ಪ್ರಗತಿಪರ ಕೃಷಿಕರು ನಟರು ಪುಟ್ಟಸ್ವಾಮಿಗೌಡ ಆರ್.ಕೆ.: ಗೊರೂರು ಅನಂತರಾಜು, ಹಾಸನ

ಪುಟ್ಟಸ್ವಾಮಿಗೌಡ ಆರ್. ಕೆ. ರಂಗಭೂಮಿ ನಟ ಹಾಗೂ ಪ್ರಗತಿ ಪರ ಕೃಷಿಕರು. ಮೊನ್ನೆ ಮೈಸೂರಿನಲ್ಲಿ ಚೆನ್ನರಾಯಪಟ್ಟಣದ ಡಾ. ಚಂದ್ರಕಾಳೇನಹಳ್ಳಿ ರಚನೆ ನಿರ್ವಹಣೆಯಲ್ಲಿ ದಸರಾ ಉತ್ಸವ ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ಭೀಮಾರ್ಜುನ ತಾಳಗ ಬಯಲು ಸೀಮೆ ಯಕ್ಷಗಾನ ಪ್ರದರ್ಶನ ಮಾಡಲು ಗೌಡರು ದುರ್ಯೋಧನ ಪಾತ್ರವನ್ನು ಚೆನ್ನಾಗಿ ನಿಭಾಯಿಸಿ ನನ್ನ ಗಮನ ಸೆಳೆದರು. ಅವರ ಕಲಾ ಪರಿಚಯ ಮಾಡಲು ಮಾತನಾಡಿಸಿದೆ. ಇವರು ಓರ್ವ ಪ್ರಗತಿ ಪರ ರೈತರೆಂಬುದು ಮಾತುಕತೆ ವೇಳೆ ತಿಳಿಯಿತು. ಅವರು ಮಾತನಾಡುತ್ತಾ ತಮ್ಮ ಬಾಲ್ಯದ ವಿದ್ಯಾರ್ಥಿ ದಿನಗಳನ್ನು ನೆನಪಿಸಿಕೊಂಡು ಹೇಳುತ್ತಾ ಹೋದರು.

ನಮ್ಮ ತಂದೆ ಹೆಸರು ಸಣ್ಣಸ್ವಾಮಿಗೌಡ, ತಾಯಿ ಕಾಳಮ್ಮ. ನಮ್ಮೂರು ಹಾಸನ ಜಿಲ್ಲೆಯ ಹೊಳೆನರಸೀಪುರ ತಾಲ್ಲೂಕಿನ ರಾಮನಹಳ್ಳಿ.
ನಮ್ಮ ತಂದೆ ಸಣ್ಣಸ್ವಾಮಿಗೌಡರು ಬಡ ಕುಟುಂಬದಲ್ಲಿ ಹುಟ್ಟಿ, ಕೇವಲ ಎರಡು ಎಕರೆ ಭೂಮಿಯಲ್ಲಿ ಕೃಷಿ ಮಾಡಿಕೊಂಡು ಜೀವನ ಸಾಗಿಸುತ್ತಿದ್ದರು. ಅವರು ಅನಾರೋಗ್ಯದಿಂದ ನಿಧನರಾದಾಗ ನಾನು 9ನೇ ತರಗತಿ ವಿದ್ಯಾರ್ಥಿ. ಆಗಲೇ ಕುಟುಂಬದ ಜವಾಬ್ದಾರಿಯನ್ನು ಹೊತ್ತುಕೊಂಡು ಕೃಷಿಗೆ ಇಳಿಯಬೇಕಾಯಿತು ಇಳಿದೆನು. ಆರಂಭದಲ್ಲಿ ರಸಗೊಬ್ಬರವನ್ನು ಬಳಸಿ ತಂಬಾಕು ಹಾಗೂ ಇತರೆ ವಾಣಿಜ್ಯ ಬೆಳೆಯನ್ನು ಬೆಳೆಯುವುದರಲ್ಲಿ ಯಶಸ್ಸು ಕಂಡೆ. ಆದರೆ ಇಳುವರಿ ಕಡಿಮೆಯಾಗಿ ಭೂಮಿಯ ಪೌಷ್ಟಿಕತೆ ಕುಂದಿತು. ರೋಗಗಳು, ನೈಸರ್ಗಿಕ ಅನಾಹುತಗಳಿಂದ ಬೆಳೆ ನಷ್ಟವಾಗಿ ಗ್ರಾಮ ತೊರೆದು ಹೋಗುವ ಪರಿಸ್ಥಿತಿ ಉಂಟಾಯಿತು.

ಆ ಸಂದರ್ಭ ಕೃಷಿ ಇಲಾಖೆಯ ಡಾ. ಭಾನುಪ್ರಕಾಶ್ ಏಡಿಯವರ ಮಾರ್ಗದರ್ಶನದಲ್ಲಿ ವೈಜ್ಞಾನಿಕ ಪದ್ಧತಿಯನ್ನು ಅಳವಡಿಸಿಕೊಂಡು ಭೂಮಿಯನ್ನು ಸಾವಯವವಾಗಿ ಪುನರುಜ್ಜೀವಗೊಳಿಸಲು ಪ್ರಯತ್ನಿಸಿದೆ. ಸುಮಾರು ಐದು ವರ್ಷಗಳ ಕಾಲ ಶ್ರಮದ ನಂತರ ಭೂಮಿಯನ್ನು ಪೌಷ್ಟಿಕವಾಗಿಸಿ ಸಾವಯವ ಕೃಷಿಗೆ ಪ್ರವೇಶಿಸಿದೆ. ಇದರ ಫಲವಾಗಿ ಸರ್ಕಾರದಿಂದ ವಿವಿಧ ಪ್ರಶಸ್ತಿಗಳು ದೊರಕಿದವು. 2011ರಲ್ಲಿ ತಾಲ್ಲೂಕು ಯುವ ರೈತ ಪ್ರಶಸ್ತಿ, 2012ರಲ್ಲಿ ಶ್ರೀ ಶ್ರೀ ರವಿಶಂಕರ್ ಗುರುಜಿ ಅವರ ಆರ್ಟ್ ಆಫ್ ಲಿವಿಂಗ್ ಸಂಸ್ಥೆಯಿಂದ ಉತ್ತಮ ರೈತ ಪ್ರಶಸ್ತಿ, 2014ರಲ್ಲಿ ಒಂದು ಎಕರೆಗೆ 480 ಚೀಲ ಶುಂಠಿ ಇಳುವರಿ ಸಾಧನೆ, 2016ರಲ್ಲಿ ಜಿಲ್ಲಾ ಘಟಕದಿಂದ ಪ್ರಶಸ್ತಿ ಪಡೆದೆ.

2018ರಲ್ಲಿ ನನ್ನ ಭೂಮಿಯಲ್ಲಿಯೇ ರೈತ ದಿನಾಚರಣೆ ಆಯೋಜಿಸಲಾಯಿತು, ಅದರಲ್ಲಿ ಕೃಷಿ ಇಲಾಖೆಯ ಸಹಯೋಗದಿಂದ ಹಲವು ರೈತರಿಗೆ ಸನ್ಮಾನ ನೀಡಲಾಯಿತು. 2020 ರಿಂದ 2022ರ ಅವಧಿಯಲ್ಲಿ ಹಲವು ಸಂಕಷ್ಟಗಳನ್ನು ಎದುರಿಸಿ, ನಂತರ ಕ್ರಮೇಣ ಜೀವನ ಸಹಜ ಸ್ಥಿತಿಗೆ ಮರಳಿತು. ಈಗ ಆಲೂಗೆಡ್ಡೆ, ಗೆಣಸು, ಕುಂಬಳಕಾಯಿ, ಜೇನು, ಹೈನುಗಾರಿಕೆ, ಕೋಳಿ, ಕುರಿ, ಮೇಕೆ ಸಾಕಾಣಿಕೆ ಮುಂತಾದ ವಿವಿಧ ಕೃಷಿ ಮತ್ತು ಪಶುಪಾಲನಾ ಚಟುವಟಿಕೆಗಳನ್ನು ಯಶಸ್ವಿಯಾಗಿ ನಿರ್ವಹಿಸುತ್ತಿದ್ದೇನೆ.

ಸಾಮಾಜಿಕ ಸೇವೆ: 2022ರಿಂದ ಶಾಲಾ ಮತ್ತು ಕಾಲೇಜುಗಳಿಗೆ ಬಿಸಿ ಊಟಕ್ಕಾಗಿ ತೋಟದ ತರಕಾರಿಗಳನ್ನು ನೀಡುವುದು, ಗಿಡಗಳನ್ನು ನೆಡುವುದು, ಶಾಲಾ ಮಕ್ಕಳಲ್ಲಿ ಸಾವಯವ ಮತ್ತು ಸಹಜ ಕೃಷಿಯ ಅರಿವು ಮೂಡಿಸುವ ಕಾರ್ಯಗಳಲ್ಲಿ ತೊಡಗಿದ್ದೇನೆ.

ಕಲಾ ಕ್ಷೇತ್ರ: ಬಿಡುವಿನ ವೇಳೆಯಲ್ಲಿ ಸಾಮಾಜಿಕ ಹಾಗೂ ಪೌರಾಣಿಕ ಯಕ್ಷಗಾನ ನಾಟಕಗಳಲ್ಲಿ ಅಭಿನಯಿಸುತ್ತೇನೆ. ಸುಮಾರು 150ಕ್ಕೂ ಹೆಚ್ಚು ನಾಟಕಗಳಲ್ಲಿ ಪಾತ್ರ ವಹಿಸಿದ್ದೇನೆ. ಭೀಮ, ಅರ್ಜುನ, ಶಕುನಿ, ಧರ್ಮರಾಯ, ರಾಜ ವಿಕ್ರಮ, ಗಾಣಿಗ ಶೆಟ್ಟಿ ಮುಂತಾದ ಪಾತ್ರಗಳಲ್ಲಿ ಅಭಿನಯಿಸಿದ್ದೇನೆ. ಹಾಸ್ಯ ಹಾಗೂ ಹೆಣ್ಣು ಪಾತ್ರಗಳನ್ನೂ ನಿಭಾಯಿಸಿದ್ದೇನೆ.

