ಗೊರೂರು ಅನಂತರಾಜು ಅವರ ಕಲೆ-ಸೆಲೆ ಕಿರು ಅವಲೋಕನ

ಸಾಹಿತ್ಯ ಕ್ಷೇತ್ರದಲ್ಲಿ ಇತ್ತೀಚಿನ ದಿಗ್ಗಜರಲ್ಲಿ ಹಾಸನದ ಶ್ರೀಯುತ ಗೊರೂರು ಅನಂತರಾಜುರವರು ಒಬ್ಬರು. ಸಾಹಿತ್ಯದ ವಿವಿಧ ಪ್ರಕಾರಗಳಲ್ಲಿ ವಿಶೇಷ ಕೊಡುಗೆಯ ಪುಸ್ತಕಗಳನ್ನು ಕೊಡುತ್ತಿರುವ ಶ್ರೀ‌ ಗೊರೂರು ಅನಂತರಾಜುರವರು ಸಕಲಕಲಾ‌ ವಲ್ಲಭ ಎಂದರೆ ತಪ್ಪಾಗಲಾರದು. ಪ್ರತೀ ವರ್ಷದಂತೆ ಈ ವರ್ಷವೂ ಕಲೆ-ಸೆಲೆ ಎನ್ನುವ ಲೇಖನ ಸಂಕಲನವನ್ನು ಹೊರತರುತ್ತಿದ್ದಾರೆ.

ಈ ಪುಸ್ತಕವು ಮೈಸೂರಿನ ಪದ್ಮ ಶೇಖರ್ ಪ್ರಿಂಟರ್ಸ್ ರವರಿಂದ ಮುದ್ರಣಗೊಂಡಿದೆ‌, ಸುಂದರ ಮುಖಪುಟದಿಂದ ಆಕರ್ಷೀಯವಾಗಿದೆ. ಪುಸ್ತಕದ ಅಂಗಡಿಯಲ್ಲಿ ನಾವು ಪುಸ್ತಕ ಕೊಳ್ಳಲು ಹೋದಾಗ ,‌ನಮ್ಮ ಕಣ್ಣುಗಳನ್ನು ಆಕರ್ಷಿಸುವಂತಹ ಕಲೆ-ಸೆಲೆ ಎನ್ನುವ ಪುಸ್ತಕ ಇದಾಗಿದೆ.

ಈ ಪುಸ್ತಕದಲ್ಲಿ ಒಟ್ಟು ನಲವತ್ತು ಲೇಖನಗಳು ಒಳಗೊಂಡಿವೆ. ಸಮಾಜಮುಖಿಯಾದ ನಾಟಕಗಳು, ಐತಿಹಾಸಿಕ ನಾಟಕಗಳು ಪ್ರದರ್ಶನಗೊಂಡ ಬಗ್ಗೆ, ನಾಡು ನುಡಿಯ ಬಗ್ಗೆ ಮಾಹಿತಿ ಇದೆ.

*ಇತಿಹಾಸದ ಮೇಲೆ ಬೆಳಕು ಚೆಲ್ಲುವ ವಾರಸುದಾರ ಮತ್ತು ಚಾವುಂಡರಾಯ ನಾಟಕ ಹಾಸನದ ಹಾಸನಾಂಬ ಕಲಾಕ್ಷೇತ್ರದಲ್ಲಿ ಬೆಂಗಳೂರಿನ ಸಮಾಜಮುಖಿ ಬಳಗದವರಿಂದ ವಾರಸುದಾರ ಮತ್ತು ಚಾವುಂಡರಾಯ ಎಂಬ ಐತಿಹಾಸಿಕ ನಾಟಕಗಳು ಪ್ರದರ್ಶನಗೊಂಡ ಬಗ್ಗೆ ಬರೆದಿರುವ ಲೇಖನವಿದಾಗಿದೆ. ಈ ನಾಟಕವು ರಾಯಪುರ ಗ್ರಾಮದ ಜಯರಾಮ್ ರವರ ಮುಖಂಡತ್ವದಲ್ಲಿ ನಡೆದಿದೆ.  ಸಿರಿ ಸೆರೆ ನಾಟಕ ಬೆಂಗಳೂರು ಕೆಂಪೇಗೌಡರ ಜೀವನ ಚರಿತ್ರೆ ಆಧಾರಿತವಾಗಿದೆ.

ಶಿಶುನಾಳ ಶರೀಫರ ಜೀವನ ಗಾಥೆ ಹಾಸನದ ರಂಗ ಸಿರಿ ಕಾಲೇಜು ರಂಗೋತ್ಸವದಲ್ಲಿ ಹಾಸನಾಂಬ ಕಲಾಕ್ಷೇತ್ರದಲ್ಲಿ ಎರಡು ನಾಟಕಗಳ ಪ್ರದರ್ಶನಗೊಂಡವು. ಹಾಸನದ ಜ್ಞಾನಧಾರೆ ಪ್ಯಾರಾ ಮೆಡಿಕಲ್ ಕಾಲೇಜಿನ ವಿದ್ಯಾರ್ಥಿಗಳು ಮಂಜುನಾಥ್ ಬೆಳೆಕೆರೆ ರಚಿಸಿದ ಶರೀಫ್ ನಾಟಕ ಪ್ರದರ್ಶಿಸಿದ ಬಗ್ಗೆ‌ ಮನೋಜ್ಞ ಲೇಖನ ‌ ಇದಾಗಿದೆ.

ಬಾಡಿದ ಬದುಕು ನಾಟಕ ಮತ್ತು ಗ್ಯಾರಂಟಿ ರಾಮಣ್ಣ.
ಹಾಸನದ ಸಾಹಿತ್ಯ ಭವನದಲ್ಲಿ ಪ್ರಗತಿ ಗ್ರಾಮೀಣ‌ ಅಭಿವೃದ್ದಿ ಮತ್ತು ತರಬೇತಿ ಸಂಸ್ಥೆ, ಆಶ್ರಯದಲ್ಲಿ ರಂಗ ನಟ ಡಿ.ವಿ.ನಾಗಮೇಹನ್ ಹುಟ್ಟುಹಬ್ಬದ ನಿಮಿತ್ತ ರಂಗಗೀತೆಗಳ ಕಾರ್ಯಕ್ರಮ ಹಾಗೂ ಗ್ಯಾರಂಟಿ ರಾಮಣ್ಣ ವಿರಚಿತ ಬಾಡಿದ ಬದುಕು ಸಾಮಾಜಿಕ ನಾಟಕ ಪ್ರದರ್ಶನದ ಬಗ್ಗೆ ಸುಂದರವಾಗಿ ಬರೆದ ಲೇಖನ ಇದಾಗಿದೆ. ಈ ನಾಟಕದಲ್ಲಿ ರಾಮಣ್ಣ ಅತಿಯಾದ ರಂಗಸಜ್ಜಿಕೆ, ಥಳಕು ಬಳುಕು ಯಾವುದೂ ಇಲ್ಲದೆ ಸಹಜವಾಗಿಯೇ ನಟರಿಂದ ಅಭಿನಯ ತೆಗೆದಿದ್ದಾರೆ. ಇಂತಹ ಉಪಯುಕ್ತವಾದ ಲೇಖನಗಳನ್ನೊಳಗೊಂಡ ಈ ಕಲೆ-ಸೆಲೆ ಪುಸ್ತಕವುಎಲ್ಲರ ಮನಮುಟ್ಟಲಿ ಸಾಹಿತ್ಯ ಕ್ಷೇತ್ರದಲ್ಲಿ ಮನ್ನಣೆ ಪಡೆಯಲಿ ಎಂದು ಆಶಿಸುತ್ತೇನೆ

ಸಾವಿತ್ರಮ್ಮ ಓಂಕಾರ್ ಅರಸೀಕೆರೆ
ಮೊ:9449657379

ಜ್ಞಾನವಂತರಾಗಿ ಕೌಶಲ್ಯವಾಗಿರಿ: ಕವಿತಾ ಮಿಶ್ರ

ಗಂಗಾವತಿ: ಇಂದಿನ ಸ್ಪರ್ಧಾತ್ಮಕ ಜಗತ್ತಿನಲ್ಲಿ ನಾವು ಯಶಸ್ವಿಯಾಗಿ ಜೀವನ ನಡೆಸಬೇಕಾದರೆ ಕಾಲೇಜು ಹಂತದಲ್ಲಿ ಜ್ಞಾನವನ್ನು ಕೌಶಲ್ಯಗಳನ್ನು ಸಂಪಾದಿಸಬೇಕಾದ ಅವಶ್ಯಕತೆ ಇದೆ ಎಂದು ಕವಿತಾಳದ ಪ್ರಗತಿಪರ ಕೃಷಿ ಸಾಧಕಿಯಾದ ಕವಿತಾ ಮಿಶ್ರ ವಿದ್ಯಾರ್ಥಿನಿಯರಿಗೆ ಕರೆ ನೀಡಿದರು.

ಅವರು ಸಂಕಲ್ಪ ಪ್ರಥಮ ದರ್ಜೆ ಕಲಾ ಮತ್ತು ವಾಣಿಜ್ಯ ಮಹಿಳಾ ಕಾಲೇಜಿನ ೧೨ನೇ ವಾರ್ಷಿಕೋತ್ಸವ ಮತ್ತು ರ‍್ಯಾಂಕ್ ಪಡೆದ ಸಾಧಕಿಯರನ್ನ ಸನ್ಮಾನಿಸಿ ಮಾತನಾಡಿದರು. ಪ್ರಸ್ತುತ ದಿನಗಳಲ್ಲಿ ಐಟಿ-ಬಿಟಿ ಉದ್ಯೋಗಗಳಿಗಿಂತ ಕೃಷಿ ವೃತ್ತಿಯು ಅತ್ಯಂತ ಮಹತ್ವವಾದದ್ದು ಮತ್ತು ಬೆಲೆಯುತವಾದದ್ದು, ಏಕೆಂದರೆ ಮುಂದಿನ ದಿನಮಾನಗಳಲ್ಲಿ ಒಂದೇ ಒಂದು ಎಕರೆ ಕೃಷಿ ಭೂಮಿ ಇರುವ ರೈತನೇ ಅತ್ಯಂತ ಶ್ರೀಮಂತ ವ್ಯಕ್ತಿಯಾಗಿರುತ್ತಾನೆ ಎಂದು ತಿಳಿಸಿದರು. ಇಂದಿನ ಮಹಿಳೆ ಎಲ್ಲಾ ಅವಕಾಶಗಳನ್ನು ಬಳಸಿಕೊಂಡು ಸಾಧಿಸುವ ಕಡೆ ಗಮನ ಹರಿಸಬೇಕಾಗಿದೆ. ಮುಖ್ಯವಾಗಿ ಇಂದಿನ ಯುವತಿಯರಲ್ಲಿ ಬುದ್ಧಿವಂತಿಕೆ ಜೊತೆಗೆ ತಾಳ್ಮೆ, ಆತ್ಮವಿಶ್ವಾಸ ಸಾಧಿಸುವ ಛಲ ಕುಟುಂಬದ ಜೊತೆ ಹೊಂದಾಣಿಕೆ, ಸಹಕಾರ, ಸಂಸ್ಕಾರಗಳ ಗುಚ್ಛವಾಗಿ ಮುಂದೆ ಸಾಗಬೇಕು, ಅದರಿಂದ ಪರಿಪೂರ್ಣ ಬದುಕಿನ ಅನಾವರಣವಾಗಲಿದೆ ಎಂದು ಸಲಹೆ ನೀಡಿದರು.

