೧೫ನೇ ವರ್ಷದ ಶ್ರೀ ದತ್ತಾತ್ರೇಯ ಜಯಂತೋತ್ಸವ ಗುರುದೋಷ ನಿವಾರಣೆಗೆ ದತ್ತ ನಾಮಸ್ಮರಣೆ ಅವಶ್ಯಕ: ಧರ್ಮದರ್ಶಿ ನಾರಾಯಣರಾವ್ ವೈದ್ಯ.

ಗಂಗಾವತಿ: ಹರ ಮುನಿದರು ಗುರು ಕಾಯುವ ಎಂಬ ಮಾತಿನಂತೆ ಪ್ರತಿಯೊಬ್ಬರ ಬದುಕಿನಲ್ಲಿ ಮುಂದೆ ಗುರಿ ಹಿಂದೆ ಗುರುವಿನ ಅನುಗ್ರಹ ಅವಶ್ಯವಾಗಿದ್ದು, ಈ ಹಿನ್ನೆಲೆಯಲ್ಲಿ ಗುರುದೋಷ ನಿವಾರಣೆಗೆ ತ್ರಿಮೂರ್ತಿ ಅವತಾರಿಗಳಾದ ಶ್ರೀ ದತ್ತಾತ್ರೇಯ ಗುರುಗಳ ನಾಮಸ್ಮರಣೆ ಅತ್ಯಂತ ಅವಶ್ಯಕವಾಗಿದೆ ಎಂದು ಶಂಕರ ಮಠದ ಧರ್ಮದರ್ಶಿ ನಾರಾಯಣರಾವ್ ವೈದ್ಯ ಹೇಳಿದರು.ಅವರು ಶಂಕರ ಮಠದ ಶಾರದಾ ದೇಗುಲದಲ್ಲಿ ಶೃಂಗೇರಿ ಜಗದ್ಗುರುಗಳ ಸುವರ್ಣ ಮಹೋತ್ಸವದ ಪ್ರಯುಕ್ತ ಉಭಯ ಜಗದ್ಗುರುಗಳ ಅನುಗ್ರಹದ ಮೇರೆಗೆ ೧೫ನೇ ವರ್ಷದ ದತ್ತಾತ್ರೇಯ ಜಯಂತೋತ್ಸವ ಉಪಯುಕ್ತ ಧರ್ಮಸಭೆಯನ್ನು ಉದ್ದೇಶಿಸಿ ಮಾತನಾಡಿದರು….

Read More
ಹೆಸರಾಂತ ರಂಗನಟ ಸಿ. ಎ. ರಾಮಚಂದ್ರರಾವ್ – ಗೊರೂರು ಅನಂತರಾಜು, ಹಾಸನ

ಹೆಸರಾಂತ ರಂಗನಟ ಸಿ. ಎ. ರಾಮಚಂದ್ರರಾವ್ – ಗೊರೂರು ಅನಂತರಾಜು, ಹಾಸನ

ಬೆಂಗಳೂರಿನ ರಂಗ ಭೂಮಿಯಲ್ಲಿ ನಿರಂತರವಾಗಿ ಸಂಘಟನೆ ನಟನೆಯಲ್ಲಿ ತೊಡಗಿಸಿಕೊಂಡಿರುವ ಸಿ.ಎ. ರಾಮಚಂದ್ರ ರಾವ್ ರವರು ನನಗೆ ಪರಿಚಿತರೇನಲ್ಲ. ಒಂದು ತಿಂಗಳ ಹಿಂದೆ, ನಾನು ಮಾಯಸಂದ್ರದ ನಟರಾದ ಟಿ. ನಾಗರಾಜ್ ರವರ  ಬಗ್ಗೆ ಬರೆದಿರುವ ಕಲಾ ಪರಿಚಯದ ಲೇಖನವನ್ನು ಓದಿ ಅವರು ಮೆಚ್ಚುಗೆಯ ಮಾತನಾಡಿದರು.   ತುಮಕೂರಿನಲ್ಲಿ ನಮ್ಮ ತಂಡದ ನಾಟಕ ಇದೆ ಎ೦ದು ಕರಪತ್ರ ಕಳುಹಿಸಿದ್ದರು. ಅದನ್ನು ಪತ್ರಿಕೆಗೆ ವರದಿ ಮಾಡಿದೆ. ಅದಕ್ಕಾಗಿ, ಇಂದು ಫೋನ್ ಮಾಡಿ ಜುಲೈ 9ಕ್ಕೆ ಹಾಸನದ ಹಾಸನಾಂಬ ಕಲಾಕ್ಷೇತ್ರದಲ್ಲಿ ನಮ್ಮ ಬೆಂಗಳೂರು…