ಸಾಹಿತ್ಯ ಮತ್ತು ಸಂಘಟನೆ: ಕನ್ನಡ ಸಾಹಿತ್ಯ ಪರಿಷತ್ ಹಾಗೂ ಇತರೆ ಸಂಘ ಸಂಸ್ಥೆಗಳಲ್ಲಿ ಸಕ್ರಿಯವಾಗಿ ಭಾಗವಹಿಸಿದ್ದೇನೆ. ಆರ್.ಬಿ. ಪುಟ್ಟೇಗೌಡ (ತಾಲೂಕು ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷರು) ಹಾಗೂ ಗೊರೂರು ಅನಂತರಾಜು (ಕದಂಬ ಸೈನ್ಯ ಕನ್ನಡ ಸಂಘಟನೆ ಗೌರವ ಅಧ್ಯಕ್ಷರು) ಅವರ ಸಹಯೋಗದಲ್ಲಿ ಹಲವಾರು ಸಾಮಾಜಿಕ ಮತ್ತು ಸಾಂಸ್ಕೃತಿಕ ಚಟುವಟಿಕೆಗಳಲ್ಲಿ ಪಾಲ್ಗೊಂಡಿದ್ದೇನೆ.

ಪ್ರಶಸ್ತಿ: ಶ್ರೀನಿಧಿ ಫೌಂಡೇಶನ್, ಬೆಂಗಳೂರು ವತಿಯಿಂದ ಕರುನಾಡ ರತ್ನ ಪ್ರಶಸ್ತಿ., ಕೇರಳದಲ್ಲಿ ಉತ್ತಮ ರೈತ ಸಾಧಕ ಪ್ರಶಸ್ತಿ., ಗೋವಾದಲ್ಲಿ ಕರುನಾಡ ಕರ್ನಾಟಕ ಉತ್ತಮ ರೈತ ಪ್ರಶಸ್ತಿ., ಕಲಾ ಕ್ಷೇತ್ರದಲ್ಲಿ ಕರ್ನಾಟಕ ರತ್ನ ಕಲಾ ಪ್ರಶಸ್ತಿ., ಹಲವು ಸಂಘ ಸಂಸ್ಥೆಗಳಿಂದ ಸೇವಾ ಪ್ರಶಸ್ತಿಗಳು, ಕಲಾ ಪ್ರಶಸ್ತಿಗಳು ಹಾಗೂ ಕೃಷಿ ಪ್ರಶಸ್ತಿಗಳು ದೊರೆತಿವೆ. ಇದೇ ತಿಂಗಳು 26ನೇ ತಾರೀಖು ಕರ್ನಾಟಕ ರಾಜ್ಯ ಬರಹಗಾರರ ಸಂಘ, ಹೊಸಪೇಟೆಯಲ್ಲಿ ಹಮ್ಮಿಕೊಂಡಿರುವ ರಾಜ್ಯ ಮಟ್ಟದ ಕರೋಕೆ ಯುಗಳ ಚಿತ್ರಗೀತೆ ಸ್ಪರ್ಧೆ ಕಾರ್ಯಕ್ರಮದಲ್ಲಿ ಇವರ ಕೃಷಿ ಸಾಧನೆ ಗುರುತಿಸಿ ಸನ್ಮಾನಿಸಲಾಗುತ್ತಿದೆ ಎಂದು ತಿಳಿಸಿದರು.

ಇದಕ್ಕೆ ನಾನು ಅವರಿಗೆ ಅಭಿನಂದನೆಗಳು ತಿಳಿಸಿದೆ. ಗೌಡರು ಧನ್ಯವಾದಗಳು ಸಾರ್ ಎಂದರು.

ಗೊರೂರು ಅನಂತರಾಜು,
ಹುಣಸಿನಕೆರೆ ಬಡಾವಣೆ,
29ನೇ ವಾರ್ಡ್,
3 ನೇ ಕ್ರಾಸ್
ಶ್ರೀ ಶನೀಶ್ವರ ದೇವಸ್ಥಾನ ರಸ್ತೆ,
ಹಾಸನ -573201

https://aratt.ai/@vishwaroopa_news_blog

ಹಂಪಿಯ ಶ್ರೀ ವಿದ್ಯಾರಣ್ಯ ಪೀಠದ ಮಹಾಸ್ವಾಮಿಗಳ ಅನುಗ್ರಹದ ಮೇರೆಗೆ ಶಂಕರ ಮಠ ನಿರ್ಮಾಣ: ನಾರಾಯಣರಾವ್ ವೈದ್ಯ

ಗಂಗಾವತಿ: ಕಳೆದ ೨೫ ವರ್ಷಗಳಿಂದಲೂ ಗಂಗಾವತಿಯಲ್ಲಿ ಶಂಕರಮಠ ನಿರ್ಮಾಣಕ್ಕೆ ಸೂಕ್ತ ಸಲಹೆ, ಸೂಚನೆ, ಮಾರ್ಗದರ್ಶನಗಳನ್ನು ನೀಡುತ್ತಾ ಬಂದಿರುವ ದಿವಂಗತ ಭೀಮಸೇನ್‌ರಾವ್ ಅಳವಂಡಿಕರ್ ಹಾಗೂ ಅದ್ವೈತ ಸಿದ್ಧಾಂತದ ಬಗ್ಗೆ ಹಾಗೂ ಜಗದ್ಗುರು ಶ್ರೀ ಶಂಕರಾಚಾರ್ಯರ ಬಗ್ಗೆ ಅತ್ಯಂತ ಅಭಿಮಾನ ಹೊಂದಿದ್ದ ದಿವಂಗತ ಅಯೋದ್ಯ ರಾಮಾಚಾರ ಅವರನ್ನು ಸ್ಮರಿಸಿಕೊಳ್ಳಲೇಬೇಕಾದ ಅವಶ್ಯಕತೆ ಇದೆ ಎಂದು ಗಂಗಾವತಿ ಶೃಂಗೇರಿ ಶಂಕರಮಠದ ಧರ್ಮದರ್ಶಿ ನಾರಾಯಣರಾವ್ ವೈದ್ಯ ಹೇಳಿದರು.

ಅವರು ಅಕ್ಟೋಬರ್-೧೮ ಶನಿವಾರ ಶಾರದಾ ದೇವಸ್ಥಾನದಲ್ಲಿ ಗುರು ದ್ವಾದಶಿ ಆಚರಣೆಯ ಸಮಾರಂಭವನ್ನು ಉದ್ದೇಶಿಸಿ ಮಾತನಾಡಿ, ಈ ಹಿಂದೆ ಶಂಕರ ಜಯಂತಿ, ದತ್ತಾತ್ರೇಯ ಜಯಂತಿ ಸೇರಿದಂತೆ ಇತರೆ ಧಾರ್ಮಿಕ ಪೂಜಾ ಕಾರ್ಯಕ್ರಮಗಳನ್ನು ಪಂಪಾಪತಿ ದೇವಸ್ಥಾನ, ನಗರೇಶ್ವರ ದೇವಸ್ಥಾನ ಸೇರಿದಂತೆ ಇನ್ನಿತರ ಕಡೆಗಳಲ್ಲಿ ನಡೆಸುತ್ತಾ ಬರಲಾಗುತ್ತಿತ್ತು. ಮೇಲಿನ ಹಿರಿಯರು ಹಾಗೂ ಹಂಪಿಯ ಶ್ರೀ ವಿದ್ಯಾರಣ್ಯ ಪೀಠದ ಮಹಾಸ್ವಾಮಿಗಳ ಅನುಗ್ರಹದ ಮೇರೆಗೆ ನಗರದಲ್ಲಿ ಈ ಎಲ್ಲಾ ಜಯಂತಿ ಹಾಗೂ ವಿವಿಧ ಧಾರ್ಮಿಕ ಪೂಜಾ ಕಾರ್ಯಕ್ರಮಗಳಿಗೆ ಅತ್ಯಂತ ಸುಸಜ್ಜಿತವಾದ ಶಾರದಾ ದೇವಸ್ಥಾನ ನಿರ್ಮಿಸಲು ಸಾಧ್ಯವಾಯಿತು ಎಂದು ಹೇಳಿದರು.

ಇದೇ ಸಂದರ್ಭದಲ್ಲಿ ಶಿಕ್ಷಕಿ ಶಕುಂತಲಾ ಅವರು ಆಚರಣೆಯ ಮಹತ್ವ ಕುರಿತು ತಿಳಿಸುತ್ತಾ, ದತ್ತಾತ್ರೇಯ ಅವತಾರಿಗಳಾದ ಶ್ರೀಪಾದ ವಲ್ಲಭರು ಸಮೀಪದ ರಾಯಚೂರಿನ ಕುರುವಪುರ ಎಂಬಲ್ಲಿ ಹಲವಾರು ವರ್ಷಗಳಕಾಲ ವಾಸವಾಗಿ ಭಕ್ತರ ಸಂಕಷ್ಟಗಳನ್ನು ಈಡೇರಿಸುವುದರ ಮೂಲಕ ಈ ದಿನ ನಿಜಾಂಶವನ್ನು ಹೊಂದಿದ ದಿನಾಚರಣೆಯನ್ನು ಗುರು ದ್ವಾದಶಿ ಎಂದು ಆಚರಿಸಲಾಗುತ್ತದೆ ಎಂದು ಹೇಳಿದರು. ಜೊತೆಗೆ ದತ್ತ ನಾಮಗಳಿಂದ ಸಂಕಷ್ಟಗಳು ದೂರವಾಗುವುದು ಎಂಬ ಅಭಿಪ್ರಾಯವನ್ನು ಹಂಚಿಕೊಂಡರು.

ಇದಕ್ಕೂ ಪೂರ್ವದಲ್ಲಿ ದತ್ತ ಪಾದುಕೆಗಳಿಗೆ ಅಭಿಷೇಕ, ಅಷ್ಟೋತ್ತರ ಪಾರಾಯಣ, ಪುಷ್ಪಾರ್ಚನೆ ಸೇರಿದಂತೆ ಭಜನೆ ಮತ್ತಿತರ ಪೂಜಾ ಕಾರ್ಯಕ್ರಮಗಳು ಸಾಂಗತವಾಗಿ ಜರುಗಿದವು. ಜೊತೆಗೆ ಆಗಮಿಸಿದ ಭಕ್ತಾದಿಗಳಿಗೆ ತೀರ್ಥ ಮಹಾಪ್ರಸಾದ ನಡೆಸಲಾಯಿತು.

