ನಾಳೆಗಳು ನಮ್ಮದೆನಿಸಿವೆ ಭರವಸೆಯ.. ತಾಯಿ ಮತ್ತು ಅವಳಿ ಮಕ್ಕಳ ಕಲಾಪರಿಚಯ – ಗೊರೂರು ಅನಂತರಾಜು, ಹಾಸನ.
ನಾಳೆಗಳು ನಮ್ಮದೆನಿಸಿವೆ ಭರವಸೆಯ ನಾಳೆಗಳು ನಮ್ಮದೆನಿಸಿವೆ ಎಂಬ ಒಂದು ಸೊಗಸಾದ ಹಾಡಿಗೆ ಕಲ್ಬುರ್ಗಿ ಜಿಲ್ಲೆ ಚಿಂಚೋಳಿ ತಾಲ್ಲೂಕು ಕಲ್ಲುರೋಡ ಗ್ರಾಮದ ಮಹಾನಂದ ಮಠಪತಿ ಮೇಡಂ ತಮ್ಮ ಕಲೆಗಾರಿಕೆ ಪೋಟೋಗಳನ್ನು ಅಳವಡಿಸಿ ಒಂದು ವಿಡಿಯೋ ಮಾಡಿದೆ. ಅದನ್ನು ಹೂವಿನಹಡಗಲಿಯ ಕತೆಗಾರ ಮಧುನಾಯ್ಕ್ ಲಂಬಾಣಿ ಗ್ರೂಪ್ನಲ್ಲಿ ಹಾಕಿದ್ದರು. ಅನಂತರಾಜ್ ಸರ್, ಚಿಕ್ಕಮಗಳೂರಿನಲ್ಲಿ ನಮ್ಮ ಕರ್ನಾಟಕ ರಾಜ್ಯ ಬರಹಗಾರರ ಸಂಘ ಚಿಕ್ಕಮಗಳೂರು ಜಿಲ್ಲಾ ಘಟಕದ ಸಹಕಾರದಲ್ಲಿ ಇತ್ತೀಚಿಗೆ ನಡೆಸಿತ್ತಲ್ಲಾ ರಾಜ್ಯಮಟ್ಟದ ಗಾಯನ ಸ್ಫರ್ಧೆ ಇಲ್ಲಿ ಭಾಗವಹಿಸಿದ್ದ ಗಾಯಕಿ ಮಹಾನಂದ ಮಠಪತಿ ಮಗಳು…