ಈ ಸಂದರ್ಭದಲ್ಲಿ ಅಧ್ಯಕ್ಷರಾದ ಹೇಮಂತರಾಜ್ ಕಲ್ಮಿಂಗೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ ವಿದ್ಯಾರ್ಥಿ ವಿದ್ಯಾರ್ಥಿನಿಯರ ಸಾಧನೆಯನ್ನು ಪ್ರಶಂಶಿಸಿದರು.
ಉಪಾಧ್ಯಕ್ಷರಾದ ಡಾ. ಎಂ.ಆರ್ ಮಂಜುಸ್ವಾಮಿಯವರು ಪ್ರಾಸ್ತಾವಿಕ ನುಡಿಗಳಲ್ಲಿ ನಿಯಮಿತ ಅವಧಿಯಲ್ಲಿ ಸಂಸ್ಥೆಯ ಅಮೋಘ ಸಾಧನೆಗೆ ವಿದ್ಯಾರ್ಥಿನಿಯರು ಕಾರಣರಾಗಿದ್ದಾರೆ. ೯ ವರ್ಷದಲ್ಲಿ ಆರು ಚಿನ್ನದ ಪದಕ, ೨೪ ರ‍್ಯಾಂಕುಗಳನ್ನು ಗಳಿಸಿದ್ದು ಕಲ್ಯಾಣ ಕರ್ನಾಟಕದಲ್ಲಿ ವಿಶಿಷ್ಟ ಸಾಧನೆಗೈದಿದೆ ಎಂದರು.

ಡಾ. ಅಮಿತ್ ಕುಮಾರ್ ರೆಡ್ಡಿಯವರು ಉಪನ್ಯಾಸಕರಿಗೆ ಅವರ ಪರಿಶ್ರಮವನ್ನು ಪ್ರಶಂಶಿಸಿ, ಸನ್ಮಾನ ಕಾರ್ಯಕ್ರಮ ನೆರವೇರಿಸಿದರು.

ಕಾರ್ಯಕ್ರಮದ ಅಧ್ಯಕ್ಷತೆವಹಿಸಿ ಮಾತನಾಡಿದ ಸಂಸ್ಥೆಯ ಕಾರ್ಯಾಧ್ಯಕ್ಷರಾದ ನಾಗರಾಜ್ ಗುತ್ತೇದಾರ್ ಮಾತನಾಡಿ, ಪ್ರತಿವರ್ಷ ಉನ್ನತ ಸಾಧನೆಗೈದ ವಿದ್ಯಾರ್ಥಿನಿಯರಿಗೆ ಅಭಿನಂದಿಸಿ, ಮುಂದಿನ ಜೀವನ ಯಶಸ್ವಿಯಾಗಲಿ ಎಂದು ಶುಭ ಹಾರೈಸಿದರು.

ಕಾರ್ಯಕ್ರಮದ ಪ್ರಾಚಾರ್ಯರಾದ ಬಸಪ್ಪ ಸಿರಿಗೇರಿ ರ‍್ಯಾಂಕ್ ಸಾಧಕಿಯರಾದ ಬಿ.ಕಾಂ ಪದವಿಯಲ್ಲಿ ಪ್ರಥಮ ರ‍್ಯಾಂಕ್ ಮತ್ತು ಚಿನ್ನದ ಪದಕ ಪಡೆದ ಜೇಬಾ, ೫ನೇ ರ‍್ಯಾಂಕ್ ಪಡೆದ ಅಕ್ಷತಾ, ೬ನೇ ರ‍್ಯಾಂಕ್ ಪಡೆದ ಜಯಶ್ರೀ, ಅದೇರಿತಿ ಬಿ.ಎ ಪದವಿಯಲ್ಲಿ ಕುಮಾರಿ ಸುಭದ್ರಾ ಇವರು ಐಚ್ಛಿಕ ಕನ್ನಡ ವಿಷಯದಲ್ಲಿ ಚಿನ್ನದ ಪದಕ ಮತ್ತು ೬ನೇ ರ‍್ಯಾಂಕ್, ಕುಮಾರಿ ಉಮಾ ಇವರು ೪ನೇ ರ‍್ಯಾಂಕ್, ಕುಮಾರಿ ಹನುಮಂತಿ ೫ನೇ ರ‍್ಯಾಂಕ್, ಕುಮಾರಿ ಅನಿತಾ ಕೋರಿ ೧೦ನೇ ರ‍್ಯಾಂಕ್ ಗಳಿಸಿದ ಈ ಎಲ್ಲಾ ವಿದ್ಯಾರ್ಥಿನಿಯರಿಗೆ ಸನ್ಮಾನ ಕಾರ್ಯ ನೆರವೇರಿಸಿಕೊಟ್ಟು, ವಿದ್ಯಾರ್ಥಿನಿಯರ ಸಾಧನೆ ಹಾಗೂ ಪಾಲಕರ ಸಹಕಾರ, ಪ್ರಾಧ್ಯಾಪಕರ ಶ್ರಮವನ್ನ ಸ್ಮರಿಸಿದರು.

ಈ ಸಂದರ್ಭದಲ್ಲಿ ಶಂಕರಲಿAಗಪ್ಪ ಕೊಪ್ಪದ್ ರವರು ಮುಖ್ಯ ಅತಿಥಿಗಳಾಗಿ ಹಿತನುಡಿಗಳನ್ನು ನುಡಿದರು. ವಿಶೇಷವಾಗಿ ಈ ಸಾಧನೆಯನ್ನು ಇತಿಹಾಸ ಪ್ರಾಧ್ಯಾಪಕರಾದ ದಿವಂಗತ ಪಂಡರಿನಾಥ್ ಅಗ್ನಿಹೋತ್ರಿ ಅವರಿಗೆ ಸಮರ್ಪಿಸಲಾಯಿತು.

ಈ ಸಂದರ್ಭದಲ್ಲಿ ಪ್ರಧಾನ ಕಾರ್ಯದರ್ಶಿ ಜ್ಯೋತಿ ಪಂಪಾಪತಿ, ಪವಿತ್ರ ಬಸವರಾಜ್ ಹಾಗೂ ಎಲ್ಲಾ ಪ್ರಾಧ್ಯಾಪಕ ವೃಂದದವರು ಭಾಗವಹಿಸಿದ್ದರು. ಕಾರ್ಯಕ್ರಮವನ್ನು ಉಪನ್ಯಾಸಕರು ಶಿವಶರಣರವರು ನಿರೂಪಿಸಿದರೆ, ಶ್ರೀಮತಿ ಆಶಾ ಸ್ವಾಗತಿಸಿ, ಅಧ್ಯಾಪಕರಾದ ಚನ್ನಬಸವ ವಂದಿಸಿದರು.

ವಿಲಕ್ಷಣ ನಗೆಯ ಶುಕುನಿ ಪಾತ್ರದಾರಿ ಡಿ.ವಿ.ನಾಗಮೋಹನ್

ಪೌರಾಣಿಕ ನಾಟಕ ಕುರುಕ್ಷೇತ್ರದಲ್ಲಿ ಬರುವ ಒಂದು ವಿಲಕ್ಷಣ ಪಾತ್ರ ಶಕುನಿ. ಈ ನಾಟಕದಲ್ಲಿ ಎಲ್ಲಾ ಪಾತ್ರಗಳಿಗೂ ರಂಗಗೀತೆಗಳನ್ನು ಅಳವಡಿಸಿ ರಂಗ ನಿರ್ದೇಶಕರು ಪಾತ್ರಗಳನ್ನು, ಪಾತ್ರದಾರಿ ಹೊಸಬರಾಗಿದ್ದರೂ ಹೇಗೋ ಸರಿದೂಗಿಸಿ ಹಾಡಿನ ಮರೆಯಲ್ಲಿ ಗೆರೆ ದಾಟಿಸಿಬಿಡುತ್ತಾರೆ. ಆದರೆ ಶಕುನಿ ಪಾತ್ರಕ್ಕೆ ವಿಶಿಷ್ಟತೆ ಇದೆ. ಹಾಡು ಅಷ್ಟಿಲ್ಲ. ಆದರೆ ಈ ಪಾತ್ರಕ್ಕೆ ಅಭಿನಯವೇ ಪ್ರಧಾನ. ಅಂತೆಯೇ ಮಾತು, ತಂತ್ರ, ಕುತಂತ್ರ ಹೆಣೆಯುತ್ತಲೇ ಶತ್ರು ದುರ್ಯೋಧನನ ಜೊತೆಗಿದ್ದೆ ಬೆನ್ನಿಗೆ ಗುನ್ನಾ ಇಡುವ ವಿಲನ್ ಕ್ಯಾರಕ್ಟರ್. ತನ್ನ ಸಹೋದರರ ಸಾವಿಗೆ ಕಾರಣನಾದ ಪ್ರಬಲ ದೊರೆಗೆ ಜೊತೆಗಿದ್ದೆ ಮಕಾಡೆ ಮಲಗಿಸುವ ಚಾಣಾಕ್ಷ ನಡೆ, ಕುಹಕ ಮಾತು, ಸೇಡಿನ ಜ್ಞಾಲೆ ಒಡಲಲ್ಲಿ ಇದ್ದರೂ ಬೂದಿ ಮುಚ್ಚಿದ ಕೆಂಡವಾಗಿ ನಗುವ ನಟನೆ, ಬೆನ್ನ ಹಿಂದಿನ ವ್ಯಂಗ್ಯ ನಗೆ, ಸೇಡಿನ ಜ್ವಾಲೆಯ ವಿಕಟ ನಗೆ, ಮಾತಿನ ಮೋಡಿಯ ಕಪಟಿ ಅಭಿನಯ ಇವೆಲ್ಲವೂ ಈ ಪಾತ್ರದಲ್ಲಿ ಅಡಕವಾಗಿದೆ. ಹೀಗಾಗಿ ಎ೦ಟು ಗಂಟೆಯ ನಾಟಕದಲ್ಲಿ ಈ ಪಾತ್ರವೂ ವೈಶಿಷ್ಟಪೂರ್ಣವಾಗಿ ತನ್ನದೇ ಸ್ಥಾನಮಾನ ಹೊಂದಿದೆ. ಇಂತಹ ಒಂದು ಪಾತ್ರವನ್ನು ನಿವ೯ಹಿಸುವಲ್ಲಿ ತಮ್ಮದೇ ಶ್ರಮದಿಂದ ತಕ್ಕಮಟ್ಟಿಗೆ ಯಶಸ್ಸು ಕಂಡವರು ನಾಗಮೋಹನ್. ಶಕುನಿಯಾಗಿ 40 ಬಾರಿ ನಟಿಸಿರುವರು ಈ ಪಾತ್ರಕ್ಕೆ ಆನಂದ ಮಹಾದಾನಂದ ಪ್ರಿಯ ಶಕುನಿಗೆ ಮಹಾದನಂದ.. ಎಂಬ ಸಂದರ್ಭೋಚಿತ ರಂಗಗೀತೆಯನ್ನು ರಚಿಸಿ ಅಳವಡಿಸಿದವರು ತುಮಕೂರು ಕಡೆಯ ರಂಗ ನಿರ್ದೇಶಕರು. ನಿಜಕ್ಕೂ ಈ ಹಾಡು ಈ ಪಾತ್ರಕ್ಕೆ ಜೀವ ಕಳೆ ತುಂಬಿದೆ.

