ಮಹಾನ್ ಕಿಡ್ಸ್ ಶಾಲೆಯಲ್ಲಿ ಶ್ರೀ ಕೃಷ್ಣ ಜನ್ಮಾಷ್ಟಮಿ. ಸತ್ಯ ಧರ್ಮ ಪಾಲನೆಯ ಶ್ರೀ ಕೃಷ್ಣ ಜನ್ಮದಿನದ ಉದ್ದೇಶ: ಸವಿತಾ ನೇತ್ರಾಜ್ ಗುರುವಿನ ಮಠ.
ಗಂಗಾವತಿ ನಗರದ ಪ್ರತಿಷ್ಠಿತ ಶಾಲೆಯಾದ ಮಹಾನ್ ಕಿಡ್ಸ್ ಶಾಲೆಯಲ್ಲಿ ಶ್ರೀ ಕೃಷ್ಣ ಜನ್ಮಾಷ್ಟಮಿ ಆಚರಣೆ. ವಿಷ್ಣುವಿನ ದಶಾವತಾರದಲ್ಲಿ ಒಂದಾದ ಶ್ರೀ ಕೃಷ್ಣ ಪರಮಾತ್ಮ ಸತ್ಯಧರ್ಮನ್ಯಾಯ ಸಂದೇಶದ ಪ್ರತೀಕವಾಗಿ ಕಂಗೊಳಿಸುತ್ತಿದ್ದಾರೆ ಎಂದು ಮುಖ್ಯೋಪಾಧ್ಯಾಯನಿ ಸವಿತಾ ನೇತ್ರಾಜ್ ಗುರುವಿನಮಠ ಹೇಳಿದರು. ಅವರು ಶಾಲೆಯಲ್ಲಿ ಆಯೋಜಿಸಿದ ಶ್ರೀ ಕೃಷ್ಣ ಜನ್ಮಾಷ್ಟಮಿ ಆಚರಣೆಯ ಸಮಾರಂಭವನ್ನು ಉದ್ದೇಶಿಸಿ ಮಾತನಾಡಿದರು. ದೇಶದ ಎರಡು ಮಹಾಕಾವ್ಯಗಳಲ್ಲಿ ಒಂದಾದ ಮಹಾಭಾರತದಲ್ಲಿ ಪಾಂಡವರು ಮತ್ತು ಕೌರವರು ಮಧ್ಯೆ ಜರುಗಿದ ಯುದ್ಧದಲ್ಲಿ ಶ್ರೀ ಕೃಷ್ಣನು ಧರ್ಮದ ಪರವಾಗಿ ಪಾಂಡವರಿಗೆ ಜಯಶಾಲಿ ಆಗುವಂತೆ…
