ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಿ.ಸಿ ಟ್ರಸ್ಟ್ (ರಿ) ಗಂಗಾವತಿ ವತಿಯಿಂದ ಹಿರೇಬೆಣಕಲ್ ನಲ್ಲಿ ರೈತಕ್ಷೇತ್ರ ತರಬೇತಿ ಕಾರ್ಯಾಗಾರ

ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಿ.ಸಿ ಟ್ರಸ್ಟ್ (ರಿ) ಗಂಗಾವತಿ ವತಿಯಿಂದ ಹಿರೇಬೆಣಕಲ್ ಗ್ರಾಮದಲ್ಲಿ ರೈತರಿಗಾಗಿ ರೈತ ಕ್ಷೇತ್ರ ತರಬೇತಿ ಕಾರ್ಯಾಗಾರ ನಡೆಸಲಾಯಿತು. ಗಿಡಕ್ಕೆ ನೀರು ಹಾಕುವ ಮೂಲಕ ಕಾರ್ಯಾಗಾರ ಉದ್ಘಾಟನೆ ಮಾಡಿದ ವೆಂಕಟಗಿರಿ ಹೋಬಳಿ ರೈತ ಸಂಪರ್ಕ ಕೇಂದ್ರದ ಕೃಷಿ ಅಧಿಕಾರಿ ಹರೀಶಕುಮಾರ S G ಯವರು ರೈತರಿಗೆ ಸ್ಥಳೀಯವಾಗಿ ಕಾಲಾನುಸಾರ ಬೆಳೆಯುವ ಬೆಳೆಗಳಲ್ಲಿನ ರೋಗಗಳ ಹತೋಟಿ ಕ್ರಮದ ಕುರಿತು, ಭತ್ತದಲ್ಲಿನ ಕಾಂಡ ಕೊರಕ ಹೂಳುಗಳ ನಿಯಂತ್ರಣದ ಕುರಿತು, ಕೃಷಿ ಇಲಾಖೆಯಲ್ಲಿ ದೊರಕುವ ವಿವಿಧ…

Read More
ಗಂಗಾವತಿ ತಾಲೂಕಿನ ಆಚಾರನರಸಾಪೂರದಲ್ಲಿ ಮರಳಿ ಕ್ಲಸ್ಟರ್‌ನ ಕಲಿಕಾ ಹಬ್ಬ ಅದ್ದೂರಿ ಆಚರಣೆ

ಗಂಗಾವತಿ ತಾಲೂಕಿನ ಆಚಾರನರಸಾಪೂರದಲ್ಲಿ ಮರಳಿ ಕ್ಲಸ್ಟರ್‌ನ ಕಲಿಕಾ ಹಬ್ಬ ಅದ್ದೂರಿ ಆಚರಣೆ

ಗಂಗಾವತಿ: ಇತ್ತೀಚೆಗೆ ಫೆಬ್ರವರಿ-೨೧ ರಂದು ಮರಳಿ ಕ್ಲಸ್ಟರ್‌ನ ಕಲಿಕಾ ಹಬ್ಬವನ್ನು ತಾಲೂಕಿನ ಆಚಾರ ನರಸಾಪುರ ಗ್ರಾಮದ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಸಂಭ್ರಮ ಹಾಗೂ ಸಡಗರದಿಂದ ಆಚರಿಸಲಾಯಿತು ಎಂದು ಮರಳಿ ಕ್ಲಸ್ಟರ್‌ನ ಸಮೂಹ ಸಂಪನ್ಮೂಲ ವ್ಯಕ್ತಿಗಳಾದ ಮಹೇಶ ಕೆ.ಎಂ ರವರು ಪ್ರಕಟಣೆಯಲ್ಲಿ ತಿಳಿಸಿದರು. ಅವರು ಈ ಕಲಿಕಾ ಹಬ್ಬದಲ್ಲಿ ಶಿಕ್ಷಣ ಪ್ರೇಮಿ ನಾಗರಾಜ ಬರಗೂರು ಹಾಗೂ ಶಾಲೆಯ ಮುಖ್ಯೋಪಾಧ್ಯಾಯರ ನೇತೃತ್ವದಲ್ಲಿ ಶಾಲೆಯ ಎಲ್ಲಾ ಮಕ್ಕಳಿಗೆ ನೋಟ್ ಬುಕ್ ವಿತರಣೆ ಮಾಡಿ ಮಾತನಾಡಿದರು. ಕಾರ್ಯಕ್ರಮದ ಉದ್ಘಾಟನೆಯನ್ನು ಕಾರಟಗಿ ವಲಯದ…

Read More
ಶಂಕರ ಮಠದಲ್ಲಿ ನೂತನ ಉಪಕರ್ಮ ಹಾಗೂ ಜನಿವಾರ ಧಾರಣೆ.

