
ಯಾಜ್ಞವಲ್ಕ ಮಂದಿರದಲ್ಲಿ ಸಂಭ್ರಮದ ಹನುಮ ಜಯಂತಿ ಸುಂದರಕಾಂಡ ಪ್ರವಚನ ಸಂಪನ್ನ.
ಗಂಗಾವತಿ: ಪ್ರತಿ ವರ್ಷದಂತೆ ಈ ವರ್ಷವೂ ಸಹ ನಗರದ ಶ್ರೀ ಯೋಗೀಶ್ವರ ಯಾಜ್ಞವಲ್ಕ ಮಂದಿರದಲ್ಲಿ ಹನುಮ ಜಯಂತಿ ಆಚರಣೆ ಶನಿವಾರದಂದು ಅಪಾರ ಭಕ್ತಾದಿಗಳ ಮಧ್ಯೆ ಶ್ರದ್ಧೆ ಭಕ್ತಿಯಿಂದ ಜರುಗಿತು. ಇದೇ ಸಂದರ್ಭದಲ್ಲಿ ಎರಡು ದಿನಗಳಿಂದ ವೇದಮೂರ್ತಿ ಕಾರ್ತಿಕ ಜೋಶಿ ಅವರಿಂದ ನಡೆಸಲಾದ ಸುಂದರಕಾಂಡ ಪ್ರವಚನ ಕಾರ್ಯಕ್ರಮ ಸಂಪನ್ನಗೊಂಡಿತು. ಈ ಸಂದರ್ಭದಲ್ಲಿ ದೇವಸ್ಥಾನ ಸಮಿತಿಯ ಅಧ್ಯಕ್ಷ ಮುರಳಿದರ ಕುಲಕರ್ಣಿ ಮಾತನಾಡಿ ವಾಯುಪುತ್ರ ಹನುಮ ಹುಟ್ಟಿದ ಈ ಪುಣ್ಯ ಭೂಮಿಯಲ್ಲಿ ಜನಿಸಿದ ನಾವೇ ಪುಣ್ಯವಂತರು. ಸಮಾಜ ಬಾಂಧವರ ಸರ್ವರ ಸಹಕಾರದ…