ಇರಲಿ ಈ ಮೋಹನ ಇವತ್ತಿನ ಕಲಾವಿದರಲ್ಲ, ಇವರನ್ನು ಹತ್ತಾರು ವರ್ಷಗಳಿಂದ ಬಲ್ಲೆನಾದರೊ, ಇವರ ರಂಗ ಚಟುವಟಿಕೆ ಗಮನಿಸಿದ್ದೇನೆ ಆದರೂ ಯಾಕೋ ಈ ಮೋಹನ ನನ್ನ ಬರಹಕ್ಕೆ ಸಿಕ್ಕದೆ ಮೋಹಿನಿ ಆಟ ಆಡುತ್ತಾ ತಪ್ಪಿಸಿಕೊಂಡು ಬ೦ದಿದ್ದರು. ಬೆಂಗಳೂರಿನ ನಾಗರಬಾವಿಯಲ್ಲಿದ್ದೆ. ಬಿಟ್ಟಗೌಡನಹಳ್ಳಿ ರಮೇಶ್ ಗೌಡರು ತಮ್ಮಳ್ಳಿಯಲ್ಲಿ ಮನೆಯ ಮಂದೆಯೇ ಸೀನರಿ ಹಾಕಿಸಿ ನಾಟಕ ಮಾಡಿಸುತ್ತಿದ್ದರು. ಇಲ್ಲಿಂದಲೇ ಮಾತನಾಡಿಸಿ ಅವರ ರ೦ ಸೇವೆ ಕುರಿತಾಗಿ ಬರೆದಿದ್ದೆ. ರಂಗಭೂಮಿ ನಶಿಸುತ್ತಿರುವ ಇಂದಿನ ದಿನಗಳಲ್ಲಿ ರಂಗಭೂಮಿಯನ್ನು ಪೋಷಿಸುವ ಕಲಾವಿದರು ಬೇಕು. ಈ ದಿಶೆಯಲ್ಲಿ ಮೋಹನ್ ರವರದು ಗಮನಾರ್ಹ ಪಾತ್ರವಿದೆ. ಈ ಪಾತ್ರದಾರಿಯನ್ನು ಫೋನ್‌ನಲ್ಲಿ ಮಾತನಾಡಿಸಿದೆ.

ಮೋಹನ್, ನಾನು ಈವರೆವಿಗೂ ನೂರಾರು ಕಲಾವಿದರ ಕುರಿತಾಗಿ ಬರೆದಿರುವೆನಷ್ಟೇ. ಇದು ನಿಮಗೂ ಗೊತ್ತು. ಆದರೂ ನೀವೇಕೆ ನನ್ನ ಬರಹಕ್ಕೆ ಸಿಗುತ್ತಿಲ್ಲ. “ಸರಿ ಸಾರ್, ಇವತ್ತು ಶನಿವಾರ. ನನಗೆ ಯಾವುದೇ ಪಂಕ್ಷನ್ ಇಲ್ಲ.
(ಇವರು ಅಡಿಗೆ ಕಂಟ್ರಾಕ್ಸರ್. ಅಡಿಗೆ ಮಾಡಿ ಬಡಿಸುವ ಬಾಣಸಿಗ. ಎಷ್ಟೋ ನಾಟಕ ಕಾರ್ಯಕ್ರಮಗಳಿಗೆ ಅನ್ನದಾನ ಮಾಡಿದ ಪುಣ್ಯಾತ್ಮ) ಬನ್ನಿ ಸಾರ್ ಮಾತನಾಡೋಣ ಎಂದರು. ಇಲ್ಲಾ ನಾನು ಬೆಂಗಳೂರಿನಲ್ಲಿದ್ದೇನೆ. ಸಮಯ ವ್ಯರ್ಥ ಮಾಡದೇ ನಮ್ಮ ರಂಗ ಸೇವೆ ಕುರಿತಾಗಿ ಮಾಹಿತಿ ಹೇಳಿ ಎಂದೆ. “ಸರಿ, ಬರಕ್ಕೂಳ್ಳಿ ಎಂದರು. ನನ್ನ ಹೆಸರು ಡಿ.ವಿ. ನಾಗಮೋಹನ್. ತಂದೆ ಹೆಸರು ಡಿ.ಕೆ. ವಿಶ್ವೇಶ್ವರಯ್ಯ. ತಾಯಿ ಸರೋಜಮ್ಮ. ನಮ್ಮ ಊರು ದಿಂಡಗೂರು. ಚನ್ನರಾಯಪಟ್ಟಣ ತಾಲೂಕಿನ ಗ್ರಾಮ. ನಾನು 18 ವರ್ಷದ ಬಾಲಕನಾಗಿದ್ದಾಗಲೇ ರಂಗಭೂಮಿ ಪ್ರವೇಶ ಮಾಡಿದೆ. ಮೊದಲನೇ ಪಾತ್ರ ಉತ್ತರೆ. 2ನೇ ಯದು ರುಕ್ಮಿಣಿ, ನಂತರ ನಾಗರಾಣಿ..ಹೀಗೆ ಆರಂಭದಲ್ಲಿ ಸ್ತ್ರೀ ಪಾತ್ರವೇ ಸಿಕ್ಕವು. ನಾಚಿಕೊಳ್ಳದೇ ಪಕ್ಕ ನಿಭಾಯಿಸಿದೆ. ಆ ನಂತರ ಶಕುನಿ, ದುರ್ಯೋಧನ, ಭೀಮ, ದುಶ್ಯಾಸನ, ಅರ್ಜುನ ಇನ್ನೂ ಅನೇಕ ಕುರುಕ್ಷೇತ್ರ ನಾಟಕದ ಪಾತ್ರಗಳನ್ನೆಲ್ಲ ಮಾಡಿದೆ. ಸುಮಾರು ನೂರಕ್ಕಿಂತಲೂ ಹೆಚ್ಚು ಬಾರಿ ಅಭಿನಯಿಸಿರುತ್ತೇನೆ. ಕಲಾರಂಗದಲ್ಲಿ ಸೇವೆಯನ್ನು ಸಲ್ಲಿಸುತ್ತಾ ಅನೇಕ ಸಂಘ ಸಂಸ್ಥೆಗಳಿಗೆ ಮಾರ್ಗದರ್ಶಕನಾಗಿದ್ದೇನೆ. ಹಾಸನ ಜಿಲ್ಲಾ ಕಲಾವಿದರ ಹಿತ ರಕ್ಷಣಾ ಸಮಿತಿ ಕಾರ್ಯಧ್ಯಕ್ಷನಾಗಿ, ಅನ್ನಪೂರ್ಣೇಶ್ವರಿ ಕಲಾ ಸಂಘದ ಅಧ್ಯಕ್ಷನಾಗಿದ್ದೇನೆ. ಕರ್ನಾಟಕ ರಕ್ಷಣಾ ವೇದಿಕೆಯ ಸಾಂಸ್ಕೃತಿಕ ಘಟಕದ ಅಧ್ಯಕ್ಷ. ಇನ್ನೂ ಅನೇಕ ಸಂಘ ಸಂಸ್ಥೆಗಳಲ್ಲಿ ಕಾರ್ಯ ನಿರ್ವಹಿಸುತ್ತಾ ಸಮಾಜ ಸೇವೆಯಲ್ಲಿ ಕ್ರಿಯಾಶೀಲನು.