ಈ ಸಂದರ್ಭದಲ್ಲಿ ಜಗನ್ನಾಥ್ ಅಳವಂಡಿಕರ್, ರಾಘವೇಂದ್ರ ಅಳವಂಡಿಕರ್, ಪ್ರಹ್ಲಾದರಾವ್ ಮಾಸ್ಟರ್, ಕಾಶಿನಾಥ್ ಜೋಶಿ, ಮಹೇಶ್ ಜೋಶಿ, ಬಾಲಕೃಷ್ಣ ದೇಸಾಯಿ


ಸೇರಿದಂತೆ ವಿವಿಧ ಭಜನಾ ಮಂಡಳಿಯ ಸದಸ್ಯರು ವಿವಿಧ ಸಮಾಜದ ಮುಖಂಡರು ಭಾಗವಹಿಸಿದ್ದರು.

aratt.ai/@vishwaroopa_news_blog

ಹಂಪಿಯ ಶ್ರೀ ವಿದ್ಯಾರಣ್ಯ ಪೀಠದ ಮಹಾಸ್ವಾಮಿಗಳ ಅನುಗ್ರಹದ ಮೇರೆಗೆ ಶಂಕರ ಮಠ ನಿರ್ಮಾಣ: ನಾರಾಯಣರಾವ್ ವೈದ್ಯ

ಕರ್ನಾಟಕ ರಾಜ್ಯ ಬರಹಗಾರರ ಸಂಘ ರಿ. ಅರಸೀಕೆರೆ ತಾಲ್ಲೂಕು ಅಧ್ಯಕ್ಷರಾಗಿ ಡಾ.ಬಸವರಾಜ್ ಆಯ್ಕೆ

ಕರ್ನಾಟಕ ರಾಜ್ಯ ಬರಹಗಾರರ ಸಂಘವು ಒಂದು ನೋಂದಾಯಿತ ಸಾಹಿತ್ಯ ಮತ್ತು ಸಾಂಸ್ಕೃತಿಕ ಸಂಘಟನೆಯಾಗಿದ್ದು, ಕೇಂದ್ರ ಕಛೇರಿ ಹೂವಿನ ಹಡಗಲಿಯಾಗಿದ್ದು ರಾಜ್ಯಾದ್ಯಂತ ಎಲ್ಲಾ ಜಿಲ್ಲೆಗಳಲ್ಲೂ ಜಿಲ್ಲಾ ಘಟಕಗಳನ್ನು, ತಾಲ್ಲೂಕು ಘಟಕಗಳನ್ನು ಹೊಂದಿದೆ. ಅಲ್ಲದೇ ಹೊರ ರಾಜ್ಯದಲ್ಲೂ ತನ್ನ ಘಟಕಗಳನ್ನು ವಿಸ್ತರಿಸಿಕೊಂಡು ಈಗಾಗಲೇ ಹಲವಾರು ಸಾಹಿತ್ಯ ಕಾರ್ಯಕ್ರಮ ನಡೆಸಿಕೊಂಡು ಬಂದಿದೆ.

ಹಾಸನ ಜಿಲ್ಲಾ ಘಟಕವು ಸುಂದರೇಶ ಡಿ ಉಡುವಾರೆ ಅವರ ಅಧ್ಯಕ್ಷತೆಯಲ್ಲಿ ರಾಜ್ಯದಲ್ಲೆ ಅತ್ಯುತ್ತಮವಾದ ನಾಡು ನುಡಿ ಕಲೆ ಸಾಹಿತ್ಯ ಕವಿ ಕಾವ್ಯ ಗಾಯನ ಕಲಾಕುಂಚ ವಿಭಿನ್ನ ಕಾರ್ಯಕ್ರಮಗಳನ್ನು ಹಾಗೂ ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ ಸಾಧಕರಿಗೆ ಹಲವಾ ರಾಜ್ಯ ಹಾಗೂ ಜಿಲ್ಲಾ ಪ್ರಶಸ್ತಿಗಳನ್ನು ನೀಡುತ್ತಾ ಎಲೆ ಮರೆ ಕಾಯಿಯಂತಿರುವ ನೂರಾರು ಪ್ರತಿಭೆಗಳನ್ನು ಗುರುತಿಸಿ ವೇದಿಕೆ ಕಲ್ಪಸುತ್ತಾ ಬಂದಿದೆ.

ಪ್ರಸ್ತುತ: ಕರ್ನಾಟಕ ರಾಜ್ಯ ಬರಹಗಾರರ ಸಂಘ ಹಾಸನ ಜಿಲ್ಲಾಘಟಕದ ಅರ ಅರಸೀಕೆರೆ ತಾಲ್ಲೂಕಿನ ತಾಲ್ಲೂಕು ಘಟಕದ ಅಧ್ಯಕ್ಷರನ್ನಾಗಿ  ಬಸವರಾಜ್ ರವರನ್ನು ನೇಮಿಸಿ ರಾಜ್ಯಾಧ್ಯಕ್ಷರಾದ ಶ್ರೀ ಮಧುನಾಯ್ಕ ಲಂಬಾಣಿ ಅವರು ಅನುಮೋದನೆ ಮಾಡಿದ್ದಾರೆ.

ಡಾ. ಬಸವರಾಜ್ ರವರು ಸಹಾಯಕ ಪ್ರಾಧ್ಯಾಪಕರಾಗಿ ವಿವೇಕಾನಂದ ಶಿಕ್ಷಣ ಕಾಲೇಜು ಅರಸೀಕೆರೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದು. ಶಿಕ್ಷಣ ತಜ್ಞರು, ಪರಿಸರವಾದಿಗಳು, ವೈಚಾರಿಕ ಚಿಂತಕರು ಆಗಿರುವ ಡಾ.ಬಸವರಾಜ್ ಕಳೆದ ಹತ್ತು ವರ್ಷಗಳಿಂದ ಅರಸೀಕೆರೆಯಲ್ಲಿ ವಿವಿದ ಕನ್ನಡಪರ ಹಾಗೂ ವೈಚಾರಿಕ ಸಂಘಟನೆಗಳಲ್ಲಿ ತಮ್ಮನ್ನು ತೊಡಗಿಸಿಕೊಂಡು ನಾಡು ನುಡಿ, ಭಾಷೆ ಕನ್ನಡ ತಾಯಿಯ ಸೇವೆಯನ್ನು ನಿಸ್ವಾರ್ಥದಿಂದ ಮಾಡುತ್ತಿದ್ದಾರೆ.

ಈ ಸಂದರ್ಭದಲ್ಲಿ ಹಾಸನ ಜಿಲ್ಲೆಯ ಜಿಲ್ಲಾ ಅಧ್ಯಕ್ಷರಾದ ಸುಂದರೇಶ್ ಡಿ.ಉಡುವಾರೆ, ಗೌರವಾಧ್ಯಕ್ಷರಾದ ಶ್ರೀ ವೇಂಕಟೇಶ ಉದಯ ವರದಿ ಪತ್ರಿಕೆಯ ಸಂಪಾದಕರು ಹಾಸನ, ಡಾ. ಲೋಕೇಶ ಉಪನ್ಯಾಸಕರು ಹೊಳೆನರಸೀಪುರ, ಡಾ. ಬರಳು ಶಿವರಾಮ ಚನ್ನರಾಯಪಟ್ಟಣ ತಾಲ್ಲೂಕು. ಡಾ. ಹರೀಶ್ ಉಪನ್ಯಾಸಕರು ಅರಸೀಕೆರೆ. ಡಾ. ಗಿರೀಶ್ ಮರಡಿ ಉಪನ್ಯಾಸಕರು ಹಾಸನ. ಕಾರ್ಯದರ್ಶಿಗಳಾದ ದಿಬ್ಬೂರು ರಮೇಶ, ಸಂಘಟನಾ ಕಾರ್ಯದರ್ಶಿಗಳಾದ ಶಿವಕುಮಾರ ಆರ್. ಅಧ್ಯಕ್ಷರು:ವಿಶ್ವಾಸ್ ಡಿ. ಗೌಡರು ಸಕಲೇಶಪುರತಾಲ್ಲೂಕು. ಪರಮೇಶ್ ಮಡಬಲು. ಗಿರಿಜಾ ನಿರ್ವಾಣಿ. ರಾಣಿ ಚಿರಾಶ್ರಿ. ಬೋರೇಗೌಡರು ಅರಸೀಕೆರೆ. ಬೇಲೂರು. ಪುಟ್ಟೇಗೌಡರು ಅಧ್ಯಕ್ಷರು ಅರಕಲಗೂಡು. ಹಾಗು ಹಾಸನ ಜಿಲ್ಲೆಯ ಎಲ್ಲಾ ತಾಲೂಕಿನ ಅಧ್ಯಕ್ಷರು ಪದಾಧಿಕಾರಿಗಳು ಅಭಿನಂದನೆ ಸಲ್ಲಿಸಿದ್ದಾರೆ.

ಸರಳತೆಯಿಂದ ಶ್ರೇಷ್ಠತೆಯೆಡೆಗೆ ಪಯಣಿಸಿದ ‘ದೇಶಪ್ರೇಮಿ- ಜನರಾಷ್ಟ್ರಪತಿ’ ಡಾ. ಎಪಿಜೆ ಅಬ್ದುಲ್ ಕಲಾಂ: ಪ್ರೊ. ಕರಿಗೂಳಿ

ತಾಲೂಕಿನ ಶ್ರೀರಾಮನಗರದ ಸರಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಡಾ. ಅಬ್ದುಲ್ ಕಲಾಂ ರವರ ಜಯಂತಿ ಅಂಗವಾಗಿ ಸರಣಿ ಕಾರ್ಯಕ್ರಮಗಳ ಸಡಗರ ಸಂಭ್ರಮದಿಂದ ಜರುಗಿದವು. ನನ್ನ ಜನುಮದಿನಕ್ಕೂ ಹಾಗೂ ಪುಣ್ಯತಿಥಿಗೂ ರಜೆ ನೀಡಬೇಡಿ ನನ್ನನ್ನು ಹಾಗೂ ದೇಶವನ್ನು ಪ್ರೀತಿಸಿ ಗೌರವಿಸುವುದಾದರೆ ಹೆಚ್ಚು ಕೆಲಸ ಮಾಡಿ ಎಂದು ಹೇಳುವುದರ ಮೂಲಕ ಯುವಕರಿಗೆ ಚಿರಸ್ಫೂರ್ತಿಯಾಗಿರುವ ಡಾ. ಕಲಾಂ ರವರ ಆಶಯದಂತೆ ವಿವಿಧ ಕಾರ್ಯಕ್ರಮಗಳನ್ನು ಏರ್ಪಡಿಸಲಾಗಿತ್ತು.

