
ಉಮಾಕಾಂತ ಅವರೆಡ್ಡಿ ಅವರಿಗೆ ದ್ರಾವಿಡಿಯನ್ ವಿಶ್ವವಿದ್ಯಾಲಯದಿಂದ ಪಿಹೆಚ್.ಡಿ ಪದವಿ ಪ್ರದಾನ.
ಗಂಗಾವತಿ: ತಾವರಗೇರಿಯ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಆಂಗ್ಲಭಾಷಾ ಸಹಪ್ರಾಧ್ಯಾಪಕರಾದ ಉಮಾಕಾಂತ ಅವರೆಡ್ಡಿ ಆವರಿಗೆ ಆಂಧ್ರಪ್ರದೇಶದ ಕುಪ್ಪಮ್‌ನ ದ್ರಾವಿಡಿಯನ್ ವಿಶ್ವವಿದ್ಯಾಲಯದಿಂದ ಡಾಕ್ಟರೇಟ್ ಪದವಿ ಪ್ರದಾನ ಮಾಡಲಾಗಿದೆ. ವಿಶ್ವವಿದ್ಯಾಲಯದ ಆಂಗ್ಲಭಾಷೆ ವಿಭಾಗದ ಸಂಶೋಧನಾ ವಿದ್ಯಾರ್ಥಿ ಉಮಾಕಾಂತ ಅವರೆಡ್ಡಿ ಅವರು ಡಾ. ಜಿ. ಉಮಾಮಹೇಶ್ವರ ಅವರ ಮಾರ್ಗದರ್ಶನದಲ್ಲಿ ಮಂಡಿಸಿದ ‘ಡಾ. ಅಮಿತಾವ್ ಘೋಶ್: ಎ ನ್ಯಾಷನಲಿಸ್ಟಿಕ್ ಅಪ್ರೋಚ್’ ಎಂಬ ವಿಷಯದ ಕುರಿತು ನಡೆಸಿದ ಸಂಶೋಧನಾ ಪ್ರಬಂಧಕ್ಕೆ ಆಂಧ್ರಪ್ರದೇಶದ ಕುಪ್ಪಮ್ ದ್ರಾವಿಡಿಯನ್ ವಿಶ್ವವಿದ್ಯಾನಿಲಯ ಪಿಎಚ್.ಡಿ ಪದವಿ ನೀಡಿದೆ. ವಿವಿಧ ಸರ್ಕಾರಿ ಪ್ರಥಮ…