ಶಂಕರ ಮಠದಲ್ಲಿ ನೂತನ ಉಪಕರ್ಮ ಹಾಗೂ ಜನಿವಾರ ಧಾರಣೆ.

ಗಂಗಾವತಿ: ಶಂಕರ ಮಠದಲ್ಲಿ ನೂಲು ಹುಣ್ಣಿಮೆಯ ಪ್ರಯುಕ್ತ, ನೂತನ ಉಪಕರ್ಮ ಹಾಗೂ ಜನಿವಾರಧಾರಣೆ ಧಾರ್ಮಿಕವಾಗಿ ನೆರವೇರಿತು. ಈ ಸಂದರ್ಭದಲ್ಲಿ ಉಪನಯನಗೊಂಡ ಎರಡು ಮಕ್ಕಳಿಗೆ ಉಪಕರ್ಮ ಹಾಗೂ ಸಮಾಜ ಬಾಂಧವರ ಜನಿವಾರಧಾರಣೆ ವಿಧಿಗಳನ್ನು ವೇದಮೂರ್ತಿ ಮಹೇಶ್ ಭಟ್ ಜೋಶಿ ನೆರವೇರಿಸಿದರು. ವೇದಮೂರ್ತಿ ಮಹೇಶ್ ಭಟ್ ಜೋಶಿ ಅವರು, ಸನಾತನ ಸಂಸ್ಕೃತಿಯಲ್ಲಿ ಆಶ್ರಮ ಧರ್ಮಗಳು ಹಿಂದಿನ ಕಾಲದಲ್ಲಿ ಅತ್ಯಂತ ಮಹತ್ವದ್ದಾಗಿದ್ದವು ಎಂದು ಹೇಳಿದರು. ಉಪನಯನಗೊಂಡ ವಟುಗಳಿಗೆ ಶಿಕ್ಷಣ ಕಲಿಯುವ ಅವಕಾಶ ದೊರಕುತ್ತಿದ್ದ ಪರಂಪರೆ ಇಂದಿಗೂ ಜೀವಂತವಾಗಿದೆ ಎಂದು ಅವರು ಉಲ್ಲೇಖಿಸಿದರು….

Read More
ಆಗಸ್ಟ್-೨೪ ರವಿವಾರ ಉದ್ಘಾಟನೆಗೊಂಡ ಶ್ರೀ ರೇಣುಕಾ ಹುಲಿಗೆಂಬಾ ದೇವಿ ಸಮುದಾಯ ಭವನ.

ಆಗಸ್ಟ್-೨೪ ರವಿವಾರ ಉದ್ಘಾಟನೆಗೊಂಡ ಶ್ರೀ ರೇಣುಕಾ ಹುಲಿಗೆಂಬಾ ದೇವಿ ಸಮುದಾಯ ಭವನ.

ಗಂಗಾವತಿ: ಸಮಾಜಗಳ ಅಭಿವೃದ್ಧಿಗೆ ಒಗ್ಗಟ್ಟು ಅವಶ್ಯವಾಗಿದೆ. ಒಗ್ಗಟ್ಟಿನಿಂದ ಸಮಾಜವು ಶೈಕ್ಷಣಿಕವಾಗಿ, ಧಾರ್ಮಿಕವಾಗಿ, ಸಾಮಾಜಿಕವಾಗಿ ಅಭಿವೃದ್ಧಿ ಸಾಧ್ಯ ಎಂದು ಮಾಜಿ ಶಾಸಕ ಪರಣ್ಣ ಮುನವಳ್ಳಿ ಹೇಳಿದರು. ಅವರು ರವಿವಾರ ನಗರದ ಮಾರುತೇಶ್ವರನಗರ ಉಪ್ಪಿನಮಾಳಿ ಕ್ಯಾಂಪಿನಲ್ಲಿರುವ ಶ್ರೀರೇಣುಕಾ ಹುಲಿಗೆಂಬಾ ದೇವಿ ಸಮುದಾಯ ಭವನವನ್ನು ಉದ್ಘಾಟಿಸಿ ಮಾತನಾಡಿದರು. ಈ ಹಿಂದೆ ಶಾಸಕರಾಗಿದ್ದ ಸಮಯದಲ್ಲಿ ಸರ್ವ ವರ್ಗಗಳ ಅಭಿವೃದ್ಧಿಗೆ ಪ್ರಾಮಾಣಿಕ ಪ್ರಯತ್ನ ಮಾಡಲಾಗಿದ್ದು, ಸದರಿ ಸಮುದಾಯ ಭವನಕ್ಕೆ ಮೂರು ಲಕ್ಷ ಅನುದಾನವನ್ನು ನೀಡಲಾಗಿದೆ ಎಂದು ಸ್ಮರಿಸಿದರು. ಅಲ್ಲದೆ ಎಲ್ಲರೂ ಮಕ್ಕಳಿಗೆ ಉತ್ತಮ ಶಿಕ್ಷಣ…

