
ಸಾರ್, ನನಗೆ ಹಾಡುವುದೆಂದರೆ ತುಂಬಾ ಇಷ್ಟ.ನಾನು ಅಶ್ವಿನಿ ಹರೀಶ್
ನನ್ನ ಹೆಸರು ಅಶ್ವಿನಿ ಹರೀಶ್. ನಾನು 25-4-1984 ರಂದು ಹೊನ್ನವಳ್ಳಿಯಲ್ಲಿ ಜನಿಸಿದ್ದೇನೆ. ಈ ಊರು ಚಲನಚಿತ್ರ ಹಾಸ್ಯನಟ ಹೊನ್ನವಳ್ಳಿ ಕೃಷ್ಣ ಅವರ ಹುಟ್ಟೂರು. ನನ್ನ ತಂದೆ-ತಾಯಿಗೆ ಎಂಟು ಮಂದಿ ಮಕ್ಕಳಿದ್ದು, ನಾನು ಏಳನೇ ಸ್ಥಾನದಲ್ಲಿದ್ದೇನೆ. ನಾನು ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಹಾಗೂ ಹೇಮಾವತಿ ಪ್ರೌಢಶಾಲೆಯಲ್ಲಿ 10ನೇ ತರಗತಿವರೆಗೆ ಓದಿದ್ದೇನೆ. ಚಿಕ್ಕಂದಿನಿಂದಲೇ ನನಗೆ ಹಾಡು ಹಾಡುವುದು ಬಹಳ ಇಷ್ಟವಾಗಿತ್ತು. ಶಾಲಾ ಕಾರ್ಯಕ್ರಮಗಳಲ್ಲಿ ನಾನು ಭಾಗವಹಿಸಿ ಬಹುಮಾನಗಳನ್ನು ಗಳಿಸಿದ್ದೆ. ಹೊಲದ ಹತ್ತಿರ ಕೆಲಸ ಮಾಡುವಾಗ ದನ ಮೇಯಿಸುವಾಗ ನನಗೆ…