ಗಂಗಾವತಿ: ಲಯನ್ಸ್ ಕ್ಲಬ್ ಗಂಗಾವತಿ, ಲಯನ್ಸ್ ಕ್ಲಬ್ ಬೆಂಗಳೂರು ವಿಜಯನಗರ, ಭಾರತೀಯ ವೈದ್ಯಕೀಯ ಸಂಘ (ಐಎಂಎ) ಗಂಗಾವತಿ, ಐಎಂಎ ಮೈತ್ರಿ ಗಂಗಾವತಿ, ವೈದೇಹಿ ಆಸ್ಪತ್ರೆ ಬೆಂಗಳೂರು ಹಾಗೂ ಗ್ರೇಸ್ ಕ್ಯಾನ್ಸರ್ ಫೌಂಡೇಷನ್ ಹೈದರಾಬಾದ್ ಇವರ ಸಂಯುಕ್ತ ಆಶ್ರಯದಲ್ಲಿಆರೋಗ್ಯ ಶಿಬಿರ ಹಮ್ಮಿಕೊಳ್ಳಲಾಗಿದೆ.
ಶಿಬಿರವನ್ನು ಜುಲೈ-೧೬ ಬುಧವಾರ, ಬೆಳಿಗ್ಗೆ ೯:೦೦ ರಿಂದ ಮಧ್ಯಾಹ್ನ ೨:೦೦ ರವರೆಗೆ ಗಂಗಾವತಿಯ ಶ್ರೀರಾಮನಗರದ ಎ.ಕೆ.ಆರ್.ಡಿ. ಪಿ.ಯು ಕಾಲೇಜು ಆವರಣದಲ್ಲಿ ನಡೆಸಲಾಗುವುದು.
ಬೃಹತ್ ಆರೋಗ್ಯ ತಪಾಸಣಾ ಶಿಬಿರದಲ್ಲಿ ಹೃದಯ, ನರ ಸಂಬಂಧಿ ಕಾಯಿಲೆ, ನೇತ್ರರೋಗ, ಸ್ತನ ಕ್ಯಾನ್ಸರ್ ತಪಾಸಣೆ ಮುಂತಾದವುಗಳು ಒಳಗೊಂಡಿದೆ.
ಈ ಕುರಿತು ಪೂರ್ವಭಾವಿ ಸಭೆಯನ್ನು ಶ್ರೀರಾಮನಗರ ಸಮುದಾಯ ಆರೋಗ್ಯ ಕೇಂದ್ರದಲ್ಲಿ ಶುಕ್ರವಾರ ಯಶಸ್ವಿಯಾಗಿ ನಡೆಸಲಾಯಿತು ಎಂದು ಲಯನ್ಸ್ ಕ್ಲಬ್ ಅಧ್ಯಕ್ಷ ಡಾ. ಶಿವಕುಮಾರ ಮಾಲಿಪಾಟೀಲ್ ತಿಳಿಸಿದ್ದಾರೆ.
ಲಯನ್ಸ್ ಸುಬ್ರಹ್ಮಣ್ಯೇಶ್ವರರಾವ್ ಮಾತನಾಡಿ, ಸ್ತನ ಕ್ಯಾನ್ಸರ್ ತಪಾಸಣೆಗೆ ಉಚಿತ ಮೆಮೊಗ್ರಾಫಿ ಸೌಲಭ್ಯವನ್ನು ಮಹಿಳೆಯರಿಗೆ ನೀಡಲಾಗುವುದು ಎಂದರು.
ಈ ಶಿಬಿರದಲ್ಲಿ ನುರಿತ ವೈದ್ಯರು ನಿಯಮಿತವಾಗಿ ವಿವಿಧ ಕಾಯಿಲೆಗಳಿಗೆ ತಪಾಸಣೆ ನಡೆಸಿ ಸೂಕ್ತ ಚಿಕಿತ್ಸೆ ನೀಡಲಿದ್ದಾರೆ.
ಹೃದಯರೋಗ, ಕಣ್ಣಿನ ತಪಾಸಣೆ, ಸಕ್ಕರೆ ಕಾಯಿಲೆ, ಬಿ.ಪಿ, ದಂತಚಿಕಿತ್ಸೆ, ಎಲುಬು ಕೀಲು ಸಮಸ್ಯೆ, ಸ್ತ್ರೀರೋಗ ತಪಾಸಣೆ ಸೇರಿದಂತೆ ಮುಂತಾದ ಕಾಯಿಲೆಗಳಿಗೆ ಸಂಬಂಧಿಸಿದಂತೆ ಚಿಕಿತ್ಸೆ ಲಭ್ಯವಿದೆ.