ನಮ್ಮ ಕಾಲೇಜು ಸ್ವಚ್ಛ ಕಾಲೇಜು ಅಭಿಯಾನದ ಅಡಿಯಲ್ಲಿ ಶ್ರೀರಾಮನಗರದ ಚಿಲುಕೂರಿ ನಾಗೇಶ್ವರರಾವ್ ಸರಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಅಕ್ಟೋಬರ್‌-15 ರಂದು ಸರಣಿ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿತ್ತು. ದೈನಂದಿನ ತರಗತಿಗಳ ನಂತರ ಬೆಳಿಗ್ಗೆ 11:30ಕ್ಕೆ ಕಾಲೇಜು ಆವರಣ ಸ್ವಚ್ಛತೆಗಾಗಿ ಶ್ರಮದಾನ ಕಾರ್ಯಕ್ರಮ ಕಾಲೇಜಿನ ಎಲ್ಲಾ ವಿದ್ಯಾರ್ಥಿಗಳು ಹಾಗೂ ಪ್ರಾಧ್ಯಾಪಕರು ಸೇರಿ ರಾಷ್ಟ್ರೀಯ ಸೇವಾ ಯೋಜನೆ ಅಡಿಯಲ್ಲಿ ಖುಷಿಯಿಂದ ಪಾಲ್ಗೊಡು ಕಾಲೇಜಿನ ಮೈದಾನವನ್ನು ಸ್ವಚ್ಛಗೊಳಿಸಿದರು. ನಂತರ ಕಾಲೇಜಿನ ಹಳೆಯ ವಿದ್ಯಾರ್ಥಿಗಳಾದ ಅಶೋಕ ಹಾಗೂ ಶಿವರಾಜಕುಮಾರ್ ಅವರನ್ನು ಕಾಲೇಜಿನ ಆವರಣ ಸುಂದರವಾಗಿ ಕಾಣುವಂತೆ ಮಾಡಲು ಸ್ವಯಂಪ್ರೇರಣೆಯಿಂದ ಯಂತ್ರೋಪಕರಣದ ಮುಖಾಂತರ ಸ್ವಚ್ಛಗೊಳಿಸಿದ್ದಕ್ಕಾಗಿ ಕಾಲೇಜು ವತಿಯಿಂದ ಸನ್ಮಾನಿಸಲಾಯಿತು. ಡಾ. ಸರಫರಾಜ್ ಅಹ್ಮದ್ ಅವರು ಸನ್ಮಾನ ಮಾಡಿದರು.

ಅಂತರಾಷ್ಟ್ರೀಯ ಕೈತೊಳೆಯುವ ದಿನ

ಕಾಲೇಜು ಸ್ವಚ್ಛತಾ ಕಾರ್ಯಕ್ರಮ ಮುಗಿದ ನಂತರ ಕಾಲೇಜಿನ ಮೈದಾನದಲ್ಲಿ ಸಮುದಾಯ ಆರೋಗ್ಯ ಕೇಂದ್ರ, ಶ್ರೀರಾಮನಗರದ ಸಹಯೋಗದಲ್ಲಿ ಅಂತರಾಷ್ಟ್ರೀಯ ಕೈತೊಳೆಯುವ ದಿನದ ಅಂಗವಾಗಿ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು. ಈ ಕಾರ್ಯಕ್ರಮದಲ್ಲಿ ತಾಲೂಕು ಆರೋಗ್ಯ ಶಿಕ್ಷಣಾಧಿಕಾರಿಗಳಾದ ಆಶಾ ಬೇಗಂ ಅವರು ಸೂಕ್ಷ್ಮಾಣುಜೀವಿ ನಮ್ಮ ಕೈ ಮೂಲಕ ದೇಹವನ್ನು ಸೇರಿ ಕಾಲರಾ, ಟೈಫಾಯ್ಡ್, ಹೆಪಿಟೈಟಸ್ ಬಿ, ರಕ್ತಹೀನತೆ, ಅಪೌಷ್ಟಿಕತೆಗೆ ಯಾವ ರೀತಿಯಲ್ಲಿ ಅನಾರೋಗ್ಯಕ್ಕೆ ಕಾರಣವಾಗುತ್ತದೆ ಎಂಬುದನ್ನು ಕಾಲೇಜು ವಿದ್ಯಾರ್ಥಿಗಳಿಗೆ ತಿಳಿಸಿದರು ಹಾಗೂ ದೈನಂದಿನ ಜೀವನದಲ್ಲಿ ಕೈ ತೊಳೆಯುವ ಆರು ಹಂತಗಳನ್ನು ಪ್ರಾತ್ಯಕ್ಷಿತೆ ಮೂಲಕ ವಿವರಿಸಿದರು. ನಂತರ ಅದೇ ಕ್ರಮದಲ್ಲಿ ಕಾಲೇಜಿನ ಎಲ್ಲಾ ವಿದ್ಯಾರ್ಥಿಗಳು ಕೈ ತೊಳೆಯುವ ಮುಖಾಂತರ ಅಂತರಾಷ್ಟ್ರೀಯ ಕೈತೊಳೆಯುವ ದಿನವನ್ನು ಆಚರಿಸಲಾಯಿತು.

ಡಾ. ಎಪಿಜೆ ಅಬ್ದುಲ್ ಕಲಾಂ ರವರ ಜಯಂತಿ ಆಚರಣೆ

ನಂತರ ಕಾಲೇಜಿನ ಸಭಾಂಗಣದಲ್ಲಿ ಮಾಜಿ ರಾಷ್ಟ್ರಪತಿಗಳಾದ ಡಾ. ಎ.ಪಿ.ಜೆ. ಅಬ್ದುಲ್ ಕಲಾಂ ಅವರ ಜಯಂತಿಯ ಅಂಗವಾಗಿ ಅಂತಾರಾಷ್ಟ್ರೀಯ ವಿದ್ಯಾರ್ಥಿ ದಿನಾಚರಣೆ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು. ಈ ಕಾರ್ಯಕ್ರಮದಲ್ಲಿ ಕಾಲೇಜಿನ ಪ್ರಾಂಶುಪಾಲರಾದ ಪ್ರೊ. ಕರಿಗೂಳಿ ಅವರು ಮಾತನಾಡುತ್ತಾ ಕಲಾಂ ಜೀ ರವರ ಬಹುಮುಖ್ಯ ಹೇಳಿಕೆಯಾದ ‘ ಕನಸೆoದರೆ ನಿದ್ರೆಯ ಕಾಣುವುದು ಅಲ್ಲ ಬದಲಾಗಿ ನಿಮ್ಮನ್ನು ನಿದ್ರಿಸಲು ಬಿಡಲಾರದ್ದು ಕನಸು ಆದುದರಿಂದ ಕನಸುಗಳನ್ನು ಹಗಲು ಅಥವಾ ರಾತ್ರಿ ಕಾಣದೆ ದೊಡ್ಡ ಮಟ್ಟದಲ್ಲಿ ವಿಚಾರ ಮಾಡಿ ಅಂತಹ ಸಾಧನೆಗೋಸ್ಕರ ನಿಮ್ಮ ಸುಖನಿದ್ರೆ ತ್ಯಾಗ ಮಾಡಿ ಸಾಧಕರಾಗಬೇಕು ಎಂದು ವಿದ್ಯಾರ್ಥಿಗಳಿಗೆ ಕರೆ ನೀಡಿದರು. ವಿದ್ಯಾರ್ಥಿಗಳು ತಮ್ಮ ಬದುಕಿನಲ್ಲಿ ಸಾಧಕರಾಗಿ ಹೊರಹೊಮ್ಮುವುದರಿಂದ ನಿಮ್ಮ ಬದುಕು ಹಸನಾಗುತ್ತದೆ ಹಾಗೂ ಕಾಲೇಜಿಗೆ ಗೌರವ ಬರುತ್ತದೆ. ನಿಮ್ಮ ಗುರಿಮುಟ್ಟಲು ಕಾಲೇಜಿನ ಸಕಲ ಸಂಪನ್ಮೂಲಗಳ ಸದ್ಬಳಕೆ ಮಾಡಕೊಳ್ಳಲು ಕಾಲೇಜಿನ ಎಲ್ಲಾ ಪ್ರಾಧ್ಯಾಪಕರು, ಆಡಳಿತ ಸಿಬ್ಬಂದಿ, ಗ್ರಾಮದ ಶಿಕ್ಷಣ ಪ್ರೇಮಿಗಳು, ಸ್ಥಳೀಯ ರಾಜಕೀಯ ನಾಯಕರು ಹಾಗೂ ಕ್ಷೇತ್ರದ ಶಾಸಕರು ಸೇರಿದಂತೆ ಎಲ್ಲರನ್ನೂ ಬಳಸಿಕೊಳ್ಳಿ ಎಂದು ಪ್ರಾಂಶುಪಾಲರಾದ ಕರಿಗೂಳಿ ಅವರು ತಿಳಿಸಿದರು.
ಇದೇ ಸಮಯದಲ್ಲಿ ನಮ್ಮ ಕಾಲೇಜಿನ ಗ್ರಂಥಾಲಯ ವತಿಯಿಂದ ಪ್ರಥಮ ವರ್ಷದ ವಿದ್ಯಾರ್ಥಿಗಳಿಗೆ ನೂತನ ವರ್ಷದ ಪುಸ್ತಕಗಳನ್ನು ವಿತರಿಸಲಾಯಿತು.

