ಆಗಸ್ಟ್-೨೧ ರಂದು ಗಂಗಾವತಿಯಲ್ಲಿ ನಗರ ಸಂಕೀರ್ತನಾ ಯಾತ್ರೆ: ಸದಾನಂದ ಶೇಟ್

ಆಗಸ್ಟ್-೨೧ ರಂದು ಗಂಗಾವತಿಯಲ್ಲಿ ನಗರ ಸಂಕೀರ್ತನಾ ಯಾತ್ರೆ: ಸದಾನಂದ ಶೇಟ್

ಗಂಗಾವತಿ: ಶ್ರಾವಣ ಮಾಸದ ನಿಮಿತ್ಯ ಆಗಸ್ಟ್-೨೧ ಗುರುವಾರದಂದು ನಗರ ಸಂಕೀರ್ತನಾ ಸಮಿತಿ (ಸರ್ವ ಸಮಾಜ) ವತಿಯಿಂದ ಗಂಗಾವತಿ ನಗರದಲ್ಲಿ ಭಜನೆ ಮೂಲಕ ಸಂಕೀರ್ತನಾ ಯಾತ್ರೆ ಬೆಳಿಗ್ಗೆ ೫ ಗಂಟೆಯಿಂದ ಗ್ರಾಮದೇವತೆ ದುರ್ಗಮ್ಮ ದೇವಸ್ಥಾನ (ಚನ್ನಬಸವವಸ್ವಾಮಿ ತಾತನ ಮಠ) ದಿಂದ ಪ್ರಾರಂಭಗೊಂಡು ಗಾಂಧಿವೃತ್ತ, ಬಸವಣ್ಣ ಸರ್ಕಲ್, ಪಂಪಾನಗರ ಸರ್ಕಲ್ ಮೂಲಕ ಯಾಜ್ಞವಲ್ಕ್ಯ ಮಂದಿರದವರೆಗೆ ನಡೆಯಲಿದೆ ಎಂದು ಸಮಿತಿಯ ಅಧ್ಯಕ್ಷರಾದ ಸದಾನಂದ ಶೇಟ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ. ಈ ಸಂಕೀರ್ತನಾ ಯಾತ್ರೆಯನ್ನು ಶ್ರಾವಣ ಮಾಸದ ನಿಮಿತ್ಯ ಮಾಡಲಾಗುತ್ತಿದ್ದು, ಸಂಕೀರ್ತನ ಯಾತ್ರೆಯ ದಾರಿಯುದ್ದಕ್ಕೂ…

Read More
ಕವನ ಪರಿಣಾಮಕಾರಿಯಾಗಿರಲಿ : ರಾಮಮೂರ್ತಿ ನವಲಿ ಗಂಗಾವತಿ

ಕವನ ಪರಿಣಾಮಕಾರಿಯಾಗಿರಲಿ : ರಾಮಮೂರ್ತಿ ನವಲಿ ಗಂಗಾವತಿ

ಕವಿಗಳು ಸ್ವರಚಿತ ಕವನ ರಚಿಸುವಾಗ ಪರಿಣಾಮಕಾರಿಯಾಗಿರ ಬೇಕೆಂದು ಪತ್ರಕರ್ತ ರಾಮಮೂರ್ತಿ ನವಲಿ ಹೇಳಿದರು. ರೋಟರಿ ಕ್ಲಬ್, ಕಾವ್ಯ ಲೋಕ ಸಂಘಟನೆ ಮತ್ತು ವಿಶ್ವ ರತ್ನ ಗ್ರಾಮೀಣಾಭಿವೃದ್ದಿ ಸಂಸ್ಥೆ ಹೊಸಳ್ಳಿ ಇವರ ಸಂಯುಕ್ತಾಶ್ರಯದಲ್ಲಿ ಜರುಗಿದ ಸ್ವಾತಂತ್ರ್ಯ ಸಂಭ್ರಮ 109ನೇ ಕವಿಗೋಷ್ಠಿಯನ್ನು ಉದ್ಘಾಟಿಸಿ ಮಾತನಾಡಿದರು. ಸ್ವವರಚಿತವಾಗಿರುವ ಕವನಗಳು ಸಾಮಾಜಿಕ, ರಾಜಕೀಯ, ಸಾಹಿತ್ಯಕವಾಗಿರುವ ವಿಷಯಗಳು ಪರಿಣಾಮಕಾರಿಯಾಗಿರಬೇಕೆಂದು ತಿಳಿಸಿದ ಅವರು ಕವನಗಳನ್ನು ವಾಚಿಸಿದರೆ ಅದು ಪರಿಣಾಮಕಾರಿಯಾಗಿ ವಿವಿಧ ಕ್ಷೇತ್ರಗಳಿಗೆ ತಲುಪುವುದರ ಮೂಲಕ ಸ್ಪಂದನೆ ಸಿಗಬೇಕೆಂದರು. ಇತ್ತೀಚಿನ ದಿನಗಳಲ್ಲಿ ಕವಿಗಳು ಕೇವಲ ಪ್ರಚಾರಕ್ಕಾಗಿ ಮೊಬೈಲ್,…

