
ಗಂಗಾವತಿಯಲ್ಲಿ ಜುಲೈ-೨೪ರಿಂದ ಆರಂಭವಾಗಲಿದೆ ವಚನ ಶ್ರಾವಣ – ೨೦೨೫
ಒಂದು ತಿಂಗಳ ಕಾಲ ಆಯ್ದ ಮೂವತ್ತು ಮನೆಗಳಲ್ಲಿ ದಿನನಿತ್ಯ ವಚನ ನಿರ್ವಚನ ಕಾರ್ಯಕ್ರಮ ನಡೆಯಲಿದೆ ಎಂಬುದಾಗಿ ಪ್ರಕಟಿಸಲಾಗಿದೆ. ಈ ಕಾರ್ಯಕ್ರಮದ ಮೊದಲ ದಿನ ಕುವೆಂಪು ಬಡಾವಣೆಯ ವಕೀಲ ನಾಗರಾಜ್ ಗುತ್ತೇದಾರ ಅವರ ಮನೆಯಲ್ಲಿ ವಚನ ನಿರ್ವಚನ ಆರಂಭವಾಗಲಿದೆ. ಕಾರಟಗಿಯ ಶ್ರೀಮತಿ ಲೀಲಾ ಮಲ್ಲಿಕಾರ್ಜುನ ಅವರು “ಇಳೆ ನಿಂಬು ಮಾವು ಮಾದಲಕ್ಕೆ ಹುಳಿ ನೀರನೆರೆದವದಾರಯ್ಯಾ” ಎನ್ನುವ ಅಕ್ಕಮಹಾದೇವಿಯ ವಚನದ ಕುರಿತು ಭಾಷಣ ಮಾಡುವರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಶರಣ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾದ ಜೆ. ನಾಗರಾಜ ವಹಿಸಲಿದ್ದು, ಹಲವರು ಮುಖ್ಯ…