ವಿಶ್ವಕರ್ಮ ಸಮಾಜದ ಮೌನೇಶ್ವರ ದೇವಸ್ಥಾನದಲ್ಲಿ ಪಲ್ಲಕ್ಕಿ ಸೇವೆ ಹಾಗೂ ನೂತನ ಕಾರ್ಯಕಾರಿ ಮಂಡಳಿ ರಚನೆ.

ಗಂಗಾವತಿ: ನಗರದ ಹೊಸಳ್ಳಿ ರಸ್ತೆಯಲ್ಲಿರುವ ಶ್ರೀಗುರು ಮೌನೇಶ್ವರ ದೇವಸ್ಥಾನದಲ್ಲಿ ಡಿಸೆಂಬರ್-೯ ಸೋಮವಾರ ಸಂಜೆ ೭:೩೦ ಕ್ಕೆ ಪಲ್ಲಕ್ಕಿ ಸೇವೆ ನಡೆಯಿತು. ಇದೇ ಸಂದರ್ಭದಲ್ಲಿ ವಿಶ್ವಕರ್ಮ ಸಮಾಜದ ಜಿಲ್ಲಾಧ್ಯಕ್ಷರಾದ ನಾಗೇಶಕುಮಾರ ಕಂಸಾಲ ರವರ ನೇತೃತ್ವದಲ್ಲಿ ಗಂಗಾವತಿ ತಾಲೂಕ ವಿಶ್ವಕರ್ಮ ಸಮಾಜದ ಕಾರ್ಯಕಾರಿ ಮಂಡಳಿ ರಚನೆ ಮಾಡಿ ಪದಾಧಿಕಾರಿಗಳನ್ನು ನೇಮಕ ಮಾಡಲಾಯಿತು.
ಕಾರ್ಯಕಾರಿ ಮಂಡಳಿ ರಚನೆ ಮಾಡಿ ಮಾತನಾಡಿದ ನಾಗೇಶಕುಮಾರ ಕಂಸಾಲರವರು ನಮ್ಮ ವಿಶ್ವಕರ್ಮ ಸಮಾಜ ಆರ್ಥಿಕವಾಗಿ, ಶೈಕ್ಷಣಿಕವಾಗಿ, ಸಾಮಾಜಿಕವಾಗಿ, ರಾಜಕೀಯವಾಗಿ ತೀರಾ ಹಿಂದುಳಿದಿದ್ದು, ಸಮಾಜವನ್ನು ಬಲಪಡಿಸಿ ಶ್ರೇಯೋಭಿವೃದ್ದಿಗೊಳಿಸುವುದು ಅತ್ಯವಶ್ಯಕವಾಗಿದೆ. ಈ ನಿಟ್ಟಿನಲ್ಲಿ ಸಮಾಜದ ಎಲ್ಲಾ ಸಂಘ-ಸಂಸ್ಥೆಗಳು, ಮುಖಂಡರು, ಕಾರ್ಯಕಾರಿ ಮಂಡಳಿಗಳು ವಿವಿಧ ಧಾರ್ಮಿಕ ಕಾರ್ಯಕ್ರಮಗಳನ್ನು ನಡೆಸುವುದರೊಂದಿಗೆ ಸಮಾಜದ ಪ್ರತಿಭಾವಂತ ವಿದ್ಯಾರ್ಥಿಗಳನ್ನು, ಕಲಾವಿದರನ್ನು ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದವರನ್ನು ಗುರುತಿಸಿ ಪ್ರೋತ್ಸಾಹಿಸುವ ಮೂಲಕ ಸಮಾಜವನ್ನು ಒಗ್ಗೂಡಿಸಿ ಬಲಪಡಿಸಬೇಕೆಂದು ಕರೆಕೊಟ್ಟರು.
ನೂತನ ಕಾರ್ಯಕಾರಿ ಮಂಡಳಿಯ ಗೌರವಾಧ್ಯಕ್ಷರಾಗಿ ಜಿ. ಮಂಜುನಾಥ ಸರಾಫ್, ಅಧ್ಯಕ್ಷರಾಗಿ ಕಾಳೇಶ ಬಡಿಗೇರ, ಉಪಾಧ್ಯಕ್ಷರುಗಳಾಗಿ ಮನೋಹರ ವಿಶ್ವಕರ್ಮ ಮಲಕನಮರಡಿ, ಗುರುನಾಥ ಬಡಿಗೇರ ಗಂಗಾವತಿ, ಕಾರ್ಯದರ್ಶಿಯಾಗಿ ಚಿದಂಬರ ದಿಕ್ಷಿತ್, ಸಹಕಾರ್ಯದರ್ಶಿಯಾಗಿ ಕೃಷ್ಣಮೂರ್ತಿ ಪತ್ತಾರ, ಖಜಾಂಚಿಯಾಗಿ ದೇವೆಂದ್ರಪ್ಪ ಬಡಿಗೇರ ಹಣವಾಳ, ನಿರ್ದೇಶಕರುಗಳಾಗಿ ಗುರಪ್ಪ ಬಡಿಗೇರ ಹೊಸಳ್ಳಿ, ಬಸವರಾಜ ಬಡಿಗೇರ, ಸಣ್ಣೆಪ್ಪ ಕಮ್ಮಾರ, ವೀರೇಶ ಮಾಚಳ್ಳಿ, ಪ್ರಶಾಂತ ಸುತಾರ, ಪ್ರಶಾಂತ ಸೋನಾರ ಶಿಲ್ಪಿ, ರುದ್ರೇಶ ಬಡಿಗೇರ ಆರ‍್ಹಾಳ, ಮಲ್ಲಿಕಾರ್ಜುನ ಆಚಾರ ಇವರುಗಳನ್ನು ನೇಮಕ ಮಾಡಲಾಯಿತು.
ಈ ಸಂದರ್ಭದಲ್ಲಿ ಸಮಾಜದ ಮುಖಂಡರಾದ ಸಿ.ವಿ ಸರ್ವಜ್ಞ ಆಚಾರ್, ಶಂಕ್ರಪ್ಪ ಮನವಾಚಾರ ಸೇರಿದಂತೆ ಸಮಾಜದ ಅನೇಕ ಹಿರಿಯ ಮುಖಂಡರು, ಮಹಿಳಾ ಮಂಡಳಿ ಸದಸ್ಯರು, ಯುವಕರು ಉಪಸ್ಥಿತರಿದ್ದರು.