Read More
ವಿಜಯದ್ರಿ ದೇವಸ್ಥಾನದ ವೀರಾಂಜನೇಯ ಸ್ವಾಮಿ ಜಾತ್ರಾ ಮಹೋತ್ಸವ

ವಿಜಯದ್ರಿ ದೇವಸ್ಥಾನದ ವೀರಾಂಜನೇಯ ಸ್ವಾಮಿ ಜಾತ್ರಾ ಮಹೋತ್ಸವ

ಕೊಪ್ಪಳ ತಾಲೂಕಿನ ಕಾಸನಕಂಡಿಯಲ್ಲಿ ವಿಜಯದ್ರಿ ದೇವಸ್ಥಾನದ ವೀರಾಂಜನೇಯ ಸ್ವಾಮಿ ಜಾತ್ರಾ ಮಹೋತ್ಸವ ಅದ್ದೂರಿಯಾಗಿ ಜರುಗಿತು. ಕೊಪ್ಪಳ ಜಿಲ್ಲೆಯ ಕೊಪ್ಪಳ ತಾಲೂಕಿನ ಮತ್ತು ಹಾಸನಖಂಡಿ ನಿಂಗಾಪೂರು ಹೊಸಳ್ಳಿ ಹುಲಿಗಿ ಬಂಡಿ ಅರ್ಲಾಪುರ್, ಬಗ್ನಾಳ್, ಹಿಟ್ನಾಳ ಗ್ರಾಮಸ್ಥರು ವಿಜಯವಾತ್ರಿಯಲ್ಲಿ ವೀರಾಂಜನೇಯ ಸ್ವಾಮಿಯ ಜಾತ್ರಾ ಮಹೋತ್ಸವ ವಿಜೃಂಭಣೆಯಿಂದ ಆಚರಿಸಿದರು. ಬೆಳಗ್ಗೆ 8:00ಗೆ ಸಂಕಲ್ಪ ಉಮಾ ಹವನಗಳು ಮತ್ತು ತುಂಗಭದ್ರಾ ಹರತಿ ಗೋಪೂಜೆ ಅಶ್ವಪೂಜೆ 111 ಮಹಿಳೆಯರಿಂದ ಕುಂಭ ಮೆರವಣಿಗೆ ವಾದ್ಯ ಮೇಳದೊಂದಿಗೆ ದೇವಸ್ಥಾನದವರೆಗೆ ಮೆರಣಿಗೆ ನಡೆಯಿತು. ಈ ಸಂದರ್ಭದಲ್ಲಿ ತುಂಗಾ ಹಾರ್ತಿಯಲ್ಲಿ…

