
ಕವನ ಪರಿಣಾಮಕಾರಿಯಾಗಿರಲಿ : ರಾಮಮೂರ್ತಿ ನವಲಿ ಗಂಗಾವತಿ
ಕವಿಗಳು ಸ್ವರಚಿತ ಕವನ ರಚಿಸುವಾಗ ಪರಿಣಾಮಕಾರಿಯಾಗಿರ ಬೇಕೆಂದು ಪತ್ರಕರ್ತ ರಾಮಮೂರ್ತಿ ನವಲಿ ಹೇಳಿದರು. ರೋಟರಿ ಕ್ಲಬ್, ಕಾವ್ಯ ಲೋಕ ಸಂಘಟನೆ ಮತ್ತು ವಿಶ್ವ ರತ್ನ ಗ್ರಾಮೀಣಾಭಿವೃದ್ದಿ ಸಂಸ್ಥೆ ಹೊಸಳ್ಳಿ ಇವರ ಸಂಯುಕ್ತಾಶ್ರಯದಲ್ಲಿ ಜರುಗಿದ ಸ್ವಾತಂತ್ರ್ಯ ಸಂಭ್ರಮ 109ನೇ ಕವಿಗೋಷ್ಠಿಯನ್ನು ಉದ್ಘಾಟಿಸಿ ಮಾತನಾಡಿದರು. ಸ್ವವರಚಿತವಾಗಿರುವ ಕವನಗಳು ಸಾಮಾಜಿಕ, ರಾಜಕೀಯ, ಸಾಹಿತ್ಯಕವಾಗಿರುವ ವಿಷಯಗಳು ಪರಿಣಾಮಕಾರಿಯಾಗಿರಬೇಕೆಂದು ತಿಳಿಸಿದ ಅವರು ಕವನಗಳನ್ನು ವಾಚಿಸಿದರೆ ಅದು ಪರಿಣಾಮಕಾರಿಯಾಗಿ ವಿವಿಧ ಕ್ಷೇತ್ರಗಳಿಗೆ ತಲುಪುವುದರ ಮೂಲಕ ಸ್ಪಂದನೆ ಸಿಗಬೇಕೆಂದರು. ಇತ್ತೀಚಿನ ದಿನಗಳಲ್ಲಿ ಕವಿಗಳು ಕೇವಲ ಪ್ರಚಾರಕ್ಕಾಗಿ ಮೊಬೈಲ್,…