ಹೌದು, ಮೋಹನ್ ಹಾಸನದ ಪೌರಾಣಿಕ ಮತ್ತು ಸಾಮಾಜಿಕ ನಾಟಕಗಳಲ್ಲಿ ತಮ್ಮದೇ ಪಾತ್ರ ನಿರ್ವಹಿಸುತ್ತಾ ಬಂದಿದ್ದಾರೆ. ಹಾಸನದ ಕಲಾಭವನದಲ್ಲಿ ಕೇವಲ ಕುರುಕ್ಷೇತ್ರ ರಾಮಾಯಣ ನಾಟಕಗಳೇ ಪ್ರಧಾನವಾಗಿ ಪ್ರದರ್ಶಿತವಾಗುತ್ತಿರುವಲ್ಲಿ ಬೇರೆ ಬೇರೆ ಪೌರಾಣಿಕ ನಾಟಕಗಳನ್ನು ರಂಗದ ಮೇಲೆ ತರುವಲ್ಲಿ ಚಿಂತಿಸಿ ಪ್ರಯತ್ನಿಸಿದ್ದಾರೆ. ರತಿ ಕಲ್ಯಾಣ, ಕೌಂಡಿಲಕನ ವಧೆ, ರಾಜಾಸುಯಾಗ, ಭಕ್ತ ಪ್ರಹ್ಲಾದ, ಭಕ್ತ ಮಾಂಧಾತ, ಸತ್ಯಮಾರ್ತಿ, ತ್ರಿಜನ್ಮ ಮೋಕ್ಷ, ಮೂರೂವರೆ ವಜ್ರ, ವೀರ ಅಭಿಮನ್ಯು ಹೀಗೆ ಪೌರಾಣಿಕ ನಾಟಕಗಳನ್ನು ಅಡಿಸಿದ್ದಾರೆ. ರತ್ನ ಮಾಂಗಲ್ಯ ಸಾಮಾಜಿಕ ನಾಟಕದ ಹಾಸ್ಯ ಪಾತ್ರದ ಅಭಿನಯದಲ್ಲಿ ಗಮನ ಸೆಳೆದಿದ್ದಾರೆ.. ಗೌಡ್ರು ಗದ್ಲ ನಾಟಕದಲ್ಲಿ ಮತ್ತು ಮೊನ್ನೆ ಸತಿ ಸಂಸಾರದ ಜ್ಯೋತಿ ಸಾಮಾಜಿಕ ನಾಟಕದಲ್ಲಿ ನಟಿಸಿದ್ದಾರೆ. ಕೃಷ್ಣ-5 ಬಾರಿ, ದುರ್ಯೋಧನ -2 ಬಾರಿ ಅಷ್ಟೇ ಅಲ್ಲಾ ಹತ್ತಾರು ನಾಟಕಗಳಲ್ಲಿ ಬಹುಮುಖಿ ಪಾತ್ರಗಳಲ್ಲಿ ಪರಕಾಯ ಪ್ರವೇಶ ಮಾಡಿದ್ದಾರೆ..ಹಾಸನದ ಕಲಾಭವನದಲ್ಲಿ ಐದು ಹತ್ತು ದಿನಗಳ ಪೌರಾಣಿಕ ನಾಟಕೋತ್ಸವ ಸಂಘಟಿಸಿದ್ದಾರೆ. ಅಂದ್ದಾಗೆ ಅನಂತರಾಜು ಮತ್ತೆ ಜುಲೈ ತಿಂಗಳಲ್ಲಿ ಐದು ದಿನಗಳ ಪೌರಾಣಿಕ ನಾಟಕೋತ್ಸವ ಆಯೋಜಿಸುತ್ತಿದ್ದೇನೆ ಎಂದರು. ಮೋಹನ್, ನಿಮ್ಮಂತಹ ರಂಗ ಸಂಘಟಕರು ಜಿಲ್ಲಾ ರಂಗಭೂಮಿಗೆ ಅವಶ್ಯ ಇದೆ. ನಿಮ್ಮ ಕಲಾ ಸೇವೆ ಹೀಗೆ ಮುಂದುವರೆಯಲಿ ಶುಭಾಶಯಗಳು ಎ೦ದೆ.

ಗೊರೂರು ಅನಂತರಾಜು,
ಹಾಸನ
9449462879

ಗೌಡ್ರು ಗದ್ಲ ನಟ ಬಿಟ್ಟಗೋಡನಹಳ್ಳಿ ರಮೇಶ್ ಗೌಡಪ್ಪ

ಶ್ರೀ ಜೈ ಮಾರುತಿ ಕೃಪಾಪೋಷಿತ ನಾಟಕ ಮಂಡಳಿ ಬಿಟ್ಟಗೌಡನಹಳ್ಳಿ ಗೊರೂರು ರಸ್ತೆ ಹಾಸನ ತಂಡದ ಕಲಾವಿದರು ರಮೇಶ್ ಗೌಡಪ್ಪ ಖಜಾಂಚಿ, ಹಾಸನ ಜಿಲ್ಲಾ ಕಲಾವಿದರ ಹಿತರಕ್ಷಣಾ ಸಮಿತಿ(ರಿ.) ಇವರ ನೇತೃತ್ವದಲ್ಲಿ ಮೇ 21ನೇ ತಾ. ಬುಧವಾರ ಸಂಜೆ 7ಕ್ಕೆ ಬೆಳ್ಳಿ ಕಿರೀಟ ಪುರಸ್ಕೃತ ರಂಗ ನಿರ್ದೇಶಕ ಕೃಷ್ಣಮೂರ್ತಿ ಬೀಚೇನಹಳ್ಳಿ ಹೊಳೆನರಸೀಪುರ ತಾ. ಇವರ ನಿರ್ದೇಶನದಲ್ಲಿ ಬಿಟ್ಟಗೌಡನಹಳ್ಳಿಯ ರಮೇಶ್ ಗೌಡಪ್ಪರವರ ಮನೆ ಮುಂದೆ ದೇವನೂರು ಬಾಬಣ್ಣನರ ಚೆನ್ನಬಸವೇಶ್ವರ ಡ್ರಾಮಾ ಸೀನರಿಯ ರಂಗಸಜ್ಜಿಕೆಯಲ್ಲಿ ಜಿಲ್ಲೆಯ ಅನುಭವಿ ಕಲಾವಿದರು ಸೇರಿ ರಾಜಾ ಸತ್ಯವ್ರತ ಎಂಬ ಪೌರಾಣಿಕ ನಾಟಕ ಪ್ರದರ್ಶಿಸುತ್ತಿದ್ದಾರೆ.

ಈ ತಂಡ ಕಳೆದ ಒಂದು ತಿಂಗಳಿಂದ ನಮ್ಮ ಮನೆ ಮುಂಭಾಗ ಇರುವ ಶ್ರೀ ಶನೀಶ್ವರ ದೇವಸ್ಥಾನದ ಸಭಾಂಗಣದಲ್ಲಿ ರಂಗ ತಾಲೀಮು ನಡೆಸುತ್ತಿತ್ತು. ಕಲಾವಿದರ ಹಾಡುಗಾರಿಕೆ ಹಾರ್ಮೋನಿಯಂ ಮಾಸ್ತರ ಸಂಗೀತ ಸಾಂಗತ್ಯದಲ್ಲಿ ಮನೆಯವರೆಗೂ ಕೇಳಿಬರುತ್ತಿತ್ತು. ನನಗೆ ಅಲ್ಲಿಗೆ ಹೋಗಿ ನೋಡುವ ಕುತೂಹಲ, ಹಾಡು ಕೇಳುವ ಬಯಕೆ ಉಂಟಾಗುತ್ತಿತ್ತು. ಆದರೆ ಇದು ಸಾಧ್ಯವಾಗಲಿಲ್ಲ. ಮಗನ ಮದುವೆ ಬಿಸಿಯಲ್ಲಿ ಮುಳುಗಿಹೋಗಿ ಅತ್ತ ಕಡೆ ಧಾವಿಸಲಿಲ್ಲ. ಮದುವೆ ಕಾರ್ಯ ಮುಗಿದು ಬೆಂಗಳೂರಿನಲ್ಲಿ ಇರುವಾಗ್ಗೆ ನಾಟಕದ ಪಾಂಪ್ಲೆಟ್ ಗ್ರೂಪ್ ನಲ್ಲಿ ನೋಡಿದೆ. ಗೌಡರು ಹಾಕಿದ್ದರು. ಫೋನ್ ನಲ್ಲಿ ಸಂಪರ್ಕಿಸಿದೆ.

ಗೌಡ್ರೇ, ತಾವು ಹಾಸನ ಜಿಲ್ಲಾ ರಂಗಭೂಮಿಯಲ್ಲಿ ಇತ್ತೀಚಿನ ದಿನಗಳಲ್ಲಿ ಕ್ರಿಯಾಶೀಲರಾಗಿದ್ದೀರಿ. ಇನ್ನೂ ನಿಮ್ಮೂರಿನ ನಿಮ್ಮ ಮನೆ ಮುಂದೆಯೇ ಶನಿಪ್ರಭಾವ ನಾಟಕ ಮಾಡಿಸುತ್ತಿದ್ದೀರಿ. ನೀವು ಈ ಹಿಂದೆ ಹಾಸನದ ಕಲಾಭವನದಲ್ಲಿ ರತ್ನ ಮಾಂಗಲ್ಯ ಸಾಮಾಜಿಕ ನಾಟಕದಲ್ಲಿ ಅಭಿನಯಿಸಿದ್ದನ್ನು ಗಮನಿಸಿರುವೆ.
ಈಗ ನೀವು ರಾಜ ಸತ್ಯವ್ರತನ ಪ್ರಮುಖ ಪಾತ್ರವನ್ನೇ ನಿಭಾಯಿಸುತ್ತಿದ್ದೀರಿ. ನೀವು ಈವರೆಗೆ ಎಷ್ಟು ನಾಟಕಗಳಲ್ಲಿ ಯಾವ್ಯಾವ ಪಾತ್ರ ನಿಭಾಯಿಸಿದ್ದೀರಿ ಎಂದು ಕೇಳಿದೆ.

ಸಾರ್. ನೀವು ನನಗೆ ಕಲಾಭವನದ ಕಡೆ ಸಿಗಲಿಲ್ಲ. ನಾಟಕ ನೋಡಲು ಬನ್ನಿ ಎಂದರು. ಮುಂದುವರಿದು ನಾನು ಈವರೆಗೆ ನಲ್ವತ್ತು ನಾಟಕಗಳಲ್ಲಿ ನಟಿಸಿರುವುದಾಗಿ ಹೇಳಿ ದಶರಥನ ಪಾತ್ರವನ್ನು ಐದು ಬಾರಿ, ಕರ್ಣನ ಪಾತ್ರ ಹದಿಮೂರು ಬಾರಿ, ರಾಮ 5 ಸಲ, ಕೃಷ್ಣ-3 ಮತ್ತು ನಾರದನಾಗಿ ಒಮ್ಮೆ ತಂಬೂರಿ ಹಿಡಿದು ರಂಗದ ಮೇಲೆ ಬಂದಿರುವೆ ಎಂದರು. ರತ್ನ ಮಾಗಲ್ಯ ಸಾಮಾಜಿಕ ನಾಟಕದಲ್ಲಿ ನಾಲ್ಕು ಪ್ರಯೋಗ ಮತ್ತು ಗೌಡ್ರು ಗದ್ಲದಲ್ಲಿ ಒಮ್ಮೆ ಗುಡುಗಿದ್ದೇನೆ. ಇಷ್ಟೇ ಎಂದರು.

ಸದ್ಯಕ್ಕೆ ಇಷ್ಟು ಸಾಕು. ಮಂದೆಯೂ ನಿಮ್ಮ ಕಲಾಸೇವೆ ಹೀಗೆ ಸಾಗಲಿ ಜನರಿಗೆ ಮನರಂಜನೆ ದೊರೆಯಲಿ ಎಂದೆ.

