
೨೦೨೪-೨೫ನೇ ಸಾಲಿನ ವಿಜಯಪುರ ಮಹಿಳಾ ವಿಶ್ವಾವಿದ್ಯಾಲಯದ ಫಲಿತಾಂಶದಲ್ಲಿ ಗಂಗಾವತಿಯ ಸಂಕಲ್ಪ ಪ್ರ.ದ.ಮಹಿಳಾ ಮಹಾವಿದ್ಯಾಲಯದ ವಿದ್ಯಾರ್ಥಿಗಳು ಅಮೋಘ ಸಾಧನೆ
ಗಂಗಾವತಿ: ಕರ್ನಾಟಕ ರಾಜ್ಯ ಅಕ್ಕಮಹಾದೇವಿ ಮಹಿಳಾ ವಿಶ್ವವಿದ್ಯಾಲಯವು ೨೦೨೪-೨೫ನೇ ಸಾಲಿನ ಬಿ.ಎ ಮತ್ತು ಬಿಕಾಂ ಅಂತಿಮ ವರ್ಷದ ಫಲಿತಾಂಶ ಪ್ರಕಟಿಸಲಾಗಿದೆ. ಗಂಗಾವತಿಯ ಸಂಕಲ್ಪ ಪ್ರಥಮ ದರ್ಜೆ ಕಲಾ ಮತ್ತು ವಾಣಿಜ್ಯ ಮಹಿಳಾ ಮಹಾವಿದ್ಯಾಲಯದ ವಿದ್ಯಾರ್ಥಿನಿಯರು ಅಮೋಘ ಸಾಧನೆ ಮಾಡಿದ್ದಾರೆ. ಬಿ.ಎ ಪದವಿಯಲ್ಲಿ ಒಟ್ಟು ೭೨ ವಿದ್ಯಾರ್ಥಿಗಳು ಪರೀಕ್ಷೆ ಬರೆದಿದ್ದು ಎಲ್ಲಾ ವಿದ್ಯಾರ್ಥಿಗಳು ಉನ್ನತ ಶ್ರೇಣಿಯಲ್ಲಿ ಉತ್ತಿರ್ಣರಾಗಿರುತ್ತಾರೆ. ನೇಹಾ ತಂದೆ ಯಮನೂರ್ ಸಾಬ ಶೇ ೯೩.೩೮%, ರೇವತಿ ತಂದೆ ಜಯಣ್ಣ ಹೆಬ್ಬಾಳ್ ಶೇ ೯೩.೭%, ತಿರುಮಲ ತಂದೆ ಪಾಮಣ್ಣ…