Read More
ಚುಟುಕು ಯುಗಾಚಾರ್ಯ – ಡಾ. ಎಂ.ಜಿ.ಆರ್.ಅರಸ್ ಜೀವನದ ಯೋಶೋಗಾಥೆ -ಗೊರೂರು ಅನಂತರಾಜು, ಹಾಸನ.

ಚುಟುಕು ಯುಗಾಚಾರ್ಯ – ಡಾ. ಎಂ.ಜಿ.ಆರ್.ಅರಸ್ ಜೀವನದ ಯೋಶೋಗಾಥೆ -ಗೊರೂರು ಅನಂತರಾಜು, ಹಾಸನ.

ಡಾ. ಪಿ.ಬಿ.ಇಂದುಕಲಾ ಅರಸ್ ಸಂಪಾದಿಸಿರುವ “ಚುಟುಕು ಯುಗಾಚಾರ್ಯ ಡಾ. ಎಂ.ಜಿ.ಆರ್.ಅರಸ್ ಜೀವನದ ಚುಟುಕು ಯೋಶೋಗಾಥೆ” ಎಂಬ ಕೃತಿಯನ್ನು ವೈದ್ಯವಾರ್ತಾ ಪ್ರಕಾಶನ ಪ್ರಕಟಿಸಿರುವ ಕೃತಿ. ಡಾ. ಮೋಹನ ಗೋಪಾಲರಾಜೇ ಅರಸ್ ಎಂಬ ಹೆಸರು ಕೇಳಿದರೆ ಕೆಲವರಿಗೆ ಅಪರಿಚಿತವಾಗಿರಬಹುದು, ಆದರೆ ಡಾ. ಎಂ.ಜಿ.ಆರ್.ಅರಸ್ ಎಂದರೇ ಸಾಹಿತ್ಯ ವಲಯದಲ್ಲಿ ಎಲ್ಲರಿಗೂ ಪರಿಚಿತರು. ಚುಟುಕು ಸಾಹಿತ್ಯದ ಪ್ರಚಾರ ಮತ್ತು ಪ್ರಸಾರವನ್ನು ತಮ್ಮ ಜೀವನದ ಧ್ಯೇಯವನ್ನಾಗಿ ಮಾಡಿಕೊಂಡು ಅದಕ್ಕೆ ವಿಶಿಷ್ಟ ಸ್ಥಾನಮಾನ ತಂದುಕೊಟ್ಟವರು. ಚುಟುಕುಗಳು ಕೂಡ ಸಾಹಿತ್ಯದ ಒಂದು ಪ್ರಕಾರವೇ ಎಂದು ಮೂಗು ಮುರಿಯುವವರೇ…

Read More
ಶ್ರೀ ಕನ್ನಿಕಾ ಪರಮೇಶ್ವರಿ ಆತ್ಮಾರ್ಪಣೆ ದಿನದಂದು ದೇವಸ್ಥಾನ ನಿರ್ಮಾಣದ ಸಂಕಲ್ಪ: ರೂಪ ರಾಣಿ ಲಕ್ಷ್ಮಣ್