ಗೊರೂರು ಅನಂತರಾಜು,
ಹಾಸನ
9449462879

ಪೌರಾಣಿಕ ನಾಟಕಗಳ ಪಾತ್ರದಾರಿ ಇಂಜಿನಿಯರ್ ನಾಗರಾಜ್ ಕೆ. -ಗೊರೂರು ಅನಂತರಾಜು, ಹಾಸನ.

ಆಲೂರು ತಾಲ್ಲೂಕು ಕುಂದೂರು ಹೋಬಳಿ ಸುಳುಗೋಡು ಗ್ರಾಮದ ನಾಗರಾಜ್ ಕೆ. ವೃತ್ತಿಯಲ್ಲಿ ಕೆಇಬಿ ಇಲಾಖೆಯಲ್ಲಿ ಕಿರಿಯ ಇಂಜಿನಿಯರ್. ಪ್ರವೃತ್ತಿಯಲ್ಲಿ ಪೌರಾಣಿಕ ರಂಗಭೂಮಿಯಲ್ಲಿ ನಟರಾಗಿ ನಟಿಸುತ್ತಾ ಬಂದಿರುವರು. ಈ ಹಿಂದೆ ಇವರು ಹಾಸನದ ಕಲಾಭವನದಲ್ಲಿ ಎ.ಸಿ.ರಾಜು ನಿರ್ದೇಶನದಲ್ಲಿ ದೇವಿ ಮಹಾತ್ಮೆ ನಾಟಕದಲ್ಲಿ ರಂಬೇಶ್‌ನ ಪಾತ್ರ ನಿರ್ವಹಿಸಿದ್ದರು. ಆಗ ಇವರ ಅಭಿನಯ ನೋಡಿದ್ದೆ. ಮೊನ್ನೆ ನಾಗರಾಜ್‌ರಿಂದ ಪೋನ್ ಬಂತು. ಸಾರ್ ನಾನು ಪೌರಾಣಿಕ ನಾಟಕಗಳಲ್ಲಿ ಹಲವು ಪಾತ್ರಗಳನ್ನು ನಿರ್ವಹಿಸಿರುವೆ. ನೀವು ರಂಗನಟರ ಬಗ್ಗೆ ಬರೆಯುವ ಲೇಖನಗಳನ್ನು ಓದಿರುವೆ…ಎಂದಾಗ ಇಂಜಿನಿಯರ್ ಮಾತಿನ ಇಂಗಿತ ತಿಳಿಯಿತು. ನಿಮ್ಮ ರಂಗಭೂಮಿ ಸೇವೆ ಕುರಿತಾಗಿ ಬರೆಯುವ, ಈ ದಿಶೆಯಲ್ಲಿ ಮಾಹಿತಿ ಕಳಿಸಿ ಎಂದೆ. ಅವರು ಒಂದಿಷ್ಟು ವಿಡಿಯೋ ಕಳಿಸಿದರು. ಡೌನ್‌ಲೋಡ್ ಮಾಡಿ ನೋಡಿದೆ. ನೀವು ರಂಗಕ್ಷೇತ್ರದ ಹಾದಿಯಲ್ಲಿ ಸಾಗಿಬಂದ ಮಾಹಿತಿ ಕಳಿಸಿ ಎಂದೆ. ಸಾರ್, ನೀವು ಹಾಸನದಲ್ಲಿ ಎಲ್ಲಿ ಸಿಗ್ತೀರಾ ಎಂದರು. ನಿಮ್ಮ ಮನೆ ಎಲ್ಲಿ ಎಂದೆ. ಹಾಸನದ ಚನ್ನಪಟ್ಟಣದಲ್ಲಿ ಎಂದರು. ಸರಿ, ನಾನು ಬೆಂಗಳೂರಿನಿಂದ ಬರುತ್ತಿರುವೆ ಬಸ್ ಸ್ಟ್ಯಾಂಡ್‌ನಲ್ಲಿ ನನ್ನ ಬೈಕ್ ಇದೆ. ನೀವು ಅಲ್ಲಿಗೆ ಬನ್ನಿ ಎಂದೆ, ಬಂದಿದ್ದರು. ಇಬ್ಬರು ಬೈಕ್‌ನಲ್ಲಿ ಹೊರಟು ಹಾಸನದ ಹೋಟೆಲ್ ಹೊಕ್ಕೆವು. ಕಾಫಿ ಕುಡಿಯುತ್ತಾ ಮಾತಿಗೆಳೆದೆ. ನಾನು ೨೫ ವರ್ಷಗಳಿಂದ ರಂಗಭೂಮಿಯಲ್ಲಿದ್ದೇನೆ. ನನ್ನ ಜನ್ಮ ದಿನಾಂಕ ೩೦-೫-೧೯೭೩. ನನ್ನ ಪ್ರೈಮರಿ ವಿದ್ಯಾಭ್ಯಾಸ ಸುಳಗೋಡು ಗ್ರಾಮದಲ್ಲಿ, ಪಕ್ಕದ ಗಂಜಿಗೆರೆಯಲ್ಲಿ ಮಿಡಲ್ ಸ್ಕೂಲ್. ಆಲೂರು ಕಲಿವೀರ್ ವಸತಿ ಪ್ರೌಢಶಾಲೆಯಲ್ಲಿ ಹೈಸ್ಕೂಲ್ ವ್ಯಾಸಂಗ. ಡಿಪ್ಲೋಮ ಮಾಡಿದ್ದು ಹಾಸನದ ಎಲ್.ವಿ.ಪಾಲಿಟೆಕ್ನಿಕ್‌ನಲ್ಲಿ. ತಂದೆ ಹೆಸರು ಕರಿಯಯ್ಯ. ತಾಯಿ ದೇವಮ್ಮ. ೨೦೦೦ರಲ್ಲಿ ಕೆಲಸಕ್ಕೆ ಸೇರಿದೆ. ೧೯೮೪-೮೫ರಲ್ಲಿ ಸುಳಗೋಡಿನಲ್ಲಿ ಹತ್ತರ ಪ್ರಾಯದಲ್ಲಿ ರಾಮಾಯಣ ನಾಟಕದ ಚಿಕ್ಕ ಪಾತ್ರದಲ್ಲಿ ರಂಗ ಪ್ರವೇಶಿಸಿದ್ದೆ. ನಾನು ಬೆಂಗಳೂರಿನಲ್ಲಿ ಖಾಸಗಿ ಕಂಪನಿಯಲ್ಲಿ ಕೆಲಸ ಮಾಡುತ್ತಿರುವಾಗ್ಗೆ ಟಿ.ದಾಸರಹಳ್ಳಿಯಲ್ಲಿ ೧೯೯೭ರಲ್ಲಿ ಕೆಲವು ಪೌರಾಣಿಕ ನಾಟಕಗಳ ದೃಶ್ಯಾವಳಿಯಲ್ಲಿ ನಟಿಸಿದ್ದೆ. ಆಲೂರು ಟೌನ್‌ನಲ್ಲಿ ೨೦೧೦, ೧೨ರಲ್ಲಿ ನನ್ನ ನೇತೃತ್ವದಲ್ಲಿ ೨ ಬಾರಿ ಕುರುಕ್ಷೇತ್ರ ನಾಟಕ ಪ್ರದರ್ಶಿಸಲಾಗಿದೆ. ಯಕ್ಷಗಾನವೇ ಪ್ರಧಾನವಾಗಿರುವ ದಕ್ಷಿಣ ಕರ್ನಾಟಕದ ಕಡಬದಲ್ಲಿ ಕಾರ್ಯನಿರ್ವಹಿಸುತ್ತಿದ್ದ ಕಾಲಕ್ಕೆ ಎ.ಸಿ.ರಾಜು ನಿರ್ದೇಶನದಲ್ಲಿ ಅಲ್ಲಿ ಸತ್ಯಹರಿಶ್ಚಂದ್ರ ನಾಟಕ ಪ್ರದರ್ಶಿಸಿ ಹರಿಶ್ಚಂದ್ರನ ಪಾತ್ರ ನಿರ್ವಹಿಸಿದ್ದೆ. ಕಡಬ ತಾ. ಸವಣೂರಿನಲ್ಲಿ ಕುರುಕ್ಷೇತ್ರ ಆಡಿಸಿದೆ. ಇಲ್ಲಿ ಕಾರ್ಯನಿರ್ವಹಿಸುತ್ತಿದ್ದ ಅವಧಿಯಲ್ಲಿ ಶಾಲಾ ಮಕ್ಕಳಿಗೆ ರಾಮಾಯಣ, ಕುರುಕ್ಷೇತ್ರ ನಾಟಕಗಳ ಪಾತ್ರಗಳ ತರಬೇತಿ ನೀಡಿ ಶಾಲೆ, ಸಾಹಿತ್ಯ ಕಾರ್ಯಕ್ರಮಗಳಲ್ಲಿ ಪ್ರದರ್ಶನಕ್ಕೆ ಶ್ರಮಿಸಿದೆ. ಸರಿ, ನೀವು ಇದುವರೆಗೆ ಯಾವ್ಯಾವ ನಾಟಕಗಳಲ್ಲಿ ಏನೇನು ಪಾತ್ರಗಳನ್ನು ನಿರ್ವಹಿಸಿದ್ದೀರಿ..? ಟೀ ಸೀಪ್ ಮಾಡುತ್ತಾ ಒಂದು ಪ್ರಶ್ನೆ ಒಗೆದೆ. ಸತ್ಯ ಹರಿಶ್ಚಂದ್ರ, ಕುರುಕ್ಷೇತ್ರ, ದೇವಿ ಮಹಾತ್ಮೆ, ರಾಮಾಯಣ ನಾಟಕದಲ್ಲಿ ೧೦ ಬಾರಿ ಶ್ರೀಕೃಷ್ಣನ ಪಾತ್ರ, ಶಕುನಿಯಾಗಿ ೧೪ ಸಲ, ೧೫ ಬಾರಿ ವಿಧುರ, ಭೀಷ್ಮ ದ್ರೋಣ ತಲಾ ಹತ್ತು ಸಲ, ನಾರದನಾಗಿಯೂ ಹತ್ತು, ದೃತರಾಷ್ಟ್ರ-೮, ಸಾತ್ಯಕಿ-೫, ಕರ್ಣ-೪, ಅರ್ಜುನ-೨, ಸೂತ್ರದಾರಿ, ದುರ್ಯೋಧನ, ಆಂಜನೇಯ, ಭರತ, ಡಂಗೂರಿ, ಮಾರೀಚ ಹೀಗೆ ಪಾತ್ರಗಳ ಪರಕಾಯ ಪ್ರವೇಶ ಹೇಳುತ್ತಾ ಹೋದರು. ಅದು ಸರಿ, ಸತ್ಯಹರಿಶ್ಚಂದ್ರನ ಪಾತ್ರ ಎಷ್ಟು ಬಾರಿ ಎಂದೆ. ಮೂರು ಸರ್ತಿ ಅಷ್ಟೇ. ಈ ಸತ್ಯಹರಿಶ್ಚಂದ್ರ ನಾಟಕವನ್ನು ಹಾಸನದ ಕಲಾಭವನದಲ್ಲಿ ಪ್ರದರ್ಶಿಸಬೇಕೆಂಬ ಆಸೆ ಇದೆ ಎಂದರು. ಖಂಡಿತ ಮಾಡಿ ನಾನು ನೋಡುವೆ ಎಂದೆ.

