
೬ನೇ ರಾಜ್ಯ ಮಟ್ಟದ ಯೋಗಾಸನ ಸ್ಪರ್ಧೆಯಲ್ಲಿ ಕೊಪ್ಪಳ ಜಿಲ್ಲಾ ಯೋಗಾಪಟುಗಳ ಸಾಧನೆ
ಗಂಗಾವತಿ: ಯೋಗಾಸನ ಭಾರತ್ ಸಂಯೋಜಿತವಾಗಿರುವ ಕರ್ನಾಟಕ ಯೋಗಾಸನ ಕ್ರೀಡಾ ಸಂಸ್ಥೆಯು ೬ನೇ ಕರ್ನಾಟಕ ರಾಜ್ಯ ಮಟ್ಟದ ಯೋಗಾಸನ ಚಾಂಪಿಯನ್ಶಿಪ್ನ್ನು ಚಿತ್ರದುರ್ಗದ ಶ್ರೀ ಮುರುಘರಾಜೇಂದ್ರ ಮಠದಲ್ಲಿ ಆಯೋಜಿಸಿತ್ತು. ಸ್ಪರ್ಧೆಯನ್ನು ಆಗಸ್ಟ್-೨೨, ೨೩, ೨೪ ಮೂರು ದಿನಗಳ ಕಾಲ ಆಯೋಜಿಸಲಾಗಿತ್ತು. ತಂಡದ ಕೋಚ್ ಆಗಿ ರೇಷ್ಮ ವಡ್ಡಟ್ಟಿ, ವ್ಯವಸ್ಥಾಪಕರಾಗಿ ಮಹಾಂತೇಶ್ರವರು ಭಾಗವಹಿಸಿದ್ದರು. ಈ ಕ್ರೀಡಾಕೂಟದಲ್ಲಿ ಕೊಪ್ಪಳ ಜಿಲ್ಲಾ ಯೋಗಾಸನ ಕ್ರೀಡಾ ಸಂಸ್ಥೆಯ ೨೧ ವಿದ್ಯಾರ್ಥಿಗಳು ಭಾಗವಹಿಸಿದ್ದರು. ಗಂಗಾವತಿಯ ನಿತಿನ್, ನಿಹಾರಿಕಾ, ಎನ್.ಚೇತನ್, ಕೃಷ್ಣ ರೆಡ್ಡಿ, ಅಮೃತ, ಭೀಮೇಶ, ಶರಣಮ್ಮ, ಭಾರ್ಗವಿ,…