
ನೂತನವಾಗಿ ರಚನೆಗೊಂಡ ಕರ್ನಾಟಕ ಮಾಧ್ಯಮ ಪತ್ರಕರ್ತರ ಸಂಘಕ್ಕೆ ಪತ್ರಿಕಾ ಭವನವನ್ನು ಒದಗಿಸಿಕೊಡಲು ಶಾಸಕರಿಗೆ ಮನವಿ.
ಗಂಗಾವತಿ: ಕರ್ನಾಟಕ ಮಾಧ್ಯಮ ಪತ್ರಕರ್ತರ ಸಂಘವು ಇತ್ತೀಚೆಗೆ ರಾಜ್ಯಮಟ್ಟದಲ್ಲಿ ರಚನೆಯಾಗಿ ಉದ್ಘಾಟನೆಗೊಂಡು, ಈ ಸಂಘದ ಅಂಗಸಂಸ್ಥೆಗಳಾಗಿ ಹಲವು ಜಿಲ್ಲಾ ಸಮಿತಿಗಳು ಹಾಗೂ ತಾಲ್ಲೂಕು ಸಮಿತಿಗಳು ಈಗಾಗಲೇ ರಚನೆಯಾಗಿವೆ. ಅದರಂತೆ ನಮ್ಮ ಗಂಗಾವತಿ ತಾಲ್ಲೂಕು ಸಮಿತಿಯೂ ಕೂಡ ಸಕ್ರಿಯಗೊಂಡಿದ್ದು ಮತ್ತು ನಮ್ಮ ಸಂಘದಿಂದ ಪತ್ರಿಕಾಗೋಷ್ಠಿಗಳನ್ನು ನಡೆಸಲು ಸೂಕ್ತ ಸ್ಥಳಾವಕಾಶದ ಅಗತ್ಯವಿದೆ. ಕೂಡಲೇ ನಮ್ಮ ಸಂಘಕ್ಕೆ ಪತ್ರಿಕಾ ಭವನದ (PRESS HALL) ವ್ಯವಸ್ಥೆ ಕಲ್ಪಿಸಿಕೊಡಬೇಕೆಂದು ಸೆಪ್ಟೆಂಬರ್-೧೭ ರಂದು ಹೈದ್ರಾಬಾದ್-ಕರ್ನಾಟಕ ವಿಮೋಚನಾ ದಿನಾಚರಣೆ ಅಂಗವಾಗಿ ನಡೆದ ತಾಲೂಕ ಸಾರ್ವಜನಿಕ ಧ್ವಜಾರೋಹಣದ ಸಂದರ್ಭದಲ್ಲಿ…