ಗೊರೂರು ಅನಂತರಾಜು, ಹಾಸನ.

ಮೊ: ೯೪೪೯೪೬೨೮೭೯.
ವಿಳಾಸ: ಹುಣಸಿನಕೆರೆ ಬಡಾವಣೆ, ೨೯ನೇ ವಾರ್ಡ್, ೩ನೇ ಕ್ರಾಸ್, ಶ್ರೀ ಶನೀಶ್ವರ ದೇವಸ್ಥಾನ ರಸ್ತೆ, ಹಾಸನ-೫೭೩೨೦೧.

ಶ್ರೀ ಕನ್ನಿಕಾಪರಮೇಶ್ವರಿ ದೇವಿಯ ಭವ್ಯ ಮೆರವಣಿಗೆ.

ಗಂಗಾವತಿ: ಹಿರೇಜಂತಕಲ್ ವಿರುಪಾಪುರ ಆರ್ಯವೈಶ್ಯ ಸಮಾಜದ ನೇತ್ರತ್ವದಲ್ಲಿ ಕುಲದೇವತೆ ಶ್ರೀ ಕನ್ನಿಕಾ ಪರಮೇಶ್ವರಿ ದೇವಿಯ ಜಯಂತೋತ್ಸವದ ಪ್ರಯುಕ್ತ ಬುಧವಾರದಂದು ಅಮ್ಮನವರ ಭಾವಚಿತ್ರದ ಭವ್ಯ ಮೆರವಣಿಗೆ ಸಕಲ ವಾದ್ಯ ವೈಭವದೊಂದಿಗೆ ಜರುಗಿತು.

ಬೆಳಿಗ್ಗೆ ಐದು ಜನ ಮಹಿಳೆಯರು ಕಳಸ ಪೂರ್ಣ ಕುಂಭದೊಂದಿಗೆ ದೇವಸ್ಥಾನದ ಆವರಣದಿಂದ ಪ್ರಮುಖ ರಾಜ ಬೀದಿಗಳ ಮೂಲಕ ತೆರಳಿ ಗಂಗೆ ಪೂಜೆ ನೆರವೇರಿಸಿ ದೇವಸ್ಥಾನಕ್ಕೆ ಆಗಮಿಸಿತು.

ಬಳಿಕ ದೇವಸ್ಥಾನದಲ್ಲಿ ಪೂರ್ಣ ಕುಂಭದೊಂದಿಗೆ ಆಗಮಿಸಿದ ಮಹಿಳೆಯರಿಗೆ ಉಡಿ ತುಂಬುವಿಕೆ ಸೇರಿದಂತೆ ಭಜನೆ ಅಮ್ಮನವರಿಗೆ ಅಭಿಷೇಕ ಲಲಿತ ಸಹಸ್ರ ಪಾರಾಯಣ ಇತರೆ ಧಾರ್ಮಿಕ ಪೂಜಾ ಕಾರ್ಯಕ್ರಮಗಳನ್ನು ಅರ್ಚಕ ಅವಧೂತ ಭಟ್ಟರು ನೆರವೇರಿಸಿದರು.

ಸಮಾಜದ ಅಧ್ಯಕ್ಷ ನಾಗರಾಜ ದರೋಜಿ ಹಾಗೂ ಸತ್ಯ ಜಿ ಆರ್ ಎಸ್ ವಾಸವಿ ಮಹಿಳಾ ಮಂಡಳಿಯ ಅಧ್ಯಕ್ಷ ರುಕ್ಮಿಣಿ ಬಾಯಿ ಆಚರಣೆ ಕುರಿತು ಮಾತಾಡಿದರು.

ಒಂಭತ್ತು ವರ್ಷಗಳ ನಂತರ ಎಸ್.ಎಸ್.ಎಲ್.ಸಿ ಪರೀಕ್ಷೆ ಬರೆದು ಮತ್ತೆ ವಿದ್ಯಾರ್ಥಿನಿಯಾದ ಗೃಹಿಣಿ.

ಗಂಗಾವತಿ: “ಸಪ್ತಪದಿ ತುಳಿದ ಗೃಹಿಣಿ, ನವ ವರ್ಷಗಳ ನಂತರ ಮತ್ತೆ ವಿದ್ಯಾರ್ಥಿನಿ” ಎಂಬ ಈ ವಾಕ್ಯ ನಿಮಗೆ ಕಾದಂಬರಿಯ ಶೀರ್ಷಿಕೆ ಎನಿಸಬಹುದು, ಆದರೆ ಇದು ಸತ್ಯ. ವಿದ್ಯೆ ಎಂಬುವುದು ಯಾವುದೇ ಕಲ್ಮಶವಿಲ್ಲದ ಅಪರಿಪೂರ್ಣ ಸಾಗರ. ಇಂತಹ ಸಾಗರದಲ್ಲಿ ಈಜುವವರೆಷ್ಟೋ, ಮುಳುಗುವವರೆಷ್ಟೋ ಆದರೆ ಮುಳುಗಿ ತೇಲುವವರು ಅತಿ ಕಡಿಮೆ. ಓದಿಗೆ ವಯಸ್ಸಿನ ಮಿತಿ ಇಲ್ಲವೆಂಬ ಸತ್ಯವನ್ನು ಒಬ್ಬ ಎರಡು ಮಕ್ಕಳ ತಾಯಿ ೨೦೨೪-೨೫ರ ಸಾಲಿನಲ್ಲಿ ಎಸ್.ಎಸ್.ಎಲ್.ಸಿ ಯಲ್ಲಿ ಪರೀಕ್ಷೆಯನ್ನು ಉತ್ತಮ ಅಂಕಗಳೊAದಿಗೆ ತೇರ್ಗಡೆಗೊಂಡು ವಿಶಿಷ್ಟತೆಗೆ ಕಾರಣರಾಗಿದ್ದಾರೆ.

ಗಂಗಾವತಿ ತಾಲೂಕಿನ ಹಿರೇಬೆಣಕಲ್ ಗ್ರಾಮದ ಲಕ್ಷ್ಮಿಯೇ ಆ ಮಹಿಳೆ. ಇವರು ಹಿರೇಬೆಣಕಲ್ ಶಾಲೆಯಲ್ಲಿ ತಮ್ಮ ಎಂಟನೇ ತರಗತಿಯನ್ನು ಎರಡನೇ ರ‍್ಯಾಂಕ್ ಪಡೆದು ತೇರ್ಗಡೆಯಾಗಿದ್ದರು. ನಂತರ ತಮ್ಮ ೧೮ನೇ ವಯಸ್ಸಿನಲ್ಲಿ ಮದುವೆಯಾಗಿದ್ದು, ಇದರ ಮಧ್ಯದಲ್ಲಿ ಅವರ ಓದು ನಿಂತು ಹೋಗುತ್ತದೆ. ತದನಂತರ ಒಂಭತ್ತು ವರ್ಷಗಳ ನಂತರ ಎರಡು ಮಕ್ಕಳ ಗೃಹಿಣಿಯಾಗಿದ್ದ ಲಕ್ಷ್ಮಿಯವರಿಗೆ ಓದುವ ಆಸೆ ಚಿಗುರೋಡೆದು ಪತಿಗೆ ತಿಳಿಸಿದರು. ಅವರ ಪತಿ ಏನನ್ನು ಯೋಚಿಸದೆ ಓದಬೇಕೆಂಬ ಚಿಗುರಿಗೆ ಆಸರೆಯಾಗಿ ನಿಂತರು.

ಪತಿಯ ಆಸರೆಯನ್ನು ಪಡೆದ ಮಹಿಳೆ ೨೦೨೪-೨೫ನೇ ಸಾಲಿನ ಎಸ್.ಎಸ್.ಎಲ್.ಸಿ ಪರೀಕ್ಷೆಯನ್ನು ನೇರವಾಗಿ ಬರೆದು ಯಾವುದೇ ಇಂಟರ್ನಲ್ ಅಂಕಗಳಿಲ್ಲದೇ ೩೦೪ ಅಂಕಗಳನ್ನು ಪಡೆದು ತೇರ್ಗಡೆಯಾಗಿದ್ದಾರೆ. ತೆರ್ಗಡೆಯಾದ ಸಂಗತಿ ಸಾಧಾರಣವಾಗಿರಬಹುದು. ಆದರೆ ಪ್ರತಿದಿನ ಶಾಲೆಗೆ ಹೋಗಿ ಬರುವ ಎಷ್ಟೋ ವಿದ್ಯಾರ್ಥಿಗಳು ಅನುತ್ತೀರ್ಣರಾಗುತ್ತಾರೆ. ಹೀಗಿರುವಾಗ ಎರಡು ಮಕ್ಕಳ ಗೃಹಿಣಿ ೯ ವರ್ಷಗಳ ನಂತರ ಮತ್ತೆ ಓದುವ ಛಲತೊಟ್ಟು ಉತ್ತಮ ಅಂಕಗಳೊಂದಿದೆ ತೇರ್ಗಡೆಯಾಗಿರುವುದು ವಿಶಿಷ್ಟವಾಗಿದೆ. ಇದು ಓದನ್ನು ಅರ್ಧಕ್ಕೆ ನಿಲ್ಲಿಸಿ ಮತ್ತೆ ಓದಬೇಕು ಎಂಬ ಆಸೆಪಡುವವರಿಗೆ ಸ್ಪೂರ್ತಿ ಎಂದು ಊರಿನ ಶಿಕ್ಷಣ ಪ್ರೇಮಿಗಳು ಖುಷಿಯನ್ನು ವ್ಯಕ್ತಪಡಿಸಿ ಅವರನ್ನು ಗೌರವಿಸಿದ್ದಾರೆ.

ಪತ್ರಕರ್ತ ನಾಗರಾಜ್ ವೈ ಗೆ ಕೇರಳದ ಕಾಸರಗೋಡಿನಲ್ಲಿ ದತ್ತಿನಿಧಿ ಪ್ರಶಸ್ತಿ ಪ್ರದಾನ ಸರ್ವಾಂಗೀಣ ಅಭಿವೃದ್ಧಿ ಹೋರಾಟ ಸಮಿತಿಯಿಂದ ಸನ್ಮಾನಿಸಿ ಗೌರವ.