Read More
ಶ್ರಾವಣ ಸಂಭ್ರಮ ವಿಶೇಷ ಭಜನಾ ಕಾರ್ಯಕ್ರಮ ಸಂಪನ್ನ

ಶ್ರಾವಣ ಸಂಭ್ರಮ ವಿಶೇಷ ಭಜನಾ ಕಾರ್ಯಕ್ರಮ ಸಂಪನ್ನ

ಗಂಗಾವತಿ: ನಗರದ ಶಾರದಾ ದೇಗುಲದಲ್ಲಿ ಶ್ರಾವಣ ಮಾಸದ ಪ್ರಯುಕ್ತ ಪ್ರತಿ ಸೋಮವಾರ ಶಾರದಾ ಶಂಕರ ಭಕ್ತ ಭಜನಾ ಮಂಡಳಿ ಆಯೋಜಿಸಿರುವ ಶ್ರಾವಣ ಸಂಭ್ರಮ ವಿಶೇಷ ಭಜನಾ ಕಾರ್ಯಕ್ರಮ ನಾಲ್ಕನೆಯ ಸೋಮವಾರ ದಿನದಂದು ವಿಶೇಷ ಧಾರ್ಮಿಕ ಪೂಜಾ ಕಾರ್ಯಕ್ರಮ ಹಾಗೂ ಭಜನೆಯೊಂದಿಗೆ ಸಂಪನ್ನಗೊಂಡಿತು. ಈ ಸಂದರ್ಭದಲ್ಲಿ ಶೃಂಗೇರಿ ಶಂಕರ ಮಠದ ಜಿಲ್ಲಾ ಸಂಯೋಜಕಿ ಮಾತನಾಡಿ ಶೃಂಗೇರಿಯ ಜಗದ್ಗುರುಗಳ ಅನುಗ್ರಹದ ಮೇರೆಗೆ ಶ್ರಾವಣ ಮಾಸದ ಪ್ರಯುಕ್ತ ಪ್ರತಿ ಸೋಮವಾರ ವಿಶೇಷ ಭಜನಾ ಕಾರ್ಯಕ್ರಮವನ್ನು ನಡೆಸುತ್ತಾ ಬರಲಾಗಿದ್ದು, ಭಕ್ತಿ ಮಾರ್ಗಕ್ಕೆ ಭಜನೆ…

Read More
ಯುವ ಜನಾಂಗದ ದೇಶದ ಶಕ್ತಿಯಾಗಲಿ –  ಕಲ್ಮಠ ಶ್ರೀಗಳು

ಯುವ ಜನಾಂಗದ ದೇಶದ ಶಕ್ತಿಯಾಗಲಿ – ಕಲ್ಮಠ ಶ್ರೀಗಳು

ಭಾರತಕ್ಕೆ ಸ್ವಾತಂತ್ರ್ಯ ದೊರೆತು 79 ವರ್ಷಗಳು ಕಳೆದಿವೆ. ಈ ಸುದೀರ್ಘ ಅವಧಿಯಲ್ಲಿ ಭಾರತ ದೇಶವು ವಿಜ್ಞಾನ ,ತಂತ್ರಜ್ಞಾನ, ಆರೋಗ್ಯ ,ಶಿಕ್ಷಣ, ಬಹ್ಯಾಕಾಶ ಸಂಶೋಧನೆ ಹಾಗೂ ರಕ್ಷಣಾ ಕ್ಷೇತ್ರಗಳಲ್ಲಿ ಅನನ್ಯ ಸಾಧನೆಯನ್ನು ಮಾಡಿ ಅಪಾರ ಪ್ರಗತಿಯನ್ನು ಸಾಧಿಸಿದೆ. ಆದಾಗ್ಯೂ ಭಾರತವನ್ನು ಮತ್ತಷ್ಟು ಜಾಗತಿಕ ಶಕ್ತಿಯನ್ನಾಗಿ ರೂಪಿಸುವ ಜವಾಬ್ದಾರಿ ಇಂದಿನ ಯುವ ಜನಾಂಗದ ಮೇಲೆ ಇದೆ. ಯುವಜನತೆ ಹೊಸ ಹೊಸ ಆಲೋಚನೆ, ಕ್ರಿಯಾಶೀಲತೆ, ಅನನ್ಯ ಆವಿಷ್ಕಾರಗಳಿಂದ ದೇಶದ ಪ್ರಗತಿಗೆ ಚೈತನ್ಯ ಶಕ್ತಿಯನ್ನು ತುಂಬಬೇಕಾಗಿದೆ. ವಿಶ್ವದಲ್ಲಿಯೇ ಹೆಚ್ಚಿನ ಜನಸಂಖ್ಯೆಯನ್ನು ಹೊಂದಿರುವ ಭಾರತಕ್ಕೆ…