ಚಂಪಾ ಸೃಷ್ಟಿ ಪ್ರಯುಕ್ತ. ಶ್ರೀ ಕನ್ನಿಕಾ ಪರಮೇಶ್ವರಿ ದೇವಿಗೆ ಕಾರ್ತಿಕೋತ್ಸವದ

ಗಂಗಾವತಿ.. ನಗರದ ಹಿರೇಜಂತಕಲ್ ವಿರುಪಾಪುರ ಆರ್ಯವೈಶ್ಯ ಸಮಾಜದ ನೇತೃತ್ವದಲ್ಲಿ. ಕಾರ್ತಿಕ ಮಾಸದ ಕೊನೆಯ ದಿನವಾದ ಶನಿವಾರದಂದು ಚಂಪಾ ಸೃಷ್ಟಿ, ( ಶ್ರೀ ಸುಬ್ರಹ್ಮಣ್ಯೇಶ್ವರ ಆಚರಣೆ) ಪ್ರಯುಕ್ತ ಶ್ರೀ ಕನ್ನಿಕಾ ಪರಮೇಶ್ವರಿ ದೇವಿಗೆ ದೀಪೋತ್ಸವ ಅಪಾರ ಭಕ್ತಾದಿಗಳ ಮಧ್ಯೆ. ಶ್ರದ್ಧೆ ಭಕ್ತಿಯಿಂದ ಜರುಗಿತು.
ಇದಕ್ಕೂ ಪೂರ್ವದಲ್ಲಿ. ಅಮ್ಮನವರಿಗೆ. ವಿಶೇಷ ಅಲಂಕಾರ. ಧಾರ್ಮಿಕ ಪೂಜಾ ಕಾರ್ಯಕ್ರಮಗಳನ್ನು ದೇವಸ್ಥಾನದ ಅರ್ಚಕರು ಸಾಂಗತವಾಗಿ ನಡೆಸಿಕೊಟ್ಟರು. ಬಳಿಕ ವಾಸವಿ ಮಹಿಳಾ ಮಂಡಳಿಯ ಸದಸ್ಯರಿಂದ ಭಜನೆ, ಲಲಿತ ಸಹಸ್ರ ಪಾರಾಯಣ ಪಠಣ. ಇತರೆ ಕಾರ್ಯಕ್ರಮಗಳು ಜರುಗಿದವು. ಬಳಿಕ. ಸಮಾಜದ ಅಧ್ಯಕ್ಷ ನಾಗರಾಜ ದರೋಜಿ. ದಂಪತಿಗಳು ಸೇರಿದಂತೆ. ಟ್ರಸ್ಟಿ ಸದಸ್ಯರ ನೇತೃತ್ವದಲ್ಲಿ. ದೀಪೋತ್ಸವಕ್ಕೆ ಚಾಲನೆ ನೀಡಲಾಯಿತು.
ಬಳಿಕ ಅಧ್ಯಕ್ಷ ನಾಗರಾಜ ದರೋಜಿ ಮಾತನಾಡಿ. ಪ್ರತಿ ವರ್ಷದಂತೆ ಈ ವರ್ಷವೂ ಸಹ ಚಂಪಾ ಸೃಷ್ಟಿಯ 16ನೇ ವರ್ಷದ ಕಾರ್ತಿಕ ದೀಪೋತ್ಸವ ಇದಾಗಿದ್ದು. ಸಮಾಜಭಂಧವರ ಎಲ್ಲರ ಸಹಕಾರದ ಮೇರೆಗೆ ಯಶಸ್ವಿಗೊಂಡಿದೆ. ಜ್ಯೋತಿ ಪರಂ ಬ್ರಹ್ಮ ಎನ್ನುವಂತೆ. ಕುಲದೇವತೆ. ಅಮ್ಮನವರು ಸರ್ವರಿಗೂ ಸುಖ ಶಾಂತಿ ಸಮೃದ್ಧಿ. ಕರುಣಿಸಲಿ ಎಂದು ಸಂಕಲ್ಪಿಸಿಕೊಂಡಿರುವುದಾಗಿ ಹೇಳಿದರು.

ಈ ಸಂದರ್ಭದಲ್ಲಿ ಡಿ ಮಲ್ಲಿಕಾರ್ಜುನ, ಗೋಪಾಲ ಶೆಟ್ಟಿ, ಆನೆಗುಂದಿ. ಡಿ ವೆಂಕಟೇಶ್ರು, ರುಕ್ಮಿಣಿ ಬಾಯಿ ದಮ್ಮೂರು, ಉಷಾ ಸಿರಿಗೇರಿ, ರೇಖಾ ಜಿ. ವಾಸವಿ ಯುವಜನ ಸಂಘದ ಯುವಕರು ಹಾಗೂ ಮಹಿಳಾ ಮಂಡಳಿಯ ಸದಸ್ಯರು ಪಾಲ್ಗೊಂಡಿದ್ದರು.

December 2024
MTWTFSS
 1
2345678
9101112131415
16171819202122
23242526272829
3031 
ಪಂಚಮಸಾಲಿ ಸಮಾಜಕ್ಕೆ 2ಎ ಮೀಸಲಾತಿಗೆ ಒತ್ತಾಯಿಸಿ ಡಿಸೆಂಬರ್-10 ರಂದು ಬೆಳಗಾವಿ ಅಧಿವೇಶಕ್ಕೆ ಮುತ್ತಿಗೆ

ಗಂಗಾವತಿ: ವೀರಶೈವ ಲಿಂಗಾಯತ ಪಂಚಮಸಾಲಿ ಸಮಾಜಕ್ಕೆ 2ಎ ಮೀಸಲಾತಿಗೆ ಒತ್ತಾಯಿಸಿ ಡಿಸೆಂಬರ್-10 ರಂದು ಬೆಳಗಾವಿ ಅಧಿವೇಶನಕ್ಕೆ ಮುತ್ತಿಗೆ ಹಾಕಿ ಪ್ರತಿಭಟಿಸಿ ಅನುಷ್ಠಾನಕ್ಕೆ ಒತ್ತಾಯಿಸಲಾಗುವುದು ಎಂದು ಪಂಚಮಸಾಲಿ ಸಮಾಜದ ಅಧ್ಯಕ್ಷ ನ್ಯಾಯವಾದಿ ಶಿವಪ್ಪ ಯಲಬುರ್ಗಿ ಹೇಳಿದರು.

