ಭತ್ತದ ಕಣಜ ಗಂಗಾವತಿ ನಾಡಿನಲ್ಲಿ ಮಹಿಳಾ ಕರಾಟೆ ಕಲೆಯ ಕಲರವಕ್ಕೆ ಕನ್ನಡಿಯಾದ ಕಲ್ಯಾಣಿಯವರ ಸಾಹಸಗಾಥೆ
ಗಂಗಾವತಿ: ಮೊದಲನೆಯದಾಗಿ ನಾಡಿನ ಸಮಸ್ತ ಮಹಿಳೆಯರಿಗೆ ” ಅಂತರಾಷ್ಟ್ರೀಯ ಮಹಿಳಾ ದಿನಾಚರಣೆಯ ಶುಭಾಷಯಗಳು”. ಸಾಧನೆ ಮತ್ತು ಕಷ್ಟ ಒಂದೇ ನಾಣ್ಯದ ಎರಡು ಮುಖಗಳಾಗಿವೆ. ಕಷ್ಟ ತೊಂದರೆ ಇಲ್ಲದ ಸಾಧನೆಯನ್ನು ಕೊಂಡಾಡುವಾಗ ಸಮಾಜವು ‘ಸಾಧನೆ’ ಎಂದು ಕರೆಯುವುದಕ್ಕೆ ಲೆಕ್ಕವಿಲ್ಲದಷ್ಟು ಸಬೂಬನ್ನು ಲೇಪಿಸಿ ಸಾಧನೆಯ ಮೆರಗನ್ನೆ ಬರಿದು ಮಾಡುತ್ತದೆ. ಸಮಾಜದ ಲೆಕ್ಕ ಬಿಡಿ, ಸಾಧಕನ ಮನಸ್ಸೆ ಶ್ರಮವಿರದ, ಕಷ್ಟವಿರದ ಸಾಧನೆಯನ್ನು ಒಪ್ಪಿಕೊಳ್ಳುವದಿಲ್ಲ. ಅದರಲ್ಲಿಯೂ ಮಹಿಳೆಯರ ಸಾಧನೆಯ ಆದಿಯು ಪುರುಷರ ಸಾಧನೆಯ ಹಾದಿಗಿಂತಲೂ ಕಷ್ಟದಾಯಕವಾಗಿರುತ್ತದೆ. ಆಧುನಿಕ ಕಲ್ಯಾಣ ಸಮಾಜದಲ್ಲಿ ಸಮಾನತೆಯ ಮಂತ್ರದ…