Read More

ಡಿಸೆಂಬರ್-೧೯ ಗುರುವಾರ ಮುಸ್ಟೂರು ಗ್ರಾಮದಲ್ಲಿ ಉಚಿತ ಆರೋಗ್ಯ, ನೇತ್ರ ತಪಾಸಣೆ ಹಾಗೂ ಕಣ್ಣಿನ ಪೊರೆ ಶಸ್ತ್ರಚಿಕಿತ್ಸಾ ಶಿಬಿರ

ಗಂಗಾವತಿ: ಲಯನ್ ಕ್ಲಬ್ ಗಂಗಾವತಿ, ಭಾರತೀಯ ವೈದ್ಯಕೀಯ ಸಂಘ (ಐ.ಎಂ.ಎ) ಗಂಗಾವತಿ, ವೈದೇಹಿ ಆಸ್ಪತ್ರೆ ಬೆಂಗಳೂರು, ಕೆ.ಎಸ್. ಆಸ್ಪತ್ರೆ, ಕೊಪ್ಪಳ, ಲಯನ್ ಕಣ್ಣಿನ ಆಸ್ಪತ್ರೆ, ಕೊಪ್ಪಳ, ಐದೃಷ್ಟಿ ಕಣ್ಣಿನ ಆಸ್ಪತ್ರೆ, ಹೊಸಪೇಟೆ, ಶುಭಶ್ರೀ ಪಾರ್ಮಾಸ್ಯೂಟಿಕಲ್ಸ್, ಕನಕಗಿರಿ, ಶ್ರೀ ಸ್ವಾಮಿ ವಿವೇಕಾನಂದ ಸೇವಾ ಸಂಘ (ರಿ) ಶ್ರೀರಾಮನಗರ, ಜಿಲ್ಲಾ ಅಂಧತ್ವ ನಿವಾರಣಾ ಸಂಘ ಕೊಪ್ಪಳ, ಪ್ರಾಥಮಿಕ ಆರೋಗ್ಯ ಕೇಂದ್ರ ಮುಸ್ಟೂರು ಹಾಗೂ ಮುಸ್ಟೂರು ಗ್ರಾಮದ ಸಮಸ್ತ ಗ್ರಾಮಸ್ಥರ ಸಂಯುಕ್ತಾಶ್ರಯದಲ್ಲಿ ಕಾರಟಗಿ ತಾಲೂಕಿನ ಮುಸ್ಟೂರು ಗ್ರಾಮದ ಸರಕಾರಿ ಹಿರಿಯ ಪ್ರಾಥಮಿಕ…

