
ಶ್ರೀ ಶಂಕರಮಠದ ಶಾರದಾಂಬೆಗೆ ಏಳನೇ ವರ್ಷದ ಸಂಭ್ರಮ. ಧಾರ್ಮಿಕತೆ ಜೊತೆಗೆ ಸಾಮಾಜಿಕ ಕಾರ್ಯಕ್ಕೆ ಬದ್ಧ: ನಾರಾಯಣರಾವ್ ವೈದ್ಯ.
ಗಂಗಾವತಿ: ನಗರದ ಶಾರದಾ ನಗರದಲ್ಲಿರುವ ಶ್ರೀ ಶಂಕರಮಠ ಹಾಗೂ ಶ್ರೀ ಶಾರದಾದೇವಿಯ 7ನೇ ವರ್ಷದ ಪ್ರತಿಷ್ಠಾಪನಾ ದಿನಾಚರಣೆಯನ್ನು ಮಾರ್ಚ್-10 ಸೋಮವಾರದಂದು ಶ್ರದ್ಧೆ ಭಕ್ತಿಯಿಂದ ಆಚರಿಸಲಾಯಿತು. ಅಂದು ಬೆಳಿಗ್ಗೆ ಶ್ರೀ ಶಾರದಾದೇವಿ ಸೇರಿದಂತೆ ಪರಿವಾರ ದೇವರುಗಳಿಗೆ ವಿಶೇಷ ಧಾರ್ಮಿಕ ಪೂಜಾ ಕಾರ್ಯಕ್ರಮಗಳು ಜರುಗಿದವು. ಶಾರದ ಶಂಕರ ಭಕ್ತ ಮಂಡಳಿ, ವಿಜಯಧ್ವಜ ಭಜನಾ ಮಂಡಳಿ, ಸೌಂದರ್ಯ ಲಹರಿ ಭಗಿನಿಯರ ಬಳಗ ಸೇರಿದಂತೆ ಇತರೆ ಭಜನಾ ಮಂಡಳಿಯ ಸದಸ್ಯರುಗಳಿಂದ ಲಲಿತಾ ಸಹಸ್ರನಾಮ ಪಾರಾಯಣ, ಕುಂಕುಮಾರ್ಚನೆ, ಅಷ್ಟೋತ್ತರ ಪಾರಾಯಣ, ಭಜನೆ ಸೇರಿದಂತೆ ಇತರೆ…