ಅವರು ಶನಿವಾರದಂದು ಪತ್ರಿಕಾಭವನದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿ ಕೂಡಲಸಂಗಮ ಪೀಠದ ಶ್ರೀ ಜಯ ಮೃತ್ಯುಂಜಯ ಸ್ವಾಮಿಯವರ ನೇತೃತ್ವದಲ್ಲಿ ರಾಜ್ಯಾದ್ಯಂತ ಪಂಚಮಸಾಲಿ ಸಮಾಜ ಬಾಂಧವರು ಬೆಳಗಾವಿ ಚಲೋ ಪ್ರತಿಭಟನೆಗೆ ಕರೆ ನೀಡಲಾಗಿದ್ದು, ಈ ಹಿನ್ನೆಲೆಯಲ್ಲಿ ಕೊಪ್ಪಳ ಜಿಲ್ಲೆಯಲ್ಲಿ 5000 ಅಧಿಕ ಸಮಾಜ ಬಾಂಧವರು ಟ್ರ್ಯಾಕ್ಟರ್ ಮೂಲಕ ಬೆಳಗಾವಿ ಅಧಿವೇಶನಕ್ಕೆ ಆಗಮಿಸಲಿದ್ದಾರೆ. ಇವರ ಜೊತೆಗೆ ಸಮಾಜದ 47 ವಕೀಲರು ಅವರಲ್ಲಿ 35ಕ್ಕೂ ಅಧಿಕ ನ್ಯಾಯವಾದಿಗಳು ಭಾಗವಹಿಸಲಿದ್ದಾರೆ. ಶಿಕ್ಷಣ ಮತ್ತು ಉದ್ಯೋಗಕ್ಕಾಗಿ 2ಎ ಮೀಸಲಾತಿ ಅವಶ್ಯವಾಗಿದ್ದು. ಇತ್ತೀಚಿಗೆ ಕೊಪ್ಪಳದಲ್ಲಿ ಜರುಗಿದ ಶಿಕ್ಷಕರ ನೇಮಕಾತಿಗೆ ಸಂಬಂಧಿಸಿದಂತೆ ಶೇಕಡ 95ರಷ್ಟು ಅಂಕ ಪಡೆದ ಸಮಾಜ ಬಾಂಧವರಿಗೆ ನೇಮಕಾತಿ ದೊರೆಯದೆ ಉದ್ಯೋಗದಿಂದ ವಂಚಿತರಾಗಿದ್ದಾರೆ ಕಳೆದ ಆರು ವರ್ಷದಿಂದ ಮೀಸಲಾತಿಗೆ ಉಭಯ ಪೀಠಾಧಿಕಾರಿಗಳಿಂದ ಹೋರಾಟ ನಡೆಸುತ್ತಾ ಬರಲಾಗಿದ್ದು. ಯಾವುದೇ ಆಡಳಿತರೂಢ ಪಕ್ಷಗಳ ಸರ್ಕಾರಗಳು ನಿರ್ಲಕ್ಷ್ಯ ಧೋರಣೆ ಅನುಸರಿಸುತ್ತಿರುವುದು ಖಂಡನಿಯವಾಗಿದೆ. ರಾಜ್ಯ ಸರ್ಕಾರದಲ್ಲಿ 22 ಜನ ಶಾಸಕರನ್ನು ಹೊಂದಿದ್ದು ಎಲ್ಲಾ ಶಾಸಕರು ಪಕ್ಷ ಭೇದ ಮರೆತು ಪ್ರತಿಭಟನೆಯಲ್ಲಿ ಪಾಲ್ಗೊಳ್ಳುತ್ತಾರೆ ಎಂದು ತಿಳಿಸಿದರು. ಈ ಹಿನ್ನೆಲೆಯಲ್ಲಿ ಹಲವು ಕ್ಷೇತ್ರದಲ್ಲಿ ಹಿಂದುಳಿದ ಸಮಾಜ ಪಂಚಮಸಾಲಿಯಾಗಿದ್ದು ಈ ಬಾರಿಯ ಅಧಿವೇಶನದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದ ಸಚಿವ ಸಂಪುಟ ಸಭೆ 2ಎ ಮೀಸಲಾತಿ ಅನುಷ್ಠಾನಕ್ಕೆ ತರಬೇಕೆಂದು ಬೃಹತ್ ಪ್ರತಿಭಟನೆಯ ಮೂಲಕ ಸರ್ಕಾರಕ್ಕೆ ಎಚ್ಚರಿಕೆಯ ಸಂದೇಶ ರವಾನಿಸಲಾಗುತ್ತದೆ ಎಂದು ಹೇಳಿದರು.

ಈ ಸಂದರ್ಭದಲ್ಲಿ ಸಮಾಜದ ಮುಖಂಡರಾದ ನಾಗರಾಜ್ ಬರಗೂರು ಎಸ್ ವೀರೇಶಪ್ಪ ಹಣವಾಳ್. ದೇವರಾಜ್ ಕತ್ತಿ, ವೀರೇಶಪ್ಪ ಮಾಲಿ ಪಾಟೀಲ್ ಮಹೇಶ್ ಉಪಸ್ಥಿತರಿದ್ದರು.

ಮಾನಸ ಬುದ್ಧಿಮಾಂದ್ಯ ಶಾಲೆಯ ಮಕ್ಕಳ ಸಾಧನೆ. ಜಿಲ್ಲಾ ಮಟ್ಟಕ್ಕೆ ಪ್ರಥಮ.

ಕೊಪ್ಪಳ: ಅಂಗವಿಕಲರ ಕಲ್ಯಾಣ ಇಲಾಖೆ ಹಾಗೂ ವಿವಿಧ ಸಂಘ-ಸಂಸ್ಥೆಗಳ ಸಯುಕ್ತಾಶ್ರಯದಲ್ಲಿ ಡಿಸೆಂಬರ್‌-3 ರಂದು ಜಿಲ್ಲಾ ಮಟ್ಟದ ವಿಶ್ವ ವಿಕಲಚೇತನ ದಿನಾಚರಣೆಯು ಕೊಪ್ಪಳ ಸಾವ೯ಜನಿಕ ಕ್ರೀಡಾಂಗಣದಲ್ಲಿ ನೇರೆವೇರಿದ ಕಾರ್ಯಕ್ರಮದಲ್ಲಿ ನಮ್ಮ ಅಂಗವಿಕಲರ ಪುನಶ್ಚೇತನ ಸಂಸ್ಥೆ A R.D ಮಾನಸಬುದ್ಧಿ ಮಾಂದ್ಯಮಕ್ಕಳು ಕ್ರೀಡೆಯಲ್ಲಿ 15 ಬಹುಮಾನ ಪಡೆದು ಜಿಲ್ಲೆಗೆ ಪ್ರಥಮ ಸ್ಥಾನ ಪಡೆದು ಶಾಲೆಯ ಕೀರ್ತಿ ಹೆಚ್ಚಿಸಿದ್ದಾರೆ ಹಾಗೂ ಇದೆ ಸಂದರ್ಭದಲ್ಲಿ ಆಮೀರ ಹುಸೇನ್ ಎಂಬ ಬುದ್ಧಿ ಮಾಂದ್ಯ ವಿದ್ಯಾರ್ಥಿ ಹತ್ತನೇ ತರಗತಿಯಲ್ಲಿ ತೇರ್ಗಡೆ ಹೊಂದಿದ್ದು ಈ ಸಂದರ್ಭದಲ್ಲಿ ಸನ್ಮಾನಿಸಿ ಗೌರವಿಸಲಾಯಿತು ಎಂದು ಮುಖ್ಯೋಪಾಧ್ಯಾಯರಾದ ಯಲ್ಲಪ್ಪ ಕಲಾಲ್ ಇವರು ಬುದ್ದಿಮಾಂಧ್ಯತೆ ಮಕ್ಕಳಿಗೆ ಜನರ ಯಾವುದೇ ಶಾಪದಿಂದ ಬರುವುದಲ್ಲ. ಅದಕ್ಕೆ ತನ್ನದೇ ಆದ ವೈಜ್ಞಾನಿಕ ಕಾರಣಗಳನ್ನು ಹೊಂದಿದ್ದು ಅಂತಹ ನ್ಯೂನ್ಯತೆ ಹೊಂದಿದ ಮಕ್ಕಳಿಗೆ ಸತತವಾದ ತರಬೇತಿ, ಗುಣಮಟ್ಟದ ಶಿಕ್ಷಣ ಹಾಗೂ ಪ್ರೀತಿ ವಿಶ್ವಾಸದಿಂದ ನೋಡಿಕೊಂಡಲ್ಲಿ ಅಂತಹ ಮಕ್ಕಳನ್ನು ಸಮಾಜದ ಮುಖ್ಯ ವಾಹಿನಿಗೆ ತರಬಹುದಾಗಿದೆ ಎಂದು ತಿಳಿಸಿದ್ದಾರೆ. ಈ ವಿದ್ಯಾರ್ಥಿಗಳ ಸಾಧನೆಗೆ ಅಧ್ಯಕ್ಷರು ಹಾಗೂ ಸಿಬ್ಬಂದಿ ವರ್ಗದವರು ಹರ್ಷ ವ್ಯಕ್ತಪಡಿಸಿದರು.