ಗಂಗಾವತಿ: ಟಿವಿ-೫ ಮಾಧ್ಯಮದ ಜಿಲ್ಲಾ ವರದಿಗಾರರಾದ ನಾಗರಾಜ್ ವೈ ಇವರು ಕಾಸರಗೋಡು ಜಿಲ್ಲಾ ಕನ್ನಡ ಪತ್ರಕರ್ತರ ಕ್ಷೇಮಾಭಿವೃದ್ಧಿ ಸಂಘ ಕೊಡಮಾಡುವ ಶ್ರೀ ಜೋಸೆಫ್ ಮಥಾಯಿಸ್ ದುಬೈ ನೀಡುವ ದತ್ತಿನಿಧಿ ಪ್ರಶಸ್ತಿಗೆ ಆಯ್ಕೆಯಾಗಿದ್ದು, ಈ ಹಿನ್ನೆಲೆ ಕೊಪ್ಪಳ ಜಿಲ್ಲಾ ಸರ್ವಾಂಗೀಣ ಅಭಿವೃದ್ಧಿ ಹೋರಾಟ ಸಮಿತಿಯ ಅಧ್ಯಕ್ಷರು ಹಾಗೂ ಶಿಕ್ಷಣ ಇಲಾಖೆಯ ನಿವೃತ್ತ ಅಧಿಕಾರಿಯಾದ ಬಸವರಾಜ್ ಮ್ಯಾಗಳಮನಿ ಅವರ ನೇತೃತ್ವದಲ್ಲಿ ನಾಗರಾಜ್.ವೈ ಅವರಿಗೆ ಸನ್ಮಾನಿಸಿ ಗೌರವಿಸಲಾಯಿತು.

ಸನ್ಮಾನಿಸಿ ಮಾತನಾಡಿದ ಬಸವರಾಜ್ ಮ್ಯಾಗಳಮನಿಯವರು, ನಾಗರಾಜ್ ಅವರು ಬಹಳ ವರ್ಷಗಳಿಂದ ಮಾಧ್ಯಮ ಕ್ಷೇತ್ರದಲ್ಲಿ ಸಾಮಾಜಿಕ ಪರ ವರದಿ ಮಾಡುವ ಮೂಲಕ ಹೆಸರು ಮಾಡಿದ್ದಾರೆ. ಅಲ್ಲದೆ ಸರಳ ವ್ಯಕ್ತಿತ್ವದ ಜೊತೆಜೊತೆಗೆ ಸಾಮಾನ್ಯ ವರ್ಗದ ಜನರ ಪರವಾಗಿ ಸುದ್ದಿ ಪ್ರಸಾರ ಮಾಡುತ್ತಾ, ಜನಪರ ಕಾಳಜಿ ಹೊಂದಿದ್ದಾರೆ. ಇವರಿಗೆ ಇದೀಗ ಕಾಸರಗೋಡು ಜಿಲ್ಲಾ ಕನ್ನಡ ಪತ್ರಕರ್ತರ ಕ್ಷೇಮಾಭಿವೃದ್ಧಿ ಸಂಘ, ಕರ್ನಾಟಕ ಸರ್ಕಾರದ ಕರ್ನಾಟಕ ಗಡಿಪ್ರದೇಶ ಅಭಿವೃದ್ಧಿ ಪ್ರಾಧಿಕಾರ, ಪ್ರವಾಸೋದ್ಯಮ ಇಲಾಖೆ, ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘ, ಬೆಂಗಳೂರು ಇವರ ಸಹಯೋಗದಲ್ಲಿ ಕೇರಳದ ಕಾಸರಗೋಡಿನಲ್ಲಿ ಮೇ-೩ ರಂದು ನಡೆಯಲಿರುವ ಸಮಾರಂಭದಲ್ಲಿ ಶ್ರೀ ಜೋಸೆಫ್ ಮಥಾಯಿಸ್ ದುಬೈ ಪ್ರಶಸ್ತಿ ನೀಡುತ್ತಿರುವುದು ಸಂತಸದಾಯಕವಾಗಿದೆ. ಇದರ ಜೊತೆಗೆ ಕೇರಳ ರಾಜ್ಯದಲ್ಲಿ ನೀಡುವ ಪ್ರಶಸ್ತಿಗೆ ಉತ್ತರ ಕರ್ನಾಟಕ ಭಾಗದಿಂದ ನಾಗರಾಜ್. ವೈ ಅವರು ಒಬ್ಬರೇ ಆಯ್ಕೆಯಾಗಿದ್ದು, ನಮ್ಮ ಭಾಗದ ಜನರಿಗೆ ಗೌರವ ತಂದಿದೆ ಎಂದರು.

ಈ ಸಂಧರ್ಭದಲ್ಲಿ ಸಮಿತಿಯ ಪದಾಧಿಕಾರಿಗಳಾದ ರಗಡಪ್ಪ ಹೊಸಳ್ಳಿ, ರಾಮಣ್ಣ ರುದ್ರಾಕ್ಷಿ, ಮಂಜುನಾಥ ಚನ್ನಾದಾಸರ, ಮುತ್ತಣ್ಣ ಹೊಸಳ್ಳಿ, ತಿಪ್ಪೇಶ್, ಜಂಬಣ್ಣ ಮತ್ತಿತರರು ಇದ್ದರು.


ಪ್ರಶಸ್ತಿ ಸಮಾರಂಭ ೨೦೨೫ನೇ ಮೇ-೦೩ ರಂದು ಕಾಸರಗೋಡು ಜಿಲ್ಲೆಯ ಸೀತಾಂಗೋಳಿ ಎಲೈನ್ಸ್ ಸಭಾಂಗಣದಲ್ಲಿ ಸ್ವಾಗತ ಸಮಿತಿಯ ಅಧ್ಯಕ್ಷ ಕೆ.ಕೆ ಶೆಟ್ಟಿ ಕುತ್ತಿಕಾರ್ ಇವರ ಅಧ್ಯಕ್ಷತೆಯಲ್ಲಿ ನಡೆಯುವ ಸಮಾರಂಭದಲ್ಲಿ ಕರ್ನಾಟಕ ವಿಧಾನ ಪರಿಷತ್ತಿನ ಸಭಾಪತಿ ಬಸವರಾಜ್ ಹೊರಟ್ಟಿ, ಕರ್ನಾಟಕದ ಕೃಷಿ ಸಚಿವ ಚೆಲುವರಾಯ ಸ್ವಾಮಿ, ಅರಣ್ಯ ಸಚಿವ ಈಶ್ವರ ಖಂಡ್ರೆ ಹಾಗೂ ಕರ್ನಾಟಕ ಗಡಿ ಪ್ರದೇಶಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಸೋಮಣ್ಣ ಬೇವಿನಮರದ, ಕರ್ನಾಟಕದ ಮುಖ್ಯಮಂತ್ರಿಗಳ ಮಾಧ್ಯಮ ಸಲಹೆಗಾರ ಕೆ.ವಿ ಪ್ರಭಾಕರ್, ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಶಿವಾನಂದ ತಗಡೂರು ಮುಂತಾದ ಗಣ್ಯರು ಸೇರಿ ಪ್ರಶಸ್ತಿ ಪ್ರಧಾನಿಸುವರು ಎಂದು ಕಾಸರಗೋಡು ಜಿಲ್ಲಾ ಕನ್ನಡ ಪತ್ರಕರ್ತರ ಕ್ಷೇಮಾಭಿವೃದ್ಧಿ ಸಂಘದ ತಿಳಿಸಿದೆ.


 

ಮೇ-೧ ಕಾರ್ಮಿಕ ದಿನಾಚರಣೆಯಂದು ಸಿ.ಐ.ಟಿ.ಯು ನೂತನ ಪ್ರಣಾಳಿಕೆ

ಗಂಗಾವತಿ: ವ್ಯವಸ್ಥಿತ ಬಿಕ್ಕಟ್ಟಿನಲ್ಲಿ ಮುಳುಗಿರುವ ನವ ಉದಾರವಾದಿ ಬಂಡವಾಳಶಾಹಿ ವ್ಯವಸ್ಥೆಯ ಆಕ್ರಮಣಕಾರಿ ದಾಳಿಯ ವಿರುದ್ಧ ಮತ್ತು ಕಷ್ಟಪಟ್ಟು ಗಳಿಸಿದ ಹಕ್ಕುಗಳನ್ನು ರಕ್ಷಿಸಲು ಸಮರಧೀರವಾಗಿ ಹೋರಾಡುತ್ತಿರುವ ವಿಶ್ವದ ದುಡಿಯುವ ಜನರಿಗೆ ಸಿಐಟಿಯು ಕ್ರಾಂತಿಕಾರಿ ಶುಭಾಶಯಗಳನ್ನು ಕೋರುತ್ತಾ, ಮೇ-೧ ಗುರುವಾರ ಅಂತರಾಷ್ಟ್ರೀಯ ಕಾರ್ಮಿಕ ದಿನಾಚರಣೆಯಂದು ಸಿಐಟಿಯು ದುಡಿಯುವ ವರ್ಗದ ಅಂತರಾಷ್ಟ್ರೀಯತೆಗೆ ತನ್ನ ಬದ್ಧತೆಯನ್ನು ಹೊಂದಿ ಶೋಷಣೆ, ತಾರತಮ್ಯದ ವಿರುದ್ಧ, ಶಾಂತಿ ಮತ್ತು ಸಾಮರಸ್ಯಕ್ಕಾಗಿ ಎಲ್ಲಾ ದುಡಿಯುವ ಜನರ ಹೋರಾಟಗಳಲ್ಲಿ ಅವರೊಂದಿಗೆ ಒಗ್ಗೂಡಿ ನೂತನ ಪ್ರಣಾಳಿಕೆಯನ್ನು ತಂದಿದೆ ಎಂದು ಸಿ.ಐ.ಟಿ.ಯು.ನ ಜಿಲ್ಲಾಧ್ಯಕ್ಷರಾದ ನಿರುಪಾದಿ ಬೆಣಕಲ್ ಪ್ರಕಟಣೆಯಲ್ಲಿ ತಿಳಿಸಿದರು.