ತಂಬಾಕು ವಿರೋಧಿ ದಿನ ದ ಅಂಗವಾಗಿ ವ್ಯಸನಮುಕ್ತ ಯುವಜನತೆಯಿಂದ ಸದೃಢ ಸಮಾಜದ ನಿರ್ಮಾಣ ಕಾರ್ಯಕ್ರಮ
ವ್ಯಸನಗಳು ವಿದ್ಯಾರ್ಥಿ ಜೀವನವನ್ನಷ್ಟೇ ಅಲ್ಲ, ಇಡೀ ಬದುಕನ್ನೇ ನಾಶ ಮಾಡುತ್ತವೆ. ಹಾಗಾಗಿ ಎಲ್ಲರೂ ವ್ಯಸನಗಳಿಂದ ಮುಕ್ತರಾಗಲು ಪ್ರಯತ್ನಿಸಬೇಕು. ಮೊದಲು ವಿದ್ಯಾರ್ಥಿಗಳು ತಮ್ಮ ಸಹವರ್ತಿಗಳು ವ್ಯಸನಗಳಿಂದ ಬಳಲುತ್ತಿದ್ದರೆ ಅವರಿಗೆ ಸೂಕ್ತ ರೀತಿಯಲ್ಲಿ ಅಗತ್ಯ ಸಹಾಯ ಮಾಡುವ ಮುಖಾಂತರ ವ್ಯಸನಗಳಿಂದ ಮುಕ್ತರಾಗುವಂತೆ ಮನಃಪರಿವರ್ತನೆ ಮಾಡಬೇಕು. ವಿದ್ಯಾರ್ಥಿಗಳೂ ಕೂಡ ವ್ಯಸನಗಳಗೆ ಬಲಿಯಾಗದಂತೆ ಎಚ್ಚರ ವಹಿಸಬೇಕು. ವ್ಯಸನ ಮುಕ್ತ ದಿನಾಚರಣೆಯ ಅಂಗವಾಗಿ ಕಾಲೇಜಿನಲ್ಲಿ ಪ್ರಬಂಧ ಸ್ಪರ್ಧೆ ನಡೆಸಿ ಉತ್ತಮ ಪ್ರಬಂಧ ರಚಿಸಿದ ವಿದ್ಯಾರ್ಥಿಗಳಿಗೆ ನಗದು ಬಹುಮಾನ ಹಾಗೂ ಪ್ರಮಾಣಪತ್ರ ವಿತರಣೆ ಕಾರ್ಯಕ್ರಮ ನಡೆಸಲಾಯಿತು. ಈ ಕಾರ್ಯಕ್ರಮದಲ್ಲಿ ತಾಲೂಕು ಆರೋಗ್ಯ ಶಿಕ್ಷಣಾಧಿಕಾರಿಗಳಾದ ಆಶಾ ಬೇಗಂ ಅವರು ತಂಬಾಕು ಸೇವನೆ, ಮದ್ಯ ಸೇವನೆ ಹಾಗೂ ಇನ್ನಿತರ ಮಾದಕ ವಸ್ತುಗಳ ಪರಿಚಯ ಗ್ರಾಮೀಣ ಭಾಗದಲ್ಲಿ ಕಡಿಮೆ ಎಂದು ಅಭಿಪ್ರಾಯಪಟ್ಟರು. ಜೊತೆಗೆ ಎಲ್ಲಾ ವಿದ್ಯಾರ್ಥಿಗಳು ವ್ಯಸನಗಳಿಂದ ದೂರ ಉಳಿಯಬೇಕು, ಇದರಿಂದ ಶೈಕ್ಷಣಿಕ ಸಾಧನೆ ಮಾಡಲು ಸಹಕಾರಿ ಎಂದು ತಿಳಿಸಿದರು. ವ್ಯಸನಗಳಿಂದಾಗುವ ಹಾನಿಗಳನ್ನು ತಿಳಿಸುವ ಉದ್ದೇಶದಿಂದ ಸಮುದಾಯ ಆರೋಗ್ಯ ಕೇಂದ್ರ, ಶ್ರೀರಾಮನಗರದ ಹಿರಿಯ ಆರೋಗ್ಯ ನಿರೀಕ್ಷಣಾಧಿಕಾರಿಗಳಾದ ಹೆಚ್.ಎಂ. ಗುರುರಾಜ ಅವರು ಪವರ್ ಪಾಯಿಂಟ್ ಪ್ರೆಸೆಂಟೇಷನ್ ಮೂಲಕ ವಿದ್ಯಾರ್ಥಿಗಳಿಗೆ ಮನವರಿಕೆ ಮಾಡಿದರು. ಸಾಂಸ್ಕೃತಿಕ ಸಂಚಾಲಕರಾದ ವೀರೇಶ ಅವರು ಕಾರ್ಯಕ್ರಮಕ್ಕೆ ಅತಿಥಿಗಳನ್ನು ಸ್ವಾಗತ ಮಾಡಿ, ಪ್ರಾಸ್ತಾವಿಕ ನುಡಿಗಳನ್ನಾಡಿ ಕಾರ್ಯಕ್ರಮವನ್ನು ಅಚ್ಚುಕಟ್ಟಾಗಿ ನಿರ್ವಹಣೆ ಮಾಡಿದರು. ಕೊನೆಯಲ್ಲಿ ಸಹಾಯಕ ಪ್ರಾಧ್ಯಾಪಕರಾದ ಶಂಕ್ರಪ್ಪ ಎಂ. ಅವರು ಕಾರ್ಯಕ್ರಮದಲ್ಲಿ ಭಾಗವಹಿಸಿದ ಎಲ್ಲರಿಗೂ ವಂದನೆಗಳನ್ನು ಅರ್ಪಿಸಿದರು.

ಸಸಿಸನೆಡುವ ಕಾರ್ಯಕ್ರಮ

ಕ್ಲೀನ್ ಅಂಡ್ ಗ್ರೀನ್ ಫೋರ್ಸ್ ಶ್ರೀರಾಮನಗರ ರವರ ಸಹಯೋಗದಲ್ಲಿ ನಮ್ಮ ಕಾಲೇಜಿನಲ್ಲಿ ಸಸಿನೆಡುವ ಕಾರ್ಯಕ್ರಮ ಆಯೋಜಿಸಲಾಗಿತ್ತು. ಈ ಕಾರ್ಯಕ್ರಮದಲ್ಲಿ ಅಧ್ಯಾಪಕರಾದ ಸಾರ್ಫರಾಜ್ ಅಹ್ಮದ್ ವಿರುಪಾಕ್ಷ ಕೆ, ಡಾ. ಶಶಿಕುಮಾರ ರವಿಕುಮಾರ ಮತ್ತು ಉಪನ್ಯಾಸಕರಾದ ವೆಂಕಟರಾಜು ಈಶಪ್ಪ ಮೇಟಿ, ವಿಜಯಕುಮಾರ,
ಡಾ. ಅರ್ಜುನ್, ನಂದಕುಮಾರ, ಪರಶುರಾಮ, ಪೀರಾವಲಿ, ಗ್ರಂಥಪಾಲಕರಾದ ಡಾ. ದೇವರಾಜ ಹಾಗೂ ಆಡಳಿತ ಸಿಬ್ಬಂದಿಯವರಾದ ಜಬೀನಾ ಬೇಗಂ, ವಿನಾಯಕ ಮತ್ತು ಸಹಾಯಕ ಸಿಬ್ಬಂದಿಯಾದ ಶಾಂತಿ, ಚಿನ್ನ ವರಪ್ರಸಾದ್, ಶರಣ ಹಾಜರಿದ್ದರು.

ಸೌಂದರ್ಯ ಲಹರಿ ಪಾರಾಯಣದಿಂದ ಸಂಕಷ್ಟ ದೂರ: ವೀಣಾ ಅಳವಂಡಿಕರ್

ಗಂಗಾವತಿ: ನಗರದ ಶಂಕರ ಮಠದಲ್ಲಿ ಜಗದ್ಗುರು ಶ್ರೀ ಶಂಕರಾಚಾರ್ಯರ ವಿರಚಿತ ಸೌಂದರ್ಯ ಲಹರಿ ಸಪ್ತಾಹವನ್ನು ಅಕ್ಟೋಬರ್‌-11 ರಿಂದ ಆರಂಭಿಸಲಾಯಿತು.

ಈ ಸಂದರ್ಭದಲ್ಲಿ ಶಾರದಾ ಶಂಕರ ಭಕ್ತ ಭಜನಾ ಮಂಡಳಿಯ ಹಿರಿಯ ಸದಸ್ಯರಾದ ಶ್ರೀಮತಿ ವೀಣಾ ರಾಘವೇಂದ್ರ ಅಳವಂಡಿಕರ್‌ ಹಾಗೂ ಸಂಚಾಲಕಿ ಗಾಯತ್ರಿ ಶ್ರೀಧರ್ ಅಳವಂಡಿಕರ್‌ ಮಾತನಾಡಿ ಜಗದ್ಗುರು ಭಾರತೀ ತೀರ್ಥ ಮಹಾಸ್ವಾಮಿಗಳ 75 ನೆಯ ವರ್ಧಂತಿ ಮಹೋತ್ಸವ ಹಾಗೂ ಆನಂದ ಭಾರತಿ ಅಡಿಯಲ್ಲಿ ದೇಶಾದ್ಯಂತ ಶಂಕರ ಮಠಗಳಲ್ಲಿ ಶ್ರೀ ಸೌಂದರ್ಯ ಲಹರಿ ಸಪ್ತಾಹವನ್ನು ನಡೆಸಲಾಗುತ್ತಿದ್ದು ಇದರಿಂದ ಸಂಕಷ್ಟಗಳು ದೂರವಾಗುವುದರ ಜೊತೆಗೆ ಪಾರಾಯಣದಿಂದ ಬಹು ರೋಗ ನಿವಾರಣೆ ಆಗುವುದು ಎಂದು ಪಾರಾಯಣದ ಮಹತ್ವ ಕುರಿತು ತಿಳಿಸಿದರು.

ಈ ಸಂದರ್ಭದಲ್ಲಿ ವಿವಿಧ ಭಜನಾ ಮಂಡಳಿಯ ಮಹಿಳೆಯರು ಪಾಲ್ಗೊಂಡಿದ್ದರು.

