ಗಂಗಾವತಿಯ ಸಿದ್ದಿಕೆರೆಯಲ್ಲಿ ಬೇಡರ ಕಣ್ಣಪ್ಪನ ಜಯಂತಿ ಆಚರಣೆ
ಗಂಗಾವತಿ: ಬೇಟೆಗಾರನಾದ ಕಣ್ಣಪ್ಪ ಶಿವನಿಗೆ ತನ್ನ ಕಣ್ಣನ್ನು ನೀಡುವ ಮುಖಾಂತರ ಶಿವಮೆಚ್ಚಿದ ಬೇಡರ ಕಣ್ಣಪ್ಪ ಎಂದು ಖ್ಯಾತಿಯನ್ನು ಪಡೆದಿದ್ದು, ಶಿವನೊಲಿದ ದಿನವೇ ಶಿವರಾತ್ರಿಯಾಗಿದೆ ಎಂದು ಅಖಿಲ ಪಿರಾಮಿಡ್ ಧ್ಯಾನ ಕೇಂದ್ರದ ಶ್ರೀಮತಿ ಲಲಿತಾ ವಗ್ಗ ಹೇಳಿದರು. ಅವರು ಗಂಗಾವತಿಯ ಸಿದ್ದಿಕೆರೆಯಲ್ಲಿ ಫೆಬ್ರವರಿ-15 ರವಿವಾರದಂದು ಬೇಡರ ಕಣ್ಣಪ್ಪ ಸಂಘ ಗಂಗಾವತಿ ಹಾಗೂ ಗಂಗಾವತಿ ತಾಲೂಕು ಶ್ರೀಗುರು ಆದಿಕವಿ ಮಹರ್ಷಿ ವಾಲ್ಮೀಕಿ ಪರಿಶಿಷ್ಟ ಪಂಗಡ ಕಲಾವಿದರ ಸಂಘದಿಂದ ಆಚರಿಸಿದ ಬೇಡರ ಕಣ್ಣಪ್ಪ ಜಯಂತಿಯಲ್ಲಿ ಬೇಡರ ಕಣ್ಣಪ್ಪ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿ…
