
ನದಿ ಹಾಗೂ ತೀರ್ಥಕ್ಷೇತ್ರಗಳ ಸುತ್ತಮುತ್ತ ೫೦೦ ಮೀಟರ್ ಸೋಪು, ಶಾಂಪು ಬಳಕೆ ನಿರ್ಬಂಧ ಸ್ವಾಗತಾರ್ಹ: ವಿಷ್ಣುತೀರ್ಥ ಜೋಷಿ
ಗಂಗಾವತಿ: ನದಿ, ತೀರ್ಥಕ್ಷೇತ್ರಗಳಲ್ಲಿ ಅರ್ಧ ಬಳಸಿದ ಶಾಂಪೂ, ಸೋಪು ಇತ್ಯಾದಿ ಬಳಕೆ ಮಾಡುವುದನ್ನು ನಿರ್ಬಂಧಿಸುವ ಮೂಲಕ ನದಿ ನೀರು ಮಲಿನವಾಗದಂತೆ ತಡೆಯಲು ಅರಣ್ಯ ಸಚಿವ ಈಶ್ವರ ಖಂಡ್ರೆ ಮುಂದಾಗಿರುವುದು ಸ್ವಾಗತಾರ್ಹವಾಗಿದೆ ಎಂದು ವಿಷ್ಣುತೀರ್ಥ ಜೋಷಿ ಪ್ರಕಟಣೆಯಲ್ಲಿ ಶ್ಲಾಘಿಸಿದರು. ಅರಣ್ಯ ಸಚಿವರ ತೀರ್ಮಾನವನ್ನು ಸ್ವಾಗತಿಸಿ ಮಾತನಾಡಿದ ಅವರು, ಕಳೆದ ಸಂಕ್ರಮಣದ ದಿನದಂದು ಹುಬ್ಬಳ್ಳಿಯ ವರದಶ್ರೀ ಫೌಂಡೇಷನ್ ಆಶ್ರಯದಲ್ಲಿ ರಾಜ್ಯಾದ್ಯಂತ ವಿವಿಧ ತೀರ್ಥ, ಪುಣ್ಯಕ್ಷೇತ್ರಗಳಲ್ಲಿ ೧೦ ಲಕ್ಷಕ್ಕೂ ಹೆಚ್ಚು ಜನರಿಗೆ ಕಡಲೆಹಿಟ್ಟಿನ ಮಿಶ್ರಣದ ಪ್ಯಾಕೆಟ್‌ಗಳನ್ನು ಹಂಚುವ ಮೂಲಕ “ವಿಷ ಮುಕ್ತ…