ಕನಸುಗಾರರಾಗಿ ಅಬ್ದುಲ್ ಕಲಾಂ ಜಿ

ದೊಡ್ಡ ದೊಡ್ಡ ಕನಸುಗಳನ್ನು ಕಂಡು, ಅವುಗಳನ್ನು ಸಾಕಾರಗೊಳಿಸಲು ಕಷ್ಟಗಳ ಸಾಗರವನ್ನು ಈಜಿ ಮೇಲೆ ಏರಿದ ಮಹಾನ್ ಕನಸುಗಾರ ಡಾ.ಅಬ್ದುಲ್ ಕಲಾಂ. ಬಡವರಾಗಿ ಹುಟ್ಟುವುದು ತಪ್ಪಲ್ಲ ಆದರೆ ಬಡವರಾಗಿ ಸಾಯುವುದೇ ಮಹಾ ಪಾಪ ಎನ್ನುವ ತತ್ವದಲ್ಲಿ ನಂಬಿಕೆ ಇಟ್ಟುಕೊಂಡು ಸತತ ಪ್ರಯತ್ನದಿಂದ, ಹೋರಾಟದಿಂದ ಏನನ್ನಾದರೂ ಸಾಧಿಸಬಹುದು ಎಂಬುದನ್ನು ತೋರಿಸಿಕೊಟ್ಟ ಚೇತನ ಅಬ್ದುಲ್ ಕಲಾಂ. ಸೂರ್ಯನಂತೆ ಬೆಳಗಬೇಕೆಂದರೆ ಸೂರ್ಯನಂತೆ ಉರಿಯಬೇಕೆಂಬ ಆದರ್ಶ. ನಂಬಿಕೆಗಳಿಂದ ಕರ್ಮ ಯೋಗಿಯಾಗಿ ಸಾಧಕರಾಗಿ, ದೇಶದ ಅತ್ಯುನ್ನತ ಹುದ್ದೆಯಾದ ರಾಷ್ಟ್ರಪತಿ ಸ್ಥಾನಕ್ಕೆ ಏರಿದ್ದು ನಿಜಕ್ಕೂ ನಂಬಲು ಅಸಾಧ್ಯವಾದರೂ ಸಾಧ್ಯ ಎನ್ನುವುದನ್ನು ನಾವು ಡಾ. ಅಬ್ದುಲ್ ಕಲಾಮರಿಂದ ನೋಡಿ ಕಲಿಯಬೇಕು. ಅವರ ದೃಷ್ಟಿ ಯಾವಾಗಲು ಆಕಾಶದೆಡಿಗೆ ಇರುತ್ತಿತ್ತು. ಆಕಾಶದಲ್ಲಿ ಹಾರುವ ವಿಮಾನಗಳನ್ನು ನೋಡಿ ತಾವು ಪೈಲೈಟ್ ಆಗಿ ವಿಮಾನದಲ್ಲಿ ಹಾಗೆ ಹಾರಾಡಬೇಕೆನ್ನುವ ಕನಸನ್ನು ಬಾಲ್ಯದಿಂದ ಕಂಡು ಅದನ್ನು ಗುರಿಯಾಗಿ ಇಟ್ಟುಕೊಂಡು ಬೆಳೆದರು. ಕೊನೆಗೆ ಪೈಲೆಟ್ ಆಗದಿದ್ದರೂ ರಾಕೆಟ್ ಗಳನ್ನು ತಯಾರಿಸುವ ಶಕ್ತಿ ಬೆಳೆಸಿಕೊಂಡು ಕೊನೆಗೆ ಜಗತ್ತೇ ಮೆಚ್ಚುವ ಕ್ಷಿಪಣಿ ಜನಕ ಎನ್ನುವ ಬಿರುದು ಗಳಿಸಿ ದೇಶವೇ ಬೆರಗಾಗುವಂತೆ ಆಕಾಶದೆತ್ತರಕ್ಕೆ ಬೆಳೆದು ನಿಂತರು. ಯಾವುದೇ ಕಾರ್ಯ ಮಾಡಿದರು ಅಚ್ಚುಕಟ್ಟಾಗಿ ಶ್ರದ್ಧೆಯಿಂದ ಮಾಡುವುದು ಅವರ ಹುಟ್ಟುಗುಣವಾಗಿತ್ತು. ‌

ಹೀಗಾಗಿ ರಾಷ್ಟ್ರಪತಿಯಾಗಿ, ವಿಜ್ಞಾನಿಯಾಗಿ ಸಂಶೋಧಕರಾಗಿ, ಉಪನ್ಯಾಸಕರಾಗಿ, ಬರಹಗಾರರಾಗಿ ಹೀಗೆ ಹತ್ತು ಹಲವು ಕ್ಷೇತ್ರಗಳಲ್ಲಿ ಕಾರ್ಯನಿರ್ವಹಿಸಿದರೂ ಎಲ್ಲದರಲ್ಲೂ ಯಶಸ್ವಿಯಾಗಿ ಜನಮನ್ನಣೆ ಗಳಿಸಿದರು. ಅವರಲ್ಲಿನ ಉತ್ಸಾಹ ಚೈತನ್ಯ ಬಾಲ್ಯದಲ್ಲಿ ಇದ್ದಷ್ಟೇ ಅವರ ಇಳಿ ವಯಸ್ಸಿನಲ್ಲಿ ಇದ್ದಿದ್ದು ಆಶ್ಚರ್ಯವನಿಸುತ್ತದೆ. ಯಾವತ್ತೂ ಸುಮ್ಮನೆ ಕುಳಿತವರಲ್ಲ ಅಬ್ದುಲ್ ಕಲಾಂ ಜಿ. ಯಾವುದಾದರೂ ಒಂದು ಕ್ರಿಯೆಯಲ್ಲಿ ನಿರಂತರ ತಮ್ಮನ್ನು ತಾವು ತೊಡಗಿಸಿ ಕೊಂಡವರು. ದೇಶ ಕಂಡ ಅಪರೂಪದಲ್ಲೇ ಅಪರೂಪದ ಸಾಧಕರಲ್ಲಿ ಅಬ್ದುಲ್ ಕಲಾಂ ಒಬ್ಬರು. ತಾವು ನಿರಂತರ ಹೋರಾಟ, ಶ್ರಮದಿಂದ ಮೇಲೆ ಬಂದಂತೆಯೇ ಇತರರನ್ನು ನಿರಂತರ ಸ್ಪೂರ್ತಿದಾಯಕ ಮಾತುಗಳಿಂದ ಬೋಧನೆಯಿಂದ ಮೇಲೆತ್ತಿದವರು.

ಅವರಿಗೆ ಬೋಧನೆ ಎನ್ನುವುದು ಅಚ್ಚುಮೆಚ್ಚಿನ ಕಾರ್ಯವಾಗಿತ್ತು. ಸಮಯ ಸಿಕ್ಕಾಗೆಲ್ಲ ವಿದ್ಯಾರ್ಥಿಗಳೊಂದಿಗೆ ಕಳೆಯುತ್ತಿದ್ದರು ಹಾಗೂ ತಮ್ಮ ಅನುಭವಗಳನ್ನು ವಿಚಾರಗಳನ್ನು ವಿದ್ಯಾರ್ಥಿಗಳೊಂದಿಗೆ ಹಂಚಿಕೊಳ್ಳುತ್ತಾ ಅವರಲ್ಲಿನ ಪ್ರತಿಭೆಯನ್ನು ಗುರುತಿಸಿ ಬೆಳೆಸಿದರು ಹಾಗೂ ಚೈತನ್ಯ ತುಂಬಿ ಸಾಧನೆ ಮಾಡುವಂತೆ ಹುರಿದುಂಬಿಸಿದರು ಅಬ್ದುಲ್ ಕಲಾಂ ಜಿ. ಅವರ ಜೀವನವೇ ಇತರರಿಗೆ ಒಂದು ಪಾಠದಂತೆ ಇತ್ತು. ಅವರ ಜೀವನವೇ ಇತರರಿಗೆ ದಾರಿ ದೀಪವಾಗಿ ಬೆಳಕು ನೀಡುತ್ತಿದೆ ಎಂದರೆ ತಪ್ಪಲ್ಲ. “ಮಾತಿಗಿಂತ ಕೃತಿ ಲೇಸು” ಎನ್ನುವ ಗಾದೆ ಮಾತಿನಂತೆ ನಿರಂತರವಾಗಿ ಕರ್ಮದಲ್ಲಿ ತಮ್ಮನ್ನು ತೊಡಗಿಸಿಕೊಳ್ಳುತ್ತಾ ಸಾಯುವ ಕ್ಷಣದಲ್ಲೂ ಸಹ ವಿದ್ಯಾರ್ಥಿಗಳಿಗೆ ಬೋಧಿಸುತ್ತಾ ಶರಣರ ಬದುಕನ್ನು ಮರಣದಲ್ಲಿ ನೋಡಿ ಎನ್ನುವಂತೆ ಬದುಕಿನ ಕೊನೆಯ ಕ್ಷಣದವರೆಗೂ ಜೀವನದ ಸಾರ್ಥಕತೆಯನ್ನು ಮೆರೆದವರು ಅಬ್ದುಲ್ ಕಲಾಂ ಜಿ.

ಭಾರತ ರತ್ನವಾಗಿ, ಕ್ಷಿಪಣಿ ಜನಕನಾಗಿ, ರಾಷ್ಟ್ರಪತಿಯಾಗಿ ಎಲ್ಲಕ್ಕಿಂತ ಮೇಲಾಗಿ ಒಬ್ಬ ಆದರ್ಶ ಶಿಕ್ಷಕರಾಗಿ ಅವರು ತೋರಿದ ದಾರಿ ಎಲ್ಲರಿಗೂ ಸ್ಪೂರ್ತಿದಾಯಕ. ದೇಶದ ಬೆಳವಣಿಗೆಗೆ ತಮ್ಮದೇ ಆದ ಅಪರೂಪದ ಕಾಣಿಕೆಯನ್ನು ನೀಡಿ ದೇಶದ ಕೀರ್ತಿಯನ್ನು ಹೆಚ್ಚಿಸಿದ ಅಜರಾಮರವಾಗಿ ಉಳಿದ ಕನಸುಗಾರ ಅಬ್ದುಲ್ ಕಲಾಂ ಅವರಿಗೆ ನನ್ನದೊಂದು ಸಲಾಂ

ಲೇಖನ: ಲಕ್ಷ್ಮೀದೇವಿ ಪತ್ತಾರ, ಪ್ರೌಢಶಾಲಾ ಶಿಕ್ಷಕಿ, ಬರಹಗಾರ್ತಿ, ಗಂಗಾವತಿ. ಜಿಲ್ಲಾ: ಕೊಪ್ಪಳ

ಕೊಪ್ಪಳ ಆರ್‌ಸೆಟಿ: ವಿವಿಧ ತರಬೇತಿಗಳಿಗೆ ಅರ್ಜಿ ಆಹ್ವಾನ

ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ, ಗ್ರಾಮೀಣ ಸ್ವಯಂ ಉದ್ಯೋಗ ತರಬೇತಿ ಸಂಸ್ಥೆ, ಕೊಪ್ಪಳ ವತಿಯಿಂದ ಜಿಲ್ಲೆಯ ಗ್ರಾಮೀಣ ಭಾಗದ ಆಸಕ್ತರಿಗೆ ವಿವಿಧ ತರಬೇತಿಗಳನ್ನು ಊಟ ಮತ್ತು ವಸತಿಯೊಂದಿಗೆ ಉಚಿತವಾಗಿ ನೀಡಲಾಗುತ್ತಿದ್ದು, ಆಸಕ್ತ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ.

