘಟನೆಗಳಿಂದ ಸನ್ಮಾನ

ಗಂಗಾವತಿ: ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘ ನೀಡುವ ವಿಶೇಷ ಪ್ರಶಸ್ತಿಗೆ ಗಂಗಾವತಿಯ ಹಿರಿಯ ಪತ್ರಕರ್ತ ವೀರಾಪುರ ಕೃಷ್ಣ ಅವರು ಭಾಜನರಾಗಿರುವುದು ತುಂಬಾ ಸಂತಸದ ವಿಷಯ ಎಂದು ತಿಳಿಸಿ ಇವರಿಗೆ ಕನ್ನಡಪರ ಸಂಘಟನೆಗಳ ಮುಖಂಡರು ಗೌರವಯುತವಾಗಿ ಇಂದು ಸನ್ಮಾನಿಸಿದರು. ವೀರಾಪುರ ಕೃಷ್ಣ ಅವರು ಒಬ್ಬ ಪತ್ರಕರ್ತರಾಗಿ ಸಮಾಜದಲ್ಲಿ ನಡೆಯುವ ಶೋಷಣೆಗಳ ಕುರಿತಾಗಿ, ದೌರ್ಜನ್ಯಗಳ ಕುರಿತಾಗಿ ವರದಿ ಮಾಡುವ ಮೂಲಕ ಹಾಗೂ ತಮ್ಮನ್ನು ತಾವು ಸಾಮಾಜಿಕ, ಧಾರ್ಮಿಕ, ಸಾಂಸ್ಕೃತಿಕ ಕ್ಷೇತ್ರಗಳಲ್ಲಿ ತೊಡಗಿಸಿಕೊಂಡಿರುವುದಕ್ಕೆ ಈ ಪ್ರಶಸ್ತಿ ಅವರಿಗೆ ಲಭಿಸಿರುವುದು ಸ್ತುತ್ಯಾರ್ಹವಾಗಿದೆ ಎಂದು…

Read More
ಕೊಪ್ಪಳ ಜಿಲ್ಲಾ ೧೩ನೇ ಕನ್ನಡ ಸಾಹಿತ್ಯ ಸಮ್ಮೇಳನದ ಸರ್ವಾಧ್ಯಕ್ಷರಾಗಿ ಆಯ್ಕೆಯಾದ ಲಿಂಗಾರೆಡ್ಡಿ ಆಲೂರುರವರಿಗೆ ಕನ್ನಡಪರ ಹಾಗೂ ವಿವಿಧ ಸಂಘಟನೆಗಳಿಂದ ಸನ್ಮಾನ

ಕೊಪ್ಪಳ ಜಿಲ್ಲಾ ೧೩ನೇ ಕನ್ನಡ ಸಾಹಿತ್ಯ ಸಮ್ಮೇಳನದ ಸರ್ವಾಧ್ಯಕ್ಷರಾಗಿ ಆಯ್ಕೆಯಾದ ಲಿಂಗಾರೆಡ್ಡಿ ಆಲೂರುರವರಿಗೆ ಕನ್ನಡಪರ ಹಾಗೂ ವಿವಿಧ ಸಂಘಟನೆಗಳಿಂದ ಸನ್ಮಾನ

ಗಂಗಾವತಿ: ಕೊಪ್ಪಳ ಜಿಲ್ಲಾ ೧೩ನೇ ಕನ್ನಡ ಸಾಹಿತ್ಯ ಸಮ್ಮೇಳನದ ಸರ್ವಾಧ್ಯಕ್ಷರಾಗಿ ಹಿರಿಯ ಸಾಹಿತಿಗಳಾದ ಶ್ರೀ ಲಿಂಗಾರೆಡ್ಡಿ ಆಲೂರ ಸರ್ವಾಧ್ಯಕ್ಷರಾಗಿ ಆಯ್ಕೆಯಾಗಿದ್ದಕ್ಕೆ ಇಂದು ರವರಿಗೆ ಕನ್ನಡಪರ ಸಂಘಟನೆಗಳ ಮುಖಂಡರು ಗೌರವಯುತವಾಗಿ ಸನ್ಮಾನಿಸಿದರು. ಲಿಂಗಾರೆಡ್ಡಿ ಆಲೂರುರವರು ಹಿರಿಯ ಸಾಹಿತಿಗಳಾಗಿ, ಕೃಷಿ ಪತ್ರಿಕೆಯ ವರದಿಗಾರಾಗಿ, ವೃತ್ತಿಯಲ್ಲಿ ಶಿಕ್ಷಕರಾಗಿ ಸಾಹಿತ್ಯ ಕ್ಷೇತ್ರಕ್ಕೆ ಸಾಕಷ್ಟು ಕೊಡುಗೆಗಳನ್ನು ನೀಡಿದ್ದು, ಇವರ ಸರ್ವಾಧ್ಯಕ್ಷತೆಯಲ್ಲಿ ಜಿಲ್ಲಾ ಸಮ್ಮೇಳನ ನಡೆಯುತ್ತಿರುವುದು ಸ್ತುತ್ಯಾರ್ಹವಾಗಿದೆ. ಇವರಿಗೆ ರೆಡ್ಡಿ ಸಮಾಜದ ಯುವಘಟಕದಿಂದ ಸನ್ಮಾನಿಸಿ ಗೌರವಿಸಲಾಗಿದೆ ಎಂದು ಹಲವರು ಮುಖಂಡರು ತಿಳಿಸಿದರು. ಈ ಸಂದರ್ಭದಲ್ಲಿ ಕನ್ನಡಸೇನೆ…

