
ಆಗಸ್ಟ್-೨೪ ರವಿವಾರ ಉದ್ಘಾಟನೆಗೊಂಡ ಶ್ರೀ ರೇಣುಕಾ ಹುಲಿಗೆಂಬಾ ದೇವಿ ಸಮುದಾಯ ಭವನ.
ಗಂಗಾವತಿ: ಸಮಾಜಗಳ ಅಭಿವೃದ್ಧಿಗೆ ಒಗ್ಗಟ್ಟು ಅವಶ್ಯವಾಗಿದೆ. ಒಗ್ಗಟ್ಟಿನಿಂದ ಸಮಾಜವು ಶೈಕ್ಷಣಿಕವಾಗಿ, ಧಾರ್ಮಿಕವಾಗಿ, ಸಾಮಾಜಿಕವಾಗಿ ಅಭಿವೃದ್ಧಿ ಸಾಧ್ಯ ಎಂದು ಮಾಜಿ ಶಾಸಕ ಪರಣ್ಣ ಮುನವಳ್ಳಿ ಹೇಳಿದರು. ಅವರು ರವಿವಾರ ನಗರದ ಮಾರುತೇಶ್ವರನಗರ ಉಪ್ಪಿನಮಾಳಿ ಕ್ಯಾಂಪಿನಲ್ಲಿರುವ ಶ್ರೀರೇಣುಕಾ ಹುಲಿಗೆಂಬಾ ದೇವಿ ಸಮುದಾಯ ಭವನವನ್ನು ಉದ್ಘಾಟಿಸಿ ಮಾತನಾಡಿದರು. ಈ ಹಿಂದೆ ಶಾಸಕರಾಗಿದ್ದ ಸಮಯದಲ್ಲಿ ಸರ್ವ ವರ್ಗಗಳ ಅಭಿವೃದ್ಧಿಗೆ ಪ್ರಾಮಾಣಿಕ ಪ್ರಯತ್ನ ಮಾಡಲಾಗಿದ್ದು, ಸದರಿ ಸಮುದಾಯ ಭವನಕ್ಕೆ ಮೂರು ಲಕ್ಷ ಅನುದಾನವನ್ನು ನೀಡಲಾಗಿದೆ ಎಂದು ಸ್ಮರಿಸಿದರು. ಅಲ್ಲದೆ ಎಲ್ಲರೂ ಮಕ್ಕಳಿಗೆ ಉತ್ತಮ ಶಿಕ್ಷಣ…