ಸಂಸ್ಥೆಯಿಂದ 13 ದಿನಗಳ ಕೃಷಿ ಉದ್ಯಮಿ (ಕುರಿ ಸಾಕಾಣಿಕೆ, ಹೈನುಗಾರಿಕೆ) ತರಬೇತಿ, 10 ದಿನಗಳ ಅಣಬೆ ಬೇಸಾಯ ತರಬೇತಿ, 14 ದಿನಗಳ ಸಾಫ್ಟ್ ಟಾಯ್ಸ್ (ಮೃದು ಆಟಿಕೆಗಳು) ತರಬೇತಿ ಹಾಗೂ 38 ದಿನಗಳ ಕಂಪ್ಯೂಟರೈಸ್ಡ್ ಅಕೌಂಟಿಂಗ್ (ಟ್ಯಾಲಿ) ತರಬೇತಿಯನ್ನು ನೀಡಲಾಗುತ್ತದೆ. ತರಬೇತಿ ಪಡೆದ ಅಭ್ಯರ್ಥಿಗಳಿಗೆ ಬ್ಯಾಂಕಿನಿಂದ ಸಾಲ ಸೌಲಭ್ಯ ಒದಗಿಸಲು ಪ್ರಯತ್ನಿಸಲಾಗುವುದು.

ಅರ್ಜಿ ಸಲ್ಲಿಸಿದ ಅಭ್ಯರ್ಥಿಗಳಿಗೆ ಅಕ್ಟೋಬರ್ 23 ರಂದು ಸಂದರ್ಶನ ನಡೆಯಲಿದ್ದು, ಅ.24 ರಂದು ತರಬೇತಿ ಪ್ರಾರಂಭಿಸಲಾಗುವುದು. ಅರ್ಜಿ ಸಲ್ಲಿಸಲು ಅಭ್ಯರ್ಥಿಗಳು 18 ರಿಂದ 45 ವರ್ಷದ ಒಳಗಿನವರಾಗಿರಬೇಕು. ಕನಿಷ್ಠ ಎಂಟನೇ ತರಗತಿ ಪಾಸ್ ಆಗಿರಬೇಕು. ಕೊಪ್ಪಳ ಜಿಲ್ಲೆಯ ಗ್ರಾಮೀಣ ಭಾಗದವರಾಗಿರಬೇಕು. ಸ್ವಯಂ ಉದ್ಯೋಗದಲ್ಲಿ ಆಸಕ್ತಿ ಹೊಂದಿರಬೇಕು. ಆಸಕ್ತರು ಆಧಾರ್ ಕಾರ್ಡ್, ರೇಷನ್ ಕಾರ್ಡ್, ಪಾನ್‌ಕಾರ್ಡ್, ಎಸ್‌ಬಿಐ ಬ್ಯಾಂಕ್ ಪಾಸ್‌ಬುಕ್, ವಿದ್ಯಾರ್ಹತೆಯ ಪ್ರಮಾಣ ಪತ್ರಗಳ ಜೆರಾಕ್ಸ್ ಪ್ರತಿಗಳು ಹಾಗೂ ಪಾಸ್‌ಪೋರ್ಟ್ ಅಳತೆಯ 3 ಭಾವಚಿತ್ರಗಳೊಂದಿಗೆ ನಿರ್ದೇಶಕರು, ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ, ಗ್ರಾಮೀಣ ಸ್ವಯಂ ಉದ್ಯೋಗ ತರಬೇತಿ ಸಂಸ್ಥೆ, ಜಿಲ್ಲಾ ಕೈಗಾರಿಕಾ ಕೇಂದ್ರ ಆವರಣ, ಅಶೋಕ ಸರ್ಕಲ್ ಹತ್ತಿರ, ಕೊಪ್ಪಳ ವಿಳಾಸಕ್ಕೆ ಅರ್ಜಿ ಸಲ್ಲಿಸಬೇಕು.

ಹೆಚ್ಚಿನ ಮಾಹಿತಿಗಾಗಿ ಸಂಸ್ಥೆಯ ಕಚೇರಿ ಅಥವಾ ದೂ.ಸಂ.: 08539-231038, 9483618178, 7259073827, 9538096796, 9481085217 ಗೆ ಸಂಪರ್ಕಿಸಬಹುದು ಎಂದು ಎಸ್‌ಬಿಐ ಆರ್‌ಸೆಟಿಯ ನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಬಿ.ಎಲ್.ಬುಲ್ಸ್ ಕರಾಟೆ ಸಂಸ್ಥೆಯ ೯ನೇ ವಾರ್ಷಿಕೋತ್ಸವದಲ್ಲಿ ೫೧ ಕರಾಟೆ ವಿದ್ಯಾರ್ಥಿಗಳಿಗೆ ಬೆಲ್ಟ್ ವಿತರಣೆ.

ಗಂಗಾವತಿ: ಅಕ್ಟೋಬರ್-೧೨ ರಂದು ನಗರದ ಹೊಸಳ್ಳಿ ರಸ್ತೆಯಲ್ಲಿರುವ ವಿವೇಕ ಭಾರತಿ ಶಾಲೆ ಆವರಣದಲ್ಲಿ ಬಿ.ಎಲ್. ಬುಲ್ಸ್ ಕರಾಟೆ ಸಂಸ್ಥೆಯ ೯ನೇ ವಾರ್ಷಿಕೋತ್ಸವದ ಅಂಗವಾಗಿ ಕರಾಟೆ ವಿದ್ಯಾರ್ಥಿಗಳಿಗೆ ಬೆಲ್ಟ್ ಪರೀಕ್ಷೆ ಮತ್ತು ಮಕ್ಕಳಿಗೆ ಸಸಿ ನೀಡುವ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು.ಈ ಕಾರ್ಯಕ್ರಮದಲ್ಲಿ ಮುಖ್ಯ ಪರಿವೀಕ್ಷಕರಾಗಿ ಅಬ್ದುಲ್ ರಜಾಕ್ ಸಿಂಧನೂರ್ ರವರು ಆಗಮಸಿದ್ದರು ಹಾಗೂ ೫೧ ಕರಾಟೆ ವಿದ್ಯಾರ್ಥಿಗಳು ಬೆಲ್ಟ್ ಪರೀಕ್ಷೆಯಲ್ಲಿ ಭಾಗವಹಿಸಿದ್ದರು ಮತ್ತು ಪ್ರಿಯಾ ಮತ್ತು ಪ್ರಣವಿ ವಿದ್ಯಾರ್ಥಿಗಳು ಡಬಲ್ ಪ್ರಮೋಶನ್ ಪಡೆದುಕೊಂಡರು.

ಕರಾಟೆಯ ಮುಖ್ಯ ತರಬೇತಿರಾದ ಮಂಜುನಾಥ ರಾಠೋಡ್ ಮಾತನಾಡಿ ಮಕ್ಕಳಿಗಿರುವ ಧೈರ್ಯ. ಪ್ರತಿಭೆ. ಸಾಹಸ ಪ್ರದರ್ಶನ ಮತ್ತು ಇನ್ನಿತರ ಐಚ್ಛಿಕ ಕಲಿಕೆ ಮಕ್ಕಳ ಬೆಳವಣಿಗೆ ಮತ್ತು ಅಭಿವೃದ್ಧಿಗೆ ಅನುಕೂಲವಾಗುತ್ತದೆ. ಜೊತೆಗೆ ಆತ್ಮ ರಕ್ಷಣಾ ಕಲೆ ಎಲ್ಲರಿಗೂ ಬಹು ಮುಖ್ಯವಾಗಿದೆ ಎಂದು ಹೇಳಿದ್ದರು. ಕರಾಟೆ ತರಬೇತಿದಾರಾದ ಫಯಾಜ್, ಮೀನಾಕ್ಷಿ, ಪ್ರಜ್ವಲ್ ಮತ್ತು ವಿವೇಕ ಭಾರತಿ ಶಾಲೆ ಅಧ್ಯಕ್ಷರಾದ ಅಶೋಕ್ ಮತ್ತು ಕರಾಟೆ ಪಾಲಕರಾದ ಮಂಜುನಾಥ್, ಶ್ರೀಮತಿ ಲಕ್ಷಿö್ಮ, ಶ್ರೀಮತಿ ಶ್ರೀಕುಮಾರಿ, ಡಾ|| ಕಿರಣ್ ಕುಮಾರ್, ಮಂಜುನಾಥ್ ವಕೀಲರು, ಪಲ್ಲವಿ, ವಲಿಭಾಷಾ, ಭೀಮರಾಯ ಮುಂತಾದವರು ಉಪಸ್ಥಿತರಿದ್ದರು.

ಪಂಡರಾಪುರ ಪಾದಯಾತ್ರೆಯ ಯಾತ್ರಾತ್ರಿಗಳಿಂದ ಆರ್ಯವೈಶ್ಯ ಸಮಾಜದ ಅಧ್ಯಕ್ಷರಾದ ದರೋಜಿ ನಾಗರಾಜ ಶ್ರೇಷ್ಠಿ ನಿವಾಸದಲ್ಲಿ ವಿಶೇಷ ಪೂಜೆ

ಗಂಗಾವತಿ: ನಗರದ ಹಿರೇಜಂತಕಲ್ ವಿರುಪಾಪುರದ ಆರ್ಯವೈಶ್ಯ ಸಮಾಜದ ಅಧ್ಯಕ್ಷರಾದ ದರೋಜಿ ನಾಗರಾಜ ಶ್ರೇಷ್ಠಿ ಅವರ ನಿವಾಸದಲ್ಲಿ ಕಳೆದ 38 ವರ್ಷಗಳಿಂದ ಭದ್ರಾವತಿ ಮತ್ತು ಓಬಳಾಪುರಂನಿಂದ ಪಂಡರಾಪುರಕ್ಕೆ ಹೋಗುವ ಪಾದಯಾತ್ರೆಯ ಯಾತ್ರಾತ್ರಿಗಳಿಂದ ವಿಶೇಷ ಪೂಜೆ ನೆರವೇರಿಸಲಾಯಿತು. ಇದಕ್ಕೂ ಮುನ್ನ ಶ್ರೀ ಪಂಡರಾಪುರ ಪಾಂಡುರಂಗನ ಮತ್ತು ರುಕ್ಮಿಣಿ ದೇವಿಯ ಆರಾಧನೆ ಮಾಡಲಾಯಿತು. ಜೊತೆಗೆ ಭಜನೆಯನ್ನು ನೆರವೇರಿಸಿ ಮುಂದೆ ಸಾಗಲಾಯಿತು.

