
ಮಹಾಶಿವರಾತ್ರಿ ಅಂಗವಾಗಿ ಸಿದ್ದಿಕೆರೆಯಲ್ಲಿ ಬೇಡರ ಕಣ್ಣಪ್ಪ ನಾಮಫಲಕಕ್ಕೆ ಪೂಜಾ ಕಾರ್ಯಕ್ರಮ
ಗಂಗಾವತಿ: ನಗರದ ೪ನೇ ವಾರ್ಡ್ ಸಿದ್ದಿಕೆರೆಯಲ್ಲಿ ಫೆಬ್ರವರಿ-೨೬ ಬುಧವಾರ ಮಹಾಶಿವರಾತ್ರಿ ಪ್ರಯುಕ್ತ ಬೇಡರ ಕಣ್ಣಪ್ಪ ಭಾವಚಿತ್ರವಿರುವ ನಾಮಫಲಕಕ್ಕೆ ಗಂಗಾವತಿ ತಾಲೂಕ ಶ್ರೀಗುರು ಆದಿಕವಿ ಮಹರ್ಷಿ ವಾಲ್ಮೀಕಿ ಪರಿಶಿಷ್ಟ ಪಂಗಡ ಕಲಾವಿದರ ಸಂಘದಿಂದ ಪೂಜಾ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು ಎಂದು ಸಂಘದ ಅಧ್ಯಕ್ಷರಾದ ಜೆ. ಸೋಮಪ್ಪ ಕವಿಗಳು ಪ್ರಕಟಣೆ ಮೂಲಕ ತಿಳಿಸಿದರು. ಅವರು ಮಹಾಶಿವರಾತ್ರಿಯ ದಿನ ಸಂಜೆ ೬ ಗಂಟೆಗೆ ಪೂಜಾ ಕಾರ್ಯಕ್ರಮ ನೆರವೇರಿಸಿ ಮಾತನಾಡಿ, ಬೇಡರ ಕಣ್ಣಪ್ಪನು ಮಹಾಶಿವನ ಭಕ್ತನಾಗಿ ತನ್ನ ಕಣ್ಣುಗಳನ್ನು ದಾನ ನೀಡಿದ ದಿನವೇ ಮಹಾಶಿವರಾತ್ರಿಯಾಗಿದ್ದು,…