ಜೋಗದ ನಾರಾಯಣಪ್ಪ ನಾಯಕ್ ಅವರಿಗೆ ಪಂಪಾನಗರ ಗೃಹ ನಿರ್ಮಾಣ ಸಂಘದ ನೂತನ ಸದಸ್ಯರಿಂದ ಸನ್ಮಾನ
ಗಂಗಾವತಿ: ನಗರಸಭೆ ವ್ಯಾಪ್ತಿಯ ಒಂದನೇ ವಾರ್ಡ್ ಪಂಪಾನಗರ ಗೃಹ ನಿರ್ಮಾಣ ಮಂಡಳಿಯ ನೂತನ ಸದಸ್ಯರುಗಳಿಂದ ಗ್ರಾಮದೇವತೆ ಶ್ರೀ ದುರ್ಗಾದೇವಿಯ ದೇವಸ್ಥಾನ ಸಮಿತಿಯ ಅಧ್ಯಕ್ಷ ನಾರಾಯಣಪ್ಪ ನಾಯಕ ಅವರಿಗೆ ಆತ್ಮೀಯವಾಗಿ ಸನ್ಮಾನಿಸಿ ಗೌರವಿಸಿದರು. ಈ ಸಂದರ್ಭದಲ್ಲಿ. ಸನ್ಮಾನ ಸ್ವೀಕರಿಸಿದ ನಾರಾಯಣಪ್ಪ ನಾಯಕ ಮಾತನಾಡಿ, ಗೃಹ ನಿರ್ಮಾಣಕ್ಕೆ ಸಂಬಂಧಿಸಿದಂತೆ ಪ್ರಪ್ರಥಮ ಸಂಘವಾದ ಪಂಪಾನಗರ ಗೃಹ ನಿರ್ಮಾಣ ಮಂಡಳಿ ತನ್ನದೇ ಆದ ಇತಿಹಾಸವನ್ನು ಹೊಂದಿದೆ. ಇಂತಹ ಸಂದರ್ಭದಲ್ಲಿ ನೂತನವಾಗಿ ಆಯ್ಕೆಗೊಂಡ ಸದಸ್ಯರುಗಳು ಮಂಡಳಿಯ ಸರ್ವತೋಮುಖ ಅಭಿವೃದ್ಧಿಗೆ ಹಾಗೂ ಹೆಚ್ಚು ಹೆಚ್ಚು ಸದಸ್ಯರು…