Read More
೧೩೩ನೇ ಶ್ರೀಗುರು ಬೆಟ್ಟದೇಶ್ವರ ಶ್ರೀಗುರು ಲಿಂಗೇಶ್ವರ ಜಾತ್ರಾ ಮಹೋತ್ಸವದ ಅಂಗವಾಗಿ ಜೋಡು ರಥೋತ್ಸವ ಮತ್ತು ಸಾಮೂಹಿಕ ವಿವಾಹಗಳು.

೧೩೩ನೇ ಶ್ರೀಗುರು ಬೆಟ್ಟದೇಶ್ವರ ಶ್ರೀಗುರು ಲಿಂಗೇಶ್ವರ ಜಾತ್ರಾ ಮಹೋತ್ಸವದ ಅಂಗವಾಗಿ ಜೋಡು ರಥೋತ್ಸವ ಮತ್ತು ಸಾಮೂಹಿಕ ವಿವಾಹಗಳು.

ಗಂಗಾವತಿ: ತಾಲೂಕಿನ ಚಿಕ್ಕಬೆಣಕಲ್ ಗ್ರಾಮದ ೧೩೩ನೇ ಶ್ರೀಗುರು ಬೆಟ್ಟದೇಶ್ವರ ಶ್ರೀಗುರು ಲಿಂಗೇಶ್ವರರ ಜಾತ್ರಾ ಮಹೋತ್ಸವದ ಅಂಗವಾಗಿ ಜೋಡು ರಥೋತ್ಸವ ಮಾರ್ಚ್-೨೨ ಶನಿವಾರ ರಂದು ನಡೆಯಲಿದೆ. ಮಾರ್ಚ್-೨೧, ೧೩೩ನೇ ಪುಣ್ಯತಿಥಿಯ ಅಂಗವಾಗಿ ಪಲ್ಲಕ್ಕಿ ಉತ್ಸವ ಹಾಗೂ ಫಾಲ್ಗುಣ ಬಹುಳ ಅಷ್ಠಮಿ ಶನಿವಾರ ಮಾರ್ಚ್-೨೨ ರಂದು ಬೆಳಗಿನ ಜಾವ ೫:೩೦ಕ್ಕೆ ಬ್ರಾಹ್ಮಿ ಮುಹೂರ್ತದಲ್ಲಿ ರುದ್ರಾಭಿಷೇಕ, ಸಹಸ್ರ ಬಿಲ್ವಾರ್ಚನೆ ತದನಂತರ ಮಹಾಮಂಗಳಾರತಿ, ೧೧:೧೫ ರಿಂದ ೧೨:೧೫ ರವರೆಗೆ ಸಲ್ಲುವ ಅಭಿಜಿನ್ ಲಗ್ನದ ಶುಭಮುಹೂರ್ತದಲ್ಲಿ ಸಾಮೂಹಿಕ ವಿವಾಹಗಳು ಹಾಗೂ ಮಹಾಪ್ರಸಾದ ಕಾರ್ಯಕ್ರಮ ಮತ್ತು…