ಅವರು ಮೇ-೧ ವಿಶ್ವ ಕಾರ್ಮಿಕ ದಿನಾಚರಣೆ ಕಾರ್ಯಕ್ರಮವನ್ನು ನಗರದ ಶ್ರೀ ಚನ್ನಬಸವ ಕಲಾಮಂದಿರದಲ್ಲಿ ಆಯೋಜಿಸಿ ಮಾತನಾಡಿದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಬಿಸಿಯೂಟ ಸಂಘಟನೆಯ ರಾಜ್ಯಾಧ್ಯಕ್ಷರಾದ ಲಕ್ಷ್ಮೀದೇವಿ ಸೋನಾರ್ ವಹಿಸಿದ್ದರು.

ಇದೇ ಸಂದರ್ಭದಲ್ಲಿ ಸಿ.ಐ.ಟಿ.ಯು ರಾಜ್ಯ ಅಧ್ಯಕ್ಷರಾದ ಎಸ್. ವರಲಕ್ಷ್ಮೀಯವರು ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿ, ಕೇಂದ್ರ ಕಾರ್ಮಿಕ ಸಂಘಗಳು ಮತ್ತು ಸ್ವತಂತ್ರ ವಲಯ ಒಕ್ಕೂಟಗಳ ಜಂಟಿ ವೇದಿಕೆಯಡಿಯಲ್ಲಿ ೨೦೨೫ರ ಮೇ ೨೦ ರಂದು ನಡೆಯಲಿರುವ ಅಖಿಲ ಭಾರತ ಸಾರ್ವತ್ರಿಕ ಮುಷ್ಕರಕ್ಕೆ ಸಜ್ಜಾಗುತ್ತಿರುವ ಭಾರತದ ಕಾರ್ಮಿಕ ವರ್ಗವನ್ನು ಸಿಐಟಿಯು ಅಭಿನಂದಿಸುತ್ತದೆ. ಈ ಮುಷ್ಕರವು ದುಡಿಯುವ ಜನರ ಹಕ್ಕುಗಳು ಮತ್ತು ಜೀವನೋಪಾಯದ ಮೇಲೆ ಆಡಳಿತ ವರ್ಗಗಳ ಕ್ರೂರ ದಾಳಿಯ ವಿರುದ್ಧ ಭಾರತೀಯ ಕಾರ್ಮಿಕ ವರ್ಗದ ಅತಿದೊಡ್ಡ ಕ್ರಮವಾಗಲಿದೆ. ದೇಶದ ವರ್ಗ ಆಧಾರಿತ ಕಾರ್ಮಿಕ ಸಂಘವಾಗಿ, ಸಿಐಟಿಯು ಈ ಸಾರ್ವತ್ರಿಕ ಮುಷ್ಕರವನ್ನು ಕಾರ್ಮಿಕ ವರ್ಗದ ನೇತೃತ್ವದಲ್ಲಿ ಹೊಸ ಹಂತದ ಪ್ರತಿದಾಳಿಯ ಆರಂಭವನ್ನಾಗಿ ಮಾಡುವ ಐತಿಹಾಸಿಕ ಕಾರ್ಯವನ್ನು ಕೈಗೆತ್ತಿಕೊಂಡಿದೆ. ಇಂದಿನ ಹೋರಾಟವು ರಾಷ್ಟ್ರೀಯ ಆರ್ಥಿಕತೆಯ ಮೇಲಿನ ಕಾರ್ಪೊರೇಟ್ ಲೂಟಿಯ ವಿರುದ್ಧವಾಗಿದೆ; ಇದು ದುಡಿಯುವ ಜನರ ಮೂಲಭೂತ ಪ್ರಜಾಪ್ರಭುತ್ವ, ಸಾಂವಿಧಾನಿಕ ಮತ್ತು ಕಷ್ಟಪಟ್ಟು ಗೆದ್ದ ಕೆಲಸದ ಸ್ಥಳದಲ್ಲಿನ ಹಕ್ಕುಗಳ ಮೇಲಿನ ದಾಳಿಯ ವಿರುದ್ಧವಾಗಿದೆ. ಸಾಮ್ರಾಜ್ಯಶಾಹಿ ಮತ್ತು ಬಲಪಂತೀಯ ನವ-ಫ್ಯಾಸಿಸ್ಟ್ ರಾಜಕೀಯ ಶಕ್ತಿಗಳ ವಿರುದ್ಧ ವಿವಿಧ ರಾಷ್ಟ್ರಗಳಲ್ಲಿ ದಿಟ್ಟ ಹೋರಾಟಗಳನ್ನು ಸಂಘಟಿಸಿದ್ದಕ್ಕಾಗಿ ವಿಶ್ವ ಕಾರ್ಮಿಕ ಸಂಘಗಳ ಒಕ್ಕೂಟದ (ಡಬ್ಲ್ಯೂ.ಎಫ್.ಟಿ.ಯು) ನೇತೃತ್ವದಲ್ಲಿ ಅಂತರಾಷ್ಟ್ರೀಯ ವರ್ಗಾಧಾರಿತ ಕಾರ್ಮಿಕ ವರ್ಗ ಚಳುವಳಿಯನ್ನು ಸಿಐಟಿಯು ಬೆಂಬಲಿಸುತ್ತದೆ ಮತ್ತು ಅಭಿನಂದಿಸುತ್ತದೆ. ಸಮಾಜವಾದದ ಧ್ವಜವನ್ನು ಎತ್ತರಕ್ಕೆ ಎತ್ತಿ ಹಿಡಿದಿದ್ದಕ್ಕಾಗಿ ಚೀನಾ, ಕ್ಯೂಬಾ, ವಿಯೆಟ್ನಾಂ, ಲಾವೋಸ್ ಮತ್ತು ಉತ್ತರ ಕೊರಿಯಾದ ಸಮಾಜವಾದಿ ದೇಶಗಳ ಕಾರ್ಮಿಕ ವರ್ಗವನ್ನು ಸಿಐಟಿಯು ಅಭಿನಂದಿಸುತ್ತದೆ. ಸಮಾಜವಾದಿ ರಾಷ್ಟ್ರಗಳು ಹಾಗೂ ಸಮಾಜವಾದವನ್ನು ರಕ್ಷಿಸಲು, ಸಾಮ್ರಾಜ್ಯಶಾಹಿ ಕುತಂತ್ರಗಳನ್ನು ವಿರೋಧಿಸುತ್ತಾ ತಮ್ಮ ಜನರ ಜೀವನ ಮಟ್ಟವನ್ನು ಸುಧಾರಿಸಲು ತಮ್ಮ ಕೈಲಾದಷ್ಟು ಪ್ರಯತ್ನಿಸುತ್ತಿವೆ. ಈ ನಿಟ್ಟಿನಲ್ಲಿ ಕಾರ್ಮಿಕರ ಶ್ರೇಯೋಭಿವೃದ್ಧಿಗಾಗಿ ಸಿ.ಐ.ಟಿ.ಯು ಹೋರಾಟದಲ್ಲಿ ಹೊಸ ಪ್ರಣಾಳಿಕೆಯನ್ನು ತಂದಿದೆ ಎಂದರು.

ಕಾರ್ಯಕ್ರಮದ ನಿರ್ವಹಣೆಯನ್ನು ಸಿ.ಐ.ಟಿ.ಯು ತಾಲೂಕ ಕಾರ್ಯದರ್ಶಿ ಮಂಜುನಾಥ ಡಗ್ಗಿ ಅಚ್ಚುಕಟ್ಟಾಗಿ ನಡೆಸಿದರು. ಈ ಸಂದರ್ಭದಲ್ಲಿ ಸಿ.ಐ.ಟಿ.ಯು ನ ನೂರಾರು ಸದಸ್ಯರು ಪಾಲ್ಗೊಂಡಿದ್ದರು

ಕ್ರಾಂತಿಚಕ್ರ ಬಳಗದ ಕಾರ್ಯಾಲಯದಲ್ಲಿ ಬಸವ ಜಯಂತಿ ಆಚರಣೆ : ಭಾರಧ್ವಾಜ್

ಗಂಗಾವತಿ: ಏಪ್ರಿಲ್-೩೦ ಬುಧವಾರ ನಗರದ ಬಸ್ ನಿಲ್ದಾಣ ಹತ್ತಿರದ ಟಿ.ಎ.ಪಿ.ಸಿ.ಎಂ.ಎಸ್ ಬಿಲ್ಡಿಂಗ್‌ನಲ್ಲಿರುವ ಕ್ರಾಂತಿಚಕ್ರ ಬಳಗದ ಕಾರ್ಯಾಲಯದಲ್ಲಿ ಕರ್ನಾಟಕದ ಸಾಂಸ್ಕೃತಿಕ ನಾಯಕ ಬಸವೇಶ್ವರರ ಜಯಂತಿ ಆಚರಣೆ ಮಾಡಲಾಯಿತು ಎಂದು ಕ್ರಾಂತಿಚಕ್ರ ಬಳಗದ ರಾಜ್ಯಾಧ್ಯಕ್ಷ ಭಾರಧ್ವಾಜ್ ಪ್ರಕಟಣೆಯಲ್ಲಿ ತಿಳಿಸಿದರು.

ಈ ಪ್ರಯುಕ್ತ ಬಸವೇಶ್ವರರ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿ ಮಾಲಾರ್ಪಣೆ ಮಾಡುವ ಮೂಲಕ, ಅವರ ಸಮಾನತೆ ತತ್ವಗಳ ಕುರಿತು ತಿಳಿಸಲಾಯಿತು.

ಈ ಸಂದರ್ಭದಲ್ಲಿ ವಿದ್ಯಾರ್ಥಿ ಮುಖಂಡ ಇಂಕಿಲಾಬಿ ಫಯಾಜ್ ಸರಾಜಿದಾರ, ಕೊಪ್ಪಳ ಜಿಲ್ಲಾ ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರ ಸಂಘದ ಅಧ್ಯಕ್ಷರಾದ ಇಬ್ರಾಹಿಂ ಮೇಸ್ತ್ರಿ, ಉಪಾಧ್ಯಕ್ಷ ಹನುಮಂತ ಚೌಡಪ್ಪ, ಪ್ರಧಾನ ಕಾರ್ಯದರ್ಶಿ ಮಹೆಬೂಬಸಾಬ್ ಲಾಠಿ, ಜಂಟಿ ಕಾರ್ಯದರ್ಶಿ ಚಾಂದ್‌ಪಾಷಾ ಮುರಾಹರಿನಗರ, ಸದಸ್ಯರುಗಳಾದ ಹುಲ್ಲೇಶ, ಜಗದೇಶ ಮೇಸ್ತ್ರಿ, ಸೋಮು ಜಿ. ಸೇರಿದಂತೆ ಇತರರು ಪಾಲ್ಗೊಂಡಿದ್ದರು.