ಶ್ರೀ ಕನ್ನಿಕಾ ಪರಮೇಶ್ವರಿ ಆತ್ಮಾರ್ಪಣೆ ದಿನದಂದು ದೇವಸ್ಥಾನ ನಿರ್ಮಾಣದ ಸಂಕಲ್ಪ: ರೂಪ ರಾಣಿ ಲಕ್ಷ್ಮಣ್

ಗಂಗಾವತಿ:ನಗರದ ಆರ್ಯವೈಶ್ಯ ಸಮಾಜದ ನೇತೃತ್ವದಲ್ಲಿ ಶುಕ್ರವಾರದಂದು ಶ್ರೀ ನಗರೇಶ್ವರ ದೇವಸ್ಥಾನದಲ್ಲಿ ಸಂಜೆ ಆಯೋಜಿಸಿದ ಶ್ರೀ ಕನ್ನಿಕಾ ಪರಮೇಶ್ವರಿ ಆತ್ಮಾರ್ಪಣೆ ದಿನ ಹಾಗೂ ವಿಶ್ವರೂಪ ದರ್ಶನ ಪ್ರಯುಕ್ತ ಆಯೋಜಿಸಿದ ಧಾರ್ಮಿಕ ಪೂಜಾ ಕಾರ್ಯಕ್ರಮದಲ್ಲಿ ಸಮಾಜದ ಅಧ್ಯಕ್ಷ ರೂಪ ರಾಣಿ ಲಕ್ಷ್ಮಣ್ ರಾಯಚೂರು ಮಾತನಾಡಿ ನಗರದಲ್ಲಿ ಹಲವು ವರ್ಷಗಳಿಂದ ಶ್ರೀ ಕನ್ನಿಕಾ ಪರಮೇಶ್ವರಿ ದೇವಸ್ಥಾನದ ನಿರ್ಮಾಣಕ್ಕೆ ಹಲವಾರು ಅಡೆತಡೆಗಳು ಉಂಟಾಗುತ್ತಿದ್ದು ಈ ಹಿನ್ನೆಲೆಯಲ್ಲಿ ಸಮಾಜ ಬಾಂಧವರ ಸಮ್ಮುಖದಲ್ಲಿ ದೇವಸ್ಥಾನದ ನಿರ್ಮಾಣಕ್ಕೆ ಸಂಕಲ್ಪಿಸಿಕೊಂಡು ಪ್ರತಿಯೊಬ್ಬ ಸಮಾಜ ಬಾಂಧವರ ಕುಟುಂಬದವರಿಗೆ ಶ್ರೀಚಕ್ರ ಕಲ್ಪಿಸುವುದರ…

Read More
ಮಹಾನ್ ಕಿಡ್ಸ್ ಶಾಲೆಯಲ್ಲಿ ಶ್ರೀ ಕೃಷ್ಣ ಜನ್ಮಾಷ್ಟಮಿ. ಸತ್ಯ ಧರ್ಮ ಪಾಲನೆಯ ಶ್ರೀ ಕೃಷ್ಣ ಜನ್ಮದಿನದ ಉದ್ದೇಶ: ಸವಿತಾ ನೇತ್ರಾಜ್ ಗುರುವಿನ ಮಠ.

ಮಹಾನ್ ಕಿಡ್ಸ್ ಶಾಲೆಯಲ್ಲಿ ಶ್ರೀ ಕೃಷ್ಣ ಜನ್ಮಾಷ್ಟಮಿ. ಸತ್ಯ ಧರ್ಮ ಪಾಲನೆಯ ಶ್ರೀ ಕೃಷ್ಣ ಜನ್ಮದಿನದ ಉದ್ದೇಶ: ಸವಿತಾ ನೇತ್ರಾಜ್ ಗುರುವಿನ ಮಠ.