ಕಾಲೇಜಿನಲ್ಲಿ ಕನ್ನಡ ರಾಜ್ಯೋತ್ಸವ ಕಾರ್ಯಕ್ರಮ ಸಾಧಕರಿಗೆ ಸನ್ಮಾನ.

ಗಂಗಾವತಿ: ಇಂದು ಗಂಗಾವತಿಯ ಸರ್ಕಾರಿ ಜೂನಿಯರ್ ಕಾಲೇಜಿನಲ್ಲಿ ಕನ್ನಡ ರಾಜ್ಯೋತ್ಸವದ ಪ್ರಯುಕ್ತ ನಡೆದ ಕಾರ್ಯಕ್ರಮದಲ್ಲಿ ರಾಜ್ಯೋತ್ಸವ ಪ್ರಶಸ್ತಿ ಪಡೆದ ಅಲ್ಲಮಪ್ರಭು ಬೆಟ್ಟದೂರು ಮತ್ತು ಸುವರ್ಣ ಕರ್ನಾಟಕ ಸಂಭ್ರಮ ಪ್ರಶಸ್ತಿ ಪಡೆದ ಡಾ|| ಚಂದ್ರಪ್ಪ ಇವರನ್ನು ಸನ್ಮಾನಿಸಲಾಯಿತು. ರಾಜ್ಯೋತ್ಸವದ ಅಂಗವಾಗಿ ಸಂಸ್ಥೆಯಲ್ಲಿ ಹಮ್ಮಿಕೊಂಡ ವಿವಿಧ ಸ್ಪರ್ಧೆಗಳಲ್ಲಿ ವಿಜೇತರಾದ ವಿದ್ಯಾರ್ಥಿಗಳಿಗೆ ಬಹುಮಾನಗಳನ್ನು ವಿತರಿಸಲಾಯಿತು.
ಈ ಸಂದರ್ಭದಲ್ಲಿ ಕಾರ್ಯಕ್ರಮವನ್ನು ಉದ್ಘಾಟಿಸಿದ ಅಲ್ಲಮಪ್ರಭು ಬೆಟ್ಟದೂರು ಅವರು ವಿದ್ಯಾರ್ಥಿಗಳನ್ನು ಉದ್ದೇಶಿಸಿ ಮಾತಾಡುತ್ತಾ ತಮ್ಮ ಬದುಕಿನ ಹಲವು ಘಟನೆಗಳನ್ನು ಹಂಚಿಕೊಳ್ಳುತ್ತ “ಕೊಪ್ಪಳ ಜಿಲ್ಲೆ ಮಾಡುವಾಗ ಎಲ್ಲರೂ ನಮ್ಮನ್ನು ಕೇವಲವಾಗಿ ನೋಡಿದರು, ನಾವ್ಯಾರು ಕೂಡ ಅದಕ್ಕೆ ಎದೆಗುಂದದೆ ಮುನ್ನುಗ್ಗಿ ಹೋರಾಟವನ್ನು ಯಶಸ್ವಿಗೊಳಿಸಿದ ಕಾರಣವಾಗಿ ಇಂದು ಕೊಪ್ಪಳ ಜಿಲ್ಲೆಯಾಗಿದೆ. ಹಾಗೆಯೇ ವಿದ್ಯಾರ್ಥಿಗಳಾದವರು ಎಂತಹ ಸಮಯ ಬಂದರೂ ಯಾವುದಕ್ಕೂ ಎದೆಗುಂದದೆ ನಿಮ್ಮ ಗುರಿ ಮುಟ್ಟುವ ಕಡೆ ಮಾತ್ರ ಗಮನ ಕೊಡಬೇಕು. ಇವತ್ತಿನ ಸಂಭ್ರಮ ಎಷ್ಟೋ ಜನರ ಕೊಡುಗೆಗಳನ್ನು ನೆನಪಿಸುತ್ತದೆ. ಇಂದು ಅನುಭವಿಸುವ ಎಲ್ಲಾ ಸೌಲಭ್ಯಗಳು ಅಂದು ನಮ್ಮ ಹಿರಿಯರು ಉಳಿಸಿದ ಉಂಬಳಿ. ಅಂತೆಯೇ ನಾವು ಯಾರೂ ಕೂಡ ಬೇರೆ ಭಾಷೆಯ ವಿರೋಧಿಗಳಲ್ಲ ನಮ್ಮ ಕನ್ನಡ ಭಾಷೆಯ ಸದಭಿಮಾನಿಗಳು. ಅದನ್ನು ಉಳಿಸುವ ಬೆಳೆಸುವ ಜವಾಬ್ದಾರಿ ನಮ್ಮೆಲ್ಲರ ಮೇಲಿದೆ” ಎಂದರು.
ಇನ್ನೋರ್ವ ಸನ್ಮಾನಿತರಾದ ಡಾ|| ಜಿ. ಚಂದ್ರಪ್ಪ ರವರು ಮಾತನಾಡುತ್ತಾ “ನಾವೆಲ್ಲ ಗ್ರಾಮೀಣ ಭಾಗದ ವಿದ್ಯಾರ್ಥಿಗಳು, ನನ್ನದು ಇಲ್ಲಿಯ ಹತ್ತಿರದ ಕೆಸರಹಟ್ಟಿ, ಕಷ್ಟಪಟ್ಟು ಓದಿ ಮೇಲ್ಬಂದೆವು ಶಿಕ್ಷಣ ಸಂಸ್ಥೆಗಳನ್ನು ಕಟ್ಟಿದೆವು. ಇದೆಲ್ಲವೂ ಕೂಡ ಸುಮ್ಮನೆ ಆದುದಲ್ಲ ಪರಿಶ್ರಮದ ಫಲ. ನೀವೆಲ್ಲ ಪರಿಶ್ರಮ ಪಟ್ಟರೆ ಖಂಡಿತ ನೀವು ಕೂಡ ಸಾಧಕರಾಗುತ್ತೀರಿ ಎಂದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿಕೊಂಡ ಕಾಲೇಜಿನ ಪ್ರಾಚಾರ್ಯರಾದ ಬಸಪ್ಪ ನಾಗೋಲಿಯವರು ಮಾತನಾಡುತ್ತಾ, “ನಾಡು ನುಡಿ ಸೇವೆಗಾಗಿ ದುಡಿದ ಮಹನೀಯರನ್ನು ವಿದ್ಯಾರ್ಥಿಗಳು ಗಮನಿಸಬೇಕು, ವಿದ್ಯಾರ್ಥಿಗಳ ಮುಂದೆ ಇಂತಹ ಸಾಧಕರನ್ನು ಸನ್ಮಾನಿಸುವ ಮೂಲಕ ತಾವು ಸಹ ಅವರಂತೆ ಆಗಬೇಕು ಎಂಬ ಕನಸುಗಳನ್ನು ಕಟ್ಟಿಕೊಳ್ಳುವ ಮೂಲಕ, ಅವರ ಪ್ರೋತ್ಸಾಹದ ಮಾತುಗಳು ವಿದ್ಯಾರ್ಥಿಗಳಿಗೆ ಪ್ರೇರಣೆಯಾಗುತ್ತವೆ ಎಂಬ ಸದುದ್ದೇಶದಿಂದ ಈ ಕಾರ್ಯಕ್ರಮವನ್ನು ಆಯೋಜಿಸಲಾಗಿದೆ. ಇದನ್ನು ಪ್ರತಿವರ್ಷ ಕೂಡ ನಮ್ಮ ಕಾಲೇಜಿನಲ್ಲಿ ಮಾಡಲಾಗುತ್ತದೆ ಎಂದರು.
ಕಾರ್ಯಕ್ರಮದಲ್ಲಿ ಡಾ. ಲಿಂಗಣ್ಣ ಜಂಗಮರಹಳ್ಳಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಕಾರ್ಯಕ್ರಮದ ವೇದಿಕೆ ಮೇಲೆ ಸಂಸ್ಥೆಯ ಹಿರಿಯ ಉಪನ್ಯಾಸಕರಾದ ಸೋಮಶೇಖರಗೌಡ, ಶ್ರೀಮತಿ ರಮಾ, ಶ್ರೀಮತಿ ಲಲಿತಾಬಾಯಿ, ರಮೇಶ ಗ್ರಂಥಪಾಲಕರು, ಕುಮಾರಸ್ವಾಮಿ, ಚಿದಾನಂದ ಮೇಟಿ, ನಾಗಪ್ಪ ಎಂ., ಶ್ರೀಮತಿ ಸಾವಿತ್ರಿ, ಶ್ರೀಮತಿ ಲಕ್ಷಿö್ಮ, ನಿರುಪಾದಿ, ಮಹೇಶ್, ಈಶ್ವರಪ್ಪ ಸಿ., ಶ್ರೀಮತಿ ರಾಜೇಶ್ವರಿ ಸೇರಿದಂತೆ ಇನ್ನಿತರ ಉಪನ್ಯಾಸಕರು ಉಪಸ್ಥಿತರಿದ್ದರು.
ಕಾರ್ಯಕ್ರಮದ ನಿರ್ವಹಣೆಯನ್ನು ಕನ್ನಡ ಉಪನ್ಯಾಸಕರಾದ ರುದ್ರೇಶ್ ತಬಾಲಿ ಅವರು ನೆರವೇರಿಸಿದರೆ, ಕೊನೆಯಲ್ಲಿ ವಾಣಿಜ್ಯಶಾಸ್ತ್ರದ ಉಪನ್ಯಾಸಕರಾದ ಅಜಗರ್ ಪಾಷಾ ವಂದಿಸಿದರು.