Read More
ಶಿಕ್ಷಣದ ಜೊತೆಗೆ ಸಂಸ್ಕಾರವು ಅಗತ್ಯ: ನಾಗರಾಜ್ ಗುತ್ತೇದಾರ್

ಶಿಕ್ಷಣದ ಜೊತೆಗೆ ಸಂಸ್ಕಾರವು ಅಗತ್ಯ: ನಾಗರಾಜ್ ಗುತ್ತೇದಾರ್

ಗಂಗಾವತಿ: ನಗರದ ಪ್ರತಿಷ್ಠಿತ ಸಂಕಲ್ಪ ಪದವಿಪೂರ್ವ ಕಾಲೇಜಿನ ಪ್ರಥಮ ವರ್ಷದ ವಿದ್ಯಾರ್ಥಿಗಳ ಸ್ವಾಗತ ಸಮಾರಂಭವು ನಡೆಯಿತು. ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಿದ ಸಂಸ್ಥೆಯ ಕಾರ್ಯಧ್ಯಕ್ಷರಾದ ನಾಗರಾಜ್ ಎಸ್ ಗುತ್ತೇದಾರ್ ವಕೀಲರು ನಮ್ಮ ಸಂಸ್ಥೆಯು ಕಳೆದ ಹಲವು ವರ್ಷಗಳಿಂದ ಶಿಕ್ಷಣದ ಜೊತೆಗೆ ಸಂಸ್ಕಾರಯುತ ಬದುಕಿಗೆ ಬೇಕಾದ ಮೌಲ್ಯಗಳನ್ನು ಕಲಿಸುವ ಮೂಲಕ ಉದಾತ್ತ ಮೌಲ್ಯಗಳನ್ನು ಪೋಷಿಸುವ ಹಾಗೂ ಅವುಗಳನ್ನು ಯಥಾವತ್ತಾಗಿ ಸಮಾಜಕ್ಕೆ ಮುಂದುವರಿಸುವ ಕಾರ್ಯವನ್ನು ಮಾಡುತ್ತಿದೆ. ವಿದ್ಯಾರ್ಥಿಗಳು ಶಿಕ್ಷಣದ ಜೊತೆ ಜೊತೆಗೆ ಜೀವನದ ಉದಾತ್ತ ಮೌಲ್ಯಗಳು, ಆದರ್ಶಗಳು, ಸಂಸ್ಕಾರಗಳು, ಹಾಗೂ ನಮ್ಮ…

Read More
ಲಯನ್ಸ್ ಕ್ಲಬ್ ವತಿಯಿಂದ ಹಮ್ಮಿಕೊಂಡಿದ್ದ ಕಾರ್ಯಕ್ರಮಗಳಲ್ಲಿ ಸ್ವಾತಂತ್ರ್ಯ ಹೋರಾಟಗಾರ ದಿ|| ಅಲ್ಲೂರಿ ಸತ್ಯನಾರಾಯಣರಾಜು ಅವರ ಜೀವನ ಕುರಿತ ಪುಸ್ತಕ ಬಿಡುಗಡೆ

ಲಯನ್ಸ್ ಕ್ಲಬ್ ವತಿಯಿಂದ ಹಮ್ಮಿಕೊಂಡಿದ್ದ ಕಾರ್ಯಕ್ರಮಗಳಲ್ಲಿ ಸ್ವಾತಂತ್ರ್ಯ ಹೋರಾಟಗಾರ ದಿ|| ಅಲ್ಲೂರಿ ಸತ್ಯನಾರಾಯಣರಾಜು ಅವರ ಜೀವನ ಕುರಿತ ಪುಸ್ತಕ ಬಿಡುಗಡೆ

ಗಂಗಾವತಿ: ೭೯ನೇ ಸ್ವಾತಂತ್ರ‍್ಯೋತ್ಸವದ ಅಂಗವಾಗಿ ಲಯನ್ಸ್ ಕ್ಲಬ್ ಗಂಗಾವತಿ ಸಂಸ್ಥೆ, ಹಲವಾರು ಕಾರ್ಯಕ್ರಮಗಳನ್ನು ಹಮ್ಮಿಕೊಂಡಿತ್ತು. ಲಯನ್ಸ್ ಕ್ಲಬ್ ಅಧ್ಯಕ್ಷರಾದ ಡಾ|| ಶಿವಕುಮಾರ್ ಮಾಲಿಪಾಟೀಲ್ ಅವರು ರಾಷ್ಟ್ರ ಧ್ವಜಾರೋಹಣ ನೆರವೇರಿಸಿದರು. ನಂತರ ವೇದಿಕೆ ಕಾರ್ಯಕ್ರಮದಲ್ಲಿ ಅಪ್ರತಿಮ ಸ್ವತಂತ್ರ ಹೋರಾಟಗಾರರಾದ ಶ್ರೀ ಅಲ್ಲೂರಿ ಸತ್ಯನಾರಾಯಣರಾಜು ಅವರ ಜೀವನ ಕುರಿತ ಎಸ್.ಡಿ.ವಿ ಅಜೀಜ್ ಅವರು ಇಂಗ್ಲಿಷ್ ಭಾಷೆಯಲ್ಲಿ ರಚಿಸಿದ ಪುಸ್ತಕ ಬಿಡುಗಡೆಯಾಯಿತು. ಪುಸ್ತಕದ ಬಗ್ಗೆ ವಿವರವಾಗಿ ಖ್ಯಾತ ಕಣ್ಣಿನ ತಜ್ಞರಾದ ಡಾ|| ಹನುಮಂತಪ್ಪ ಹಾಗೂ ಡಾ|| ಶಿವಕುಮಾರ ಮಾಲಿಪಾಟೀಲ್ ಅವರು ಮಾತನಾಡಿದರು….