Read More
ರೆಡ್ಡಿ ಸಮಾಜದ ಯುವ ಸಂಘದ ನೇತೃತ್ವದಲ್ಲಿ ಸಮ್ಮೇಳನ ಅಧ್ಯಕ್ಷರಿಗೆ ಸನ್ಮಾನ

ರೆಡ್ಡಿ ಸಮಾಜದ ಯುವ ಸಂಘದ ನೇತೃತ್ವದಲ್ಲಿ ಸಮ್ಮೇಳನ ಅಧ್ಯಕ್ಷರಿಗೆ ಸನ್ಮಾನ

ಗಂಗಾವತಿ:. ಶಿಕ್ಷಕರಾಗಿ, ವಿಮರ್ಶಕರಾಗಿ, ರಂಗಭೂಮಿ ಕಲಾವಿದನಾಗಿ, ಕೃಷಿ ಪತ್ರಿಕೆಯ ವರದಿಗಾರರಾಗಿ, ಅತ್ಯುತ್ತವಾದ ಜನಪದ ಕಲಾವಿದರಾಗಿ ಹೀಗೆ ಸಮಾಜದ ವಿವಿಧ ಕ್ಷೇತ್ರದಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡ 13ನೆಯ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಸಮ್ಮೇಳನ ಅಧ್ಯಕ್ಷರಾಗಿ ಆಯ್ಕೆಗೊಂಡ ಲಿಂಗಾರೆಡ್ಡಿ ಆಲೂರ್ ಅವರಿಗೆ ರೆಡ್ಡಿ ಸಮಾಜದ ಯುವ ಘಟಕದ ನೇತೃತ್ವದಲ್ಲಿ ಮಾರ್ಚ್-12‌ ಬುಧವಾರದಂದು ಆತ್ಮೀಯವಾಗಿ ಸನ್ಮಾನಿಸಿ ಗೌರವಿಸಲಾಯಿತು. ಪ್ರಸ್ತುತ ಕೆಸರಹಟ್ಟಿಯ ಖಾಸಗಿ ಶಿಕ್ಷಣ ಸಂಸ್ಥೆಯಲ್ಲಿ ಮುಖ್ಯೋಪಾದ್ಯಾಯರಾಗಿ ಸೇವೆ ಸಲ್ಲಿಸುತ್ತಿರುವ ಹಿರಿಯ ಸಾಹಿತಿ ಲಿಂಗಾರೆಡ್ಡಿ ಆಲೂರ್ ಸರ್ ಅವರಿಗೆ ಯುವ ಮುಖಂಡ…

Read More
ನದಿ ಹಾಗೂ ತೀರ್ಥಕ್ಷೇತ್ರಗಳ ಸುತ್ತಮುತ್ತ ೫೦೦ ಮೀಟರ್ ಸೋಪು, ಶಾಂಪು ಬಳಕೆ ನಿರ್ಬಂಧ ಸ್ವಾಗತಾರ್ಹ: ವಿಷ್ಣುತೀರ್ಥ ಜೋಷಿ

ನದಿ ಹಾಗೂ ತೀರ್ಥಕ್ಷೇತ್ರಗಳ ಸುತ್ತಮುತ್ತ ೫೦೦ ಮೀಟರ್ ಸೋಪು, ಶಾಂಪು ಬಳಕೆ ನಿರ್ಬಂಧ ಸ್ವಾಗತಾರ್ಹ: ವಿಷ್ಣುತೀರ್ಥ ಜೋಷಿ

ಗಂಗಾವತಿ: ನದಿ, ತೀರ್ಥಕ್ಷೇತ್ರಗಳಲ್ಲಿ ಅರ್ಧ ಬಳಸಿದ ಶಾಂಪೂ, ಸೋಪು ಇತ್ಯಾದಿ ಬಳಕೆ ಮಾಡುವುದನ್ನು ನಿರ್ಬಂಧಿಸುವ ಮೂಲಕ ನದಿ ನೀರು ಮಲಿನವಾಗದಂತೆ ತಡೆಯಲು ಅರಣ್ಯ ಸಚಿವ ಈಶ್ವರ ಖಂಡ್ರೆ ಮುಂದಾಗಿರುವುದು ಸ್ವಾಗತಾರ್ಹವಾಗಿದೆ ಎಂದು ವಿಷ್ಣುತೀರ್ಥ ಜೋಷಿ ಪ್ರಕಟಣೆಯಲ್ಲಿ ಶ್ಲಾಘಿಸಿದರು. ಅರಣ್ಯ ಸಚಿವರ ತೀರ್ಮಾನವನ್ನು ಸ್ವಾಗತಿಸಿ ಮಾತನಾಡಿದ ಅವರು, ಕಳೆದ ಸಂಕ್ರಮಣದ ದಿನದಂದು ಹುಬ್ಬಳ್ಳಿಯ ವರದಶ್ರೀ ಫೌಂಡೇಷನ್ ಆಶ್ರಯದಲ್ಲಿ ರಾಜ್ಯಾದ್ಯಂತ ವಿವಿಧ ತೀರ್ಥ, ಪುಣ್ಯಕ್ಷೇತ್ರಗಳಲ್ಲಿ ೧೦ ಲಕ್ಷಕ್ಕೂ ಹೆಚ್ಚು ಜನರಿಗೆ ಕಡಲೆಹಿಟ್ಟಿನ ಮಿಶ್ರಣದ ಪ್ಯಾಕೆಟ್‌ಗಳನ್ನು ಹಂಚುವ ಮೂಲಕ “ವಿಷ ಮುಕ್ತ…

Read More