Read More
ಅನ್ನಪೂರ್ಣೇಶ್ವರಿ ಕಲಾಸಂಘ ೧೦ನೇ ವಾರ್ಷಿಕೋತ್ಸವದ ಪೌರಾಣಿಕ ನಾಟಕೋತ್ಸವ

ಅನ್ನಪೂರ್ಣೇಶ್ವರಿ ಕಲಾಸಂಘ ೧೦ನೇ ವಾರ್ಷಿಕೋತ್ಸವದ ಪೌರಾಣಿಕ ನಾಟಕೋತ್ಸವ

ಹಾಸನದ ಶ್ರೀ ಅನ್ನಪೂರ್ಣೇಶ್ವರಿ ಕಲಾಸಂಘದ ೧೦ನೇ ವರ್ಷದ ವಾರ್ಷಿಕೋತ್ಸವ ಅಂಗವಾಗಿ ಜುಲೈ ೪ ರಿಂದ ೯ ವರೆಗೆ ೬ ದಿನ ಪೌರಾಣಿಕ ನಾಟಕೋತ್ಸವವನ್ನು ಹಾಸನದ ಹಾಸನಾಂಬ ಕಲಾಕ್ಷೇತ್ರದಲ್ಲಿ ಏರ್ಪಡಿಸಲಾಗಿದೆ ಎಂದು ಸಂಘದ ಅಧ್ಯಕ್ಷ ಡಿ.ವಿ.ನಾಗಮೋಹನ್ ತಿಳಿಸಿದ್ದಾರೆ. ೪ನೇ ತಾರೀಕು ಶುಕ್ರವಾರ ಪಿ. ಎಂ. ಮಲ್ಲೇಶ್‌ಗೌಡ್ರು, ರಂಗಸ್ವಾಮಿ ಇವರ ಶ್ರೀ ಚಾಮುಂಡೇಶ್ವರಿ ಕಲಾಸಂಘ, ಹಾಸನ ತಂಡದಿಂದ ಸಂಪೂರ್ಣ ರಾಮಾಯಣ ನಾಟಕ. ೫ನೇ ತಾರೀಕು ಶನಿವಾರ ಚಂದ್ರಶೇಖರ್ ಸಿಗರನಹಳ್ಳಿ, ಮಂಜು ತಟ್ಟೇಕೆರೆ ಇವರ ಶ್ರೀ ಲಕ್ಷ್ಮೀ ರಂಗನಾಥ ಸಾಂಸ್ಕೃತಿಕ ಕಲಾಸಂಘ,…

Read More
ಅಪಾರ ಭಕ್ತಸಮೂಹ ಹೊಂದಿದ ಪೂಜ್ಯ ದೊಡ್ಡ ಯಮನೂರಪ್ಪ ನವಣಕ್ಕಿಯವರ ನಿಧನ: ಭಕ್ತ ಸಮೂಹ ಸಂತಾಪ

ಅಪಾರ ಭಕ್ತಸಮೂಹ ಹೊಂದಿದ ಪೂಜ್ಯ ದೊಡ್ಡ ಯಮನೂರಪ್ಪ ನವಣಕ್ಕಿಯವರ ನಿಧನ: ಭಕ್ತ ಸಮೂಹ ಸಂತಾಪ

ಗಂಗಾವತಿ: ಗಂಗಾವತಿಯ ದೈವೀ ಪುರುಷ ಪೂಜ್ಯನೀಯ ಲಿಂಗೈಕ್ಯ ಶ್ರೀ ನವಣಕ್ಕಿ ನಾಗಪ್ಪ ತಾತನವರ ಹಿರಿಯ ಸುಪುತ್ರರಾದ ಪೂಜ್ಯನೀಯ ಶ್ರೀ ದೊಡ್ಡ ಯಮನಪ್ಪ ನವಣಕ್ಕಿಯವರು ತಂದೆಯವರ ಮಾರ್ಗದಲ್ಲಿಯೇ ಸೇವೆಯನ್ನು ಸಲ್ಲಿಸಿ ಅಪಾರ ಸಂಖ್ಯೆಯ ಭಕ್ತರನ್ನು ಸಂಪಾದಿಸಿಕೊಂಡಿದ್ದು, ಅವರು ಭಾನುವಾರ ರಾತ್ರಿ ೯ ರ ಸುಮಾರಿನಲ್ಲಿ ಲಿಂಗೈಕ್ಯರಾಗಿದ್ದಾರೆ. ಇವರ ಅಂತಿಮ ಸಂಸ್ಕಾರವು ಮಾರ್ಚ್-೨೪ ಸೋಮವಾರ ಗಂಗಾವತಿಯ ಜುಲೈನಗರದ ಬೈಪಾಸ್ ರಸ್ತೆಯ ರುದ್ರಭೂಮಿಯಲ್ಲಿ ನೆರವೇರಿತು. ಪೂಜ್ಯರ ಆತ್ಮಕ್ಕೆ ಶಾಂತಿ ಸಿಗಲೆಂದು ಕುರುಹಿನಶೆಟ್ಟಿ ಸಮಾಜದ ಯಜಮಾನರುಗಳು, ಎಂ. ಮಲ್ಲಿಕಾರ್ಜುನ ನಾಗಪ್ಪ, ಚೆಗೂರು ಶ್ಯಾಮಣ್ಣ,…

Read More
ಕಲಿಯುಗದ ಕಾಮಧೇನು ಕಲ್ಪವೃಕ್ಷ ಶ್ರೀ ರಾಘವೇಂದ್ರ ಸ್ವಾಮಿಗಳವರ ಭವ್ಯ ರಥೋತ್ಸವ….

