ಚಿತ್ರ ಸಂತೆ ಪತ್ರಿಕೆಯಿಂದ ಗಂಗಾವತಿಯ ಚನ್ನಬಸವ ಕೊಟಗಿ ಈ ವರ್ಷದ ಉತ್ತಮ ಕಲಾವಿದ ಪ್ರಶಸ್ತಿ ಪ್ರದಾನ
ಗಂಗಾವತಿ: ಜುಲೈ-೧೫ ಮಂಗಳವಾರ, ಬೆಂಗಳೂರಿನ ಸದಾಶಿವನಗರದ ಹೈಪಾರ್ಕ್ ಅಪಾರ್ಟ್ ಹೋಟಲ್‌ನಲ್ಲಿ ಚಿತ್ರ ಸಂತೆ ಪತ್ರಿಕೆಯ ವಾರ್ಷಿಕ ಸಮಾರಂಭ ಜರುಗಿತು. ಈ ಸಮಾರಂಭದಲ್ಲಿ ಗಂಗಾವತಿಯ ಕಲಾವಿದ ಹಾಗೂ ಪತ್ರಕರ್ತ ಚನ್ನಬಸವ ಕೊಟಗಿಗೆ ಈ ವರ್ಷದ ಉತ್ತಮ ಕಲಾವಿದ ಪ್ರಶಸ್ತಿ ಪ್ರದಾನ ಮಾಡಲಾಯಿತು. ಈ ಪ್ರಶಸ್ತಿಯನ್ನು ಚಿತ್ರ ಸಂತೆ ಪತ್ರಿಕೆಯ ಸಂಪಾದಕರಾದ ಗಿರೀಶ್ ಗೌಡ ಅವರು ಪ್ರಶಸ್ತಿ ಪ್ರದಾನ ಮಾಡಿದರು. ವರ್ಷದಿಂದ ವರ್ಷಕ್ಕೆ ವಿವಿಧ ಕ್ಷೇತ್ರಗಳಲ್ಲಿ ಸಾಧನೆಗೈದ ಸಾಧಕರಿಗೆ ಈ ಪ್ರಶಸ್ತಿ ನೀಡಲಾಗುತ್ತಿದೆ ಎಂದು ಅವರು ತಿಳಿಸಿದರು. ಈ ಬಾರಿ…