ಡಿಸೆಂಬರ್ 6 ರಂದು ಶ್ರೀ ಕೊಟ್ಟೂರೇಶ್ವರ ವಿದ್ಯಾವರ್ಧಕ ಸಂಘದ ಸಂಸ್ಥಾಪನಾ ದಿನಾಚರಣೆ: ಶ್ರೀ ಕೊಟ್ಟೂರು ಮಹಾಸ್ವಾಮಿಗಳು.

ಗಂಗಾವತಿ. ನಗರದ ಅತ್ಯಂತ ಶೈಕ್ಷಣಿಕ ಸಂಸ್ಥೆಗಳಲ್ಲಿ ಒಂದಾದ ಶ್ರೀ ಕೊಟ್ಟೂರೇಶ್ವರ ವಿದ್ಯಾವರ್ಧಕ ಸಂಘದ ಸಂಸ್ಥಾಪರ ದಿನಾಚರಣೆ ಡಿಸೆಂಬರ್ 6 ರಂದು ಶ್ರೀ ಕೊಟ್ಟೂರೇಶ್ವರ ಕಾಲೇಜಿನ ಆವರಣದಲ್ಲಿ ಬೆಳಿಗ್ಗೆ 10:30 ಕ್ಕೆ ಜರುಗಲಿದೆ ಎಂದು ಶಿಕ್ಷಣ ಸಂಸ್ಥೆಯ ಅಧ್ಯಕ್ಷ ಹಾಗೂ ಕಲ್ಮಠದ ಡಾ. ಕೊಟ್ಟೂರು ಮಹಾಸ್ವಾಮಿಗಳು ಹೇಳಿದರು.