ಗಂಗಾವತಿ ನಗರದ ಪ್ರತಿಷ್ಠಿತ ಶಾಲೆಯಾದ ಮಹಾನ್ ಕಿಡ್ಸ್ ಶಾಲೆಯಲ್ಲಿ ಶ್ರೀ ಕೃಷ್ಣ ಜನ್ಮಾಷ್ಟಮಿ ಆಚರಣೆ. ವಿಷ್ಣುವಿನ ದಶಾವತಾರದಲ್ಲಿ ಒಂದಾದ ಶ್ರೀ ಕೃಷ್ಣ ಪರಮಾತ್ಮ ಸತ್ಯಧರ್ಮನ್ಯಾಯ ಸಂದೇಶದ ಪ್ರತೀಕವಾಗಿ ಕಂಗೊಳಿಸುತ್ತಿದ್ದಾರೆ ಎಂದು ಮುಖ್ಯೋಪಾಧ್ಯಾಯನಿ ಸವಿತಾ ನೇತ್ರಾಜ್ ಗುರುವಿನಮಠ ಹೇಳಿದರು. ಅವರು ಶಾಲೆಯಲ್ಲಿ ಆಯೋಜಿಸಿದ ಶ್ರೀ ಕೃಷ್ಣ ಜನ್ಮಾಷ್ಟಮಿ ಆಚರಣೆಯ ಸಮಾರಂಭವನ್ನು ಉದ್ದೇಶಿಸಿ ಮಾತನಾಡಿದರು. ದೇಶದ ಎರಡು ಮಹಾಕಾವ್ಯಗಳಲ್ಲಿ ಒಂದಾದ ಮಹಾಭಾರತದಲ್ಲಿ ಪಾಂಡವರು ಮತ್ತು ಕೌರವರು ಮಧ್ಯೆ ಜರುಗಿದ ಯುದ್ಧದಲ್ಲಿ ಶ್ರೀ ಕೃಷ್ಣನು ಧರ್ಮದ ಪರವಾಗಿ ಪಾಂಡವರಿಗೆ ಜಯಶಾಲಿ ಆಗುವಂತೆ…

Read More
ಚಿಕ್ಕಮಗಳೂರು ಕನ್ನಡ ಭವನದಲ್ಲಿ  ರಾಜ್ಯ ಮಟ್ಟದ ಗಾಯನ ಹಾಗೂ ಪ್ರಶಸ್ತಿ ಪ್ರಧಾನ ಸಮಾರಂಭ

ಚಿಕ್ಕಮಗಳೂರು ಕನ್ನಡ ಭವನದಲ್ಲಿ ರಾಜ್ಯ ಮಟ್ಟದ ಗಾಯನ ಹಾಗೂ ಪ್ರಶಸ್ತಿ ಪ್ರಧಾನ ಸಮಾರಂಭ

ಚಿಕ್ಕಮಗಳೂರಿನ ಕನ್ನಡ ಭವನದಲ್ಲಿ ಜುಲೈ 27, 2025ರ ಭಾನುವಾರ ಬೆಳಿಗ್ಗೆ 10 ಗಂಟೆಗೆ ರಾಜ್ಯಮಟ್ಟದ ಗಾಯನ ಕಾರ್ಯಕ್ರಮ ನಡೆಯಲಿದೆ. ಈ ಕಾರ್ಯಕ್ರಮವನ್ನು ಕರ್ನಾಟಕ ರಾಜ್ಯ ಬರಹಗಾರರ ಸಂಘ ಹೂವಿನಹಡಗಲಿ ಹಾಗೂ ಚಿಕ್ಕಮಗಳೂರು ಜಿಲ್ಲಾ ಘಟಕವು ಸಂಯುಕ್ತವಾಗಿ ಆಯೋಜಿಸಿವೆ. ರಾಜ್ಯ ಸಂಘವು ಪ್ರತಿ ಭಾನುವಾರ ಆನ್‌ಲೈನ್‌ನಲ್ಲಿ ಜಾನಪದ, ಭಾವಗೀತೆ, ಚಿತ್ರಗೀತೆಗಳನ್ನು ಒಳಗೊಂಡ ಗಾಯನ ಸ್ಪರ್ಧೆಗಳನ್ನು ಹಮ್ಮಿಕೊಂಡಿತ್ತು. ಸ್ಪರ್ಧೆಯಲ್ಲಿ ಭಾಗವಹಿಸಿದ ಎಲ್ಲಾ ಗಾಯಕ-ಗಾಯಕಿಯರಿಗೆ ಪ್ರಶಸ್ತಿ ಪತ್ರ ನೀಡಿ ಪ್ರೋತ್ಸಾಹ ನೀಡಲಾಗಿದೆ. ಅವರಲ್ಲಿ ಆಯ್ಕೆಯಾದ 34 ಮಂದಿ ಪ್ರತಿಭಾನ್ವಿತ ಗಾಯಕರಿಗೆ ಈ…

