ಚಿಕ್ಕಮಗಳೂರಿನ ಕನ್ನಡ ಭವನದಲ್ಲಿ ಜುಲೈ 27, 2025ರ ಭಾನುವಾರ ಬೆಳಿಗ್ಗೆ 10 ಗಂಟೆಗೆ ರಾಜ್ಯಮಟ್ಟದ ಗಾಯನ ಕಾರ್ಯಕ್ರಮ ನಡೆಯಲಿದೆ.
ಈ ಕಾರ್ಯಕ್ರಮವನ್ನು ಕರ್ನಾಟಕ ರಾಜ್ಯ ಬರಹಗಾರರ ಸಂಘ ಹೂವಿನಹಡಗಲಿ ಹಾಗೂ ಚಿಕ್ಕಮಗಳೂರು ಜಿಲ್ಲಾ ಘಟಕವು ಸಂಯುಕ್ತವಾಗಿ ಆಯೋಜಿಸಿವೆ.
ರಾಜ್ಯ ಸಂಘವು ಪ್ರತಿ ಭಾನುವಾರ ಆನ್‌ಲೈನ್‌ನಲ್ಲಿ ಜಾನಪದ, ಭಾವಗೀತೆ, ಚಿತ್ರಗೀತೆಗಳನ್ನು ಒಳಗೊಂಡ ಗಾಯನ ಸ್ಪರ್ಧೆಗಳನ್ನು ಹಮ್ಮಿಕೊಂಡಿತ್ತು.
ಸ್ಪರ್ಧೆಯಲ್ಲಿ ಭಾಗವಹಿಸಿದ ಎಲ್ಲಾ ಗಾಯಕ-ಗಾಯಕಿಯರಿಗೆ ಪ್ರಶಸ್ತಿ ಪತ್ರ ನೀಡಿ ಪ್ರೋತ್ಸಾಹ ನೀಡಲಾಗಿದೆ.
ಅವರಲ್ಲಿ ಆಯ್ಕೆಯಾದ 34 ಮಂದಿ ಪ್ರತಿಭಾನ್ವಿತ ಗಾಯಕರಿಗೆ ಈ ಸಮಾರಂಭದಲ್ಲಿ ಕನ್ನಡ ಕೋಗಿಲೆ ಪ್ರಶಸ್ತಿ ಪ್ರದಾನ ಮಾಡಲಾಗುತ್ತದೆ.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಚಿಕ್ಕಮಗಳೂರು ಜಿಲ್ಲಾ ಬರಹಗಾರರ ಸಂಘದ ಅಧ್ಯಕ್ಷರಾದ ಡಾ. ವಿದ್ಯಾ ಕೆ. ಅವರು ವಹಿಸಲಿದ್ದಾರೆ.
ಕಾರ್ಯಕ್ರಮವನ್ನು ಕರ್ನಾಟಕ ರಾಜ್ಯ ಬರಹಗಾರರ ಸಂಘದ ರಾಜ್ಯ ಅಧ್ಯಕ್ಷರಾದ ಮಧುನಾಯಕ್ ಲಂಬಾಣಿ ಉದ್ಘಾಟಿಸಲಿದ್ದಾರೆ.
ಚಿಕ್ಕಮಗಳೂರು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷರಾದ ಸೂರಿ ಶ್ರೀನಿವಾಸ್ ಆಶಯ ಭಾಷಣ ನೀಡಲಿದ್ದಾರೆ.
ಹಾಸನದ ಸಾಹಿತಿ ಗೊರೂರು ಅನಂತರಾಜು ಮತ್ತು ಕುರುವಂಜಿ ಕೆ.ಪಿ. ವೆಂಕಟೇಶ್ ಮುಖ್ಯ ಅತಿಥಿಗಳಾಗಿ ಪಾಲ್ಗೊಳ್ಳಲಿದ್ದಾರೆ.
ಇದಲ್ಲದೆ, ಚಿಕ್ಕಮಗಳೂರಿನ ಬಿ.ಎಲ್. ಪ್ರವೀಣ್, ಜಯಣ್ಣ, ಎಂ.ಎಸ್. ನಾಗರಾಜ್, ಎಚ್.ಎಂ. ಜಗದೀಶ್, ಹಸೈನಾರ್ ಬಿಳಿಗುಳ ಈ ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ.
ರಾಕೇಶ್ ಸಿಂಗ್, ಡಾ. ಶೈಲಜಾ ಕುಮಾರ್, ವಿನೋದ್, ಇಂಪಾ ನಾಗರಾಜ್, ನವೀನ್ ಬಿ.ಆರ್., ವಿಜಯ್ ಕುಮಾರ್, ಸಿ.ಆರ್.ಗೌರವ ಕಾರ್ಯದರ್ಶಿ, ರವಿ ಕುನ್ನಳ್ಳಿ ಗೌರವ ಸಹ ಉಪಸ್ಥಿತರಿರಲಿದ್ದಾರೆ.
ಪ್ರಶಸ್ತಿ ಪ್ರದಾನವನ್ನು ಮಹಾಭಾರತ ಕಲಾವಿದರಾದ ಮಧುಚಂದ್ರ, ರಮೇಶ್ ಯಾದವ್ ಮತ್ತು ಕಾಮಿಡಿ ಕಿಲಾಡಿ ಕಲಾವಿದರು ನೆರವೇರಿಸಲಿದ್ದಾರೆ.