Read More
ಮಹಾನ್ ಕಿಡ್ಸ್ ಶಾಲೆಯಲ್ಲಿ ಶ್ರೀ ಕೃಷ್ಣ ಜನ್ಮಾಷ್ಟಮಿ. ಸತ್ಯ ಧರ್ಮ ಪಾಲನೆಯ ಶ್ರೀ ಕೃಷ್ಣ ಜನ್ಮದಿನದ ಉದ್ದೇಶ: ಸವಿತಾ ನೇತ್ರಾಜ್ ಗುರುವಿನ ಮಠ.

ಮಹಾನ್ ಕಿಡ್ಸ್ ಶಾಲೆಯಲ್ಲಿ ಶ್ರೀ ಕೃಷ್ಣ ಜನ್ಮಾಷ್ಟಮಿ. ಸತ್ಯ ಧರ್ಮ ಪಾಲನೆಯ ಶ್ರೀ ಕೃಷ್ಣ ಜನ್ಮದಿನದ ಉದ್ದೇಶ: ಸವಿತಾ ನೇತ್ರಾಜ್ ಗುರುವಿನ ಮಠ.

ಗಂಗಾವತಿ ನಗರದ ಪ್ರತಿಷ್ಠಿತ ಶಾಲೆಯಾದ ಮಹಾನ್ ಕಿಡ್ಸ್ ಶಾಲೆಯಲ್ಲಿ ಶ್ರೀ ಕೃಷ್ಣ ಜನ್ಮಾಷ್ಟಮಿ ಆಚರಣೆ. ವಿಷ್ಣುವಿನ ದಶಾವತಾರದಲ್ಲಿ ಒಂದಾದ ಶ್ರೀ ಕೃಷ್ಣ ಪರಮಾತ್ಮ ಸತ್ಯಧರ್ಮನ್ಯಾಯ ಸಂದೇಶದ ಪ್ರತೀಕವಾಗಿ ಕಂಗೊಳಿಸುತ್ತಿದ್ದಾರೆ ಎಂದು ಮುಖ್ಯೋಪಾಧ್ಯಾಯನಿ ಸವಿತಾ ನೇತ್ರಾಜ್ ಗುರುವಿನಮಠ ಹೇಳಿದರು. ಅವರು ಶಾಲೆಯಲ್ಲಿ ಆಯೋಜಿಸಿದ ಶ್ರೀ ಕೃಷ್ಣ ಜನ್ಮಾಷ್ಟಮಿ ಆಚರಣೆಯ ಸಮಾರಂಭವನ್ನು ಉದ್ದೇಶಿಸಿ ಮಾತನಾಡಿದರು. ದೇಶದ ಎರಡು ಮಹಾಕಾವ್ಯಗಳಲ್ಲಿ ಒಂದಾದ ಮಹಾಭಾರತದಲ್ಲಿ ಪಾಂಡವರು ಮತ್ತು ಕೌರವರು ಮಧ್ಯೆ ಜರುಗಿದ ಯುದ್ಧದಲ್ಲಿ ಶ್ರೀ ಕೃಷ್ಣನು ಧರ್ಮದ ಪರವಾಗಿ ಪಾಂಡವರಿಗೆ ಜಯಶಾಲಿ ಆಗುವಂತೆ…

Read More
ರಾಂಪುರ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಯಲ್ಲಿ 79ನೇ ಸ್ವಾತಂತ್ರ್ಯ ದಿನಾಚರಣೆ.

ರಾಂಪುರ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಯಲ್ಲಿ 79ನೇ ಸ್ವಾತಂತ್ರ್ಯ ದಿನಾಚರಣೆ.