ಅವರು ಮಂಗಳವಾರದಂದು. ಕಾಲೇಜಿನ ಕಾರ್ಯಾಲಯದಲ್ಲಿ ಮಾಧ್ಯಮದೊಂದಿಗೆ ಮಾತನಾಡಿ ಶ್ರೀ ಕೊಟ್ಟೂರೇಶ್ವರ ವಿದ್ಯಾವರ್ಧಕ ಸಂಘದ ಸಂಸ್ಥೆಯ ಸಂಸ್ಥಾಪಕ ಚೇತನರಾದ ಲಿಂಗೈಕ್ಯ ಶ್ರೀ ಚನ್ನಬಸವ ಸ್ವಾಮಿಗಳು ಕಲ್ಮಠ ಇವರ ಸಂಸ್ಕಣೆಯಲ್ಲಿ ಎರಡನೇ ವರ್ಷದ ಸಂಸ್ಥಾಪನ ದಿನಾಚರಣೆ ಇದಾಗಿದ್ದು ಇದೇ ಸಂದರ್ಭದಲ್ಲಿ ಶಿಕ್ಷಣ ಸಂಸ್ಥೆಯ ಉಪಾಧ್ಯಕ್ಷರಾದ ಶ್ರೀ ಚನ್ನಬಸಯ್ಯಸ್ವಾಮಿ ಅವರ ಪೂಜ್ಯ ತಂದೆ ತಾಯಿಯಾದ ಕನಕಗಿರಿ ಕಲ್ಲ ಬಾಗಿಲ ಮಠ ವೀರಬಸಮ್ಮ ಬಸಲಿಂಗಯ್ಯ ಸ್ವಾಮಿ ಸ್ಮರಣಾರ್ಥ ಆಂಗ್ಲ ಮಾಧ್ಯಮ ಪ್ರಾಥಮಿಕ ಮತ್ತು ಪ್ರೌಢಶಾಲೆಗೆ ನೂತನ ನಾಮಕರಣ ನಡೆಸಲಾಗುವುದೆಂದು ತಿಳಿಸಿದ ಅವರು ಇದೇ ಸಂದರ್ಭದಲ್ಲಿ ಹಾಲಗಲ್ಲ ಶ್ರೀ ಗುರು ಕುಮಾರೇಶ್ವರ ಸೌಹಾರ್ದ ಪತ್ತಿನ ಸಹಕಾರ ಸಂಘ ನಿಯಮಿತ ನೂತನ ಕಟ್ಟಡದ ಉದ್ಘಾಟನಾ ಸಮಾರಂಭ ಜರುಗಲಿದ್ದು. ಸಮಾರಂಭದ ದಿವ್ಯಸಾನಿಧ್ಯವನ್ನು ಹುಚ್ಚೇಶ್ವರ ಸಂಸ್ಥಾನ ಮಠದ ಶ್ರೀ ಹುಚ್ಚೇಶ್ವರ ಮಹಾಸ್ವಾಮಿಗಳು ಹಾಗೂ ತಾವು ಸೇರಿದಂತೆ ಅಧ್ಯಕ್ಷತೆಯನ್ನು ಶಾಸಕ ಗಾಲಿ ಜನಾರ್ಧನ್ ರೆಡ್ಡಿ ವಹಿಸುವರು.
ಉದ್ಘಾಟನೆಯನ್ನು ಜಿಲ್ಲಾ ಉಸ್ತುವಾರಿ ಸಚಿವ ಶಿವರಾಜ್ ತಂಗಡಿಗಿ ನೆರವೇರಿಸಲಿದ್ದು, ನಾಮಕರಣವನ್ನು ಸಂಸದ ರಾಜಶೇಖರ್ ಹಿಟ್ನಳ್ ನಡೆಸುವರು. ಇದೇ ಸಂದರ್ಭದಲ್ಲಿ ದಾನಿಗಳಿಗೆ ಸನ್ಮಾನ ಗಣ್ಯರಿಗೆ ಗೌರವ ಸಮರ್ಪಡೆ ಗುಣಮಟ್ಟದ ಶಿಕ್ಷಣ ಜೊತೆಗೆ ವಿದ್ಯಾರ್ಥಿಗಳಿಗೆ ಒಳ್ಳೆಯ ಸಂಸ್ಕಾರ ನೀಡುವ ಕುರಿತಂತೆ ಉಪನ್ಯಾಸ ಇತರೆ ಕಾರ್ಯಕ್ರಮಗಳು ಜರುಗುಲಿದ್ದು. ಶಿಕ್ಷಣ ಪ್ರೇಮಿಗಳು. ಶಾಲೆಯ ಹಳೆ ವಿದ್ಯಾರ್ಥಿಗಳು. ಸರ್ವರೂ ಆಗಮಿಸಿ ಯಶಸ್ವಿಗೊಳಿಸಬೇಕೆಂದು ತಿಳಿಸಿದರು.

ಈ ಸಂದರ್ಭದಲ್ಲಿ. ಶ್ರೀ ಚನ್ನಬಸವಸ್ವಾಮಿ ಮಹಿಳಾ ಕಾಲೇಜಿನ ಪ್ರಾಚಾರ್ಯ ಡಾ. ಶರಣಬಸಪ್ಪ ಕೋಲ್ಕಾರ್ ಮಾತನಾಡಿದರು. ಕಾರ್ಯದರ್ಶಿ ಶರಣೆಗೌಡ ಮಾಲಿ ಪಾಟೀಲ್, ಲಿಂಗಪ್ಪ ಕಮತಗಿ ಅಯೋಧ್ಯ ಯು.ಎಂ ಅನಿಲ್ ಇತರರು ಉಪಸ್ಥಿತರಿದ್ದರು

ಲೋಕಕಲ್ಯಾಣಾರ್ಥವಾಗಿ ಶ್ರೀ ತ್ರಯಂಬಕೇಶ್ವರ ದೇವಸ್ಥಾನದಲ್ಲಿ ಕಾರ್ತಿಕೋತ್ಸವ ಆಚರಣೆ.

ಗಂಗಾವತಿ: ನಗರದ ಆನೆಗುಂದಿ ರಸ್ತೆಯ ಲಲಿತ್ ಮಹಲ್ ಹೋಟಲ್ ಎದುರಿನಲ್ಲಿರುವ ಶ್ರೀ ತ್ರಯಂಬಕೇಶ್ವರ ದೇವಸ್ಥಾನದಲ್ಲಿ ರವಿವಾರ ಲೋಕಕಲ್ಯಾಣಾರ್ಥವಾಗಿ ದೇವಸ್ಥಾನದ ಸಕಲ ಭಕ್ತಾದಿಗಳಿಂದ ದೀಪ ಬೆಳಗಿಸುವ ಮೂಲಕ ಕಾರ್ತಿಕೋತ್ಸವವನ್ನು ವಿಜೃಂಭಣೆಯಿAದ ನೆರವೇರಿಸಲಾಯಿತು ಎಂದು ಶ್ರೀ ತ್ರಯಂಬಕೇಶ್ವರ ಸೇವಾ ಸಮಿತಿಯ ಕಾರ್ಯದರ್ಶಿಯಾದ ಆದಯ್ಯಸ್ವಾಮಿ ಪ್ರಕಟಣೆಯಲ್ಲಿ ತಿಳಿಸಿದರು.
ಈ ಕಾರ್ಯಕ್ರಮದಲ್ಲಿ ಮಾಜಿ ಕಾಡಾ ಅಧ್ಯಕ್ಷರಾದ ತಿಪ್ಪೇರುದ್ರಸ್ವಾಮಿ ವಕೀಲರು ದೀಪ ಬೆಳಗಿಸುವುದರ ಮೂಲಕ ಕಾರ್ತಿಕೋತ್ಸವದಲ್ಲಿ ಪಾಲ್ಗೊಂಡು, ಕರುಣಾಳು ಬಾ ಬೆಳಕೆ ಮುಸುಕಿದೆ ಮಬ್ಬಿನಲಿ ಎಂಬ ಹಾಡಿನ ಮೂಲಕ ಕತ್ತಲಿನಿಂದ ಬೆಳಕಿನೆಡೆಗೆ ಹೋಗುವ ಉದ್ದೇಶದಿಂದ ಇಂದು ತ್ರಯಂಬಕೇಶ್ವರನ ಸನ್ನಿಧಿಯಲ್ಲಿ ಈ ದೀಪ ಬೆಳಗಿಸುವ ಮೂಲಕ ಕಾರ್ತಿಕೋತ್ಸವ ಆಚರಿಸಲಾಗುತ್ತಿದೆ. ಈ ತ್ರಯಂಬೇಶ್ವರ ದೇವಸ್ಥಾನದ ಅಭಿವೃದ್ಧಿಯಾಗಬೇಕಾಗಿದೆ ಹಾಗೂ ಕಲ್ಯಾಣ ಮಂಟಪವನ್ನು ಕೂಡಾ ನಿರ್ಮಾಣ ಮಾಡಬೇಕಿದೆ. ಈ ನಿಟ್ಟಿನಲ್ಲಿ ಶಾಸಕರ ಗಮನಕ್ಕೆ ತರಲಾಗುವುದು ಎಂದರು. ನಂತರ ಸತತ ಎರಡನೇ ಬಾರಿ ವಕೀಲರ ಸಂಘದ ಕಾರ್ಯದರ್ಶಿಯಾಗಿ ಆಯ್ಕೆಯಾಗಿರುವ ಮಂಜುನಾಥ ಹೆಚ್.ಎಂ ವಕೀಲರಿಗೆ ವಿಶೇಷವಾಗಿ ಸನ್ಮಾನಿಸಿ ಗೌರವಿಸಿದರು.
ಈ ಸಂದರ್ಭದಲ್ಲಿ ರೇವಣಸಿದ್ದಯ್ಯ ತಾತನವರು, ಶಂಕರಯ್ಯಸ್ವಾಮಿ ಹಿರೇಮಠ, ಎಸ್.ಬಿ ಹಿರೇಮಠ, ಸಂಗಯ್ಯಸ್ವಾಮಿ ಸಂಶೀಮಠ, ಮಲ್ಲಯ್ಯಸ್ವಾಮಿ ಹಿರೇಮಠ, ಕುಮಾರಸ್ವಾಮಿ ವಿಭೂತಿ, ಅಮರೇಶ ಸೊಪ್ಪಿಮಠ, ಗಿರೀಶ ಬಳ್ಳಾರಿ, ಶಿವಾನಂದಸ್ವಾಮಿ ಟಿ.ಎಂ., ರಮೇಶ ಹಿರೇಮಠ, ಗಂಗಾಧರ ಕೋರಿಯರ್, ಮಹಿಳಾ ಘಟಕದ ಸದಸ್ಯರಾದ ಶ್ರೀಮತಿ ಸಹನಾ ಹಿರೇಮಠ, ಲಕ್ಷಿ ಗೌಡರ್, ಲಕ್ಷ್ಮಿದೇವಿ, ಸಂಗೀತಾ ಹಿರೇಮಠ, ಶ್ರೀಮತಿ ಸರಸ್ವತಿ ಮಂಜುನಾಥ, ಕಸ್ತೂರಿ, ರೇಣುಕಾ ವಿಭೂತಿ ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದು ಶ್ರೀ ತ್ರಯಂಬಕೇಶ್ವರ ದರ್ಶನ ಪಡೆದರು.