ಕಲಿಯುಗದ ಕಾಮಧೇನು ಕಲ್ಪವೃಕ್ಷ ಶ್ರೀ ರಾಘವೇಂದ್ರ ಸ್ವಾಮಿಗಳವರ ಭವ್ಯ ರಥೋತ್ಸವ….

ಗಂಗಾವತಿಯ 12 ಭಕ್ತರ ಇಷ್ಟಾರ್ಥಗಳನ್ನು ಪೂರೈಸುವ ಕಲಿಯುಗದ ಕಾಮಧೇನು ಕಲ್ಪವೃಕ್ಷ ಮಂತ್ರಾಲಯದ ಶ್ರೀ ರಾಘವೇಂದ್ರ ಮಹಾಸ್ವಾಮಿಗಳವರ 354ನೆಯ ಆರಾಧನಾ ಮಹೋತ್ಸವದ ಅಪಾರ ಭಕ್ತಾದಿಗಳ ಮಧ್ಯೆ ಶ್ರದ್ಧೆ ಭಕ್ತಿಯಿಂದ ಮಂಗಳವಾರದಂದು ಜರುಗಿತು. ಶ್ರೀಮಠದ ಆವರಣದಿಂದ ಹೊರಟ ರಥೋತ್ಸವ ಶ್ರೀ ನಗರೇಶ್ವರ ದೇವಸ್ಥಾನದವರೆಗೆ ಆಗಮಿಸಿ ಮರಳಿತು. ಈ ಸಂದರ್ಭದಲ್ಲಿ ರಾಜಮಾರ್ಗ ಉದ್ದಕ್ಕೂ ಭಕ್ತರು ಉತ್ತತ್ತಿ, ನಾಣ್ಯಗಳನ್ನು ಸಮರ್ಪಿಸಿ ಆರತಿಯನ್ನು ಬೆಳಗಿ ತಮ್ಮ ಭಕ್ತಿ ಭಾವವನ್ನು ವ್ಯಕ್ತಪಡಿಸಿದರು. ರಥೋತ್ಸವದ ರಾಜಮಾರ್ಗದ ಉದ್ದಕ್ಕೂ ವೇದ ಮಂತ್ರ ಘೋಷ, ಭಜನೆ, ನೃತ್ಯ ಗಳಿಂದ ಜನರಲ್ಲಿ…

Read More

ಡಾ. ವಿಷ್ಣುವರ್ಧನ್ ಪುಣ್ಯ ಸ್ಮರಣೋತ್ಸವ. ಕನ್ನಡ ಚಿತ್ರರಂಗದ ರಾಷ್ಟ್ರೀಯ ಅಂತರಾಷ್ಟ್ರೀಯ ಮಟ್ಟಕ್ಕೆ ಬೆಳೆಯಲು ಡಾ. ವಿಷ್ಣುವರ್ಧನ್ ಅವರೂ ಸಹ ಕಾರಣರಾಗಿದ್ದಾರೆ: ಪರಣ್ಣ ಮುನವಳ್ಳಿ. * ವಿಷ್ಣುವರ್ಧನ್ ಸರ್ಕಲ್ ಹಾಗೂ ಪುತ್ಥಳಿ ನಿರ್ಮಾಣಕ್ಕೆ ಭೂಮಿ ಪೂಜೆ. * ಡಾ. ವಿಷ್ಣುವರ್ಧನ್ ಪುಣ್ಯಸ್ಮರಣೆ ನಿಮಿತ್ಯ ವಿಶೇಷ ಪೂಜೆ, ಅಭಿಮಾನಿಗಳಿಗೆ ಅನ್ನ ಸಂತರ್ಪಣೆ.