Read More
ಪ್ರಶಸ್ತಿಗಳು, ಪುರಸ್ಕೃತರ ಜವಾಬ್ದಾರಿಯನ್ನು ಹೆಚ್ಚಿಸಿ ಜಾಗೃತರನ್ನಾಗಿ ಮಾಡುತ್ತವೆ: ಜಗನ್ನಾಥ್ ಆಲಂಪಲ್ಲಿ

ಪ್ರಶಸ್ತಿಗಳು, ಪುರಸ್ಕೃತರ ಜವಾಬ್ದಾರಿಯನ್ನು ಹೆಚ್ಚಿಸಿ ಜಾಗೃತರನ್ನಾಗಿ ಮಾಡುತ್ತವೆ: ಜಗನ್ನಾಥ್ ಆಲಂಪಲ್ಲಿ

ಗಂಗಾವತಿ: ಪ್ರಶಸ್ತಿ ಹಾಗೂ ಪುರಸ್ಕಾರಗಳು ಪುರಸ್ಕೃತರ ಜವಾಬ್ದಾರಿಯನ್ನು ಹೆಚ್ಚಿಸಿ ಜಾಗೃತರನ್ನಾಗಿ ಮಾಡುತ್ತವೆ. ಆ ನಿಟ್ಟಿನಲ್ಲಿ  ಕರ್ನಾಟಕ ವೈಜ್ಞಾನಿಕ ಸಂಶೋಧನಾ ಪರಿಷತ್ತು ಹಾಗೂ ಇತರೆ ಸಂಘ-ಸಂಸ್ಥೆಗಳಿಂದ ಇದೇ ತಿಂಗಳು ಕೊನೆಯಲ್ಲಿ ನೀಡಲಾಗುವ ಶಿಕ್ಷಣ ತಜ್ಞ ಹೆಚ್ ನರಸಿಂಹಯ್ಯ ರಾಜ್ಯಮಟ್ಟದ ಪ್ರಶಸ್ತಿಗೆ ಆಯ್ಕೆ ಮಾಡಿರುವುದು ನನ್ನ ಜವಾಬ್ದಾರಿಯನ್ನು ಹೆಚ್ಚಿಸಿದೆ ಎಂದು ಲಿಟಲ್‌ ಹಾಟ್ಸ್‌ ಶಾಲೆಯ ಕಾರ್ಯದರ್ಶಿಯಾದ ಜಗನ್ನಾಥ ಆಲಂಪಲ್ಲಿ ಅಭಿಪ್ರಾಯಪಟ್ಟರು. ಅವರು ಸ್ವಾಮಿ ವಿವೇಕಾನಂದ ಆಂಗ್ಲಭಾಧ್ಯಮ ಶಾಲೆಯಲ್ಲಿ ಶಾಲೆಯ ಮುಖ್ಯ ಗುರುಗಳು ಸೇರಿದಂತೆ ಶಿಕ್ಷಕರು ವಿದ್ಯಾರ್ಥಿಗಳಿಂದ ಅಭಿನಂದನೆ ಜೊತೆಗೆ ಆತ್ಮೀಯ ಸನ್ಮಾನ…

