
ದಾರದಿಂದ ದಾರಿತೋರಿ, ನೀರಿನಿಂದ ಕಷ್ಟಕಾರ್ಪಣ್ಯ ಕಳೆಯುತ್ತಿದ್ದ ಶ್ರೀ ನವಣಕ್ಕಿ ನಾಗಪ್ಪ ತಾತನವರು: ಹೆಬ್ಬಾಳ ಶ್ರೀಗಳು
ಗಂಗಾವತಿ: ಗಂಗಾವತಿಯ ಸರ್ವ ಜನಾಂಗದ ದೈವೀ ಪುರುಷರಾದ ಪರಮಪೂಜ್ಯ ಶ್ರೀ ನವಣಕ್ಕಿ ನಾಗಪ್ಪ ತಾತನವರು ತಮ್ಮ ಮಂತ್ರಶಕ್ತಿಯಿಂದ ದಾರ ನೀಡಿ, ಬದುಕಿನ ದಾರಿ ತೋರಿಸುತ್ತಿದ್ದರು, ಜೊತೆಗೆ ಕಷ್ಟ, ಸಂಕೋಲೆಗಳನ್ನು ಹೊತ್ತುತಂದ ಭಕ್ತಾದಿಗಳಿಗೆ ಮಂತ್ರಿಸಿದ ನೀರು ನೀಡುವ ಮೂಲಕ ಅವರ ಕಷ್ಟಗಳನ್ನು ಕಳೆಯುತ್ತಿದ್ದರು ಎಂದು ಹೆಬ್ಬಾಳ ಬೃಹನ್ಮಠದ ಪೂಜ್ಯ ಶ್ರೀ ನಾಗಭೂಷಣ ಶಿವಯೋಗಿ ಶಿವಾಚಾರ್ಯ ಮಹಾಸ್ವಾಮಿಗಳು ತಿಳಿಸಿದರು. ಅವರು ಏಪ್ರಿಲ್-೮ ಮಂಗಳವಾರ ಶ್ರೀ ನವಣಕ್ಕಿ ನಾಗಪ್ಪ ತಾತನವರ ಶಿಲಾ ಮೂರ್ತಿ ಪ್ರತಿಷ್ಠಾಪನೆಯನ್ನು ನೆರವೇರಿಸಿ ಮಾತನಾಡಿದರು. ನವಣಕ್ಕಿ ನಾಗಪ್ಪನವರ ೨೧ನೇ…