ಪತ್ರಕರ್ತ ಹೆಚ್. ಮಲ್ಲಿಕಾರ್ಜುನ ರವರಿಗೆ ಮಾಧ್ಯಮ ಶ್ರೀ ಪ್ರಶಸ್ತಿ
ಗಂಗಾವತಿ: ಹಿರಿಯ ಪತ್ರಕರ್ತರು ಹಾಗೂ ಕಲ್ಯಾಣಸಿರಿ ಪತ್ರಿಕೆಯ ಸಂಪಾದಕರಾದ ಹೊಸಕೇರಾ ಮಲ್ಲಿಕಾರ್ಜುನರವರು ಮಾಧ್ಯಮ ಶ್ರೀ ಪ್ರಶಸ್ತಿಗೆ ಆಯ್ಕೆಯಾಗಿದ್ದಾರೆ. ಕರ್ನಾಟಕ ಮಾಧ್ಯಮ ಪತ್ರಕರ್ತರ ಸಂಘವು ಈ ಪ್ರಶಸ್ತಿಗೆ ಅವರನ್ನು ಆಯ್ಕೆ ಮಾಡಿದ್ದು, ಜುಲೈ-೩೧ ರಂದು ಬೆಂಗಳೂರಿನಲ್ಲಿ ಹಮ್ಮಿಕೊಂಡಿರುವ ರಾಜ್ಯ ಸಂಘದ ಉದ್ಘಾಟನೆ ಜೊತೆಗೆ ಪತ್ರಿಕಾ ದಿನಾಚರಣೆಯ ಸಂದರ್ಭದಲ್ಲಿ ಪ್ರಶಸ್ತಿ ಪ್ರಧಾನ ಸಮಾರಂಭ ಹಾಗೂ ಪತ್ರಕರ್ತರ ತರಬೇತಿ ಕಾರ್ಯಾಗಾರ ಹಮ್ಮಿಕೊಳ್ಳಲಾಗಿದೆ. ಮಾಧ್ಯಮ ಪತ್ರಕರ್ತರ ಸಂಘದ ರಾಜ್ಯ ಘಟಕದ ಅಧ್ಯಕ್ಷ ಜಿ.ಎಂ.ರಾಜಶೇಖರ ಅಧ್ಯಕ್ಷತೆಯಲ್ಲಿ ನಡೆಯುವ ಈ ಕಾರ್ಯಕ್ರಮವನ್ನು ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್…