Read More
ಗಂಗಾವತಿ ತಾಲೂಕಿನ ಡಣಾಪೂರ ಗ್ರಾಮದಲ್ಲಿ 50ನೇ ವರ್ಷದ ಶ್ರೀ ಶರಣಬಸವೇಶ್ವರ ಪುರಾಣ, ಸಾಮೂಹಿಕ ವಿವಾಹ ಹಾಗೂ ಜಾತ್ರಾ ಮಹಾರಥೋತ್ಸವ ಅದ್ದೂರಿಯಾಗಿ ಜರುಗಿತು.

ಗಂಗಾವತಿ ತಾಲೂಕಿನ ಡಣಾಪೂರ ಗ್ರಾಮದಲ್ಲಿ 50ನೇ ವರ್ಷದ ಶ್ರೀ ಶರಣಬಸವೇಶ್ವರ ಪುರಾಣ, ಸಾಮೂಹಿಕ ವಿವಾಹ ಹಾಗೂ ಜಾತ್ರಾ ಮಹಾರಥೋತ್ಸವ ಅದ್ದೂರಿಯಾಗಿ ಜರುಗಿತು.

ಗಂಗಾವತಿ: ತಾಲೂಕಿನ ಡಣಾಪೂರ ಗ್ರಾಮದಲ್ಲಿ ಪ್ರತಿ ವರ್ಷದಂತೆ ಈ ವರ್ಷವೂ ಶರಣಬಸವೇಶ್ವರ ಜಾತ್ರಾ ಮಹೋತ್ಸವದ ಅಂಗವಾಗಿ ಹಾನಗಲ್ ಶ್ರೀಗಳ 11 ದಿನದ ಪುರಾಣ ಕಾರ್ಯಕ್ರಮ ಜರುಗಿಸಲಾಯಿತು. ಜಾತ್ರಾ ದಿನದ ಅಂಗವಾಗಿ ಶರಣ ಬಸವೇಶ್ವರ ಮೂರ್ತಿಗೆ ಪೂಜಾ ಪುನಸ್ಕಾರ ಹಾಗೂ ಹೋಮ ಹವನಗಳನ್ನು ಅರ್ಚಕರಿಂದ ನೆರೆವೆರಿಸಲಾಯಿತು. ಬೆಳಗಿನ ಜಾವ ವದುವರರನ್ನು ಕರೆತಂದು ಡಣಾಪೂರ ಗ್ರಾಮದ ತುಂಗಾಭದ್ರ ನದಿಗೆ ತೆರಳಿ ಕುಂಭಕಳಸಗಳಿಂದ ಪೂಜಾ ಕಾರ್ಯಕ್ರಮಗಳನ್ನು ಮಾಡಿಕೊಂಡು ಗ್ರಾಮದ ರಾಜ ಬೀದಿಯಲ್ಲಿ ಸಕಲವಾದ್ಯವೃಂದಗಳಿಂದ, ಡೊಳ್ಳು, ವಿವಿದ ಮೇಳಗಳಿಂದ ಶರಣ ಬಸವೇಶ್ವರ ದೇವಸ್ಥಾನಕ್ಕೆ…

