
ಸಂಕಲ್ಪ ಕಾಲೇಜಿಗೆ ೭ ರ‍್ಯಾಂಕ್ ಹಾಗೂ ೨ ಚಿನ್ನದ ಪದಕ
ಗಂಗಾವತಿ: ವಿಜಯಪುರ ಅಕ್ಕಮಹಾದೇವಿ ವಿಶ್ವವಿದ್ಯಾಲಯ ಪ್ರಕಟಿಸಿದ ೨೦೨೩-೨೪ನೇ ಸಾಲಿನ ಎನ್.ಇ.ಪಿ ಪಠ್ಯದ ಪದವಿ ಪರೀಕ್ಷೆಯಲ್ಲಿ ನಗರದ ಸಂಕಲ್ಪ ಪದವಿ ಕಾಲೇಜಿಗೆ ೭ ರ‍್ಯಾಂಕ್ ಮತ್ತು ೨ ಚಿನ್ನದ ಪದಕ ಲಭಿಸಿವೆ ಎಂದು ಕಾಲೇಜಿನ ಆಡಳಿತ ಮಂಡಳಿಯ ಕಾರ್ಯಾಧ್ಯಕ್ಷರಾದ ನಾಗರಾಜ ಗುತ್ತೇದಾರ ಹರ್ಷ ವ್ಯಕ್ತಪಡಿಸಿದರು. ಕಾಲೇಜಿನ ಬಿ.ಕಾಂ ವಿಭಾಗದಲ್ಲಿ ಜೇಬಾ ಸೈಯದ್ ಖಲೀಲುಲ್ಲಾ ಖಾದ್ರಿ ಶೇ ೯೫.೪೬ ಅಂಕದೊಂದಿಗೆ ಪ್ರಥಮ ರ‍್ಯಾಂಕ್ ಮತ್ತು ಚಿನ್ನದ ಪದಕ, ಬಿ.ಎ ವಿಭಾಗದಲ್ಲಿ ಸುಭದ್ರಾ ವಿರೂಪಾಕ್ಷ ಬಢಿಗೇರ್ ಶೇ ೯೧.೧೭ ಅಂಕ ಪಡೆಯುವುದರೊಂದಿಗೆ…