ಸ್ತ್ರೀರೋಗ ತಪಾಸಣೆಯೂ ಈ ಶಿಬಿರದಲ್ಲಿ ಇರಲಿದೆ ಹಾಗೂ ವೈದ್ಯರ ಮಾರ್ಗದರ್ಶನದೊಂದಿಗೆ ಉಚಿತ ಔಷಧಿಗಳನ್ನೂ ನೀಡಲಾಗುತ್ತದೆ.
ನೇತ್ರ ತಪಾಸಣೆ ನಂತರ ಕನ್ನಡಕ ಅಗತ್ಯವಿರುವವರಿಗೆ ಉಚಿತ ಕನ್ನಡದ ವಿತರಿಸಲಾಗುವುದು ಎಂದು ಆಯೋಜಕರು ತಿಳಿಸಿದ್ದಾರೆ.
ಈ ಸಭೆಯ ಅಧ್ಯಕ್ಷತೆಯನ್ನು ಸಮುದಾಯ ಆರೋಗ್ಯ ಕೇಂದ್ರದ ಆಡಳಿತಾಧಿಕಾರಿಯಾದ ಡಾ|| ವೀರಾನಾಯಕ ಅವರು ಎಲ್ಲಾ ಗ್ರಾಮಗಳಲ್ಲಿ ಶಿಬಿರದ ಜಾಗೃತಿ ಬಗ್ಗೆ ಮಾತನಾಡಿದರು.
ಆಶಾ ಕಾರ್ಯಕರ್ತೆಯರು ಮತ್ತು ಆರೋಗ್ಯ ಇಲಾಖೆಯ ಸಿಬ್ಬಂದಿಯಿಂದ ಈ ಶಿಬಿರದ ಪ್ರಚಾರವನ್ನು ನಡೆಸಲಾಗುವುದು ಎಂದು ತಿಳಿಸಿದರು.
ಲಯನ್ ಹರಿಬಾಬು ಅವರು ಸಾರ್ವಜನಿಕರಿಗೆ ಈ ಶಿಬಿರದ ಸದುಪಯೋಗ ಪಡೆಯುವಂತೆ ಮನವಿ ಸಲ್ಲಿಸಿದರು.
ಈ ಶಿಬಿರದಲ್ಲಿ ಜಂಬಣ್ಣ ಐಲಿ, ಶಿವಪ್ಪ ಗಾಳಿ, ವೆಂಕಟರತ್ನಂ, ಸಿದ್ದಣ್ಣ ಜಕ್ಲಿ, ವೆಂಕಟೇಶ್ವರರಾವ್, ಸುಬ್ಬರಾಜು, ಶ್ರೀನಿವಾಸು, ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿಯ ಜಿಲ್ಲಾಧ್ಯಕ್ಷರಾದ ರೆಡ್ಡಿ ಶ್ರೀನಿವಾಸ ಹಾಗೂ ಶ್ರೀರಾಮನಗರದ ಗಣ್ಯರು, ಗ್ರಾ.ಪಂ. ಅಧ್ಯಕ್ಷರು ಹಾಗೂ ಸದಸ್ಯರು, ಶ್ರೀರಾಮನಗರ ಎ.ಪಿ.ಎಂ.ಸಿ ಮಾಜಿ ಅಧ್ಯಕ್ಷರಾದ ಮುಸ್ಟೂರು ಸೋಮನಗೌಡ ಸೇರಿದಂತೆ ಹಲವರು ಭಾಗವಹಿಸಿದ್ದರು.
ಶ್ರೀರಾಮನಗರ ಎಪಿಎಂಸಿ ಮಾಜಿ ಅಧ್ಯಕ್ಷ ಮುಸ್ಟೂರು ಸೋಮನಗೌಡ, ಗ್ರಾ.ಪಂ. ಸದಸ್ಯರು, ಸ್ಥಳೀಯ ಗಣ್ಯರು ಸಭೆಯಲ್ಲಿ ಭಾಗಿಯಾಗಿದ್ದರು.
ಡಾ|| ಶಿವಕುಮಾರ ಮಾಲಿಪಾಟೀಲ್
ಅಧ್ಯಕ್ಷರು, ಲಯನ್ಸ್ ಕ್ಲಬ್, ಗಂಗಾವತಿ
ಮೊ.ನಂ: ೯೪೪೮೩೦೨೭೭೫