ಗಂಗಾವತಿ: ಕನ್ನಡ ಚಿತ್ರರಂಗವನ್ನು ರಾಷ್ಟ್ರ ಮತ್ತು ಅಂತರಾಷ್ಟ್ರೀಯ ಮಟ್ಟದಲ್ಲಿ ಬೆಳೆಸಲು ಮೇರು ನಟ ಸಾಹಸಸಿಂಹ ಕಲಿಯುಗದ ಕರ್ಣ ಎಂದು ಖ್ಯಾತರಾಗಿದ್ದ ಡಾ. ವಿಷ್ಣುವರ್ಧನ್ ಅವರು ಸಹ ಪ್ರಮುಖ ಕಾರಣರಾಗಿದ್ದಾರೆಂದು ಮಾಜಿ ಶಾಸಕ ಪರಣ್ಣ ಮುನವಳ್ಳಿ ಹೇಳಿದರು. ಅವರು ನಗರದ ಡಾ. ವಿಷ್ಣುವರ್ಧನ್ ಸರ್ಕಲ್ ನಲ್ಲಿ ಡಾ. ವಿಷ್ಣುವರ್ಧನ್ ಅವರ 15ನೆಯ ಪುಣ್ಯ ಸ್ಮರಣೋತ್ಸವ ಕಾರ್ಯಕ್ರಮದ ನಿಮಿತ್ಯ ವಿಶೇಷ ಪೂಜೆ ಮತ್ತು ಡಾ. ವಿಷ್ಣುವರ್ಧನ್ ಅವರ ಪುತ್ಥಳಿ ವೃತ್ತ ನಿರ್ಮಾಣಕ್ಕೆ ಭೂಮಿ ಪೂಜೆ ಮಾಡಿ ಮಾತನಾಡಿದರು. ನಾನು ಸಹ…

Read More
ಬದುಕು ‘ಹಾವು-ಏಣಿಯಾಟ ಜಯಪ್ಪ ಹೊನ್ನಾಳಿ

ಬದುಕು ‘ಹಾವು-ಏಣಿಯಾಟ ಜಯಪ್ಪ ಹೊನ್ನಾಳಿ

ಬದುಕು ಹಾವು ಏಣಿಯಾಟ, ಅದರಲ್ಲಿ ದುರಾಸೆ, ದುಃಖ, ಜಾತಿ, ಮತ, ಕುಲ, ಧರ್ಮಗಳೆಂಬ ವಿಷಕಾರುವ ಹಾವುಗಳು ಜಾಸ್ತಿ, ‘ಬುದ್ಧ-ಬಸವ-ಅಂಬೇಡ್ಕರ್’ ಮುಂತಾದವರಿಲ್ಲಿ ಏಣಿಗಳು, ಆ ಏಣಿಗಳನ್ನು ಹಿಡಿದುಕೊಂಡು ನಾವು ಮೇಲೇರಬೇಕಾಗಿದೆ, ಅದರಲ್ಲೂ ಮುಖ್ಯವಾಗಿ ನಾವು ಅಂದರೆ ಬರೆವಣಿಗೆಯಲ್ಲಿ ತೊಡಗಿಸಿಕೊಂಡವರು, ಬರೆಯದ ಸಾವಿರಾರು ಜನರ ಪ್ರತಿನಿಧಿಗಳಾಗಿ, ಜಾತ್ಯತೀತರಾಗಿ ಜಗತ್ತಿಗೆ ಆದರ್ಶವಾಗಬೇಕಾಗಿದೆ, ತಾತೀತನಾಗದವನು, ಕುಲಾತೀತನಾಗದವನು ಎಂದಿಗೂ ಕವಿಯಾಗಲಾರ, ಮಮತೆ ಸಮತೆಗಳ ತನ್ನೆರಡೂ ಕಣ್ಣಾಗಿಸಿಕೊಂಡವ ಮಾತ್ರ ಕವಿಯಾಗಲು ಸಾಧ್ಯ, ರಾಜಕಾರಣಿಗಳ, ಮಂತ್ರಿ ಮಹೋದಯರ ಶಿಫಾರಸ್ಸಿನಿಂದ ಯಾರೇ ಕವಿಗೋಷ್ಠಿಯ ವೇದಿಕೆಗಳನ್ನೇರಿದರೂ, ಸಹೃದಯರೆದೆಯ ಸಿಂಹಾಸನವನ್ನೇರುವುದು ಅಸಾಧ್ಯ,…

Read More