ದೇಶದ ಪ್ರಪ್ರಥಮ ಮಹಿಳಾ ಶಿಕ್ಷಕಿ ಸಾವಿತ್ರಿ ಬಾಪುಲೆ: ರಮೇಶ್ ಗಬ್ಬುರ್
ಗಂಗಾವತಿ: ದೇಶ ಹಾಗೂ ಯಾವುದೇ ಒಂದು ಸಮಾಜ ಸರ್ವತೋಮುಖ ಅಭಿವೃದ್ಧಿಗೊಳ್ಳಬೇಕಾದರೆ. ಶಿಕ್ಷಣವನ್ನು ಕಲಿತಾಗ ಮಾತ್ರ ಸಾಧ್ಯ ಎಂದು. ಅತ್ಯಂತ ಬಲವಾಗಿ ನಂಬಿದ್ದ ಸಾವಿತ್ರಿಬಾಯಿ ಪುಲೆ ದೇಶದ ಪ್ರಪ್ರಥಮ ಮಹಿಳಾ ಶಿಕ್ಷಕಿ ಎಂದು ಕರೆಯಲಾಗುತ್ತದೆ. ಹೀಗಾಗಿ ಅವರ ಹುಟ್ಟುಹಬ್ಬವನ್ನು ಶಿಕ್ಷಕರ ದಿನಾಚರಣೆ ಎಂದು ಆಚರಿಸಿದರೂ ತಪ್ಪೇನಿಲ್ಲ ಎಂದು ಸರಕಾರಿ ಪದವಿ ಪೂರ್ವ ಕಾಲೇಜಿನ ಗ್ರಂಥಪಾಲಕ ಸಂಗೀತ ಹಾಗೂ ನೃತ್ಯ ಅಕಾಡೆಮಿಯ ಸದಸ್ಯ ರಮೇಶ್ ಗಬ್ಬುರ್ ಅಭಿಪ್ರಾಯಪಟ್ಟರು. ಶುಕ್ರವಾರದಂದು ಎಂ ಎನ್ ಎಂ. ಸರ್ಕಾರಿ ಬಾಲಕಿಯರ ಪ್ರೌಢಶಾಲೆಯಲ್ಲಿ ಆಯೋಜಿಸಿದ ಸಾವಿತ್ರಿಬಾಯಿ…