ಕೊಪ್ಪಳ ಜಿಲ್ಲೆ ಕನಕಗಿರಿ ತಾಲೂಕಿನ ರಾಂಪುರ ಗ್ರಾಮದ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಯಲ್ಲಿ ಇಂದು 79ನೇ ಸ್ವಾತಂತ್ರ್ಯ ದಿನಾಚರಣೆ ಅಂಗವಾಗಿ ಧ್ವಜಾರೋಹಣ ಕಾರ್ಯಕ್ರಮ ನೆರವೇರಿಸಲಾಯಿತು. ಶಾಲೆಯ ಮುಖ್ಯೋಪಾಧ್ಯಾಯರಾದ ಸಂತೋಷ್ ಕುಮಾರ್ ಅವರ ನೇತೃತ್ವದಲ್ಲಿ, ಶಿಕ್ಷಕರು, ಶಾಲಾ ಮಕ್ಕಳು, ಶಾಲಾ ಅಭಿವೃದ್ಧಿ ಸಮಿತಿಯ ಅಧ್ಯಕ್ಷರು ಹಾಗೂ ಊರಿನ ಗುರುಹಿರಿಯರ ಸಮ್ಮುಖದಲ್ಲಿ ಧ್ವಜಾರೋಹಣ ನೆರವೇರಿಸಲಾಯಿತು. ಈ ಸಂದರ್ಭದಲ್ಲಿ ಮಕ್ಕಳು ದೇಶಭಕ್ತಿ ಗೀತೆಗಳನ್ನು ಹಾಡಿ, ಸ್ವಾತಂತ್ರ್ಯದ ಮಹತ್ವವನ್ನು ಹೊಗಳುವ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಮಂಡಿಸಿದರು.

Read More
ಗಂಗಾವತಿ ಮಾನ್ಯ ಶಾಸಕರಿಂದ ವಿಜೇತ ಮಕ್ಕಳಿಗೆ ಪ್ರಶಸ್ತಿ ವಿತರಣೆ ಕಾರ್ಯಕ್ರಮ

ಗಂಗಾವತಿ ಮಾನ್ಯ ಶಾಸಕರಿಂದ ವಿಜೇತ ಮಕ್ಕಳಿಗೆ ಪ್ರಶಸ್ತಿ ವಿತರಣೆ ಕಾರ್ಯಕ್ರಮ

ಇಂದು ಗಂಗಾವತಿ ತಾಲೂಕ ಪಂಚಾಯಿತಿ ಮತ್ತು ಗಂಗಾವತಿ ನಗರಸಭೆ ಹಾಗೂ ಗಂಗಾವತಿ ಕ್ಷೇತ್ರ ಶಿಕ್ಷಣ ಇಲಾಖೆ ಸಂಯುಕ್ತ ಆಶ್ರಯದಲ್ಲಿ 79ನೇ ಸ್ವಾತಂತ್ರ್ಯೋತ್ಸವ ದಿನಾಚರಣೆ ತಾಲೂಕ ಕ್ರೀಡಾಂಗಣದಲ್ಲಿ ಜರುಗಿತು. ಇದರ ಪ್ರಯುಕ್ತ ನಡೆದ ಅನೇಕ ಸ್ಪರ್ಧೆಗಳಲ್ಲಿ ಶ್ರೀ ಚನ್ನಬಸವ ಸ್ವಾಮಿ ಕನ್ನಡ ಹಿರಿಯ ಪ್ರಾಥಮಿಕ ಹಾಗೂ ಶ್ರೀಮತಿ ಗಂಗಮ್ಮ ಗುರುಪಾದಗೌಡ ಮಾಲಿ ಪಾಟೀಲ್ ಪ್ರೌಢಶಾಲೆಯ 10ನೇ ತರಗತಿ ವಿದ್ಯಾರ್ಥಿ ಕುಮಾರ್ ಮಣಿಕಂಠ ತಂದೆ ರಮೇಶ್ ಇವನು ಸ್ಥಳದಲ್ಲಿಯೇ ಪ್ರಬಂಧ ಬರೆದು ದ್ವಿತೀಯ ಬಹುಮಾನವನ್ನು ಪಡೆದಿರುತ್ತಾನೆ. ಈ ಸಮಾರಂಭದ ಅಧ್ಯಕ್ಷತೆಯನ್ನು…

Read More