ಖ್ಯಾತ ಗಾಯಕ ಮಹಮದ್ ರಫಿ ಜನಸಾಮಾನ್ಯರ ಗಾಯಕ: ಖಾಜಾಸಾಬ
ಗಂಗಾವತಿ:ತಮ್ಮ ಗಾಯನದ ಮೂಲಕ ನಾಡಿಗೆ ಸೇವೆ ಸಲ್ಲಿಸಿದ ಶ್ರೇಷ್ಠ ಗಾಯಕರನ್ನು ಗೌರವಿಸುವ ಪರಂಪರೆಯನ್ನು ಸಂಗೀತ ಸ್ವರಾಂಜಲಿ ಕರೋಕೆ ಗಾಯಕರು ಮಾಡುತ್ತಿದ್ದಾರೆ. ಪ್ರತಿ ಗಾಯಕರನ್ನು ಸ್ಮರಣೆ ಮಾಡಲಾಗುತ್ತಿದೆ ಸ್ಥಳೀಯ ಗಾಯಕ ಸಾಬ ಹೇಳಿದರು. ನಗರದ ಪರಶುರಾಮ ದೇವರಮನೆ ಕರೋಕೆ ಸ್ಟಡಿಯೋದಲ್ಲಿ ಮಹಮದ್ ರಫಿಯವರ ನೂರನೇಯ ಜನ್ಮದಿನದ ನಿಮಿತ್ತ ಆಯೋಜಿಸಿದ್ದ ಕಾರ್ಯಕ್ರಮ ಉದ್ದೇಶಿಸಿ ಮಾತನಾಡಿದರು. ಮಹಮದ್ ರಫಿ ದೇಶದ ಜನಪ್ರೀಯ ಸಿನೆಮಾ ಗಾಯಕರಾಗಿ ಸಮಸ್ತ ದೇಶವಾಸಿಗಳ ಮನಸ್ಸನ್ನು ಗೆದ್ದಿದ್ದ ಅಪ್ಪಟ ದೇಶಭಕ್ತರಾಗಿದ್ದರು.ಚೈನಾ ಭಾರತದ ಯುದ್ಧ ಸಂದರ್ಭದಲ್ಲಿ ಸೈನಿಕರು ಮತ್ತು ದೇಶದ…