Read More
ಜಗದ್ಗುರು ಶ್ರೀ ಶ್ರೀ ವಿಧುಶೇಖರಭಾರತೀ ಸನ್ನಿಧಾನಂಗಳವರ 33ನೇ ವರ್ಧಂತೀ ಉತ್ಸವ

ಜಗದ್ಗುರು ಶ್ರೀ ಶ್ರೀ ವಿಧುಶೇಖರಭಾರತೀ ಸನ್ನಿಧಾನಂಗಳವರ 33ನೇ ವರ್ಧಂತೀ ಉತ್ಸವ

ಗಂಗಾವತಿ: ನಗರದ ಶ್ರೀ ಶೃಂಗೇರಿ ಶಂಕರ ಮಠದಲ್ಲಿ ಜುಲೈ-29 ಮಂಗಳವಾರ, ಶ್ರೀ ವಿಶ್ವಾವಸು ನಾಮ ಸಂವತ್ಸರದ ಶ್ರಾವಣ ಶುದ್ಧ ಪಂಚಮಿಯಂದು ಉತ್ಸವ ನಡೆಯಲಿದೆ. ಬೆಳಗ್ಗೆ 9 ಘಂಟೆಗೆ ಗುರುಗಳ ಪಾದುಕೆಗಳಿಗೆ ಅಭೀಷೇಕ, ಶಂಕರ ಅಷ್ಟೋತ್ತರ ಪಾರಾಯಣ ಸೇರಿದಂತೆ ಧಾರ್ಮಿಕ ಪೂಜೆ ಕಾರ್ಯಕ್ರಮಗಳು ಆಯೋಜಿಸಲಾಗಿದೆ. ಸಂಜೆ: 5.30ರಿಂದ ಭಜನೆ, ಆರತಿ ಹಾಗೂ ಮಹಾಮಂಗಳಾರತಿ ಜರುಗಲಿವೆ

Read More
ಶನಿವಾರ ಸಂಜೆ ಹಾಸನಾಂಬ ಕಲಾಕ್ಷೇತ್ರದಲ್ಲಿ  ನಾಟ್ಯ ದಾಸೋಹಂ ಕಾರ್ಯಕ್ರಮ

ಶನಿವಾರ ಸಂಜೆ ಹಾಸನಾಂಬ ಕಲಾಕ್ಷೇತ್ರದಲ್ಲಿ ನಾಟ್ಯ ದಾಸೋಹಂ ಕಾರ್ಯಕ್ರಮ

ಶನಿವಾರದಂದು ಹಾಸನಾಂಬ ಕಲಾಕ್ಷೇತ್ರದಲ್ಲಿ ನಾಟ್ಯ ದಾಸೋಹಂ ಎಂಬ ವಿಶೇಷ ಸಾಂಸ್ಕೃತಿಕ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ. ಹಾಸನದ ಉತ್ತರ ಬಡಾವಣೆಯಲ್ಲಿ ಸ್ಥಾಪಿತ ನಾಟ್ಯ ಕಲಾ ನಿವಾಸ್ ಸಂಸ್ಥೆಯು ಆಗಸ್ಟ್ 2 ರಂದು 18ನೇ ವಾರ್ಷಿಕೋತ್ಸವವನ್ನು ವಿಜೃಂಭಣೆಯಿಂದ ಆಚರಿಸುತ್ತಿದೆ. ಈ ವಿಶೇಷ ದಿನದ ಪ್ರಯುಕ್ತ ಸಂಜೆ ನಾಲ್ಕು ಗಂಟೆಗೆ ‘ಹರಿಹರ ಸುತ’ ಎಂಬ ಅಯ್ಯಪ್ಪನ ಚರಿತ್ರೆ ಆಧಾರಿತ ನೃತ್ಯ ನಾಟಕದ ಪ್ರದರ್ಶನವಿದೆ. ನಂತರ, ಸಂಜೆ ಆರು ಗಂಟೆಯಿಂದ ಕರ್ನಾಟಕದ ಖ್ಯಾತ ನೃತ್ಯ ಕಲಾವಿದರು ‘ನಾಟ್ಯ ದಾಸೋಹಂ’ ಕಾರ್ಯಕ್ರಮದಲ್ಲಿ ಹರಿದಾಸರ ರಚನೆಗಳನ್ನು ಹಾಡಿ…

Read More

VISHWAROOPA NEWS BLOG

Infinite

Skip to content ↓