ಸೃಜನಾತ್ಮಕ ಸಿನಿಮಾಗಳ ಮುಲಕ ಕನ್ನಡ ಚಿತ್ರರಂಗವನ್ನು ರಾಷ್ಟ್ರೀಯ ಮಟ್ಟಕ್ಕೆ ಪುಟ್ಟಣ್ಣ ಕಣಗಲ್ ಒಯ್ದಿದ್ದರು: ಕೆ.ನಿಂಗಜ್ಜ

ಪರಶುರಾಮ ಕರೋಕೆ ಸ್ಟುಡಿಯೋದಲ್ಲಿ ಪುಟ್ಟಣ್ಣ ಕಣಗಲ್ ಜನ್ಮದಿನಾಚರಣೆ


ಗಂಗಾವತಿ: ಕನ್ನಡ ಚಿತ್ರರಂಗಕ್ಕೆ ರಾಷ್ಟ್ರೀಯ ಮಟ್ಟದಲ್ಲಿ ಸ್ಥಾನ ದೊರೆಯಲು ಮೇರು ನಿರ್ದೇಶಕ ದಿವಂಗತ ಪುಟ್ಟಣ್ಣ ಕಣಗಾಲ್ ಅವರು ಸಹ ಕಾರಣರಾಗಿದ್ದಾರೆ ಎಂದು ಕರ್ನಾಟಕ ಮಾಧ್ಯಮ ಅಕಾಡೆಮಿಯ ಸದಸ್ಯ ಹಿರಿಯ ಪತ್ರಕರ್ತ ಕೆ ನಿಂಗಜ್ಜ ಹೇಳಿದರು.

ಅವರು ಗಂಗಾವತಿಯ ಹೊಸಳ್ಳಿ ರಸ್ತೆಯಲ್ಲಿರುವ ಪರಶುರಾಮ ದೇವರ ಮನೆ ಕರೋಕೆ ಸ್ಟುಡಿಯೋದಲ್ಲಿ ಮೇರು ನಿರ್ದೇಶಕ ಪುಟ್ಟಣ್ಣ ಕಣಗಾಲ್ ಅವರ ಜನ್ಮ ದಿನಾಚರಣೆಯ ನಿಮಿತ್ಯ ಕೇಕ್ ಕತ್ತರಿಸಿ ಮಾತನಾಡಿದರು.‌ ಅವರು ನಿರ್ದೇಶಿಸಿದ ಕೆಲವೇ ಕೆಲವು ಚಿತ್ರಗಳು ಕನ್ನಡ ನಾಡಿನ ನೆಲದ ಸತ್ವವನ್ನು ರಂಗಭೂಮಿಯ ಮಹತ್ವವನ್ನು ಸೃಜನಶೀಲತೆಯನ್ನು ಎತ್ತಿ ಹಿಡಿದಿವೆ. ಪುಟ್ಟಣ್ಣ ಕಣಗಲ್ ಅವರು ಅದ್ಭುತವಾದಂತಹ ಕಲಾವಿದರನ್ನು ಕನ್ನಡ ಚಿತ್ರರಂಗಕ್ಕೆ ಪರಿಚಯ ಮಾಡಿದರು. ಆದ್ದರಿಂದ ಕನ್ನಡ ಭಾಷೆ ಸಾಹಿತ್ಯ ಮತ್ತು ಚಿತ್ರರಂಗ ಪುಟ್ಟಣ್ಣ ಕಣಗಾಲವನ್ನು ಎಂದೂ ಮರೆಯಲು ಸಾಧ್ಯವಿಲ್ಲ ಎಂದರು.

ಸಿನಿಮಾ ಸಂಗೀತದ ಹಿರಿಯ ವಾದ್ಯಗಾರ ಜೆಎಂ ಜಗನ್ನಾಥ ಮಾತನಾಡಿ ಪುಟ್ಟಣ್ಣ ಕಣಗಾಲ್ ಅವರು ಕನ್ನಡ ಚಿತ್ರರಂಗದ ಮೂಲಕ ನಿರ್ದೇಶಕರ ಪಾತ್ರ ಏನು ಎಂಬುದನ್ನು ತೋರಿಸಿದರು. ಬೆಂಗಳೂರು ಅಲ್ಲದೆ ಇತರ ಕಡೆಯಲ್ಲಿ ಚಿತ್ರ ಗಳನ್ನು ಚಿತ್ರಿಕರಿಸುವ ಮೂಲಕ ಕನ್ನಡ ನಾಡಿನ ಹಿರಿಮೆಯನ್ನು ಎಲ್ಲಾ ಜನರಿಗೂ ತೋರಿಸಿದ್ದಾರೆ ಎಂದರು.
ಈ ಸಂದರ್ಭದಲ್ಲಿ ಪರಶುರಾಮ ದೇವರಮನೆ, ವಿಜಯಕುಮಾರ, ಹನುಮಂತಪ್ಪ ಹುಲಿಹೈದರ್, ತಿಪ್ಪೇಸ್ವಾಮಿ ಹೊಸಮಠ, ವಿರೇಶ ಸ್ವಾಮಿ, ವೆಂಕಟೇಶ ಧೂಳು, ವಿರೇಶ ಪಪ್ಪಿ, ಸತ್ಯನಾರಾಯಣ, ಎಸ್.ಎಂ.ಪಟೇಲ್, ಯಲ್ಲಪ್ಪ ಪೋಲ್ಕಲ್, ಛತ್ರಪ್ಪ ತಂಬೂರಿ, ಲಲಿತಮ್ಮ, ವಿಜಯಲಕ್ಷ್ಮಿ, ಅಂಬಿಕಾ, ಮಾರುತಿ, ಹಾಜಿ. ಕೃಷ್ಣ ಕಬ್ಬೇರ್, ಗಿರಿಜಮ್ಮ, ಕುರುಗೋಡು ವೆಂಕಟೇಶ, ಮಂಜುನಾಥ ಗೋಡಿನಾಳ, ದುರುಗೇಶ ಸಾಣಾಪೂರ ಸೇರಿ ಅನೇಕರಿದ್ದರು.

