ಜನವರಿ-೨೫ ರಿಂದ ೩೧ ರವರೆಗೆ ಗಂಗಾವತಿಯಲ್ಲಿ ಮಹರ್ಷಿ ವಾಲ್ಮೀಕಿ ಶ್ರೀ ರಾಮಾಯಣ ಕಿಷ್ಕಿಂಧಾ ಕಾಂಡ ಪ್ರವಚನ
ಗಂಗಾವತಿ: ಕಿಷ್ಕಿಂಧಾ ಪ್ರತಿಷ್ಠಾನ ಗಂಗಾವತಿ, ವಿಪ್ರಸಿರಿ ಸೌಹಾರ್ದ ಸಹಕಾರ ಸಂಘ ನಿಯಮಿತ ಗಂಗಾವತಿ ಇವರಿಂದ ಜನವರಿ-೨೫ ರಿಂದ ೩೧ ರವರೆಗೆ ಸಂಜೆ ೬ ರಿಂದ ೮ ರವರೆಗೆ ನಗರದ ಕೋರ್ಟ್ ಮುಂಭಾಗದ ಶ್ರೀ ಕೊಟ್ಟೂರು ಬಸವೇಶ್ವರ ದೇವಸ್ಥಾನದಲ್ಲಿ ಮಹರ್ಷಿ ವಾಲ್ಮೀಕಿ ಶ್ರೀ ರಾಮಾಯಣ ಕಿಷ್ಕಿಂಧಾ ಕಾಂಡ ಪ್ರವಚನ ನಡೆಯಲಿದೆ ಎಂದು ಸಂಚಾಲಕರಾದ ಪವನಕುಮಾರ ಗುಂಡೂರು ಪ್ರಕಟಣೆಯಲ್ಲಿ ತಿಳಿಸಿದರು. ಈ ಪ್ರವಚನ ಕಾರ್ಯಕ್ರಮದ ಉದ್ಘಾಟನೆಯನ್ನು ಕಜ್ಜಿಡೋಣಿ ಶಂಕರಾಚಾರ್ಯ ಅವಧೂತ ಆಶ್ರಮದ ವಿದ್ವಾನ್ ಶ್ರೀ ಕೃಷ್ಣಾನಂದ ಶರಣರು ಮಾಡಲಿದ್ದು, ಪ್ರವಚನವನ್ನು…