ಈ ಸಂದರ್ಭದಲ್ಲಿ ಮಾತನಾಡಿದ ಪಾದಯಾತ್ರೆಯ ಮತ್ತು ಭಜನಾ ಮಂಡಳಿಯ ಉಸ್ತುವಾರಿಗಳಾದ ಚಂದ್ರಶೇಖರ ಗೋಂದಿಮಠ ಭದ್ರಾವತಿ ಅವರು, ಪಾದಯಾತ್ರೆಯು ಸ್ವಾಮಿ ನಾಮದೇವಾನಂದ ಭಾರತಿ ಸ್ವಾಮಿಗಳು ಸಾಧಕಾಶ್ರಮ ಗೊಂದಿಮಠ ಅವರ ನೇತೃತ್ವದಲ್ಲಿ ಕಳೆದ 38 ವರ್ಷಗಳಿಂದ ಶ್ರೀ ಪಾಂಡುರಂಗ ಪಂಡರಾಪುರಕ್ಕೆ ಪಾದಯಾತ್ರೆಯನ್ನು ಇಂದಿಗೂ ನಾವು ಮುಂದುವರಿಸಿಕೊಂಡು ಬಂದಿದ್ದೇವೆ. ಪಾದಯಾತ್ರೆ ಉದ್ದೇಶ ದುಷ್ಟ ಚಟಗಳಿಂದ ದೂರ ಮಾಡುವುದು. ಗೋಂದಿಮಠ ಎಂದರೆ ಜೀವನದ ಜಂಜಾಟದಲ್ಲಿ ಜೊತೆಗೆ ಗೊಂದಲವಿಲ್ಲದ ಜೀವನ ನಡೆಸುವುದಕ್ಕೆ ಆಶ್ರಯ ನೀಡುವಂತ ಮಠ ಎಂದು ಹೇಳಿದರು.

ಈ ಸಂದರ್ಭದಲ್ಲಿ ನವ ಬೃಂದಾವನ ಭಜನಾ ಮಂಡಳಿಯ ಅಧ್ಯಕ್ಷರಾದ ದರೋಜಿ ನರಸಿಂಹ ಶ್ರೇಷ್ಠಿ ಮತ್ತು ಭಜನಾ ಮಂಡಳಿಯ ಸದಸ್ಯರು, ವಾಸವಿ ಮಹಿಳಾ ಮಂಡಳಿಯ ಅಧ್ಯಕ್ಷರಾದ ಶ್ರೀಮತಿ ರುಕ್ಮಿಣಿಮ್ಮ. ಶ್ರೀಮತಿ ಪದ್ಮಾವತಿ, ಶ್ರೀಮತಿ ರಾಧಿಕಾ ಮತ್ತು ಸದಸ್ಯರು, ವಾಸವಿ ಯುವಜನ ಸಂಘದ ಅಧ್ಯಕ್ಷ ಮಂಜುನಾಥ ಮತ್ತು ದರೋಜಿ ವೆಂಕಟೇಶ. ಗುರು ಭೀಮ್ ಭಟ್ ಜೋಶಿ. ಭೀಷ್ಮ ನಾರಾಯಣ ಸೇರಿದಂತೆ ಸಮಾಜದ ಮುಖಂಡರಾದ ಜಿ.ಆರ್.ಎಸ್ ಸತ್ಯನಾರಾಯಣ, ಸಂಜಿವ ಕುಮಾರ ರಾಯಚೂರು. ಹೊಸೂರ ಮಂಜುನಾಥ ಶ್ರೇಷ್ಠಿ, ಬಸವರಾಜ, ಪ್ರಶಾಂತ ಸೇರಿದಂತೆ ಇತರರು ಭಾಗವಹಿಸಿ ಅಧ್ಯಕ್ಷರ ಕುಟುಂಬಸ್ಥರಿಂದ ಲಘುಉಪಹಾರವನ್ನು ನೆರವೇರಿಸಲಾಯಿತು.

ಹೊಸಪೇಟೆಯಲ್ಲಿ ಕರ್ನಾಟಕ ರಾಜ್ಯ ಬರಹಗಾರರ ಸಂಘದಿಂದ ರಾಜ್ಯಮಟ್ಟದ ಕರೋಕೆ ಚಿತ್ರಗೀತೆ ಸ್ಪರ್ಧೆ

ಕರ್ನಾಟಕ ರಾಜ್ಯ ಬರಹಗಾರರ ಸಂಘ ಹೂವಿನಹಡಗಲಿ ಇವರು ಆಯೋಜಿಸಿರುವ ಕರ್ನಾಟಕ ಧ್ವನಿ ಸಂಚಿಕೆ ಒಂದು ಈ ಸ್ಪರ್ಧೆಯ ಅಂತಿಮ ಹಂತದ ಸ್ಪರ್ಧೆಯನ್ನು ವಿಜಯನಗರ ಜಿಲ್ಲೆ, ಹೊಸಪೇಟೆಯ ಬುದ್ಧ ಬಸವ ಭವನದಲ್ಲಿ ದಿನಾಂಕ 26-10-2025ರ ಭಾನುವಾರದಂದು ಆಯೋಜಿಸಲಾಗಿದೆ. ಈ ಗಾಯನ ಸ್ಪರ್ಧೆಯಲ್ಲಿ 38 ಜನ ಗಾಯಕರಿದ್ದು ಯುಗಳ ಗೀತೆಗಳು ಹಾಡಲಿದ್ದಾರೆ ಅಂತಿಮವಾಗಿ ಆಯ್ಕೆಯಾಗುವ ಗಾಯಕರಿಗೆ ಬೆಳಗಾವಿಯಲ್ಲಿ ನಡೆಯಲಿರುವ ಕನ್ನಡ ನುಡಿ ವೈಭವ 2026ರ ರಾಜ್ಯಮಟ್ಟದ ಕಾರ್ಯಕ್ರಮದಲ್ಲಿ ರಾಜ್ಯಮಟ್ಟದ ಪ್ರಶಸ್ತಿಯನ್ನು ನೀಡಿ ಗೌರವಿಸಲಾಗುತ್ತದೆ.

ಈ ಕಾರ್ಯಕ್ರಮದ ಉದ್ಘಾಟನೆಯನ್ನು ಶ್ರೀಮತಿ ಆಶಾರಾಣಿ ನಡೋಣಿ ಸದಸ್ಯರು ಕರ್ನಾಟಕ ಲಲಿತಕಲಾ ಅಕಾಡೆಮಿ ಬೆಂಗಳೂರು ರಾಷ್ಟ್ರಮಟ್ಟದ ಚಿತ್ರ ಕಲಾವಿದರು ಬೆಳಗಾವಿ ನೆರವೇರಿಸಲಿದ್ದಾರೆ. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕರ್ನಾಟಕ ರಾಜ್ಯ ಬರಹಗಾರರ ಸಂಘ ವಿಜಯನಗರ ಜಿಲ್ಲಾ ಘಟಕದ ಅಧ್ಯಕ್ಷರಾದ ಶ್ರೀ ಕೆ ಎಸ್ ನಾಯ್ಕರವರು ವಹಿಸಲಿದ್ದಾರೆ. ಗೊರೂರು ಅನಂತರಾಜು ಅವರ ಕೃತಿ ನಿಂತು ಹೋದ ರಂಗ ವೈಭವ ಪುಸ್ತಕದ ಲೋಕಾರ್ಪಣೆಯನ್ನು ಡಾ.ಸಿ ಸೋಮಶೇಖರ್, ಐ ಎ ಎಸ್ ಬಸವ ವೇದಿಕೆ ಬೆಂಗಳೂರು ಅಧ್ಯಕ್ಷರು ನೆರವೇರಸುತ್ತಾರೆ. ಸಿಂಗಾರ ಎಂಬ ಹಾಡನ್ನು ಶ್ರೀಮತಿ ಕಮಲ ಕುಲಕರ್ಣಿ ಬಿಡುಗಡೆ ಮಾಡಲಿದ್ದಾರೆ.

ಕಾರ್ಯಕ್ರಮದಲ್ಲಿ ಪ್ರಾಸ್ತಾವಿಕ ನುಡಿ ಆಡಲಿದ್ದಾರೆ. ಶ್ರೀ ಮಧುನಾಯ್ಕ, ಲಂಬಾಣಿ, ಅಧ್ಯಕ್ಷರು ಕರ್ನಾಟಕ ರಾಜ್ಯ ಬರಹಗಾರರ ಸಂಘ (ನೋಂ), ಹೂವಿನ ಹಡಗಲಿ. ಮುಖ್ಯ ಅತಿಥಿಗಳಾಗಿ ಶ್ರೀ ಗೊರೂರು ಅನಂತರಾಜು ಗೌರವ ಅಧ್ಯಕ್ಷರು ಹಾಗೂ ಸಾಹಿತಿಗಳು, ಶ್ರೀ ವಿರುಪಾಕ್ಷಪ್ಪ ಯು ಉಪಾಧ್ಯಕ್ಷರು, ಶ್ರೀ ಉದೇದಪ್ಪ ಕ್ಯಾದಿಗೆಹಾಳ್ ಹೊಸಪೇಟೆ ತಾಲೂಕು ಅಧ್ಯಕ್ಷರು. ಶ್ರೀ ಪಿ.ವಿ ವೆಂಕಟೇಶ ವಕೀಲರು ಕರುನಾಡ ಕ್ರಿಯಾಶೀಲ ಸಮಿತಿ ಅಧ್ಯಕ್ಷರು ಹೊಸಪೇಟೆ ಇವರು ಹಾಜರಿರುತ್ತಾರೆ.

ಈ ಸ್ಪರ್ದೆಯ ತೀರ್ಪುಗಾರರಾಗಿ ಶ್ರೀ ಕುಬೇರನಾಯ್ಕ ದಾವಣಗೆರೆ ಹಾಗೂ ಶ್ರೀ ಸ್ವರೂಪ ಭಾರದ್ವಾಜ್ ರವರು ನಿರ್ವಹಿಸುತ್ತಾರೆ.