ಗಂಗಾವತಿ: ಪರಶುರಾಮ ಕರೋಕೆ ಸ್ಟುಡಿಯೋದಲ್ಲಿ ನಿರ್ದೇಶಕ ಪುಟ್ಟಣ್ಣ ಕಣಗಾಲ್ ಅವರ ಜನ್ಮದಿನವನ್ನು ಕೇಕ್ ಕತ್ತರಿಸುವ ಮೂಲಕ ಆಚರಿಸಲಾಯಿತು.

ಶ್ರೀನಿವಾಸ್ ಕುಲಕರ್ಣಿ ಗಂಗಾವತಿ ಅವರ ಸ್ಮರಣರಾರ್ಥ ಹಾಗೂ ಅಭಿನವ ಕಲಾಬಳಗ ಹುಬ್ಬಳ್ಳಿ ದಶಮಾನೋತ್ಸವ ಪ್ರಯುಕ್ತ. ರಕ್ತದಾನ ಉಚಿತ ನೇತ್ರ ತಪಾಸಣಾ ಹಾಗೂ ಚಿಕಿತ್ಸಾ ಶಿಬಿರ.

ಹುಬ್ಬಳ್ಳಿ: ಗಂಗಾವತಿಯ ಸಂಗೀತ ಕಲಾವಿದ ಶ್ರೀನಿವಾಸ್ ರಾವ್ ಕುಲಕರ್ಣಿ ಅವರ ಸ್ಮರಣರಾರ್ಥ ಹಾಗೂ ಹುಬ್ಬಳ್ಳಿಯ ಅಭಿನವ ದಶಮಾನೋತ್ಸವ ಪ್ರಯುಕ್ತ ಡಿಸೆಂಬರ್ ೧ ರವಿವಾರದಂದು ರಕ್ತದಾನ ಶಿಬಿರ, ಉಚಿತ ನೇತ್ರ ತಪಾಸಣೆ ಹಾಗೂ ಚಿಕಿತ್ಸಾ ಶಿಬಿರವನ್ನು ಆಯೋಜಿಸಲಾಯಿತು.
ಬೆಳಗ್ಗೆ 9:30ಕ್ಕೆ ರಾಷ್ಟ್ರೋತ್ಥಾನ ರಕ್ತ ನಿಧಿ ಹುಬ್ಬಳ್ಳಿ ಇವರಿಂದ ರಕ್ತದಾನ ಶಿಬಿರ ಹಾಗೂ ಜಗಪ್ರಿಯ ಕಣ್ಣಿನ ಆಸ್ಪತ್ರೆ ನೇತೃತ್ವದಲ್ಲಿ ಉಚಿತ ನೇತ್ರ ತಪಾಸಣಾ ಹಾಗೂ ಶಸ್ತ್ರಚಿಕಿತ್ಸಾ ಶಿಬಿರವನ್ನು ಆಯೋಜಿಸಲಾಗಿದ್ದು. ಸುಮಾರು ೩೦ಕ್ಕೂ ಅಧಿಕ ವ್ಯಕ್ತಿಗಳು ತಮ್ಮ ರಕ್ತದಾನವನ್ನು ನೀಡಿದರು. ಹಾಗೆಯೇ ನೇತ್ರ ಚಿಕಿತಾ ಶಿಬಿರಕ್ಕೆ ಸುಮಾರು ೧೫೦ಕ್ಕೂ ಅಧಿಕ ಮಹಾಜನತೆ ಪಾಲ್ಗೊಂಡು ತಮ್ಮ ನೇತ್ರವನ್ನು ಪರೀಕ್ಷೆಗೆ ಒಳಪಟ್ಟರು. ಅಗತ್ಯ ಇದ್ದವರಿಗೆ ಶಸ್ತ್ರ ಚಿಕಿತ್ಸೆಯ ದಿನಾಂಕವನ್ನು ಸಹ ನೀಡಲಾಯಿತು. ಶ್ರೇಯ ಜನಸೇವಾ ಫೌಂಡೇಶನ್ ಸಹಕಾರದೊಂದಿಗೆ ಮಹಿಳೆಯರಿಗಾಗಿ ಅಡುಗೆ ಸ್ಪರ್ಧೆ, ವೇಷ ಭೂಷಣ ಸ್ಪರ್ಧೆ, ಕರೋಕೆ ಚಿತ್ರಗೀತೆಗಳ ಸ್ಪರ್ಧೆಯನ್ನು ನಡೆಸುವುದರ ಮೂಲಕ ಸಮಾರಂಭದ ಉದ್ಘಾಟನೆಯನ್ನು ಧಾರವಾಡ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಡಾ. ಲಿಂಗರಾಜು ಅಂಗಡಿ ಉದ್ಘಾಟಿಸಿ ಮಾತನಾಡಿ, ಶ್ರೀಮತಿ ರಾಧಿಕಾ ಕುಲಕರ್ಣಿ ಅವರು ತಮ್ಮ ತಂದೆಯ ಸ್ಮರಣಾರ್ಥಕವಾಗಿ ಹುಬ್ಬಳ್ಳಿಯ ಮಹಾಜನತೆಗೆ ವೈವಿಧ್ಯಮಯ ಕಾರ್ಯಕ್ರಮಗಳನ್ನು ನಡೆಸುವುದರ ಮೂಲಕ ತಮ್ಮದೇ ಆದ ಅಭಿನವ ಕಲಾ ಸಂಘದ ದಶಮಾನೋತ್ಸವ ಆಚರಿಸಿಕೊಳ್ಳುತ್ತಿರುವುದು ಅವರಲ್ಲಿನ ಕ್ರಿಯಾಶೀಲತೆಗೆ ಸಾಕ್ಷಿಯಾಗಿದೆ ಎಂದು ಅಭಿಪ್ರಾಯಪಟ್ಟರು. ವೇದಿಕೆಯಲ್ಲಿ ಗಣ್ಯರು ಉಪಸ್ಥಿತರಿದ್ದರು. ಸಮಾರಂಭ ಕುರಿತು ಸಂಯೋಜಿಕೆ ರಾಧಿಕಾ ಕುಲಕರ್ಣಿ ಮಾತನಾಡಿದರು.